For Quick Alerts
ALLOW NOTIFICATIONS  
For Daily Alerts

ಎಫ್ ಡಿ, ಚಿನ್ನ, ಈಕ್ವಿಟಿ- ಮತ್ತ್ಯಾವ ಹೂಡಿಕೆಯಲ್ಲಿ ಹಣ ಬೇಗ ಆಗುತ್ತದೆ ಡಬಲ್?

|

ಯಾರಾದರೂ ತಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡುತ್ತಾರೆ ಅಂದರೆ ಅಥವಾ ತಮ್ಮ ಆದಾಯದಲ್ಲೇ ಅಲ್ಪ- ಸ್ವಲ್ಪ ಮೊತ್ತವನ್ನು ಉಳಿಸುತ್ತಾರೆ ಅಂದರೆ ಅದರಿಂದ ಇನ್ನಷ್ಟು ಹಣ ಸೇರಲಿ ಅಂತಲೇ ಅಲ್ಲವಾ? ಹೂಡಿಕೆ ಅಥವಾ ಉಳಿತಾಯ ಮಾಡುವ ಉದ್ದೇಶ ಏನೆಂದರೆ, ಒಂದು ರುಪಾಯಿಯು ಮತ್ತೊಂದು ರುಪಾಯಿಯನ್ನು ದುಡಿಯಲಿ ಎಂದೇ ಆಗಿರುತ್ತದೆ.

ಈ ವಿಚಾರದಲ್ಲಿ ಒಬ್ಬೊಬ್ಬರ ಗುರಿ ಒಂದೊಂದು ರೀತಿ ಇರಬಹುದು. ಕೆಲವರಿಗೆ ಅಲ್ಪಾವಧಿ ಗುರಿ ಇರುತ್ತದೆ. ಮತ್ತೆ ಕೆಲವರಿಗೆ ಮಧ್ಯಮಾವಧಿ ಹಾಗೂ ಇನ್ನೂ ಕೆಲವರಿಗೆ ದೀರ್ಘಾವಧಿ ಗುರಿಗಳು ಇರುತ್ತವೆ. ಆದ್ದರಿಂದ ಹಣಕಾಸು ಪ್ಲಾನಿಂಗ್ ಮಾಡುವ ಹಂತದಲ್ಲಿ "ನಿಯಮ 72"ರ ಬಗ್ಗೆ ತಿಳಿದುಕೊಂಡು, ಅದರ ಮೂಲಕ ಮೌಲ್ಯಮಾಪನ ಮಾಡಿ, ಹಣ ತೊಡಗಿಸಿದರೆ ಉತ್ತಮ.

ಇದೇ "ನಿಯಮ 72" ಅನ್ನು ಅನ್ವಯಿಸಿ, ಯಾವುದರ ಮೇಲೆ ಹಣ ಹೂಡಿದರೆ ಅದು ದ್ವಿಗುಣ ಆಗಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಮಾಹಿತಿ ನಿಮ್ಮೆದುರು ಈ ಲೇಖನದಲ್ಲಿದೆ.

ಏನಿದು

ಏನಿದು "ನಿಯಮ 72"?

ಇದು ಬಹಳ ಸರಳವಾದ ನಿಯಮ. ನೀವು ಮಾಡಲಿರುವ ಹೂಡಿಕೆ ಅಥವಾ ಉಳಿತಾಯದ ಮೇಲಿನ ಬಡ್ಡಿ ದರ ಅಥವಾ ರಿಟರ್ನ್ಸ್ ನಿಂದ ಸಂಖ್ಯೆ 72 ಅನ್ನು ಭಾಗಿಸಬೇಕು. ಅದಕ್ಕೆ ಬರುವ ಉತ್ತರವೇ ನಿಮ್ಮ ಮೊತ್ತ ದುಪ್ಪಟ್ಟು ಆಗುವುದಕ್ಕೆ ತೆಗೆದುಕೊಳ್ಳುವ ಸಮಯ. ಈ ಲೇಖನದಲ್ಲಿ ಒಂದು ಸಲದ ಹೂಡಿಕೆಯನ್ನು ಗಣನೆಗೆ ತೆಗೆದುಕೊಂಡು, ರಿಟರ್ನ್ಸ್ ಗೆ ಬಹಳ ಹತ್ತಿರದಲ್ಲಿ ಲೆಕ್ಕಾಚಾರವನ್ನು ನೀಡಲಾಗುತ್ತಿದೆ.

ಬ್ಯಾಂಕ್ ಎಫ್.ಡಿ.

ಬ್ಯಾಂಕ್ ಎಫ್.ಡಿ.

