ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಂದಿನ ಅಕ್ಟೋಬರ್ 1 ರಿಂದ ನೂತನ ಕಾರ್ಮಿಕ ನೀತಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂಬ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡಿದೆ. ಈ ನೂತನ ಕಾರ್ಮಿಕ ನೀತಿಯಲ್ಲಿ ಈ ಹಿಂದಿನ ನೀತಿಗಿಂತ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ನೂತನ ಕಾರ್ಮಿಕ ನೀತಿಯ ಪ್ರಕಾರ ಕೆಲಸದ ಸಮಯವು ಅಧಿಕವಾಗಲಿದೆ. ಈ ನೂತನ ಕಾರ್ಮಿಕ ನೀತಿ ಪ್ರಕಾರ ಕೆಲಸದ ಸಮಯವು 9 ಗಂಟೆಯಿಂದ 12 ಗಂಟೆಗೆ ಏರಿಕೆಯಾಗಲಿದೆ. ಹಾಗೆಯೇ ಇದು ಮಾತ್ರವಲ್ಲದೇ ನೂತನ ಕಾರ್ಮಿಕ ನೀತಿಯ ಪ್ರಕಾರವಾಗಿ ಸಂಬಳ ನೀಡುವ ಕ್ರಮವು ಕೂಡಾ ಬದಲಾವಣೆಯಾಗಲಿದೆ. ಈ ನೂತನ ಕಾರ್ಮಿಕ ನೀತಿಗೆ ಹಲವಾರು ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಮುಖ್ಯವಾಗಿ ಕಾರ್ಮಿಕರ ದುಡಿಮೆಯ ಸಮಯ ಹೆಚ್ಚಳಕ್ಕೆ ಅವಕಾಶ ನೀಡುವ ಈ ನೂತನ ಕಾರ್ಮಿಕ ನೀತಿ ಕೆಂಗಣ್ಣಿಗೆ ಗುರಿಯಾಗಿದೆ.
ಅಷ್ಟೇ ಅಲ್ಲದೇ ಈ ನೂತನ ಕಾರ್ಮಿಕ ನೀತಿಯು ಮಾಲಕರು ಕೆಲಸಗಾರರನ್ನು ತಮಗೆ ಇಷ್ಟ ಬಂದಾಗ ಕಿತ್ತೆಸೆಯುವ ಅವಕಾಶವನ್ನು ನೀಡುತ್ತದೆ ಎಂಬ ಕಾರಣವು ಪ್ರಮುಖವಾಗಿ ಕಾರ್ಮಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ಗುತ್ತಿಗೆ ಆಧಾರದಲ್ಲಿ ಕೆಲಸವು ಯಾರಿಗೂ ಸ್ಥಿರ ಉದ್ಯೋಗ ಇಲ್ಲದೇ ಆತಂಕದಲ್ಲಿ ಜೀವನ ದೂಡುವ ಸ್ಥಿತಿಯನ್ನು ತಂದೊಡ್ಡಲಿದೆ ಎಂಬ ಆತಂಕವು ಕಾರ್ಮಿಕರಲ್ಲಿ ಮನೆ ಮಾಡಿದೆ. ಈ ಹಿನ್ನೆಲೆ ಕಾರ್ಮಿಕ ಸಂಘಟನೆಗಳು ಈ ನೂತನ ಕಾರ್ಮಿಕ ನೀತಿಯ ವಿರುದ್ದ ತೀವ್ರ ಪ್ರತಿಭಟನೆ ನಡೆಸಿದ್ದಾರೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಕಾರ್ಮಿಕ ವಿರೋಧಿ, ರೈತ ವಿರೋಧಿ, ಬಂಡವಾಳಶಾಹಿ ಪರವಾದ ಸರ್ಕಾರವೆಂದು ಆರೋಪ ಮಾಡಿದ್ದಾರೆ.
ವೇತನದಲ್ಲಿ ಏನು ಬದಲಾವಣೆಯಾಗಲಿದೆ?
ನೂತನ ಕಾರ್ಮಿಕ ನೀತಿಯ ಪ್ರಕಾರ ಮೂಲ ವೇತನವು ಶೇ. 50 ರಷ್ಟು ಇರಲಿದೆ ಅಥವಾ ಒಟ್ಟು ಸಂಬಳಕ್ಕಿಂತ ಅಧಿಕವಿರಲಿದೆ. ಇದರಿಂದಾಗಿ ಹಲವಾರು ಉದ್ಯೋಗಿಗಳ ವೇತನದಲ್ಲಿ ಬದಲಾವಣೆಯಾಗಲಿದೆ. ಸಂಬಳದ ಲಾಭರಹಿತ ಭಾಗವು ಒಟ್ಟು ಸಂಬಳದ 50 ಪ್ರತಿಶತಕ್ಕಿಂತ ಕಡಿಮೆ ಇರುತ್ತದೆ. ಹಾಗೆಯೇ ಇತರೆ ಬೇರೆ ಭತ್ಯೆಗಳು ಬದಲಾವಣೆಯಾಗಲಿದೆ. ಅಂದರೆ ಮೂಲ ವೇತನವು ಶೇಕಡ 50 ಅಥವಾ ಅದಕ್ಕಿಂತ ಅಧಿಕವಾಗಿದ್ದರೆ, ಇತರೆ ಖರ್ಚುಗಳ ವೇತನವು ಉಳಿದ ಭಾಗವಾಗಿರಲಿದೆ. ಇನ್ನು ಮೂಲ ವೇತನದಲ್ಲಿ ಹೆಚ್ಚಳವಾಗುವುದರಿಂದಾಗಿ ಪಿಎಫ್‌ನಲ್ಲೂ ಹೆಚ್ಚಳವಾಗಲಿದೆ. ಹಾಗೆಯೇ ಕಂಪನಿಗಳು ಪಿಎಫ್‌ಗೆ ಅಧಿಕ ಕೊಡುಗೆ ನೀಡಬೇಕಾಗುತ್ತದೆ. ಪಿಎಫ್‌ನಲ್ಲಿ ಹೆಚ್ಚಳವಾಗುವುದರಿಂದಾಗಿ ನಮ್ಮ ಕೈಗೆ ಸಿಗುವ ಸಂಬಳದಲ್ಲಿ ಅಧಿಕ ಕಡಿತ ಉಂಟಾಗಲಿದೆ. ಇನ್ನು ಪಿಎಫ್‌ಗೆ ಅಧಿಕ ಹಣ ಜಮೆ ಆಗಿರುವ ಕಾರಣದಿಂದಾಗಿ ನಿವೃತ್ತಿಯ ಬಳಿಕ ದೊರೆಯುವ ಹಣವು ಅಧಿಕವಾಗಲಿದೆ. ಆದರೆ ಕಂಪನಿಗಳು ಮೂಲ ವೇತನ ಹಾಗೂ ಉಳಿದ ವೆಚ್ಚದಲ್ಲಿ ಬದಲಾವಣೆ ತಂದು ಈಗ ಇರುವ ಸಂಬಳಕ್ಕೆ ಸಮತೋಲನ ಮಾಡಬಹುದು ಅಥವಾ ಸಂಬಳ ಅಧಿಕವಾಗಬಹುದು. ಆದರೆ ಪಿಎಫ್ ಅಧಿಕ ಕಡಿತವಾಗುವ ಕಾರಣ ನಮ್ಮ ಕೈಗೆ ಸಿಗುವ ಸಂಬಳದಲ್ಲಿ ಕಡಿಮೆಯಾಗಲಿದೆ.
ಒಟ್ಟು ಕೆಲಸದ ಅವಧಿ ಎಷ್ಟು ಇರಲಿದೆ?
ಪ್ರಮುಖವಾಗಿ ಈ ನೂತನ ಕಾರ್ಮಿಕ ನೀತಿಯು ಕೆಲಸದ ಅವಧಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಪಡಿಸಲಾಗಿದೆ. ಅಂದರೆ ಪ್ರಸ್ತುತ ಕೆಲಸದ ಅವಧಿಯು ಒಟ್ಟು 8+1 ಆಗಿದೆ. ಅಂದರೆ 8 ಗಂಟೆಗಳ ಕಾಲ ಉದ್ಯೋಗಿಯು ಕಾರ್ಯ ನಿರ್ವಹಿಸಬೇಕು ಹಾಗೂ ಒಂದು ಗಂಟೆಗಳ ಕಾಲ ಊಟ, ಚಹಾಕ್ಕಾಗಿ ವಿಶ್ರಾಂತಿಯನ್ನು ಪಡೆಯಬಹುದು. ಆದರೆ ಈ ನೂತನ ಕಾರ್ಮಿಕ ನೀತಿಯು ಈ ಕೆಲಸದ ಅವಧಿಯನ್ನು 9 ರಿಂದ 12 ಕ್ಕೆ ಏರಿಕೆ ಮಾಡಲಾಗುತ್ತದೆ. ಅಂದರೆ ಕೆಲಸಗಾರರು ದಿನದ 24 ಗಂಟೆಗಳ ಪೈಕಿ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಆದರೆ 5 ಗಂಟೆಗೊಮ್ಮೆ ವಿಶ್ರಾಂತಿ ಪಡೆಯುವುದು ಕಡ್ಡಾಯವಾಗಿದೆ. 5 ಗಂಟೆಗೊಮ್ಮೆ ಅರ್ಧ ಗಂಟೆ ಉದ್ಯೋಗಿ ವಿಶ್ರಾಂತಿ ಪಡೆಯಬಹುದಾಗಿದೆ. ಇನ್ನು ಪ್ರಸ್ತುತ ಕೆಲಸದ ಅವಧಿ ಕಳೆದು ಅರ್ಧ ಗಂಟೆ ಕಾರ್ಯ ನಿರ್ವಹಿಸಿದರೂ ಅದನ್ನು ಓವರ್ ಟೈಮ್ (ಓಟಿ) ಎಂದು ಪರಿಗಣಿಸಲಾಗುತ್ತದೆ. ಆದರೆ ನೂತನ ಕಾರ್ಮಿಕ ನೀತಿಯ ಪ್ರಕಾರ ಮೂವತ್ತು ನಿಮಿಷ ಅಂದರೆ ಅರ್ಧ ಗಂಟೆ ಅಧಿಕ ಕಾರ್ಯನಿರ್ವಹಿಸಿದರೆ ಅದನ್ನು ಓವರ್ ಟೈಮ್ (ಓಟಿ) ಎಂದು ಪರಿಗಣಿಸಲಾಗುವುದಿಲ್ಲ.
ನೂತನ ಕಾರ್ಮಿಕ ನೀತಿಗೆ ವಿರೋಧ ಮಾಡುವುದಾದರೂ ಯಾಕೆ?
ಎಂಟು ಗಂಟೆ ಉದ್ಯೋಗ ಒಂದು ಗಂಟೆ ವಿಶ್ರಾಂತಿ ನೀಡಬೇಕು ಎಂಬ ಆಗ್ರಹವನ್ನು ಮಾಡಿರುವ ಸಂಘಟನೆಗಳ ಬೇಡಿಕೆ ಇರುವಂತೆ ಪ್ರಸ್ತುತ ಕೆಲಸದ ಅವಧಿಯು ಹಾಗೆಯೇ ಇದೆ. ಆದರೆ ನೂತನ ಕಾರ್ಮಿಕ ನೀತಿಯಿಂದಾಗಿ ಕೆಲಸದ ಸಮಯ 12 ಗಂಟೆಗೆ ಏರಿಕೆ ಮಾಡುವುದನ್ನು ಕಾರ್ಮಿಕ ಸಂಘಟನೆಗಳು ವಿರೋಧ ಮಾಡಿದೆ. ದಿನದ 12 ಗಂಟೆಗಳ ಕಾಲ ಕೆಲಸ ಮಾಡಿದರೆ ಜನರ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಕಾರ್ಮಿಕರು ಹೇಳಿದ್ದಾರೆ. ಹಾಗೆಯೇ ಈ ನೂತನ ಕಾರ್ಮಿಕ ನೀತಿಯಿಂದಾಗಿ ಕಾರ್ಮಿಕರಿಗೆ ಉಂಟಾಗುವ ಹಲವಾರು ಸಮಸ್ಯೆಗಳನ್ನು ಕಾರ್ಮಿಕ ಸಂಘಟನೆಗಳು ಪಟ್ಟಿ ಮಾಡಿ, ಹಲವಾರು ಪ್ರತಿಭಟನೆಗಳನ್ನು ನಡೆಸಿದೆ. ಹಾಗೆಯೇ ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದೆ.
ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಈ ಕಾರ್ಮಿಕರ ಕಾಯ್ದೆ ಜಾರಿಗೆ ತರಲು ಮುಂದಾಗಿದೆ ಎಂದು ಸಿಐಟಿಯು, ಎಐಟಿಯುಸಿ ಸೇರಿದಂತೆ ಹಲವಾರು ಕಾರ್ಮಿಕ ಸಂಘಟನೆಗಳು ಆರೋಪ ಮಾಡಿದೆ. ಸರ್ಕಾರವು ಕೈಗಾರಿಕಾ ವಿವಾದ ಕಾಯ್ದೆ 5ಬಿ ತಿದ್ದುಪಡಿ ಮಾಡುವ ಮೂಲಕ ಕೆಲಸಗಾರರನ್ನು ಮಾಲಕರು ಮನಸ್ಸು ಬಂದಾಗ ಕಿತ್ತು ಹಾಕುವ, ಬೇಕಾದಾಗ ನೇಮಕ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿದೆ. ಹಾಗೆಯೇ ಗುತ್ತಿಗೆ ಪದ್ಧತಿಯನ್ನು ತೀವ್ರವಾಗಿ ವಿರೋಧ ಮಾಡಿರುವ ಕಾರ್ಮಿಕ ಸಂಘಟನೆಗಳು ಇದರಿಂದಾಗಿ ಜನರಿಗೆ ಕೆಲಸದಲ್ಲಿ ಯಾವುದೇ ರಕ್ಷಣೆ ಇಲ್ಲದಂತೆ ಆಗುತ್ತದೆ. ಗುತ್ತಿಗೆದಾರರು ಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡಿಸಿ ಬಳಿಕ ಜನರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ. ಬಳಿಕ ಬೇರೆ ಜನರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಾರೆ ಇದರಿಂದಾಗಿ ಉದ್ಯೋಗ ಭದ್ರತೆ ಇರುವುದಿಲ್ಲ. ಜನರಿಗೆ ಉದ್ಯೋಗ ಭದ್ರತೆಯನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿದೆ. ಇನ್ನು ಈ ನೀತಿಯ ಮೂಲಕ ಕೆಲಸದ ಅವಧಿಯನ್ನು ಅಧಿಕ ಮಾಡುವುದರಿಂದಾಗಿ ಈಗಾಗಲೇ ಅಧಿಕವಾಗಿರುವ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ. ಜನರು ಕೆಲಸಕ್ಕಾಗಿ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುವುದು ಕಾರ್ಮಿಕ ಸಂಘಟನೆಗಳ ಆತಂಕವಾಗಿದೆ. ಜನರಿಗೆ ಉದ್ಯೋಗ ಭದ್ರತೆಯನ್ನು ಸರ್ಕಾರ ಒದಗಿಸಬೇಕು ಹಾಗೂ ಉದ್ಯೋಗ ಭರವಸೆಯನ್ನು ಸರ್ಕಾರ ನೀಡಬೇಕು ಎಂದು ಸಂಘಟನೆಗಳು ಆಗ್ರಹ ಮಾಡಿದೆ.
ಈ ಕಾರ್ಮಿಕ ನೀತಿಯನ್ನು ಈ ರಾಜ್ಯಗಳು ಜಾರಿಗೆ ತರಲ್ಲ!
ಇವೆಲ್ಲದರ ನಡುವೆ ಕೆಲವು ರಾಜ್ಯಗಳು ತಾವಾಗಿಯೇ ಈ ನೂತನ ಕಾರ್ಮಿಕ ವಿರೋಧಿ ಕಾಯ್ದೆಯನ್ನು ಜಾರಿಗೆ ತರಲಾರೆವು ಎಂದು ಹೇಳಿದೆ. ಕೇರಳ, ರಾಜಸ್ತಾನ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಕೇಂದ್ರ ಸರ್ಕಾರದ ಈ ನಾಲ್ಕು ಕಾರ್ಮಿಕ ಕಾನೂನುಗಳನ್ನು ವಿರೋಧಿಸಿದೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಈ ನೀತಿಯನ್ನು ನಾವು ಜಾರಿಗೆ ತರಲಾರೆವು ಎಂದು ಈ ಎಡಪಕ್ಷ ಆಡಳಿತವಿರುವ ಕೇರಳ ರಾಜ್ಯ ಸರ್ಕಾರ, ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನ ರಾಜ್ಯ ಸರ್ಕಾರ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಆಡಳಿತವಿರುವ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಈ ನೂತನ ಕಾರ್ಮಿಕ ನೀತಿಯನ್ನು ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಈ ಕಾರ್ಮಿಕ ನೀತಿಯನ್ನು ಕಾರ್ಮಿಕ ವಿರೋಧಿ ಎಂದು ಕರೆದಿದೆ. ಇನ್ನು ಹಾಗೆಯೇ ಆಗಸ್ಟ್ 9 ರಂದು ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪ್ತಿ ಪ್ರತಿಭಟನೆಯನ್ನು ನಡೆಸಿದೆ. ಈ ಪ್ರತಿಭಟನೆಯಲ್ಲಿ ಈ ಕಾರ್ಮಿಕ ನೀತಿ ಮಾತ್ರವಲ್ಲದೇ, ನೂತನ ವಿದ್ಯುತ್ ಕಾಯ್ದೆ ಹಾಗೂ ಮೂರು ವಿವಾದಾದ್ಮಕ ಕೃಷಿ ಕಾಯ್ದೆಗಳನ್ನು ವಿರೋಧ ಮಾಡಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications