bredcrumb

ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?

By Mayuri N
| Published: Sunday, November 6, 2022, 17:54 [IST]
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
1/8
ಬ್ಯಾಂಕ್ ಸಾಲ ಪಡೆಯದ ಸಂಸಾರಿ ಬಹಳ ಅಪರೂಪ. ಸಂಬಳಕ್ಕೆ ಕೆಲಸ ಮಾಡುವವರು ಬ್ಯಾಂಕ್ ಸಾಲ ಮಾಡುವುದು ಅನಿವಾರ್ಯ. ಬ್ಯುಸಿನೆಸ್ ಮಾಡುವವರಿಗೂ ಬ್ಯಾಂಕ್ ಸಾಲ ಬಹಳ ಅಗತ್ಯ. ಹೀಗಾಗಿ, ಸಾಲ ಎನ್ನುವುದು ಒಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗದಂತಾಗಿದೆ. 
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
2/8
ನೀವು ಸಾಲ ಪಡೆಯುವ ಮುನ್ನ ಅದನ್ನು ಮರುಪಾವತಿಸುವ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ನೀವು ತಿಂಗಳಿಗೆ ಸರಾಗವಾಗಿ ಕಟ್ಟಲು ಅಗುವ ರೀತಿಯಲ್ಲಿ ಇಎಂಐ ಹಣ ಇರುವಂತೆ ನೋಡಿಕೊಳ್ಳಿ. ನಿಮ್ಮ ತಿಂಗಳ ವರಮಾನದಲ್ಲಿ ಶೇ. 30ಕ್ಕಿಂತ ಹೆಚ್ಚಿನ ಭಾಗ ಸಾಲ ಕಟ್ಟಲು ವ್ಯಯವಾಗದಂತೆ ಎಚ್ಚರ ವಹಿಸಿ. ಯಾಕೆಂದರೆ ನಿಮ್ಮ ದೈನಂದಿನ ಖರ್ಚು, ಇನ್ಷೂರೆನ್ಸ್, ಆರೋಗ್ಯ, ಶಿಕ್ಷಣ ಇತ್ಯಾದಿ ವೆಚ್ಚಕ್ಕೂ ಹಣ ಬೇಕು. 
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
3/8
ಬ್ಯಾಂಕ್‌ನವರು ನಿಮ್ಮ ಸಾಲವನ್ನು ಎನ್‌ಪಿಎ ಆಗಿ ವರ್ಗೀಕರಿಸಿದ ಬಳಿಕ ಅಡಮಾನ ಇಟ್ಟ ಆಸ್ತಿ ಉಳಿಸಿಕೊಳ್ಳುವ ಅವಕಾಶ ನಿಮಗಿರುತ್ತದೆ. ನೀವು ಕೂಡಲೇ ಬ್ಯಾಂಕ್‌ಗೆ ಹೋಗಿ ಸಾಲ ಪಾವತಿಸುವ ಭರವಸೆ ನೀಡಿ ಸ್ವಲ್ಪ ಸಮಯಾವಕಾಶ ಪಡೆಯಬಹುದು. ಅಥವಾ ತತ್‌ಕ್ಷಣವೇ ಸಾಲದ ಹಣ ವಾಪಸ್ ನೀಡಿ ಮುಕ್ತಾಯ ಹಾಡಬಹುದು. ಅಥವಾ ಸಾಲ ವಸೂಲಾತಿ ನ್ಯಾಯಮಂಡಳಿಗೆ ಹೋಗಿ ನಿಮ್ಮ ಆಸ್ತಿ ಹರಾಜು ಕಾರ್ಯವನ್ನು ನಿಲ್ಲಿಸಲು ಮನವಿ ಮಾಡಬಹುದು.
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
4/8
ನಾವು ಇಎಂಐ ಅನ್ನು ಸರಿಯಾದ ಸಮಯಕ್ಕೆ ಕಟ್ಟದೇ ಹೋದಾಗ, ಮೂರು ತಿಂಗಳು ಕಂತು ಕಟ್ಟಲಿಲ್ಲವೆಂದರೆ ಬ್ಯಾಂಕ್‌ನಿಂದ ನೋಟೀಸ್ ಬರುತ್ತದೆ. ಅದಾಗ್ಯೂ ಸಾಲದ ಕಂತು ಕಟ್ಟಲಿಲ್ಲವೆಂದರೆ ಬ್ಯಾಂಕ್ ಮುಂದಿನ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತದೆ.
