For Quick Alerts
ALLOW NOTIFICATIONS  
For Daily Alerts

ಬ್ಯಾಂಕು ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

ಬ್ಯಾಂಕುಗಳಲ್ಲಿ ಯಾವುದೇ ವ್ಯವಹಾರ ಮಾಡಬೇಕಾದರೂ ಆಧಾರ್ ಕಾರ್ಡ್ ಕೇಳುವುದು ಸಾಮಾನ್ಯ. ನಿಮ್ಮ ಖಾತೆಯ ಪ್ರಾಥಮಿಕ ಮಾಹಿತಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

|

ಬ್ಯಾಂಕುಗಳಲ್ಲಿ ಯಾವುದೇ ವ್ಯವಹಾರ ಮಾಡಬೇಕಾದರೂ ಆಧಾರ್ ಕಾರ್ಡ್ ಕೇಳುವುದು ಸಾಮಾನ್ಯ. ನಿಮ್ಮ ಖಾತೆಯ ಪ್ರಾಥಮಿಕ ಮಾಹಿತಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಲದು ಅದು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರಬೇಕು. ಆಗ ಮಾತ್ರ ಹೆಚ್ಚುವರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಎಲ್ಪಿಜಿ ಯೊಂದಿಗೆ ಆಧಾರ್ ಲಿಂಕ್, ಪಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಕೂಡ ಮಾಡಬೇಕಾಗುತ್ತದೆ. ಇದೀಗ ಬ್ಯಾಂಕು ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ... ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ಬ್ಯಾಂಕು ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

ಆನ್ ಲೈನ್ ಮೂಲಕ ಬ್ಯಾಂಕು ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

1. ನೆಟ್ ಬ್ಯಾಂಕಿಂಗ್ ಗೆ ಮೊದಲು ಲಾಗ್ ಇನ್ ಆಗಿ
2. ಆಧಾರ್ ಲಿಂಕಿಂಗ್ ಎಂಬ ಆಯ್ಕೆ ನಿಮಗೆ ಕಾಣಸಿಗುವುದು, ಕೆಲವೊಂದು ಕಡೆ ಅಪ್ ಡೇಟ್ ಯುವರ್ ಕಾಂಟಾಕ್ಟ್ ಡಿಟೇಲ್ಸ್ ಎಂಬ ಆಯ್ಕೆ ಸಿಗುವುದು
3 ಇನ್ನು ಕೆಲ ಬ್ಯಾಂಕುಗಳು 'ಆಧಾರ್ ಬ್ಯಾಂಕ್ ಅಕೌಂಟ್ ಸೆಡಿಂಗ್' ಎಂಬ ಅವಕಾಶ ಕಲ್ಪಿಸಿರುತ್ತವೆ.
4. ನಿಮ್ಮ ಆಧಾರ್ ಮಾಹಿತಿಯನ್ನು ಸರಿಯಾಗಿ ದಾಖಲು ಮಾಡಿ
5. ಸಬ್ ಮಿಟ್ ಬಟನ್ ಕ್ಲಿಕ್ ಮಾಡಿ
6. ಇದಾದ ಮೇಲೆ ನೀವು ನೀಡಿದ ಮಾಹಿತಿಯನ್ನು ಬ್ಯಾಂಕ್ ಪರಿಶೀಲನೆ ಮಾಡುತ್ತದೆ.
7. ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಮತ್ತು ಇಮೇಲ್ ಗೆ ಈ ಬಗ್ಗೆ ಸಂದೇಶ ಬರುತ್ತದೆ.

ಆಫ್ ಲೈನ್ ಮೂಲಕ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

1. ಆಧಾರ್ ಲಿಂಕ್ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ ಅಥವಾ ಹತ್ತಿರದ ಶಾಖೆಯಿಂದ ಪಡೆದುಕೊಳ್ಳಿ
2. ಅರ್ಜಿಯಲ್ಲಿ ಸರಿಯಾದ ಮಾಹಿತಿ ದಾಖಲು ಮಾಡಿ
3. ನಿಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಪಾನ್ ಕಾರ್ಡ್ ಪ್ರತಿ ನೀಡಲು ಮರೆಯಬೇಡಿ
4. ಪಾಸ್ ಬುಕ್ ಫೋಟೋ ಕಾಪಿ ಸಹ ಅಗತ್ಯ
5. ಈ ಎಲ್ಲ ದಾಖಲೆಗಳನ್ನು ನಿಮ್ಮ ಬ್ಯಾಂಕ್ ಶಾಖೆಗೆ ನೀಡಿ

ಆಧಾರ್ ಕಾರ್ಡ್ ನ್ನು ಎಲ್ಲ ವ್ಯವಹಾರಗಳಿಗೆ ಏಕ ದಾಖಲೆಯನ್ನಾಗಿ ಬಳಸುವಂತೆ ಮಾಡುತ್ತೇವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. (kannada goodreturns)

Read more about: aadhar pan card bank ಆಧಾರ್
English summary

How To Link Aadhar Card To Your Bank Account Online?

Aadhaar is gaining popularity as most of banks, financial institutions reduce the KYC process if an individual is having a Aadhaar number. Else the person has to go through tedious process to complete KYC for doing a new transaction or opening a new account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X