ಬಹುತೇಕ ಸಾರ್ವಜನಿಕ ಅಥವಾ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಸುರಕ್ಷಿತವಾದ ಎಫ್.ಡಿ.ಗೆ 1ರಿಂದ 5 ವರ್ಷದ ಅವಧಿಗೆ 5% ರಿಟರ್ನ್ ಇದೆ. ಆದ್ದರಿಂದ ಎಷ್ಟು ವರ್ಷಕ್ಕೆ ನಿಮ್ಮ ಹಣ ಡಬಲ್ ಆಗುತ್ತದೆ ಎಂಬುದಕ್ಕೆ ಅನ್ವಯಿಸಬೇಕಾದ ಸೂತ್ರ, 72/5. ಅದಕ್ಕೆ ಸಿಗುವ ಉತ್ತರ 14 ವರ್ಷಗಳು.

ಎನ್ ಎಸ್ ಸಿ

ಎನ್ ಎಸ್ ಸಿ

ಎನ್ ಎಸ್ ಸಿಯಲ್ಲಿ ಡಿಸೆಂಬರ್ ಗೆ ಕೊನೆಯಾದ ತ್ರೈಮಾಸಿಕ ಬಡ್ಡಿ ದರವು 6.8% ಇದೆ. ಈ ವರೆಗೆ ಇದು 5 ವರ್ಷದ ಲಾಕಿಂಗ್ ಅವಧಿ ಇದೆ. ಇದರ ಮೇಲೆ ಹೂಡಿಕೆ ಮಾಡಿದ ಮೊತ್ತ 10.58 ವರ್ಷಕ್ಕೆ ದುಪ್ಪಟ್ಟಾಗುತ್ತದೆ.

ಪಿಪಿಎಫ್

ಪಿಪಿಎಫ್

ಇದು ಹದಿನೈದು ವರ್ಷದ ದೀರ್ಘಾವಧಿಯ ಹೂಡಿಕೆ. ಇದರಿಂದ ಅದ್ಭುತವಾದ ತೆರಿಗೆ ಅನುಕೂಲಗಳಿವೆ. ಸದ್ಯಕ್ಕೆ 7.1% ರಿಟರ್ನ್ಸ್ ನೀಡುತ್ತಿದೆ. 72/7.1= 10.14 ವರ್ಷದಲ್ಲಿ ನೀವು ಹೂಡಿಕೆ ಮಾಡಿದ ಹಣವು ಎರಡರಷ್ಟಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಇದು ನಿವೃತ್ತಿಯ ಯೋಜನೆ. ಇದಕ್ಕೆ 7.4% ರಿಟರ್ನ್ ಇದ್ದು, 72/7.4= 9.72 ವರ್ಷದಲ್ಲಿ ಹೂಡಿಕೆ ಮೊತ್ತ ಡಬಲ್ ಆಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನಾ

ಸುಕನ್ಯಾ ಸಮೃದ್ಧಿ ಯೋಜನಾ

ಇದು ಹೆಣ್ಣುಮಕ್ಕಳಿಗಾಗಿ ಹೂಡಿಕೆ ಯೋಜನೆ. ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯ ಭಾಗವಾಗಿ ಆರಂಭವಾಗಿದೆ. ಸದ್ಯಕ್ಕೆ ಸಣ್ಣ ಉಳಿತಾಯ ಯೋಜನೆಗಳಲ್ಲೇ ಅತಿ ಹೆಚ್ಚಿನ ಬಡ್ಡಿ ದರ, ಅಂದರೆ 7.6% ನೀಡುತ್ತಿರುವುದು ಇದಕ್ಕೆ. ಈ ಯೋಜನೆಯಡಿ ಮಾಡಿದ ಹೂಡಿಕೆ 9.4 ವರ್ಷದಲ್ಲಿ ದ್ವಿಗುಣ ಆಗುತ್ತದೆ.

ಎನ್ ಪಿಎಸ್

ಎನ್ ಪಿಎಸ್

ಪೆನ್ಷನ್ ಸ್ಕೀಮ್ ನ ಜಿ ಸ್ಕೀಮ್ ಕಳೆದ ಒಂದು ವರ್ಷದಲ್ಲಿ ಎರಡಂಕಿಯ ರಿಟರ್ನ್ಸ್ ನೀಡಿದೆ. ಅಂದರೆ 11.5%. ಆದ್ದರಿಂದ ಇದರ ಮೇಲಿನ ಹೂಡಿಕೆಯು 72/11.5= 6.26 ವರ್ಷದಲ್ಲಿ ದುಪ್ಪಟ್ಟಾಗುತ್ತದೆ.

