For Quick Alerts
ALLOW NOTIFICATIONS  
For Daily Alerts

ಸ್ವಂತ ಉದ್ಯೋಗಿಗಳಿಗೆ ಚಿನ್ನದ ಮೇಲಿನ ಸಾಲ ಬೆಸ್ಟ್‌ ಏಕೆ ಗೊತ್ತೆ? ಇಲ್ಲಿವೆ 6 ಕಾರಣಗಳು

|

ಚಿನ್ನದ ಮೇಲಿನ ಹೂಡಿಕೆ ಭಾರತೀಯರಿಗೆ ಬಹಳ ಪ್ರೀತಿ. ಅಲ್ಲದೆ ಜೀವನದಲ್ಲಿ ತುಂಬಾ ಉತ್ತಮ ಹೂಡಿಕೆ ಯೋಜನೆ ಎಂದು ನಂಬಿದ್ದಾರೆ. ಹಳದಿ ಲೋಹವು ಕೇವಲ ಹೂಡಿಕೆಯಾಗಿರದೆ, ಮನೆಗೆ ಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಅಗತ್ಯ ಅಥವಾ ತುರ್ತು ಸಂದರ್ಭದಲ್ಲಿ ನೆರವಿಗೆ ಆಗುವಂತಹ ಸ್ವತ್ತಾಗಿದೆ.

 

ಹೀಗೆ ಖರೀದಿಸಿದ ಚಿನ್ನದ ಮೇಲೆ ಕಷ್ಟ ಕಾಲದಲ್ಲಿ ಸಾಲ ಕೂಡ ಪಡೆಯಬಹುದು. ಬಹುಪಾಲು ಭಾರತೀಯರಿಗೆ, ವಿಶೇಷವಾಗಿ ಕೃಷಿ ಮತ್ತು ಇತರೆ ಅನೌಪಚಾರಿಕ ವಿಭಾಗಗಳಿಂದ ಆದಾಯ ಗಳಿಸುವ ಕುಟುಂಬಗಳಿಗೆ ಸಾಲ ತೆಗೆದುಕೊಳ್ಳಲು ಚಿನ್ನ ಪ್ರಮುಖ ಮೂಲವಾಗಿದೆ.

ಯಾವುದೇ ಹೆಚ್ಚಿನ ಆದಾಯ ಬರದೆ ಇರುವ ಜನರು, ಸ್ವಂತ ಉದ್ಯೋಗ ಮಾಡುತ್ತಿರುವವರು , ಗೃಹಿಣಿಯರು ನಿರಂತರ ಆದಾಯ ಮೂಲದ ಕೊರತೆಯನ್ನ ಅನುಭವಿಸುತ್ತಿರುತ್ತಾರೆ. ಇವರಿಗೆ ದೊಡ್ಡ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯುವುದು ತುಂಬಾ ಕಷ್ಟಸಾಧ್ಯ. ಇದರ ಪರಿಣಾಮ ಇವರು ಬ್ಯಾಂಕುಗಳಲ್ಲಿ ಮನೆಯಲ್ಲಿದ್ದ ಚಿನ್ನವನ್ನಿಟ್ಟು ಸಾಲಗಳನ್ನು ಪಡೆಯುತ್ತಾರೆ. ಇತ್ತೀಚಿನ ಕೆಪಿಎಂಜಿ ವರದಿಯ ಪ್ರಕಾರ, ಭಾರತದ ಚಿನ್ನದ ಸಾಲ ಮಾರುಕಟ್ಟೆಯು 2022 ರ ವೇಳೆಗೆ 4,617 ಬಿಲಿಯನ್ ರುಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ.

1. ಕ್ರೆಡಿಟ್ ಸ್ಕೋರ್‌ ಹೆಚ್ಚಿಸಲು ಸಾಧ್ಯ

1. ಕ್ರೆಡಿಟ್ ಸ್ಕೋರ್‌ ಹೆಚ್ಚಿಸಲು ಸಾಧ್ಯ

ನೀವು ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಹೆಚ್ಚಿನ ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ . ಏಕೆಂದರೆ ನೀವು ಸಾಲ ತೆಗೆದುಕೊಳ್ಳುವಾಗ ಭದ್ರತೆಗೆ ಆಭರಣ ಅಥವಾ ನಾಣ್ಯವನ್ನು ನೀಡಿರುತ್ತೀರಿ. ನಿಮ್ಮ ವಯಸ್ಸು 18 ವರ್ಷಕ್ಕಿಂತ ಹೆಚ್ಚಿದ್ದರೆ ಸರ್ಕಾರ ನೀಡಿರುವ ಐಡಿ ಪ್ರೂಫ್ ಮತ್ತು ದಾಖಲೆಗಳನ್ನು ನೀಡಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಹೀಗೆ ಪಡೆದ ಸಾಲಕ್ಕೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ಚಿನ್ನದ ಸಾಲವು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಗೃಹ ಸಾಲ , ವಾಹನ ಸಾಲ ಅಥವಾ ವೈಯಕ್ತಿಕ ಸಾಲದಂತಹ ಯಾವುದೇ ಭವಿಷ್ಯದ ಸಾಲದ ಅವಶ್ಯಕತೆಯಗಳಿಗೆ ಇದು ಸಹಾಯವಾಗುತ್ತದೆ.

 

ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳುಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳು

 

2.  ಇದು ಕ್ರೆಡಿಟ್‌ ಕಾರ್ಡ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ
 

2. ಇದು ಕ್ರೆಡಿಟ್‌ ಕಾರ್ಡ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ

ನೀವು ಸ್ವಯಂ ಉದ್ಯೋಗಿಗಳಾಗಿದ್ದರೆ, ಸಣ್ಣ ಉದ್ಯಮವನ್ನು ನಡೆಸುತ್ತಿದ್ದರೆ, ಕೃಷಿ ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ವಾಣಿಜ್ಯ ಬ್ಯಾಂಕಿಗೆ ಆದಾಯದ ಸ್ಥಿರತೆಯನ್ನು ಸಾಬೀತುಮಾಡುವುದು ಕಷ್ಟ. ಅಂತಹ ವ್ಯಕ್ತಿಗಳಿಗೆ ಚಿನ್ನದ ಸಾಲಗಳು ಸೂಕ್ತವಾಗಿ ಬರುತ್ತವೆ, ಏಕೆಂದರೆ ಇವುಗಳನ್ನು ಕನಿಷ್ಠ ದಾಖಲಾತಿ ಪ್ರಕ್ರಿಯೆಯೊಂದಿಗೆ ತಕ್ಷಣ ನೀಡಲಾಗುತ್ತದೆ.

ಅನೇಕ ಗೋಲ್ಟ್ ಫೈನಾನ್ಸ್ ಕಂಪನಿಗಳು ಚಿನ್ನದ ಮೇಲೆ ಕನಿಷ್ಟ ದಾಖಲಾತಿ ಪಡೆದು ಸಾಲಗಳನ್ನು ನೀಡುತ್ತವೆ. ಇದರಿಂತ ತುರ್ತು ಸನ್ನಿವೇಶಗಳಲ್ಲಿ, ಮಗುವಿನ ಶಿಕ್ಷಣ, ವಿವಾಹ, ವೈದ್ಯಕೀಯ ತುರ್ತುಸ್ಥಿತಿ ಮುಂತಾದ ತಕ್ಷಣದ ನಗದು ಅಗತ್ಯಗಳನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ಈ ಮೂಲಕ ಕ್ರೆಡಿಟ್ ಕಾರ್ಡ್‌ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

 

ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?

3. ನೇರ ಬ್ಯಾಂಕ್ ಅಕೌಂಟ್‌ಗೆ ಹಣ ಜಮಾವಣೆ ಆಗುವಂತೆ ಮಾಡಬಹುದು

3. ನೇರ ಬ್ಯಾಂಕ್ ಅಕೌಂಟ್‌ಗೆ ಹಣ ಜಮಾವಣೆ ಆಗುವಂತೆ ಮಾಡಬಹುದು

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ವಹಿವಾಟು ವ್ಯವಸ್ಥೆಯು ಮತ್ತಷ್ಟು ಆಧುನಿಕತೆಯಿಂದ ಕೂಡಿದೆ. ಸ್ವಲ್ಪ ಹೊತ್ತಿನಲ್ಲೇ ಹಣಕಾಸುವ ವ್ಯವಹಾರಗಳು ಮುಕ್ತಾಯಗೊಳ್ಳುತ್ತದೆ. ಚಿನ್ನದ ಮೇಲಿನ ಸಾಲ ಕೂಡ ಸುಲಭವಾಗಿ ಪಡೆಯಬಹುದು. ನಿಮ್ಮ ಬ್ಯಾಂಕ್ ಖಾತೆಗೆ ತ್ವರಿತ ವರ್ಗಾವಣೆಯೊಂದಿಗೆ ಚಿನ್ನದ ಸಾಲಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.

ನೀವು ಬ್ಯಾಂಕ್ ಶಾಖೆಗೆ ತೆರಳಿ ಚಿನ್ನವನ್ನು ಠೇವಣಿ ಮಾಡಬಹುದು. ನಿಮ್ಮ ಬ್ಯಾಂಕ್, ಖಾತೆಯನ್ನು ಲಿಂಕ್ ಮಾಡುವ ಆನ್‌ಲೈನ್ ನೋಂದಣಿಯ ನಂತರ ಸಾಲದ ಮೊತ್ತವನ್ನು ಕ್ರೆಡಿಟ್ ಮಾಡುತ್ತದೆ. ಬಡ್ಡಿ ಮತ್ತು ಕಂತು ಪಾವತಿಗಳನ್ನು ಆನ್‌ಲೈನ್‌ನಲ್ಲೇ ಮಾಡಬಹುದು. ಹಾಗೆಯೇ ಬ್ಯಾಂಕ್ ಹೇಳಿಕೆಯನ್ನು ಪರಿಶೀಲಿಸುವುದು ಆನ್‌ಲೈನ್‌ನಲ್ಲಿ ಸಾಧ್ಯವಾಗಿದೆ.

 

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳುದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು

4) ಚಿನ್ನದ ಬೆಲೆ ಹೆಚ್ಚಾದಾಗ ನಿಮಗೆ ಹೆಚ್ಚಿನ ಲಾಭ

4) ಚಿನ್ನದ ಬೆಲೆ ಹೆಚ್ಚಾದಾಗ ನಿಮಗೆ ಹೆಚ್ಚಿನ ಲಾಭ

ನೀವು ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಚಿನ್ನದ ಬೆಲೆ ಏರಿಕೆಯು ನಿಮಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ. ಏಕೆಂದರೆ ನೀವು ಚಿನ್ನವನ್ನು ಖರೀದಿಸಿದ ಬಳಿಕ ವಾಗ್ದಾನ ಮಾಡಲ್ಪಟ್ಟ ಚಿನ್ನದ ಆಭರಣಗಳು ಅಥವಾ ನಾಣ್ಯಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುತ್ತದೆ. ಸಾಲದಾತರು ನಿಮಗೆ ಕಡಿಮೆ ದರದಲ್ಲಿ ಸಾಲವನ್ನು ನೀಡುತ್ತಾರೆ, ಏಕೆಂದರೆ ಅವುಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಉಂಟಾಗುವ ಅಪಾಯಗಳು ಕಡಿಮೆ ಇರುತ್ತದೆ. ಹೀಗಾಗಿ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ಪಡೆಯಲು ಸಾಧ್ಯ.

5) ಸ್ವಯಂ ಉದ್ಯೋಗಿಗಳಿಗೆ ಓವರ್‌ಡ್ರಾಫ್ಟ್‌ ಸೌಲಭ್ಯ

5) ಸ್ವಯಂ ಉದ್ಯೋಗಿಗಳಿಗೆ ಓವರ್‌ಡ್ರಾಫ್ಟ್‌ ಸೌಲಭ್ಯ

ವ್ಯವಹಾರಗಳನ್ನು ನಡೆಸುವವರಿಗೆ ದೊಡ್ಡ ಅಥವಾ ಅನಿರೀಕ್ಷಿತ ಅವಶ್ಯಕತೆಗಳನ್ನು ಪೂರೈಸಲು ಬಂಡವಾಳದ ಅಗತ್ಯವಿರುತ್ತದೆ. ಚಿನ್ನದ ಸಾಲಗಳು ಓವರ್‌ಡ್ರಾಫ್ಟ್ ಸೌಲಭ್ಯದೊಂದಿಗೆ ಬರುತ್ತವೆ. ಇದರಲ್ಲಿ ಇಎಂಐಗಳು ಅಥವಾ ಇನ್ನಾವುದೇ ಬಾಕಿಗಳನ್ನು ಪಾವತಿಸಲು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಿಂಪಡೆಯಬಹುದು. ಅಲ್ಲದೆ ಒಬ್ಬರು ಎಷ್ಟು ಬಾರಿ ಸಾಲ ಪಡೆಯಬಹುದು ಎಂಬುದಕ್ಕೆ ಯಾವುದೇ ನಿರ್ಬಂಧವಿಲ್ಲ.

6) ಅಗ್ಗದ ಸಾಲವನ್ನು ಪಡೆಯಲು ಸಾಧ್ಯ

6) ಅಗ್ಗದ ಸಾಲವನ್ನು ಪಡೆಯಲು ಸಾಧ್ಯ

ಭಾರತದಲ್ಲಿ ಸಾಲ ನೀಡುವವರಿಗೆ ಕೃಷಿ ಆದ್ಯತೆಯ ಕ್ಷೇತ್ರವಾಗಿದೆ. ಕೃಷಿಗೆ ಸಂಬಂಧಪಟ್ಟ ಮೂಲಸೌಕರ್ಯ ಮತ್ತು ಇತರೇ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬ್ಯಾಂಕುಗಳು ಸಾಲಗಳನ್ನು ನೀಡುತ್ತವೆ. ಚಿನ್ನದ ಮೇಲೆ ಸಾಲ ಪಡೆಯುವ ರೈತರು ಸಹ ಬಡ್ಡಿದರಗಳ ಮೇಲೆ 1 ರಿಂದ 2 ಪರ್ಸೆಂಟ್‌ರಷ್ಟು ರಿಯಾಯಿತಿ ಪಡೆಯಬಹುದು. ಕೆಲವು ಎನ್‌ಬಿಎಫ್‌ಸಿಗಳು ಮಹಿಳೆಯರಿಗೆ ಚಿನ್ನದ ಮೇಲೆ ಅಗ್ಗದ ಸಾಲವನ್ನು ಸಹ ನೀಡುತ್ತವೆ.

English summary

Why Gold Loan Are Good For Self Employed Borrowers

These are the 6 reasons for why gold loan are good for new and self employed borrowers
Story first published: Sunday, January 26, 2020, 18:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X