ದಿನ ಕಳೆದಂತೆ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಡಿಜಿಟಲ್ ವ್ಯವಸ್ಥೆ ಬಳಕೆ ಹೆಚ್ಚಳವಾಗುತ್ತಿದ್ದಂತೆ ಆನ್‌ಲೈನ್ ವಂಚನೆಗಳು ಕೂಡಾ ಅಧಿಕವಾಗುತ್ತಿದೆ. ವಂಚಕರು ಜನರಿಗೆ ವಂಚನೆಯನ್ನು ಮಾಡಲು ಬೇರೆ ಬೇರೆ ಮಾರ್ಗಗಳನ್ನು ಹೊಂದಿದ್ದಾರೆ. ಇಂತಹ ವಂಚನೆಗಳ ಬಗ್ಗೆ ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಎಚ್ಚರಿಕೆಯನ್ನು ನೀಡಿದ್ದಾರೆ.
ವಾಟ್ಸಾಪ್‌ನಲ್ಲಿ ನಡೆಯುತ್ತಿರುವ ಹೊಸ ರೀತಿಯ ಅರೆಕಾಲಿಕ ಉದ್ಯೋಗ ಆಫರ್ ಹಗರಣದ ಬಗ್ಗೆ ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ನೆಟಿಜನ್‌ಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ಪರಿಚಯದವರು ಒಬ್ಬರು ಈ ವಾಟ್ಸಾಪ್ ವಂಚನೆಗೆ ಒಳಗಾದ ಬಗ್ಗೆ ನಿತಿನ್ ಕಾಮತ್ ಮಾಹಿತಿಯನ್ನು ನೀಡಿದ್ದಾರೆ. ಅರೆಕಾಲಿಕ ಉದ್ಯೋಗದ ಹಗರಣದ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ನಿತಿನ್ ಕಾಮತ್ ವಿವರಿಸಿದ್ದಾರೆ.

ಈ ವಂಚಕರು ಅಮಾಯಕ ಗ್ರಾಹಕರನ್ನು ಬಲೆಗೆ ಬೀಳಿಸಲು ಮತ್ತು ಹಾಗೆಯೇ ಗ್ರಾಹಕರ ಖಾತೆಗಳಿಂದ ಹಣವನ್ನು ಕಸಿದುಕೊಳ್ಳಲು ವಿವಿಧ ಮಾರ್ಗಗಳನ್ನು ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಡಿಜಿಟಲೀಕರಣದ ಹೆಚ್ಚಳವಾಗುತ್ತಿದ್ದಂತೆ ಕಳೆದ ಕೆಲವು ವರ್ಷಗಳಲ್ಲಿ ವಂಚನೆಗಳ ಪ್ರಮಾಣ ದ್ವಿಗುಣಗೊಂಡಿದೆ.
ವಾಟ್ಸಾಪ್‌ನಲ್ಲಿ ಅರೆಕಾಲಿಕ ಉದ್ಯೋಗದ ಆಫರ್ ನೀಡುವ ಮೂಲಕ ಈ ವಂಚನೆ ಆರಂಭವಾಗುತ್ತದೆ ಎಂದು ನಿತಿನ್ ಕಾಮತ್ ಹಗರಣವನ್ನು ವಿವರಿಸಿದ್ದಾರೆ. ಪೆರುವಿನಂತಹ ಪ್ರದೇಶಗಳಲ್ಲಿನ ರೆಸಾರ್ಟ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಕಲಿ ವಿಮರ್ಶೆಗಳನ್ನು ಹಾಕುವುದು ಮೊದಲ ಕಾರ್ಯವಾಗಲಿದೆ. ಈ ಕಾರ್ಯವನ್ನು ನಾವು ಪೂರ್ಣಗೊಳಿಸಿದ ಬಳಿಕ ನಮಗೆ 30 ಸಾವಿರ ರೂಪಾಯಿಗಳನ್ನು ಬ್ಯಾಂಕ್‌ಗೆ ವರ್ಗಾವಣೆ ಮಾಡಲಾಗುತ್ತದೆ.
ಈ ಕಾರ್ಯಗಳನ್ನು ಮಾಡುವುದಾಗಿ ಹೇಳಿಕೊಳ್ಳುವ ಇತರರೊಂದಿಗೆ ಟೆಲಿಗ್ರಾಮ್ ಗುಂಪನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಗುಂಪಿನ ಮುಂದಿನ ಕಾರ್ಯ ಕ್ರಿಪ್ಟೋ ಪ್ಲಾಟ್‌ಫಾರ್ಮ್‌ನಲ್ಲಿ ವ್ಯಾಪಾರ ಮಾಡುವುದು, ನಿಯಮಗಳ ಗುಂಪನ್ನು ಅನುಸರಿಸುವುದು ಆಗಿರುತ್ತದೆ. ಯಾವುದೇ ಹಣವನ್ನು ವರ್ಗಾಯಿಸದೆಯೂ ಸಹ ಗಳಿಸಿದ ಲಾಭವನ್ನು ಹಿಂಪಡೆಯಲು ಅನುಮತಿ ನೀಡಲಾಗುತ್ತದೆ.