ಮ್ಯೂಚುವಲ್ ಫಂಡ್ ಗಳು

ಮ್ಯೂಚುವಲ್ ಫಂಡ್ ಗಳು

ಅಲ್ಪಾವಧಿ, ಡೆಟ್ ಸ್ಕೀಮ್ ಗಳು ಮಧ್ಯಮಾವಧಿಯಿಂದ ದೀರ್ಘಾವಧಿಯದು ಸದ್ಯಕ್ಕೆ 8.5- 8.7% ರಿಟರ್ನ್ಸ್ ನೀಡುತ್ತಿವೆ. ಆದ್ದರಿಂದ ಹಣ ದುಪ್ಪಟ್ಟು ಆಗಲು 72/8.7= 8.2 ವರ್ಷ ಸಮಯ ಬೇಕು.

ಚಿನ್ನ

ಚಿನ್ನ

ಈ ವರ್ಷದ ಆರಂಭದಿಂದ ಇಲ್ಲಿಯ ತನಕ 40% ರಿಟರ್ನ್ಸ್ ನೀಡಿದೆ ಚಿನ್ನ. ಇದೇ ರೀತಿಯ ರಿಟರ್ನ್ಸ್ ಸಿಗುತ್ತದೆಯಾ ಎಂಬುದಕ್ಕೆ ಯಾವ ಖಾತ್ರಿಯೂ ಇಲ್ಲ. ಯಾವಾಗೆಲ್ಲ ಆರ್ಥಿಕತೆ ಅಪಾಯದಲ್ಲಿ ಸಿಲುಕಿಕೊಳ್ಳುತ್ತದೋ ಹಾಗೂ ಭೌಗೋಳಿಕ- ರಾಜಕೀಯ ಉದ್ವಿಗ್ನತೆಗಳು ಕಾಣಿಸಿಕೊಳ್ಳುತ್ತದೋ ಆಗೆಲ್ಲ ಚಿನ್ನದ ದರ ಮೇಲೇರುತ್ತದೆ. ಈ ವರ್ಷದ ಲೆಕ್ಕಾಚಾರ ಹೇಳಬೇಕು ಅಂದರೆ ಆಗಸ್ಟ್ ತನಕ 40% ರಿಟರ್ನ್ಸ್ ನೀಡಿದೆ. ಅಂದರೆ, ಆ ಲೆಕ್ಕಾಚಾರದಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡುವುದಕ್ಕೆ 72/40= 1.8 ವರ್ಷ ಸಾಕು.
ಇದು ಚಿನ್ನದ ಸಾಮರ್ಥ್ಯವನ್ನು ತಿಳಿಸುತ್ತದೆ. ಇಷ್ಟೇ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ.

ಈಕ್ವಿಟಿ ಷೇರು

ಈಕ್ವಿಟಿ ಷೇರು

ಚಿನ್ನಕ್ಕೆ ಅನ್ವಯಿಸುವಂಥ ಅಂಶವೇ ಇದಕ್ಕೂ ಸೂಕ್ತವಾಗುತ್ತದೆ. ಭಾರತೀಯ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಆದರೆ ಅಷ್ಟೇ ವೇಗದಲ್ಲಿ ಚೇತರಿಸಿಕೊಂಡಿತು. ಕೆಲವು ಷೇರುಗಳು ಇನ್ನೂರು, ಮುನ್ನೂರು ಹಾಗೂ ನಾನೂರು ಪರ್ಸೆಂಟ್ ರಿಟರ್ನ್ಸ್ ನೀಡಿದವು. ಆದರೆ ಇದೇ ಸ್ಥಿತಿ ಮುಂದಿನ ವರ್ಷಕ್ಕೂ ಮುಂದುವರಿಯುತ್ತದೆ ಎಂದು ಯಾವ ವಿಶ್ಲೇಷಕರೂ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಹೀಗೇ ಮುಂದುವರಿದಲ್ಲಿ 6 ತಿಂಗಳಿಂದ 3 ವರ್ಷದ ಅವಧಿಯಲ್ಲಿ ಹಣ ದುಪ್ಪಟ್ಟಾಗಬಹುದು. ಚಿನ್ನ ಮತ್ತು ಈಕ್ವಿಟಿ ಈ ಎರಡರ ಮೇಲಿನ ರಿಟರ್ನ್ಸ್ ಬಹಳ ಅನಿಶ್ಚಿತತೆಯಿಂದ ಕೂಡಿರುತ್ತದೆ.

English summary

Which Savings Or Investments Make Your Money Double Fastest?

Here is the calculation about which savings or investments make your money double fastest.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X