ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಪತನದ ಹಾದಿಯನ್ನು ಹಿಡಿದಂತೆ ತೋರುತ್ತಿದೆ. ಹಲವಾರು ಪ್ರಮುಖ ಟೋಕನ್‌ಗಳ ಬೆಲೆಗಳು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕಳೆದ 48 ಗಂಟೆಗಳಲ್ಲಿ ಮಾರುಕಟ್ಟೆಯಲ್ಲಿ ಟಾಪ್ ಕ್ರಿಪ್ಟೋಗಳು ಭಾರೀ ಕುಸಿಯುತ್ತಿದೆ.
CoinMarketCap ನಲ್ಲಿನ ಡೇಟಾವು ಕೆಲವು ದಿನಗಳ ಹಿಂದೆ ಟಾಪ್ ಕ್ರಿಪ್ಟೋಗಳಲ್ಲಿ ಒಂದಾಗಿದ್ದ ಟೆರ್ರಾ 59 ನೇ ಸ್ಥಾನಕ್ಕೆ ಇಳಿದಿದೆ ಎಂದು ತೋರಿಸುತ್ತದೆ. ಕಳೆದ 7 ದಿನಗಳಲ್ಲಿ ಅದರ ಮೌಲ್ಯದ 99 ಪ್ರತಿಶತದಷ್ಟು ಇಳಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ, ಅದರ ಬೆಲೆ ಶೇಕಡ 96ಕ್ಕಿಂತ ಕಡಿಮೆಯಾಗಿದೆ.
ಕಳೆದ 7 ದಿನಗಳಲ್ಲಿ ಬಿಟ್‌ಕಾಯಿನ್ ತನ್ನ ಬೆಲೆಯ ಶೇಕಡಾ 28 ರಷ್ಟು ಕೆಳಕ್ಕೆ ಇಳಿದಿದೆ. ಬಿಟಿಸಿ ಬೆಲೆ ಕೇವಲ 28,542 ಡಾಲರ್ ಆಗಿತ್ತು. ಈ ನಡುವೆ ಪ್ರಸ್ತುತ ಕ್ರಿಪ್ಟೋ ಮಾರುಕಟ್ಟೆ ಕುಸಿತವನ್ನು ನಿರ್ಧರಿಸುವ ಪ್ರಮುಖ ಕ್ರಿಪ್ಟೋ ಎಂದೇ ನಂಬಲಾದ TerraUSD ಬೆಲೆಯು ಕಳೆದ 7 ದಿನಗಳಲ್ಲಿ ಶೇಕಡ 32ರಷ್ಟು ಕುಸಿದಿದೆ. ಕಳೆದ 24 ಗಂಟೆಗಳಲ್ಲಿ ಯುಎಸ್‌ಟಿ ಬೆಲೆಯು ಶೇಕಡಾ 18 ಕ್ಕಿಂತ ಕಡಿಮೆಯಾಗಿ 0.6782 ಡಾಲರ್‌ಗೆ ತಲುಪಿದೆ. ಕ್ರಿಪ್ಟೋ ಮಾರುಕಟ್ಟೆಗಳಿಂದ ಕೆಲವು ಪ್ರಮುಖ ಬೆಳವಣಿಗೆಗಳು ಇಲ್ಲಿದೆ ಮುಂದೆ ಓದಿ..

ಕ್ರಿಪ್ಟೋ ಮಾರುಕಟ್ಟೆಗಳಿಂದ ಕೆಲವು ಪ್ರಮುಖ ಬೆಳವಣಿಗೆಗಳು
* ಬಿಟಿಸಿ ಕಳೆದ 24 ಗಂಟೆಗಳಲ್ಲಿ ಶೇಕಡ 9ರಷ್ಟು ಕುಸಿದಿದೆ. ಇಟಿಎಚ್ ಶೇಕಡ 15ರಷ್ಟು ಕುಸಿದಿದೆ. LUNA ಅಥವಾ ಲೂನಾದಂತಹ ಕಾಯಿನ್‌ಗಳು ಶೇಕಡ 90ಕ್ಕಿಂತ ಕೆಳಕ್ಕೆ ಕುಸಿದಿದೆ. ಬಿಟಿಸಿ ಕೊಂಚ ಚೇತರಿಕೆ ಕಂಡು 32,000 ಡಾಲರ್‌ಕ್ಕಿಂತ ಕೊಂಚ ಹೆಚ್ಚಾದರೂ ಮಾರುಕಟ್ಟೆಯಲ್ಲಿನ ಒತ್ತಡದಿಂದಾಗಿ 28,511 ಡಾಲರ್‌ಕ್ಕಿಂತ ಕಡಿಮೆ ಮಟ್ಟಕ್ಕೆ ಬೆಲೆ ಕುಸಿಸಿದೆ.
* ಕಳೆದ ಒಂದೆರಡು ದಿನಗಳಲ್ಲಿ ಬಿಟಿಸಿ ವಿನಿಮಯ ಕೊಂಚ ಹೆಚ್ಚಾಗಿದೆ. ಹೂಡಿಕೆದಾರರು ಸಾಮಾನ್ಯವಾಗಿ ತಮ್ಮ ಹಿಡುವಳಿಗಳನ್ನು ಮಾರಾಟ ಮಾಡಲು ಬಯಸಿದಾಗ ವಿನಿಮಯ ಕೇಂದ್ರಗಳಿಗೆ ವರ್ಗಾಯಿಸುತ್ತಾರೆ ಎಂದು ವಾಲ್ಡ್‌ನ ಸಿಒ ಸ್ಥಾಪಕ ಮತ್ತು ಸಿಇಒ ದರ್ಶನ್ ಬಥಿಜಾ ತಿಳಿಸಿದ್ದಾರೆ.
* ಲೂನಾ 1 ಡಾಲರ್‌ಗಿಂತ ಕಡಿಮೆಯಾಗಿದೆ. ಆದರೆ ಬ್ಲಾಕ್‌ಚೈನ್‌ನ ಸ್ಟೇಬಲ್‌ಕಾಯಿನ್‌ಗಳು ಕೂಡಾ ನಷ್ಟ ಕಂಡಿದೆ.
* ಟೆರ್ರಾ ಅಲ್ಗಾರಿದಮಿಕ್ ಸ್ಟೇಬಲ್‌ಕಾಯಿನ್ ಸುಮಾರು 0.30 ಡಾಲರ್‌ಗೆ ಕುಸಿದಿದೆ.
* ಬಿಟ್‌ಕಾಯಿನ್ ಕಳೆದ 24 ಗಂಟೆಗಳಲ್ಲಿ 28,000 ಡಾಲರ್ ಕನಿಷ್ಠ ಮಟ್ಟಕ್ಕೆ ತಲುಪಿದೆ ಇದು 2020 ರಿಂದ ದುರ್ಬಲವಾಗಿದೆ ಎಂದು ಎಡುಲ್ ಪಟೇಲ್ ಸಿಇಒ ಮತ್ತು ಸಹ-ಸಂಸ್ಥಾಪಕ, ಮುಡ್ರೆಕ್ಸ್ ಹೇಳಿದ್ದಾರೆ.
* ವಾರದ ಆರಂಭದಲ್ಲಿ ಬಿಟಿಸಿ 30,000 ಡಾಲರ್‌ಗೆ ಕುಸಿದಾಗ ಯುಎಸ್‌ಟಿ ಕೂಡಾ ಕುಸಿದಿದೆ.


Click it and Unblock the Notifications