ಬಿಟ್‌ಕಾಯಿನ್ ಅಥವಾ ಎಥೆರಿಯಮ್ ಅನ್ನು ಬಳಸುವುದಿಲ್ಲ, ಆದರೆ ಬೇರೆ ಯಾವುದೋ ಕ್ರಿಪ್ಟೋ ಟೋಕನ್‌ಗಳನ್ನು ಬಳಸಲಾಗುತ್ತಿತ್ತು, ಅದರ ಬೆಲೆಗಳನ್ನು ವಂಚಕರು ಸುಲಭವಾಗಿ ಮ್ಯಾಲಿಪುಲೇಟ್ ಮಾಡಬಹುದು. "ಹೆಚ್ಚಿನ ಆದಾಯವನ್ನು ಗಳಿಸಲು ನಿಜ ಹಣವನ್ನು ವರ್ಗಾವಣೆ ಮಾಡುವಂತೆ ನಿಮಗೆ ಕೇಳಲಾಗುತ್ತದೆ. ವರ್ಗಾವಣೆ ಮಾಡುವುದಾಗಿ ಗುಂಪಿನ ಇತರೆ ಸದಸ್ಯರ ಮೆಸೇಜ್ ಬರುತ್ತದೆ. ನೀವು ಕೂಡಾ ಹಣ ವರ್ಗಾಯಿಸುವಂತೆ ಒತ್ತಾಯ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.
"ನಾನು ಮಾಡಿದ ಕಾರ್ಯಕ್ಕೆ ಪ್ಲಾಟ್‌ಫಾರ್ಮ್ ಮೂಲಕ ಈಗಾಗಲೇ 30 ಸಾವಿರ ರೂಪಾಯಿ ಗಳಿಸಿದ್ದೇವೆ. ಹಾಗಿರುವಾಗ ಯಾವುದೇ ಅಪಾಯ ಇಲ್ಲ ಎಂದು ನಾವು ಭಾವಿಸುತ್ತೇವೆ. ಅಧಿಕ ರಿಟರ್ನ್ ಅನ್ನು ಪಡೆಯುವ ಉದ್ದೇಶದಿಂದ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುತ್ತೇವೆ. ಲಾಭವನ್ನು ಗಳಿಸಿದ್ದೇವೆ ಎಂದು ಹೇಳಿಕೊಂಡು ಇತರರು ಕೂಡಾ ನಿಮ್ಮ ಮೇಲೆ ಒತ್ತಡ ಹೇರುತ್ತಾರೆ," ಎಂದು ತಿಳಿಸಲಾಗಿದೆ.
ಡಿಜಿಟಲ್ ಪಾವತಿ ವೇಳೆ ಈ ತಪ್ಪು ಮಾಡದಿರಿ
* ನಿಮ್ಮ ಬ್ಯಾಂಕ್ ಅಥವಾ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಯಾವುದೇ ಮಾಹಿತಿಯನ್ನು ಕೇಳಿದರೆ ಮಾಹಿತಿಯನ್ನು ನೀವು ನೀಡದಿರಿ.
* ಡೆಬಿಟ್ ಕಾರ್ಡ್ ಪಿನ್ ಮತ್ತು ಯುಪಿಐ ಪಿನ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ
* ರಿಮೋಟ್ ಆಕ್ಸಸ್/ ಸ್ಕ್ರೀನ್ ಶೇರಿಂಗ್ ಆಪ್‌ಗಳನ್ನು ವಂಚಕರು ಬಳಕೆ ಮಾಡಬಹುದು, ಅದಕ್ಕಾಗಿ ಎಂದಿಗೂ ಕೂಡಾ ಸ್ಕ್ರೀನ್ ಶೇರಿಂಗ್ ಆಪ್ ಬಳಕೆ ಮಾಡುವಾಗ ಎಚ್ಚರವಾಗಿರಿ. ಹಣಕಾಸು ವಹಿವಾಟು ನಡೆಸುವಾಗ ಸ್ಟ್ರೀನ್ ಶೇರಿಂಗ್ ಆಪ್ ಬಳಕೆ ಮಾಡಬೇಡಿ
* ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವಹಿವಾಟಿನ ವಿವರಗಳನ್ನು ಎಂದಿಗೂ ಪೋಸ್ಟ್ ಮಾಡಬೇಡಿ
* ಕರೆ ಮಾಡಿ ಮೂರನೇ ವ್ಯಕ್ತಿಯೊಂದಿಗೆ ಮಾತನಾಡುವಾಗ ವಹಿವಾಟು ನಡೆಸುವುದನ್ನು ತಪ್ಪಿಸಿ


Click it and Unblock the Notifications