For Quick Alerts
ALLOW NOTIFICATIONS  
For Daily Alerts

ಸ್ಯಾಲರಿ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್ ಬಗ್ಗೆ ವ್ಯತ್ಯಾಸ ತಿಳಿಯಿರಿ

ನಮ್ಮಲ್ಲಿ ಬಹಳಷ್ಟು ಜನರಿಗೆ ಉಳಿತಾಯ ಖಾತೆಗಿಂತ ಸ್ಯಾಲರಿ ಖಾತೆ ಹೇಗೆ ಭಿನ್ನ ಎನ್ನುವುದು ಗೊತ್ತಿರುವುದಿಲ್ಲ. ಎರಡೂ ಖಾತೆಗಳ ಕಾರ್ಯನಿರ್ವಹಣೆ ಹಾಗೂ ಲಕ್ಷಣಗಳು ಒಂದೇ ತೆರನಾಗಿರುತ್ತವೆ. ಆದರೆ ಎರಡೂ ಖಾತೆಗಳು ಬೇರೆ ಬೇರೆ.

By Siddu
|

ನಮ್ಮಲ್ಲಿ ಬಹಳಷ್ಟು ಜನರಿಗೆ ಉಳಿತಾಯ ಖಾತೆಗಿಂತ ಸ್ಯಾಲರಿ ಖಾತೆ ಹೇಗೆ ಭಿನ್ನ ಎನ್ನುವುದು ಗೊತ್ತಿರುವುದಿಲ್ಲ. ಎರಡೂ ಖಾತೆಗಳ ಕಾರ್ಯನಿರ್ವಹಣೆ ಹಾಗೂ ಲಕ್ಷಣಗಳು ಒಂದೇ ತೆರನಾಗಿರುತ್ತವೆ. ಆದರೆ ಎರಡೂ ಖಾತೆಗಳು ಬೇರೆ ಬೇರೆ ಎನ್ನುವುದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡುತ್ತದೆ.

 

ಹಾಗಿದ್ದರೆ ಸ್ಯಾಲರಿ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್ ನಡುವಿನ ಬದಲಾವಣೆ ಹಾಗೂ ಪ್ರಾಮುಖ್ಯತೆಗಳೇನು ಎನ್ನುವುದು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

ಸ್ಯಾಲರಿ ಖಾತೆ

ಸ್ಯಾಲರಿ ಖಾತೆ

ಹೆಸರೇ ಸೂಚಿಸುವಂತೆ ಸ್ಯಾಲರಿ ಖಾತೆ ಖಾತೆಯನ್ನು ನೀವು ಕೆಲಸ ಮಾಡುತ್ತಿರುವ ಕಂಪನಿ ನಿಮ್ಮ ಹೆಸರಿನಲ್ಲಿ ತೆರೆಯುತ್ತದೆ. ಇದನ್ನು ಜಿರೋ ಬ್ಯಾಲೆನ್ಸ್ ಅಕೌಂಟ್ ಎಂದು ಕರೆಯಬಹುದು. ಇಲ್ಲಿ ಇಂತಿಷ್ಟೇ ಹಣವನ್ನು ಅಥವಾ ಕನಿಷ್ಠ ಡಿಪಾಸಿಟ್ ಇಡಬೇಕೆಂಬ ನಿಯಮಗಳಿಲ್ಲ. ವೇತನ ನೀಡಿಕೆಗೆ ಸಂಬಂಧಿಸಿ ಈ ಖಾತೆ ಬಳಕೆಯಾಗುತ್ತದೆ.

ಸೌಲಭ್ಯಗಳೇನು?

ಸೌಲಭ್ಯಗಳೇನು?

ಕೆಲ ಬ್ಯಾಂಕ್ ಗಳು ವಿಭಿನ್ನ ಬಗೆಯ ಸ್ಯಾಲರಿ ಖಾತೆಯನ್ನು ಕೊಡ ಮಾಡುತ್ತವೆ. ನಿಮಗೆ ದೊರೆಯುವ ವೇತನದ ಆಧಾರಲ್ಲಿ ಈ ಅಕೌಂಟ್ ಗಳು ಕಾರ್ಯನಿರ್ವಹಿಸುತ್ತವೆ. ಅತಿ ಹೆಚ್ಚು ಮೊತ್ತದ ಹಣ ಏಕಕಾಲದಲ್ಲಿ ಡ್ರಾ ಮಾಡಲು ಅವಕಾಶ ನೀಡುವ ಡೆಬಿಟ್ ಕಾರ್ಡ್, ಕೆಲ ಸಾಲ ಸೌಲಭ್ಯಗಳು, ಕ್ರೆಡಿಟ್ ಕಾರ್ಡ್ ಆಫರ್ ಗಳನ್ನು ಈ ಖಾತೆಯ ಆಧಾರದಲ್ಲಿ ಪಡೆಯಬಹುದು.

ಸ್ಯಾಲರಿ ಖಾತೆ ಅರ್ಧಕ್ಕೆ ಸ್ಥಗಿತವಾದರೆ?
 

ಸ್ಯಾಲರಿ ಖಾತೆ ಅರ್ಧಕ್ಕೆ ಸ್ಥಗಿತವಾದರೆ?

ಇಲ್ಲಿ ಮತ್ತೊಂದು ಸಂಗತಿ ಮುಖ್ಯವಾಗುತ್ತದೆ. ಒಂದು ವೇಳೆ ಮೂರು ತಿಂಗಳು ಕಾಲ ನಿರಂತರವಾಗಿ ಖಾತೆಗೆ ಸ್ಯಾಲರಿ ಹಣ ಕ್ರೆಡಿಟ್ ಆಗದಿದ್ದಲ್ಲಿ ಇದನ್ನು ಉಳಿತಾಯ ಖಾತೆ ಎಂದು ಪರಿಗಣಿಸಲಾಗುವುದು. ಅಲ್ಲದೇ ನಂತರ ನೀವು ಮಿನಿಮಮ್ ಬ್ಯಾಲೆನ್ಸ್ ಇಡಲೇಬೇಕಾಗುವುದು.

ಉಳಿತಾಯ ಖಾತೆ

ಉಳಿತಾಯ ಖಾತೆ

ಉಳಿತಾಯ ಖಾತೆ ಖಾತೆಯನ್ನು ಯಾರೂ ಬೇಕಾದರೂ ತೆರೆಯಬಹುದು. ಇದರ ಮುಖ್ಯ ಉದ್ದೇಶ ಉಳಿತಾಯಕ್ಕೆ ಆದ್ಯತೆ ನೀಡುವುದು. ಇಲ್ಲಿಯೂ ಸಹ ವಿವಿಧ ಬಗೆಯ ಖಾತೆಗಳನ್ನು ಬ್ಯಾಂಕ್ ನೀಡುತ್ತದೆ. ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡುವುದರಲ್ಲಿ ನೀವು ವಿಫಲರಾದರೆ ಬ್ಯಾಂಕುಗಳು ದಂಡವನ್ನು ವಸೂಲಿ ಮಾಡಬಹುದು.

ಉಳಿತಾಯ ಖಾತೆಯನ್ನು ಸ್ಯಾಲರಿ ಖಾತೆಯನ್ನಾಗಿ ಪರಿವರ್ತನೆ

ಉಳಿತಾಯ ಖಾತೆಯನ್ನು ಸ್ಯಾಲರಿ ಖಾತೆಯನ್ನಾಗಿ ಪರಿವರ್ತನೆ

ನಿಮ್ಮ ಕಂಪನಿ ನೀವು ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲೇ ಸ್ಯಾಲರಿ ಅಕೌಂಟ್ ತೆರೆಯಲು ಮುಂದಾದರೆ, ನೀವು ಈಗಾಗಲೇ ಹೊಂದಿರುವ ಉಳಿತಾಯ ಖಾತೆಯನ್ನೇ ಸ್ಯಾಲರಿ ಖಾತೆ ಆಗಿ ಬದಲಾಯಿಸಬಹುದು.

ಸ್ಯಾಲರಿ ಖಾತೆ

ಸ್ಯಾಲರಿ ಖಾತೆ

ಯಾರು ತೆರೆಯಬಹುದು - ಕಂಪನಿ
ಯಾವ ಉದ್ದೇಶ - ವೇತನ ಪಾವತಿ
ಮಿನಿಮಮ್ ಬ್ಯಾಲೆನ್ಸ್ - ಇಲ್ಲ
ಬದಲಾವಣೆ - ನಿರಂತರ ಮೂರು ತಿಂಗಳು ಕಾಲ ಸ್ಯಾಲರಿ ಕ್ರೆಡಿಟ್ ಆಗದಿದ್ದರೆ ಇದು ಉಳಿತಾಯ ಖಾತೆಯಾಗಿ ಬದಲಾಗುವುದು.
ಬಡ್ಡಿ - ಇಲ್ಲ, ಯಾವ ಬಡ್ಡಿ ಇರುವುದಿಲ್ಲ

ಉಳಿತಾಯ ಖಾತೆ

ಉಳಿತಾಯ ಖಾತೆ

ಯಾರು ತೆರೆಯಬಹುದು - ಯಾರೂ ಬೇಕಾದರೂ
ಯಾವ ಉದ್ದೇಶ- ಹಣ ಉಳಿತಾಯ
ಮಿನಿಮಮ್ ಬ್ಯಾಲೆನ್ಸ್- ಬೇಕು
ಬದಲಾವಣೆ- ಬ್ಯಾಂಕ್ ಒಪ್ಪಿಗೆ ಇದ್ದರೆ ಸ್ಯಾಲರಿ ಖಾತೆಯಾಗಿ ಬದಲಾವಣೆ ಮಾಡಬಹುದು ಬಡ್ಡಿ- ಶೇ, 4 ರಂದ 6 ಬಡ್ಡಿ ದರ ನೀಡಲಾಗುವುದು.

ಕೊನೆ ಮಾತು

ಕೊನೆ ಮಾತು

ನೀವು ಕೆಲಸದ ಬದಲಾವಣೆ ಮಾಡಿದರೆ ಅಥವಾ ಮಾಡುವವರಿದ್ದರೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲಸ ಬದಲು ಮಾಡಿ ಮೊದಲಿನ ಖಾತೆ ಕ್ಲೋಸ್ ಮಾಡಲು ಮರೆತರೆ ದಂಡ ತೆರಬೇಕಾದ ಸಂಭವವೂ ಇರುತ್ತದೆ. ಕೆಲಸ ಬಿಟ್ಟ ತಕ್ಷಣ ಖಾತೆಯನ್ನು ಕ್ಲೋಸ್ ಮಾಡುವುದು ಒಳಿತು.(kannadagoodreturns.in)

English summary

Difference Between Salary Account and Savings Account (SB Account) In A Bank

Most working people have wondered, how salary account can be different from a savings account, because at a glance both have the same features. However, they both are different accounts.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X