Englishहिन्दी മലയാളം தமிழ் తెలుగు

2 ದಿನಗಳಲ್ಲಿ ಪಾನ್ ಕಾರ್ಡ್ ಪಡೆಯುವುದು ಹೇಗೆ?

Written By: Siddu
Subscribe to GoodReturns Kannada

ಹತ್ತು ಅಂಕೆಗಳ ಶಾಶ್ವತ ಖಾತೆ ಸಂಖ್ಯೆ(PAN) ಅಥವಾ ಪಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆ ಒದಗಿಸುತ್ತದೆ. ತೆರಿಗೆ ಕಟ್ಟುವ ಸಂದರ್ಭದಲ್ಲಿ ಹಾಗೂ ಹಣಕಾಸು ವ್ಯವಹಾರ ನಿರ್ವಹಿಸುವಾಗ ಪ್ಯಾನ್ ಕಾರ್ಡ್ ಅತ್ಯಗತ್ಯ. ಕೇವಲ ಆದಾಯ ತೆರಿಗೆ ಪಾವತಿ ಅಷ್ಟೇ ಅಲ್ಲದೇ ಇಂದು ಅನೇಕ ಸಂದರ್ಭಗಳಲ್ಲಿ ಪಾನ್ ಕಾರ್ಡ್ ಕಡ್ಡಾಯವಾಗಿದ್ದು, ಇದು ಗುರುತಿನ ದಾಖಲಾತಿಯಾಗಿ ಕೂಡ ಬಳಸಲಾಗುತ್ತದೆ. ಪ್ಯಾನ್ ಕಾರ್ಡ್ ಯಾಕೆ ಬೇಕು? ಮಹತ್ವಗಳೇನು?

ಅರ್ಜಿದಾರರು ಪಾನ್ ಕಾರ್ಡ್ ಕೇವಲ 2-3 ದಿನಗಳಲ್ಲಿ ಪಡೆಯಬಹುದಾಗಿದ್ದು, ಪಾನ್ ಕಾರ್ಡ್ ಪಡೆಯುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

1. NSDL ವೆಬ್ಸೈಟ್

NSDL ವೆಬ್ಸೈಟ್ (https://nsdl.co.in) ಭೇಟಿ ಕೊಟ್ಟು, ಒದಗಿಸಲಾಗಿರುವ ಸರಿಯಾದ ವಿಧಾನಗಳನ್ನು ಆಯ್ಕೆ ಮಾಡಿ. ಅರ್ಜಿದಾರರು ಆನ್ಲೈನ್ ಅಥವಾ ಆಪ್ಲೈನ್ ಮೂಲಕ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸ ಬಯಸುವವರು NSDL ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ತುಂಬಿ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

2. ಫಾರ್ಮ್ ಆಯ್ಕೆ ಮಾಡಿ

ಮಾರ್ಗಸೂಚಿಗಳನ್ನು ಓದಿದ ನಂತರ ನಿಮಗೆ ಇಷ್ಟವಾದ ಫಾರ್ಮ್(ಡಿಜಿಟಲ್ ಸಿಗ್ನೇಚರ್ ಇರುವ ಅಥವಾ ಇಲ್ಲದಿರುವ) ಆಯ್ಕೆ ಮಾಡಿ. ನಂತರ ಕೇಳಲ್ಪಡುವ ವಿವರಗಳನ್ನು ತುಂಬಿ.

3. ಫಾರ್ಮ್ ಸಲ್ಲಿಸಿ

ಸರಿಯಾದ ಮಾಹಿತಿಯನ್ನು ತುಂಬಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ ನಂತರ ಫಾರ್ಮ್ ಸಬ್ಮಿಟ್ ಮಾಡಿ. ಆಪ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸುವವರು NSDL ವೆಬ್ಸೈಟ್ ನಿಂದ ಫಾರ್ಮ್ ಡೌನ್ಲೋಡ್ ಮಾಡಿ ವಿವಿರಗಳನ್ನು ತುಂಬಿ. ನಂತರ ಪೂರಕ ದಾಖಲಾತಿಗಳೊಂದಿಗೆ ಹತ್ತಿರದ ಪಾನ್ ಸೇವಾ ಕೇಂದ್ರಕ್ಕೆ ಸಲ್ಲಿಸಬೇಕು.

4. ನಿಮ್ಮ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಿ

ನಿಮ್ಮ ಅಪ್ಲಿಕೇಶನ್ ಸಂಖ್ಯೆಯ ರೂಪದಲ್ಲಿ ಸ್ವೀಕೃತಿಯನ್ನು ಪಡೆಯುತ್ತಿರಿ. ಆ ಸ್ವೀಕೃತಿ ಮೂಲಕ ನಿಮ್ಮ ಅರ್ಜಿಯ ಸ್ಥಿತಿಗತಿಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. (https://tin.tin.nsdl.com/pantan/StatusTrack.html.)
ಈ ಹಿಂದೆ ಅರ್ಜಿ ಸಲ್ಲಿಸಿದ್ದ 10-15 ದಿನಗಳ ನಂತರ ಪಾನ್ ಕಾರ್ಡ್ ಪಡೆಯಬಹುದಾಗಿತ್ತು. ಆದರೆ ಈಗ ಎರಡು ದಿನಗಳ ಒಳಗಾಗಿ ಪಡೆಯಬಹುದು.

5. ಪಾನ್ ಕಾರ್ಡ್ ಪಡೆಯಿರಿ

ನಿಮ್ಮಿಂದ ಒದಗಿಸಲ್ಪಡುವ ದಾಖಲಾತಿ ಮತ್ತು ಅರ್ಜಿಯನ್ನು ಪರಿಶೀಲಿಸಿದ ನಂತರ ರಜಿಸ್ಟರ್ ಫೋಸ್ಟ್ ಮೂಲಕ ಪಾನ್ ಕಾರ್ಡ್ ಪಡೆಯುವಿರಿ.

English summary

How To Get PAN Card Within Two Days?

Permanent account number or a PAN card is a unique 10-digit alphanumeric identity allotted to each taxpayer by the Income Tax Department under the supervision of the Central Board of Direct Taxes.
Story first published: Monday, December 5, 2016, 15:54 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns