ನಾವು ಹೂಡಿಕೆ ಮಾಡುವಾಗ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ನಾವು ಹೂಡಿಕೆ ಮಾಡಿದ ಮೊತ್ತವು ನಮಗೆ ಎಷ್ಟು ರಿಟರ್ನ್ ನೀಡಬಲ್ಲದು ಎಂದು ನಾವು ನೋಡುವುದರ ಜೊತೆಗೆ ನಾವು ಎಷ್ಟು ಕಡಿಮೆ ಹೂಡಿಕೆ ಮಾಡಿ ಅಧಿಕ ರಿಟರ್ನ್ ಪಡೆಯಬಹುದು ಎಂಬುವುದನ್ನು ಕೂಡಾ ನೋಡುತ್ತೇವೆ.
ಹಾಗಿರುವಾಗ ನಮ್ಮ ಮುಂದೆ ಬರುವ ಉತ್ತಮ, ಸುರಕ್ಷಿತ ಹೂಡಿಕೆ ಆಯ್ಕೆ ಅಂಚೆ ಕಚೇರಿ ಯೋಜನೆಯಾಗಿದೆ. ಅಂಚೆ ಕಛೇರಿಯಲ್ಲಿ ಹಣವನ್ನು ಡೆಪಾಸಿಟ್ ಮಾಡುವ ಮೂಲಕ ನೀವು ಪ್ರತಿ ತಿಂಗಳು ಖಾತರಿಯ ಆದಾಯವನ್ನು ಗಳಿಸಲು ಬಯಸಿದರೆ, ಅದಕ್ಕೆ ಉತ್ತಮ ಯೋಜನೆ ಇದೆ. ಅಂಚೆ ಕಚೇರಿಯ ಈ ಯೋಜನೆ ಮಾಸಿಕ ಆದಾಯ ಯೋಜನೆಯು ನಿಮಗೆ ಉತ್ತಮ ರಿಟರ್ನ್ ನೀಡುತ್ತದೆ.

ಒಟ್ಟು ಮೊತ್ತದ ಡೆಪಾಸಿಟ್ ಮೇಲೆ ಪ್ರತಿ ತಿಂಗಳು ನಿಮಗೆ ಖಾತರಿಯ ಆದಾಯವನ್ನು ನೀಡುವ ಯೋಜನೆ ಇದಾಗಿದೆ. ಮಾರುಕಟ್ಟೆಯ ಏರಿಳಿತಗಳು ಈ ಯೋಜನೆಯಲ್ಲಿ ನೀವು ಮಾಡುವ ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಲ್ಲಿ ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಎಂಐಎಸ್ ಖಾತೆಯಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡಬೇಕು. ಇದರ ಮೆಚ್ಯೂರಿಟಿ ಐದು ವರ್ಷವಾಗಿದೆ.
1000 ರೂಪಾಯಿ ಹೂಡಿಕೆಯಿಂದ ಖಾತೆ ತೆರೆಯಿರಿ
ಅಂಚೆ ಕಚೇರಿಯ ಈ ಯೋಜನೆಯಡಿ, ನೀವು ಒಂದು ಸಾವಿರ ರೂಪಾಯಿ ಹೂಡಿಕೆಯೊಂದಿಗೆ ಖಾತೆಯನ್ನು ತೆರೆಯಬಹುದಾಗಿದೆ. ಸಿಂಗಲ್ ಮತ್ತು ಜಾಯಿಂಟ್ ಖಾತೆಗಳನ್ನು ತೆರೆಯಬಹುದು. ಸಿಂಗಲ್ ಅಕೌಂಟ್‌ನಲ್ಲಿ 9 ಲಕ್ಷ ರೂಪಾಯಿವರೆಗೆ ಮತ್ತು ಜಂಟಿ ಅಥವಾ ಜಾಯಿಂಟ್ ಖಾತೆಯಲ್ಲಿ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ.
ಅಂಚೆ ಕಚೇರಿ ಪ್ರಕಾರ, ಎಂಐಎಸ್‌ನಲ್ಲಿನ ಬಡ್ಡಿಯನ್ನು ಖಾತೆ ಪ್ರಾರಂಭದಿಂದ ಒಂದು ತಿಂಗಳು ಪೂರ್ಣಗೊಂಡಾಗಿನಿಂದ ಮೆಚ್ಯೂರಿಟಿವರೆಗೆ ಪ್ರತಿ ತಿಂಗಳು ಪಾವತಿ ಮಾಡಲಾಗುತ್ತದೆ. ಯಾವುದೇ ಭಾರತೀಯ ನಾಗರಿಕರು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯು ಜುಲೈ 1, 2023 ರಿಂದ ಶೇಕಡ 7.4 ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ.
ನೀವು 5 ವರ್ಷಗಳ ಮೊದಲು ಹಣ ವಿತ್‌ಡ್ರಾ ಮಾಡಿ
ಅಂಚೆ ಕಚೇರಿ ಎಂಐಎಸ್‌ನ ಮೆಚ್ಯೂರಿಟಿಯು ಐದು ವರ್ಷಗಳಾಗಿದೆ. ಆದರೆ ನಮಗೆ ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಅವಕಾಶವಿದೆ. ಆದರೆ ಡೆಪಾಸಿಟ್ ಮಾಡಿದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಮಾತ್ರ ನೀವು ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ.
ನಿಯಮಗಳ ಪ್ರಕಾರ, ಒಂದು ವರ್ಷದಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂಪಡೆಯುವುದಾದರೆ ಡೆಪಾಸಿಟ್ ಮೊತ್ತದ ಶೇಕಡ 2 ರಷ್ಟು ಹಣವನ್ನು ಹಿಂಪಡೆಯಬಹುದಾಗಿದೆ. ಖಾತೆ ತೆರೆದ 3 ವರ್ಷಗಳ ನಂತರ ಮೆಚ್ಯೂರಿಟಿಗೂ ಮೊದಲು ಹಣವನ್ನು ಹಿಂಪಡೆದರೆ, ನಿಮ್ಮ ಡೆಪಾಸಿಟ್‌ನಿಂದ ಶೇಕಡ 1 ರಷ್ಟು ಕಡಿತಗೊಳಿಸಲಾಗುತ್ತದೆ.
ಪಿಒಎಂಐಎಸ್: ಕೆಲವು ನಿಯಮಗಳು
* ಎಂಐಎಸ್‌ನಲ್ಲಿ ಬ್ಬರು ಅಥವಾ ಮೂರು ಜನರು ಜಾಯಿಂಟ್ ಅಕೌಂಟ್ ಅನ್ನು ತೆರೆಯಬಹುದು. ಈ ಖಾತೆಯಿಂದ ಬರುವ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ.
* ನಾವು ಜಾಯಿಂಟ್ ಅಕೌಂಟ್ ಅನ್ನು ಯಾವುದೇ ಸಂದರ್ಭದಲ್ಲಿ ಸಿಂಗಲ್ ಅಕೌಂಟ್ ಆಗಿ ಬದಲಾವಣೆ ಮಾಡಬಹುದು. ಇನ್ನು ಸಿಂಗಲ್ ಅಕೌಂಟ್ ಅನ್ನು ಯಾವುದೇ ಸಂದರ್ಭದಲ್ಲಿ ಜಾಯಿಂಟ್ ಅಕೌಂಟ್ ಆಗಿ ಬದಲಾವಣೆ ಮಾಡಬಹುದು. ಅದಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.


Click it and Unblock the Notifications