For Quick Alerts
ALLOW NOTIFICATIONS  
For Daily Alerts

ಮನಿ ಲಾಂಡ್ರಿಂಗ್ ಎಂದರೇನು?

By Bimlesh Singh
|

ಮನಿ ಲಾಂಡ್ರಿಂಗ್ ಎಂದರೇನು?
ನಿಮ್ಮ ಮನೆಯಲ್ಲಿ ಬಟ್ಟೆಗಳನ್ನು ಲಾಂಡ್ರಿಗೆ ಕೊಟ್ಟು ಸ್ವಚ್ಛಗೊಳಿಸುತ್ತಿರಲ್ಲ. ಮನಿ ಲಾಂಡ್ರಿಂಗ್ ಕೂಡಾ ಅದೇ ರೀತಿ ಎಫೆಕ್ಟ್ ಹೊಂದಿದೆ. ಲಾಂಡ್ರಿಂಗ್ ಮೂಲಕ ಬಟ್ಟೆಗಳ ಕೊಳಕು ತೆಗೆದು ಶುಭ್ರಗೊಳಿಸುವಂತೆ, ಮನಿ ಲಾಂಡ್ರಿಂಗ್ ಕೂಡಾ ಕಾಳಧನ(ಡರ್ಟಿ ಮನಿ?)ವನ್ನು ಕ್ಲೀನ್ ಆಗಿ ತೋರಿಸುತ್ತದೆ.

ಕಾಳಧನ ಎಂದರೆ ಅಕ್ರಮವಾಗಿ ಕೂಡಿಟ್ಟ ಹಣ. ಲಂಚ, ವಂಚನೆ, ಇತರೆ ಕ್ರೈಂಗಳ ಮೂಲಕ ಸಂಗ್ರಹವಾದ ನಗದು ಹಣವನ್ನು ಬ್ಲ್ಯಾಕ್ ಮನಿ ಎನ್ನಬಹುದಾದರೆ ಈ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ರೀತಿಯಲ್ಲಿ ತೋರಿಸುವುದನ್ನೇ ಮನಿ ಲಾಂಡ್ರಿಂಗ್ ಎನ್ನಲಾಗುತ್ತದೆ.

ಕಾಳಧನಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಕಣ್ಣಿಗೆ ಬಿದ್ದು ಹಣ ಜಪ್ತಿಯಾಗುವ ಭೀತಿ ಎದುರಾದಾಗ ಡರ್ಟಿ ಮನಿಯನ್ನು ಸ್ವಚ್ಛ ನಗದಾಗಿ ಪರಿವರ್ತಿಸಲು ಮನಿ ಲಾಂಡ್ರಿಂಗ್ ಬಳಸಲಾಗುತ್ತದೆ.

ಕರ್ನಾಟಕದಲ್ಲಿ ಗಣಿಗಾರಿಕೆ ದುಡ್ಡು, ಹಲವು ರಾಜಕಾರಣಿಗಳು ಮನಿ ಲಾಂಡ್ರಿಂಗ್ ನಲ್ಲಿ ಭಾಗಿಯಾಗಿರುವ ಬಗ್ಗೆ ಕೇಳಿರುತ್ತೀರಿ. ಇತ್ತೀಚೆಗೆ ಮನಿ ಲಾಂಡ್ರಿಂಗ್ ಖಾಸಗಿ ಬ್ಯಾಂಕಿಂಗ್ ವಲಯವನ್ನು ತಲ್ಲಣಗೊಳಿಸಿದೆ. ಅಕ್ರಮ ಹಣ ಸಂಗ್ರಹ, ರವಾನೆ ತಡೆಗಟ್ಟಲು ನಿಯಂತ್ರಣ ಸಂಸ್ಥೆಗಳು ಕಠಿಣ ಕ್ರಮಗಳನ್ನು ಜರುಗಿಸುತ್ತಿವೆ.

ಆದರೆ, ಮನಿ ಲಾಂಡ್ರಿಂಗ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಜಾಗತಿಕ ಪಿಡುಗಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮವನ್ನು ಬೀರಿದೆ. ಮನಿಲಾಂಡ್ರಿಂಗ್ ಪರಿಣಾಮದ ಬಗ್ಗೆ ಸ್ವಲ್ಪ ತಿಳಿದು ಕೊಳ್ಳೋಣ

ಮನಿ ಲಾಂಡ್ರಿಂಗ್ ಆರ್ಥಿಕವಾಗಿ ಭಾರಿ ಪರಿಣಾಮ ಬೀರುತ್ತದೆ. ಲಾಂಡ್ರಿಂಗ್ ಆದ ಹಣಕ್ಕೆ ಯಾವುದೇ ತೆರಿಗೆ ಪಾವತಿ ಆಗಿರುವುದಿಲ್ಲ. ಹೀಗಾಗಿ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಕಾನೂನು ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಮೂಲಕ ಈ ಹಣ ಎಲ್ಲೆಡೆ ಹರಿದಾಡುತ್ತದೆ. ಆದರೆ, ಮನಿ ಲಾಂಡ್ರಿಂಗ್ ಲಾಭ ಪಡೆಯುತಿರುವ ಕಂಪನಿಗಳು ಅಕಸ್ಮಾತ್ ಸಿಕ್ಕಿಬಿದ್ದರೆ ಅಥವಾ ದಿವಾಳಿಯಾದರೆ ಅಲ್ಲಿಗೆ ಕಥೆ ಮುಗಿದ ಹಾಗೆ ಲೆಕ್ಕ.

ಕಂಪನಿಯಾಗಲಿ, ಮನಿ ಲಾಂಡ್ರಿಂಗ್ ಮಾಡಿದ ವ್ಯಕ್ತಿಯಾಗಲಿ ಹೂಡಿಕೆ ಮಾಡಿದ ಹಣ ಯಾವುದೇ ಆರ್ಥಿಕ ಲಾಭ ಸಿಗದೆ ದೇಶಕ್ಕೆ ಹೊರೆಯಾಗುತ್ತದೆ. ತೆರಿಗೆ ಕೂಡಾ ಕಟ್ಟಿಲ್ಲದಿರುವುದರಿಂದ ಅನಗತ್ಯ ಆರ್ಥಿಕ ಹೊರೆ ಭಾರ ಜನ ಸಾಮಾನ್ಯರ ಮೇಲೂ ಬೀಳುತ್ತದೆ.

ಮನಿ ಲಾಂಡ್ರಿಂಗ್ ನಿಂದಾಗಿ ಸುಳ್ಳು ಸುಳ್ಳೆ ಬೇಡಿಕೆ ಹೆಚ್ಚಳ ಹಾಗೂ ಪೂರೈಕೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಸಾಮಾಜಿಕ ಸಮತೋಲನ ವ್ಯತ್ಯಯವಾಗುತ್ತದೆ. ದೇಶದ ಜಿಡಿಪಿ, ಆಮದು ರಫ್ತು ಸೇರಿದಂತೆ ಅನೇಕ ಅಂಶಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹಲವು ಕ್ರಿಮಿನಲ್ ಮೂಲಗಳಿಂದ ಸಂಗ್ರಹವಾದ ಹಣ ಲಾಂಡ್ರಿಂಗ್ ಆದಮೇಲೆ ಇನ್ನಷ್ಟು ಕ್ರಿಮಿನಲ್ ಚಟುವಟಿಕೆಗಳಿಗೆ ಉತ್ತೇಜಿಸುವ ಸಾಧ್ಯತೆ ಅಧಿಕವಾಗಿದೆ. ಯಾವುದೇ ದೇಶವಿರಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮನಿ ಲಾಂಡ್ರಿಂಗ್ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಭ್ರಷ್ಟಾಚಾರದ ಬೇರಾಗಿ ಎಲ್ಲೆಡೆ ವ್ಯಾಪಿಸುತ್ತಿದೆ.

English summary

What is money laundering? | ಮನಿ ಲಾಂಡ್ರಿಂಗ್ ಎಂದರೇನು?

Money laundering makes dirty money appear clean.Dirty money (basically cash) the money earned from illegitimate sources like embezzlement, bribes, crime, frauds etc. For which don't pay taxes on dirty money
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X