For Quick Alerts
ALLOW NOTIFICATIONS  
For Daily Alerts

ಷೇರುಗಳಲ್ಲಿ ಹಣ ಹೂಡುವ ಮುನ್ನ ಇಲ್ಲೊಮ್ಮೆ ನೋಡಿ...

ಷೇರುಪೇಟೆ ಎಂದರೆ ಅದು ಗೂಳಿ ಮತ್ತು ಕರಡಿ ಕುಣಿತ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಕೆಲವರಿಗೆ ಸುಲಭ ಎನಿಸಿದರೆ ಮತ್ತೆ ಕೆಲವರಿಗೆ ಕಷ್ಟ.

By Siddu
|

ಷೇರುಪೇಟೆ ಎಂದರೆ ಅದು ಗೂಳಿ ಮತ್ತು ಕರಡಿ ಕುಣಿತ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಕೆಲವರಿಗೆ ಸುಲಭ ಎನಿಸಿದರೆ ಮತ್ತೆ ಕೆಲವರಿಗೆ ಕಷ್ಟ. ನಿಮಗೆ ಎಲ್ಲಾ ಷೇರುಗಳು ಹಣ ಅಥವಾ ಲಾಭ ತಂದುಕೊಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ದಶಕಗಳ ಕಾಲ ಮಾರುಕಟ್ಟೆಯನ್ನು ಅಭ್ಯಸಿಸಿ ಆಳಿದಂಥ ವಾರೆನ್ ಬಫೆಟ್ ಅಥವಾ ಬಿಲೆನಿಯರ್ ಹೂಡಿಕೆದಾರ ರಾಕೇಶ್ ಝುನ್ ಝುನ್ವಾಲಾರಂಥವರು ಅಳವಡಿಸಿಕೊಂಡ ನೀತಿಯನ್ನು ನಾವು ಕಲಿಯಬೇಕಾಗುತ್ತದೆ. ಷೇರುಪೇಟೆ ಎಂದರೇನು?

1. ಉತ್ತಮ ಕಂಪನಿ ಆಯ್ಕೆ ಮಾಡಿ

1. ಉತ್ತಮ ಕಂಪನಿ ಆಯ್ಕೆ ಮಾಡಿ

ಹಣ ಹೂಡುವ ಮುನ್ನ ಸಂಸ್ಥೆ ಯಾವುದು ಎಂಬುದನ್ನು ಗಮನ ಹರಿಸಬೇಕಾಗುತ್ತದೆ. ಷೇರುಪೇಟೆಯಲ್ಲಿ ಉತ್ತಮ ಹಿಡಿತ ಹಾಗೂ ಪರಿಣಿತಿ ಸಾಧಿಸಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಎಂಟು ವರ್ಷಗಳ ಹಿಂದೆ ಎಲ್ ಆಂಡ್ ಟಿ ದಲ್ಲಿ ಹಣ ಹೂಡಿದವರಿಗೆ ನಷ್ಟವಾಗಲಿಲ್ಲ. ಆದರೆ ಅದೇ ವೇಳೆಗೆ ಜಯಪ್ರಕಾಶ ಅಸೋಸಿಯೆಟ್ಸ್ ನಲ್ಲಿ ಹಣ ಹೂಡಿದವರು ನಷ್ಟ ಮಾಡಿಕೊಳ್ಳಬೇಕಾಯಿತು. ಜಾಗತಿಕ ಷೇರುಪೇಟೆಯ ಏಳು ಬೀಳುಗಳು ದೇಶಿಯ ಕಂಪನಿಯನ್ನು ಸಂಪೂರ್ಣ ನಷ್ಟಕ್ಕೆ ದೂಡಿಬಿಡಬಹುದು.

2. ಕಂಪನಿಯ ಸಂಭಾವ್ಯ ಬೆಳವಣಿಗೆ ನೋಡಿ

2. ಕಂಪನಿಯ ಸಂಭಾವ್ಯ ಬೆಳವಣಿಗೆ ನೋಡಿ

ರಾಕೇಶ್ ಝುನ್ ಝುವಾಲಾ ಟೈಟಾನ್ ಕಂಪನಿ ಏಳಿಗೆ ಸಾಧಿಸುತ್ತದೆ ಎಂಬುದನ್ನು ಮೊದಲೇ ಕಂಡುಕೊಂಡಿದ್ದರು. ಕಂಪನಿಯ ಬಹುಪಾಲು ಷೇರುಗಳನ್ನು ಖರೀದಿಸಿದರು. ಟೈಟಾನ್ ಜನಪ್ರಿಯಯವಾಗುತ್ತಿದ್ದಂತೆ ಷೇರುದಾರರಿಗೂ ಹಣ ಸಂದಾಯ ಆಗತೊಡಗಿತು. ಮೊದಲು ಕೈಗಡಿಯಾರ ತಯಾರಿಕೆ ಕಂಪನಿಯಾಗಿದ್ದ ಟೈಟಾನ್ ನಿಧಾನವಾಗಿ ಆಭರಣ, ಕನ್ನಡಕ ಮತ್ತಿತರ ವ್ಯಾಪಾರಗಳ ಮೇಲೂ ಬಂಡವಾಳ ಹೂಡಿ ಯಶಸ್ಸು ಸಾಧಿಸಿತು.

3. ಸಾಲ ಹೊಂದಿರುವ ಕಂಪನಿ ಷೇರು ಬೇಡ

3. ಸಾಲ ಹೊಂದಿರುವ ಕಂಪನಿ ಷೇರು ಬೇಡ

ತುಂಬಾ ಸಾಲ ಮಾಡಿಕೊಂಡಿರುವ ಕಂಪನಿಗಳ ಷೇರುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬೇಡಿ. ಸಾಮಾನ್ಯವಾಗಿ ಕೈಗಾರಿಕೆ ಮತ್ತು ಉಕ್ಕಿನ ಉದ್ಯಮದ ಅನೇಕ ಕಂಪನಿಗಳು ಅತಿಯಾದ ಸಾಲ ಹೊಂದಿವೆ. ಷೇರು ಹೂಡಿಕೆ ಸಂದರ್ಭದಲ್ಲಿ ಯಾವ ಕಂಪನಿಯ ಸಾಲ ಕಡಿಮೆ ಇದೆ ಎಂಬುದನ್ನು ಗಮನಿಸಿ ಹೆಜ್ಜೆ ಇಡುವುದು ಸೂಕ್ತ. ಕಿಂಗ್ ಫಿಶರ್ ನಂಥ ಕಂಪನಿಯ ಷೇರು ತೆಗೆದುಕೊಂಡರೆ ನಷ್ಟ ಕಟ್ಟಿಟ್ಟ ಬುತ್ತಿ.

4. ಸಕಾರಾತ್ಮಕ ನಗದು ಹರಿವಿಗೆ ಗಮನ ನೀಡಿ

4. ಸಕಾರಾತ್ಮಕ ನಗದು ಹರಿವಿಗೆ ಗಮನ ನೀಡಿ

ಕಂಪನಿಯ ಹಣ ಸಂದಾಯ ಅಥವಾ ಹರಿವುಗಳ ರೀತಿಯನ್ನು ಗಮನಿಸುವುದು ಮುಖ್ಯವಾಗುತ್ತದೆ. ಹಣ ಹರಿವುಗಳ ಚಲಾವಣೆ ಸಕಾರಾತ್ಮಕವಾಗಿದ್ದರೆ ಅಥವಾ ಕಾನೂನಿಗೆ ಅನುಗುಣವಾಗಿದ್ದರೆ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ನಕಾರಾತ್ಮಕ ನಗದು ಹರಿವು ಇದ್ದಲ್ಲಿ ಅಂಥ ಕಂಪನಿಗಳನ್ನು ನಿರ್ಲಕ್ಷಿಸುವುದು ಉತ್ತಮ.

5. ಹಿನ್ನೆಲೆ ಅರಿತುಕೊಳ್ಳಿ

5. ಹಿನ್ನೆಲೆ ಅರಿತುಕೊಳ್ಳಿ

ಹಣ ಹೂಡುವುದಕ್ಕಿಮತ ಮುನ್ನ ಕಂಪನಿಯ ಹಿನ್ನೆಲೆಯೂ ಅಷ್ಟೇ ಮುಖ್ಯವಾಗುತ್ತದೆ. ಹಣ ಹೂಡಿಕೆ ಮಾಡಲು ಇಚ್ಛಿಸಿರುವ ಕಂಪನಿ ಉಳಿದ ಕಂಪನಿಗಳೊಂದಿಗೆ ಹೊಂದಿರುವ ಸಂಬಂಧ, ಮಾರುಕಟ್ಟೆಯಲ್ಲಿ ಅದರ ಸ್ಥಿತಿಗತಿ ಮುಂತಾದವುಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಆ ಕಂಪನಿಯ ಇಲ್ಲಿಯವರೆಗಿನ ಏಳು ಬೀಳುಗಳ ಅಂ-ಕಿಅಂಶಗಳನ್ನು ಮರೆಯದೆ ತಿಳಿದುಕೊಳ್ಳಿ.

ಕೊನೆಮಾತು

ಕೊನೆಮಾತು

ಇದು ಕೇವಲ ಮೂಲಭೂತ ಸಂಗತಿಗಳಾಗಿದ್ದು, ಷೇರುಗಳ ಮೇಲೆ ಹಣ ಹೂಡುವ ಮುನ್ನ ಇನ್ನು ಅನೇಕ ವಿಷಯಗಳನ್ನು ಅಭ್ಯಸಿಸಬೇಕಾಗುತ್ತದೆ. ನಿರ್ದಿಷ್ಟ ಮತ್ತು ಖಚಿತ ರೀತಿಯ ವಿಶ್ಲೇಷಣೆ ಮೂಲಕ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ.

English summary

Smart Ways to Successfully Invest in Stocks/Shares

The story in stock market investing is simple: You do not make money all the time, in every single stock. Those who have generated wealth have taken decades including the likes of Warren Buffet or and billionaire investor Rakesh Jhujhunwala.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X