ಭಾರತದ ಅತ್ಯುತ್ತಮ 5 ಮೊಬೈಲ್ ಅಪ್ಲಿಕೇಶನ್‌ಗಳು ಯಾವವು?

ರೀಚಾರ್ಜ್ ಮತ್ತು ಹಣ ರವಾನೆ ಮಾಡಲು ಪರಿಚಯಿಸಿದ ಮೊಬೈಲ್ ವಾಲೆಟ್ ಗಳು ಇಂದು ಜನಪ್ರಿಯವಾಗಿವೆ. ನಗದು ವ್ಯವಹಾರವಿಲ್ಲದೇ ಎಲ್ಲ ಕೆಲಸವನ್ನು ಇವು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುತ್ತಿವೆ.

ಕೇವಲ ರೀಚಾರ್ಜ್ ಮಾಡಿಕೊಳ್ಳುವುದು ಮಾತ್ರವಲ್ಲದೇ ಕ್ಯಾಶ್ ಬ್ಯಾಕ್ ಮತ್ತು ಡಿಸ್ಕೌಂಟ್, ಆಫರ್ ಗಳ ಕೊಡುಗೆಯನ್ನು ನೀಡುತ್ತಿವೆ. ಮೊಬೈಲ್ ರೀಚಾರ್ಜ್, ಡಿಶ್ ಟಿವಿ, ಟ್ಯಾಕ್ಸಿ ಪೇಮೆಂಟ್, ಬಿಲ್ ತುಂಬುವುದು ಎಲ್ಲದಕ್ಕೂ ಬಳಕೆಯಾಗುತ್ತಿವೆ.

ಗೂಗಲ್ ಆಪ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡರೆ ವಾಲೆಟ್ ಅಥವಾ ಅಪ್ಲಿಕೇಶನ್ ನಿಮ್ಮ ಅಂಗೈನಲ್ಲಿರುವ ಮೊಬೈಲ್ ನ್ನು ಸೇರಿಕೊಳ್ಳುತ್ತದೆ. ಹಾಗಾದರೆ ದೇಶದಲ್ಲಿ ಜಾರಿಯಲ್ಲಿರುವ ಮತ್ತು ಅಷ್ಟೇ ಜನಪ್ರಿಯವಾಗಿರುವ 5 ಅಪ್ಲಿಕೇಶನ್ ಗಳ ಮೇಲೆ ಒಂದು ನೋಟ ಇಲ್ಲಿದೆ. (ಗುಡ್ ರಿಟರ್ನ್ಸ್.ಇನ್)

ಪೆಟಿಎಂ

ಪೆಟಿಎಂ

ಪೆಟಿಎಂ ಮೊಬೈಲ್ ರೀಚಾರ್ಜ್ ಮಾಡಲು ಹುಟ್ಟಿಕೊಂಡ ಅಪ್ಲಿಕೇಶನ್ ಆಗಿತ್ತು. ಆದರೆ ಇಂದು ಈ ಅಪ್ಲಿಕೇಶನ್ ಬಳಸಿಕೊಂಡು ಹಣ ರವಾನೆ ಮಾಡಲು ಸಾಧ್ಯವಿದೆ. ಡೌನ್ ಲೋಡ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

ಆಕ್ಸಿಜನ್ ವಾಲೆಟ್

ಆಕ್ಸಿಜನ್ ವಾಲೆಟ್

ಆಕ್ಸಿಜನ್ ಸರ್ವೀಸ್ ಇಂಡಿಯಾ ಲಿಮಿಟೆಡ್ ಈ ಸೇವೆಯನ್ನು ಕೊಡಮಾಡುತ್ತಿದೆ. ಆರು ಅಂಕೆಯ ಒಟಿಪಿ ಮೂಲಕ ನೀವು ಹಣ ರವಾನೆ ಕೆಲಸವನ್ನು ಮುಗಿಸಬಹುದು. 60 ಕ್ಕೂ ಅಧಿಕ ಬ್ಯಾಂಕ್ ಗಳು ಆಕ್ಸಿಜನ್ ವಾಲೆಟ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಆರ್ ಬಿಐ ಮುಖೇನ ಮಾನ್ಯತೆ ಪಡೆದ ಪ್ರಪ್ರಥಮ ವಾಲೆಟ್ ಇದಾಗಿದೆ. ಡೌನ್ ಲೋಡ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

ಮೊಬಿಕ್ವಿಕ್

ಮೊಬಿಕ್ವಿಕ್

50 ಸಾವಿರಕ್ಕೂ ಅಧಿಕ ಜನರು ಮೊಬಿಕ್ವಿಕ್ ಬಳಕೆ ಮಾಡುತ್ತಿದ್ದಾರೆ. ಗೊಂದಲವಿಲ್ಲದೇ ಸುಲಭವಾಗಿ ಪೇಮೆಂಟ್ ಮಾಡಲು ಮೊಬಿಕ್ವಿಕ್ ಬೆಸ್ಟ್ ಎಂದು ಹೆಸರುಪಡೆದಿದೆ. ಡೆಸ್ಕ್ ಟಾಪ್ ಮತ್ತು ಮೊಬೈಲ್ ಎರಡರಲ್ಲೂ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಇದು ಸಹ ಆರ್ ಬಿ ಐ ನಿಂದ ಮಾನ್ಯತೆ ಪಡೆದುಕೊಂಡಿದೆ. ಡೌನ್ ಲೋಡ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

ಪೆಯು ಮನಿ

ಪೆಯು ಮನಿ

ಲಂಡನ್ ಮತ್ತು ಜೋಹಾನ್ಸ ಬರ್ಗ್ ಮಾರುಕಟ್ಟೆಯಲ್ಲಿಯೂ ಪೆ ಯು ಮನಿ ಸ್ಥಾನ ಪಡೆದುಕೊಂಡಿದೆ. ಭಾರತದ ನಾಸ್ಪರಸ್ ಸಮೂಹದೊಂದಿಗೆ ಗುರುತಿಸಿಕೊಂಡಿರುವ ಪೆ ಯು ಮನಿ ಅತಿಹೆಚ್ಚು ಕ್ಯಾಶ್ ಬ್ಯಾಕ್ ನೀಡುವುದಕ್ಕೆ ಪ್ರಸಿದ್ಧಿ ಪಡೆದಿದೆ. ಡೌನ್ ಲೋಡ್ ಗಾಗಿ ಇಲ್ಲಿ ಕ್ಲಿಕ್ಕಿಸಿ

ವೋಡಾಫೋನ್ ಎಂ ಪೈಸಾ

ವೋಡಾಫೋನ್ ಎಂ ಪೈಸಾ

ನಿಮ್ಮ ವೋಡಾಫೋನ್ ಸಂಪರ್ಕದಿಂದ ಈ ಸೌಲಭ್ಯ ಪಡೆದುಕೊಳ್ಳಬಹುದು. ಅತಿ ವೇಗವಾದ ಕೆಲಸ ಇದರ ಪ್ರಮುಖ ಅಂಶ. ಐಸಿಐಸಿಐ ಬ್ಯಾಂಕ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಡೌನ್ ಲೋಡ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+