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
5/8
ನೀವು ಪ್ರತೀ ಬಾರಿ ಇಎಂಐ ಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡದೇ ಹೋದಲ್ಲಿ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ನಿಮಗೆ ಭವಿಷ್ಯದಲ್ಲಿ ಹೊಸ ಸಾಲ ಹುಟ್ಟುವುದು ಕಷ್ಟ.
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
6/8
ಬ್ಯಾಂಕ್ ನಮಗೆ ಗೃಹ ಸಾಲ ಹಾಗೆ ಸುಮ್ಮನೆ ನೀಡಿರುವುದಿಲ್ಲ. ಮನೆಯ ಪತ್ರ ಇತ್ಯಾದಿ ಸುಭದ್ರ ದಾಖಲೆಯನ್ನು ಅಡವಾಗಿ ಇಟ್ಟುಕೊಂಡು ಸಾಲ ಕೊಟ್ಟಿರುತ್ತದೆ. ಹೀಗಾಗಿ ನೀವು ಸಾಲ ಮರುಪಾವತಿ ಮಾಡದೇ ಹೋದರೆ ನೀವು ಅಡಮಾನವಾಗಿ ಇಟ್ಟಿದ್ದ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳಬಹುದು.
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
7/8
ಮನೆ ಕಟ್ಟಲು ಗೃಹ ಸಾಲ ಸಿಗುತ್ತದೆ. ಮನೆಯ ಪತ್ರ ಇಟ್ಟು ದೊಡ್ಡ ಮಟ್ಟದಲ್ಲಿ ಗೃಹ ಸಾಲ ಪಡೆಯುತ್ತೇವೆ. ಹಲವು ಬಾರಿ ನಾವು ಅಂದುಕೊಂಡಂತೆ ಪರಿಸ್ಥಿತಿ ಮುಂದುವರಿಯುವುದಿಲ್ಲ. ಸಾಲದ ಕಂತುಗಳನ್ನು ಕಟ್ಟುವುದು ಕಷ್ಟವಾಗಬಹುದು. ಒಂದು ವೇಳೆ ಗೃಹ ಸಾಲದ ಇಎಂಐ ಅನ್ನು ಕಟ್ಟಲು ತಪ್ಪಿದರೆ ಏನಾಗಬಹುದು?
ಚಿತ್ರಗಳಲ್ಲಿ... ಗೃಹ ಸಾಲದ ಇಎಂಐ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ?
8/8
ನೀವು ಮೂರು ತಿಂಗಳು ಗೃಹ ಸಾಲದ ಕಂತು ಕಟ್ಟಲಿಲ್ಲವೆಂದರೆ ಬ್ಯಾಂಕ್‌ನಿಂದ ನೋಟೀಸ್ ಬರುತ್ತದೆ. ಸಾಲ ಮರುಪಾವತಿ ಮಾಡಲು 90 ದಿನಗಳ ಕಾಲ ಅವಕಾಶ ಕೊಡಲಾಗುತ್ತದೆ. ಅಂದರೆ ಮೂರು ತಿಂಗಳ ಕಾಲಾವಕಾಶ ಇರುತ್ತದೆ. ಅಷ್ಟಕ್ಕೂ ಸಾಲದ ಹಣ ಮರುಪಾವತಿಸದಿದ್ದಲ್ಲಿ ಎನ್‌ಪಿಎ ಎಂದು ವರ್ಗೀಕರಿಸಲಾಗುತ್ತದೆ. ಅಂದರೆ ಕೆಟ್ಟ ಸಾಲವಾಗಿ ಪರಿಗಣಿಸಲಾಗುತ್ತದೆ. ಅದಾದ ಬಳಿಕ ಆಸ್ತಿಯನ್ನು ಹರಾಜಿಗೆ ಹಾಕಬಹುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X