ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಜೊಮ್ಯಾಟೊ ಬುಧವಾರ ಹೊಸ ಯೋಜನೆಯನ್ನು ಜಾರಿ ಮಾಡಿದೆ. ಜೊಮ್ಯಾಟೊ ಎವ್ರಿಡೇ ಎಂಬ ಹೊಸ ಯೋಜನೆಯನ್ನು ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೊ ಆರಂಭಿಸಿದೆ. ಇದು ಮನೆಯಲ್ಲಿ ತಯಾರಿಸಿದ (homely-cooked) ಆಹಾರವನ್ನು ಜನರು ಆರ್ಡರ್ ಮಾಡಲು ಅವಕಾಶ ನೀಡುತ್ತದೆ. ಅದು ಕೂಡಾ ಕಡಿಮೆ ದರದಲ್ಲಿ ಜನರು ಮನೆಯಲ್ಲಿ ತಯಾರಿಸಿದ ರುಚಿಕರ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.
ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಜೊಮ್ಯಾಟೊ ಈ ಹೊಸ ಸೇವೆಯನ್ನು ಕೆಲವೇ ಪ್ರದೇಶಕ್ಕೆ ಸೀಮಿತಗೊಳಿಸಿದೆ. ಮುಂದಿನ ದಿನಗಳಲ್ಲಿ ವಿಸ್ತಾರ ಮಾಡುವ ಸಾಧ್ಯತೆಯಿದೆ. ಪ್ರಸ್ತುತ ಈ ಜೊಮ್ಯಾಟೊ ಎವ್ರೀಡೇ ಸೇವೆಯು ಗುರುಗ್ರಾಮದಲ್ಲಿ ಮಾತ್ರ ಲಭ್ಯವಿದೆ. ಬರೀ 89 ರೂಪಾಯಿಗೆ ಉತ್ತಮ ಗುಣಮಟ್ಟದ, ರುಚಿಕರ, ಮನೆಯಲ್ಲಿ ತಯಾರಿಸಿದಂತಹ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗಲಿದೆ. ಹೋಮ್ ಚೆಫ್‌ಗಳ ಪಾಲುದಾರಿಕೆಯಲ್ಲಿ ಜೊಮ್ಯಾಟೊ ಎವ್ರೀಡೇಯನ್ನು ಆರಂಭಿಸಲಾಗಿದೆ.

"ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೈಗೆಟಕುವ ದರದ ಮನೆಯ ಊಟದ ಸೌಕರ್ಯವನ್ನು ನೀವು ಅನುಭವಿಸಬಹುದು. ನಿಜವಾದ ಹೋಮ್ ಚೆಫ್‌ಗಳು ತಯಾರಿಸಿದ ಮೆನುಗಳು ನಿಮ್ಮ ಮನೆಯ ಊಟವನ್ನು ನೆನಪಿಸುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಮಾಹಿತಿ ನೀಡಿದ್ದಾರೆ. "ಸರಳವಾಗಿ ಮೆನುವನ್ನು ನೋಡಿ, ಆಹಾರವನ್ನು ಆರ್ಡರ್ ಮಾಡಿ, ಬಿಸಿಬಿಸಿಯಾದ, ರುಚಿಕರವಾದ ಆಹಾರವು ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆಬಾಗಿಲಿಗೆ ಬರಲಿದೆ," ಎಂದು ತಿಳಿಸಿದೆ.
ಹೋಮ್ ಚೆಫ್‌ಗಳು ತಯಾರಿಸಿದ ಆಹಾರ
ಜೊಮ್ಯಾಟೊ ಪ್ರಕಾರ ಭಾರತದಂತಹ ಮಾರುಕಟ್ಟೆಯಲ್ಲಿ ಇದು ಅತೀ ದೊಡ್ಡ ಅವಕಾಶವಾಗಿದೆ. "ನಮ್ಮ ಫುಡ್ ಪಾರ್ಟ್‌ನರ್‌ಗಳು ಹೋಮ್ ಚೆಫ್‌ಗಳೊಂದಿಗೆ ಸಹಕಾರವನ್ನು ಹೊಂದಿದ್ದಾರೆ. ಈ ಹೋಮ್ ಚೆಫ್‌ಗಳು ಪ್ರತಿ ರೆಸಿಪಿಯನ್ನು ಅತೀ ಪ್ರೀತಿಯಿಂದ ಸಿದ್ಧಪಡಿಸಿರುತ್ತಾರೆ. ಹೋಮ್ ಚೆಫ್‌ಗಳು ಹೋಮ್ ಸೈಲ್ ಆಹಾರವನ್ನು ನೀಡಲಿದೆ. ಕೆಲವೇ ನಿಮಿಷಗಳಲ್ಲಿ ಕಡಿಮೆ ಬೆಲೆಯಲ್ಲಿ ಫುಡ್ ಅನ್ನು ಡೆಲಿವರಿ ಮಾಡಲಾಗುತ್ತದೆ," ಎಂದು ಕೂಡಾ ಜೊಮ್ಯಾಟೊ ಮಾಹಿತಿ ನೀಡಿದೆ.
"ಅತೀ ಉತ್ತಮವಾದ ಪದಾರ್ಥಗಳನ್ನು ಬಳಸಿಕೊಂಡು ಸಿದ್ಧಪಡಿಸುವ ಈ ಆಹಾರವು ರುಚಿಕರವಾಗಿರುವುದು ಮಾತ್ರವಲ್ಲ, ಎಲ್ಲ ಆಹಾರವು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಸರಳವಾಗಿ ಮೆನುವನ್ನು ನೋಡಿಕೊಂಡು ನೀವು ಆಹಾರವನ್ನು ಆರ್ಡರ್ ಮಾಡಬಹುದು. ಬಿಸಿ ಬಿಸಿಯಾದ, ರುಚಿಕರವಾದ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಮನೆಗೆ ಪಡೆಯಬಹುದು," ಎಂದು ಜೊಮ್ಯಾಟೊ ಬ್ಲಾಗ್‌ನ ಪೋಸ್ಟ್‌ನಲ್ಲಿ ತಿಳಿಸಿದೆ. ಜೊಮ್ಯಾಟೊ ಹಣಕಾಸು ವರ್ಷ 2023ರ 3ನೇ ತ್ರೈಮಾಸಿಕದ ವರದಿಯನ್ನು ಇತ್ತೀಚೆಗೆ ಜಾರಿ ಮಾಡಿದೆ.
Zomato Everyday: ಫುಡ್ ಆರ್ಡರ್ ಮಾಡಿ
ಹಂತ 1: ಜೊಮ್ಯಾಟೊ ಆಪ್ ಅನ್ನು ಆರ್ಡರ್ ಮಾಡಿ.
ಹಂತ 2: ಆಪ್ ಅನ್ನು ತೆರೆಯಿರಿ.
ಹಂತ 3: ಮೆನುವನ್ನು ನೋಡಿ, Explore ಸೆಕ್ಷನ್‌ಗೆ ಹೋಗಿ.
ಹಂತ 4: ಎವ್ರೀಡೇ ಟ್ಯಾಬ್ ಕೆಳಗಡೆ ಇರುವ ಆಹಾರ ಆಯ್ಕೆ ಮಾಡಿಕೊಳ್ಳಬಹುದು.
ಹಂತ 5: ಆಹಾರವನ್ನು ಆರ್ಡರ್ ಮಾಡಿಕೊಳ್ಳಿ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications