ನಾವು ಉಳಿತಾಯವನ್ನು ಮಾಡಲು ಬಯಸಿದರೆ ಅದಕ್ಕೆ ಉತ್ತಮ ಆಯ್ಕೆಗಳ ಪೈಕಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಕೂಡಾ ಒಂದಾಗಿದೆ. ಇನ್ನು ಸಂಸ್ಥೆಗಳಲ್ಲಿ ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆಯಲಾಗುತ್ತದೆ. ಆದರೆ ನೀವು ದೀರ್ಘಾವಧಿಯ ಉಳಿತಾಯ ಮತ್ತು ಆರ್ಥಿಕ ಭದ್ರತೆಯನ್ನು ಉತ್ತೇಜಿಸಲು ಬಯಸಿದರೆ ನಿಮಗೆ ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್) ಉತ್ತಮ ಆಯ್ಕೆಯಾಗಿದೆ.
ವಿಪಿಎಫ್ ಅಧಿಕ ಆದಾಯ ಮತ್ತು ಆಕರ್ಷಕ ತೆರಿಗೆ ಪ್ರಯೋಜನಗಳ ಭರವಸೆಯನ್ನು ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್) ಪೂರಕವಾಗಿ ವಿನ್ಯಾಸಗೊಳಿಸಲಾದ ವಿಪಿಎಫ್ ನಿವೃತ್ತಿಯ ನಂತರಕ್ಕಾಗಿ ಉಳಿತಾಯವನ್ನು ಮಾಡಲು ಬಯಸುವವರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕೆ ಯಾಕೆ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

1. ಟ್ರಿಪಲ್ ಇ ಪ್ರಯೋಜನಗಳೊಂದಿಗೆ ದೊಡ್ಡ ಯೋಜನೆ
ವಿಪಿಎಫ್ ಒಂದು ಉಳಿತಾಯ ಯೋಜನೆಯಾಗಿದ್ದು ಅದು ಅತ್ಯುತ್ತಮ ಆದಾಯವನ್ನು ನೀಡುತ್ತದೆ, ತೆರಿಗೆ ಉಳಿತಾಯ ನೀಡುತ್ತದೆ. ಟ್ರಿಪಲ್ ಇ ವರ್ಗದ ಅಡಿಯಲ್ಲಿ ಬರುವ ವಿಪಿಎಫ್ ಹೂಡಿಕೆ ಮಾಡಿದ ಮೊತ್ತ, ಒಟ್ಟು ಡೆಪಾಸಿಟ್, ಬಡ್ಡಿಯ ಮೇಲೆ ತೆರಿಗೆ ವಿನಾಯಿತಿಗಳನ್ನು ಒದಗಿಸುತ್ತದೆ.
ಈ ಫೀಚರ್ ತಮ್ಮ ತೆರಿಗೆ ಹೊಣೆ ಕಡಿಮೆ ಮಾಡಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ವಿಪಿಎಫ್ ಅಪಾಯವಿಲ್ಲದ ಹೂಡಿಕೆ ಆಯ್ಕೆಯಾಗಿದ್ದು, ಯಾವುದೇ ಸಮಯದಲ್ಲಿ ವಿತ್‌ಡ್ರಾ ಮಾಡಲು ಅವಕಾಶ ನೀಡುತ್ತದೆ. ಉದ್ಯೋಗವನ್ನು ಬದಲಾಯಿಸುವಾಗಲೂ ಯಾವುದೇ ತೊಂದರೆ ಉಂಟಾಗದು. ಕೊಡುಗೆದಾರರು ತಮ್ಮ ಡೆಪಾಸಿಟ್ ಮೊತ್ತವನ್ನು ವರ್ಷಕ್ಕೆ ಎರಡು ಬಾರಿ ಬದಲಾವಣೆ ಮಾಡಿಕೊಳ್ಳಬಹುದು.
2. ಸುರಕ್ಷತೆ ಭರವಸೆ
ವಿಪಿಎಫ್‌ನ ಅತ್ಯಂತ ಬಲವಾದ ಅಂಶ ಇದು ಸರ್ಕಾರಿ ಚಾಲಿತವಾಗಿರುವುದು ಆಗಿದೆ. ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆದುಕೊಳ್ಳುವ ಆತಂಕ ನಿಮಗೆ ಇರಲಾರದು. ಈ ಸುರಕ್ಷತಾ ಹೂಡಿಕೆ ಆಯ್ಕೆಯಿಂದ ನೀವು ಅಧಿಕವಾಗಿ ಹಣವನ್ನು ಸಂಗ್ರಹಿಸಲು ಸಹಾಯಕವಾಗಲಿದೆ.
3. ಇಪಿಎಫ್‌ನಂತೆ ಹೆಚ್ಚಿನ ಆದಾಯ
ವಿಪಿಎಫ್ ಇಪಿಎಫ್‌ನಂತೆಯೇ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಪ್ರಸ್ತುತ ಇದರ ಬಡ್ಡಿದರ ಶೇಕಡ 8.15 ರಷ್ಟಿದೆ. ಈ ಬಡ್ಡಿ ದರವು ಅನೇಕ ಇತರ ಉಳಿತಾಯ ಯೋಜನೆಗಳು ಒದಗಿಸಿದ ಆದಾಯಕ್ಕಿಂತ ಅಧಿಕವಾಗಿದೆ. ಹಣ ಉಳಿತಾಯ ಮಾಡಲು ವಿಪಿಎಫ್ ಲಾಭದಾಯಕ ಆಯ್ಕೆಯಾಗಿದೆ.
4. ತೆರಿಗೆ ಪ್ರಯೋಜನ
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ತೆರಿಗೆದಾರರು ವಿಪಿಎಫ್ ಕೊಡುಗೆಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಾಗುತ್ತದೆ. ಇದರರ್ಥ ಹೂಡಿಕೆಗಳು ಮಾತ್ರವಲ್ಲದೆ ಡೆಪಾಸಿಟ್ ಮಾಡಿದ ಒಟ್ಟು ಮೊತ್ತ ಮತ್ತು ಅವುಗಳ ಮೇಲೆ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ವಾರ್ಷಿಕವಾಗಿ 1.50 ಲಕ್ಷ ರೂಪಾಯಿವರೆಗೆ ಹೂಡಿಕೆಯಿಂದ ತೆರಿಗೆ ವಿನಾಯಿತಿ ಲಭ್ಯವಿದೆ.
5. ಸುಲಭ ವಿತ್‌ಡ್ರಾ ಆಯ್ಕೆ
ವಿಪಿಎಫ್ ನಿವೃತ್ತಿ ಮತ್ತು ಅಕಾಲಿಕ ವಿತ್‌ಡ್ರಾಗಳ ಅನುಕೂಲವನ್ನು ನೀಡುತ್ತದೆ. ನಿವೃತ್ತಿ ಅಥವಾ ರಾಜೀನಾಮೆಯ ನಂತರ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ. ಇಪಿಎಫ್‌ಒ ಅಕಾಲಿಕವಾಗಿ ಹಣ ವಿತ್‌ಡ್ರಾ ಮಾಡಲು ಆಯ್ಕೆ ನೀಡುತ್ತದೆ. ಆದರೆ ಕೆಲವು ಷರತ್ತುಗಳಿದೆ. ಐದು ವರ್ಷಗಳಲ್ಲಿ ಹಣವನ್ನು ಹಿಂಪಡೆದರೆ ತೆರಿಗೆ ವಿನಾಯಿತಿ ಲಭ್ಯವಾಗದು.


Click it and Unblock the Notifications