ಷೇರುಪೇಟೆ ಹೂಡಿಕೆ ಬಗ್ಗೆ ನಿಮಗೆಷ್ಟು ಗೊತ್ತು?

By Krupal
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಷೇರುಪೇಟೆಯಲ್ಲಿನ ಬೆಳವಣಿಗೆಗಳನ್ನಾಧರಿಸಿ ಬರುವ ಯಾವ ವಿಶ್ಲೇಷಣೆಗಳು, ವಿಮರ್ಶೆಗಳು ಅಲಂಕಾರಿಕವಾಗಿದ್ದು ಹೂಡಿಕೆದಾರರು ಅವುಗಳಿಗೆ ಮಾರು ಹೋಗದೆ ಅರಿತುಕೊಂಡು ಅಳವಡಿಸಿಕೊಂಡರೆ ಷೇರು ಹೂಡಿಕೆ ಒಂದು ಉಪಯುಕ್ತ ಲಾಭದಾಯಕ ಚಟುವಟಿಕೆಯಾಗುವುದು. ಷೇರುಪೇಟೆಗಳಿಗೆ ಉತ್ತಮವಾದ ಭವಿಷ್ಯವಿದೆ. ಕಾರಣ ಜಾಗತಿಕ ಮಟ್ಟದ ಬೆಳವಣಿಗೆಗಳು, ಆರ್ಥಿಕ ಒಪ್ಪಂದಗಳು, ಸ್ಪರ್ಧಾತ್ಮಕವಾದ ನಿರ್ಧಾರಗಳು ಕಾರ್ಪೊರೇಟ್ ವಲಯವನ್ನು ಚಟುವಟಿಕೆ ಭರಿತವನ್ನಾಗಿಸುವುದರಿಂದ ರಭಸದ ಏರಿಳಿತಗಳನ್ನು ಕಾಣಬಹುದಾಗಿದೆ.

  ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಡೊಮೆಸ್ಟಿಕ್, ಫಾರಿನ್ ಇನ್ಸ್ಟಿಟ್ಯೂಶನ್ ಗಳಲ್ಲದೆ ಮ್ಯುಚುಯಲ್ ಫಂಡ್ ಗಳು, ಹೈ ನೆಟ್ ವರ್ತ್ ವ್ಯಕ್ತಿಗಳು ಸಹ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಷೇರುಪೇಟೆಯ ವೈಶಿಷ್ಟ್ಯತೆ ಲಿಕ್ವಿಡಿಟಿ ಗುಣವಾಗಿದೆ.

  ಲಿಕ್ವಿಡಿಟಿ ಎಂದರೆ ನಾವು ಹೊಂದಿರುವ ಷೇರುಗಳನ್ನು ನಾವು ಇಚ್ಚಿಸಿದಾಗ ಮಾರಾಟ ಮಾಡಿ ನಮ್ಮ ಹಣದ ಅವಶ್ಯಕತೆಯನ್ನು ನೀಗಿಸಿಕೊಳ್ಳುವುದಾಗಿದೆ. ಷೇರಿನ ಬೆಲೆಯು ನಾವು ಕೊಂಡ ಬೆಲೆಗಿಂತ ಹೆಚ್ಚಾದಾಗ ಮಾರಾಟ ಮಾಡಬಹುದಾಗಿದೆ. ಹಾಗೆಯೇ ಷೇರಿನ ಬೆಲೆ ಕುಸಿತ ಕಂಡಾಗ ಖರೀದಿ ಮಾಡಲು ಸಹ ಅವಕಾಶವಿರುತ್ತದೆ. ಇಲ್ಲಿನ ಎಲ್ಲಾ ಚಟುವಟಿಕೆಗಳು ಟೆಕ್ನಾಲಜಿ ಆಧಾರಿತವಾಗಿರುತ್ತದೆ. ಹಾಗಾಗಿ ಪ್ರಮುಖ ಸ್ಟಾಕ್ ಎಕ್ಸ್ ಚೇಂಜ್ ಗಳಾದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಗಳು ಮುಂಬೈ ನಲ್ಲಿ ತಮ್ಮ ಕಾರ್ಯಸ್ಥಾನ ಹೊಂದಿದ್ದರು ತಮ್ಮ ವಹಿವಾಟಿನ ಜಾಲವನ್ನು ವಿಶ್ವಾದ್ಯಂತ ಹರಡಿಕೊಂಡಿದೆ.

  ಷೇರುಪೇಟೆ ಅರಿವು ಅಗತ್ಯ

  ಅರಿತು ಹೂಡಿಕೆ ಮಾಡಿದರೆ ಷೇರುಪೇಟೆ ಒದಗಿಸುವುದು ಸಂಪತ್ತಿನ ಮೂಟೆ, ಆಯ ತಪ್ಪಿದರೆ ಆಪತ್ತಿನ ಮೂಟೆ ಎಂಬುದು ಸದಾ ನೆನಪಿನಲ್ಲಿರಿಸಿಕೊಂಡು ಹೂಡಿಕೆ ಮಾಡಬೇಕು. ಇಲ್ಲಿ ಚಟುವಟಿಕೆ ನಡೆಸುವವರಿಗೆ ಅವರ ಸಹನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಸವಾಲಾದ ವಾತಾವರಣವಿರುತ್ತದೆ. ಇಲ್ಲಿ ಯಾವ ಅನುಭವವು ಅನ್ವಯಿಸದೆ, 'ಆನೆ ನಡೆದಿದ್ದೇ ದಾರಿ ಪೇಟೆ ಸಾಗಿದ್ದೇ ಗುರಿ' ಎಂಬಂತಿದೆ. ಹಾಗಾಗಿ ಚಟುವಟಿಕೆಗೆ ಮುನ್ನ ಅಪಾಯದ ಅರಿವು ಮೂಡಿಸಿಕೊಂಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.ಷೇರುಪೇಟೆ ಅರಿವು ಅಗತ್ಯ
  ಅರಿತು ಹೂಡಿಕೆ ಮಾಡಿದರೆ ಷೇರುಪೇಟೆ ಒದಗಿಸುವುದು ಸಂಪತ್ತಿನ ಮೂಟೆ, ಆಯ ತಪ್ಪಿದರೆ ಆಪತ್ತಿನ ಮೂಟೆ ಎಂಬುದು ಸದಾ ನೆನಪಿನಲ್ಲಿರಿಸಿಕೊಂಡು ಹೂಡಿಕೆ ಮಾಡಬೇಕು. ಇಲ್ಲಿ ಚಟುವಟಿಕೆ ನಡೆಸುವವರಿಗೆ ಅವರ ಸಹನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಸವಾಲಾದ ವಾತಾವರಣವಿರುತ್ತದೆ. ಇಲ್ಲಿ ಯಾವ ಅನುಭವವು ಅನ್ವಯಿಸದೆ, 'ಆನೆ ನಡೆದಿದ್ದೇ ದಾರಿ ಪೇಟೆ ಸಾಗಿದ್ದೇ ಗುರಿ' ಎಂಬಂತಿದೆ. ಹಾಗಾಗಿ ಚಟುವಟಿಕೆಗೆ ಮುನ್ನ ಅಪಾಯದ ಅರಿವು ಮೂಡಿಸಿಕೊಂಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

  ಷೇರುಪೇಟೆಯಲ್ಲಿ ಯಾರು ಚಟುವಟಿಕೆ ನಡೆಸಬಹುದು?

  ಷೇರುಪೇಟೆ ಸರ್ವರಿಗೂ ಮುಕ್ತವಾಗಿ ತೆರೆದಿರುತ್ತದೆ. ಹದಿನೆಂಟು ವರ್ಷದ ಮೇಲಿನ ಆಸಕ್ತರು ಭಾಗವಹಿಸಬಹುದಾಗಿದ್ದು, ಮೂಲಭೂತವಾಗಿ ಅವರು ಆದಾಯ ತೆರಿಗೆ ಇಲಾಖೆಯಿಂದ ಪಡೆದ 'ಪ್ಯಾನ್ ಕಾರ್ಡ್', ಬ್ಯಾಂಕ್ ಖಾತೆ, ಅಡ್ರೆಸ್ ಪ್ರುಫ್ ಗಳನ್ನು ಹೊಂದಿರಬೇಕು. ಸಾಂಸ್ಥಿಕ ಹೂಡಿಕೆದಾರರು ಭಾಗವಹಿಸಬಹುದಾಗಿದೆ. ಯಾವ ವೃತ್ತಿಯಲ್ಲಿದ್ದರೂ ಇಲ್ಲಿನ ಚಟುವಟಿಕೆ ನಡೆಸಬಹುದಾಗಿದೆ. ಡ್ರೈವರ್, ಕಂಡಕ್ಟರ್, ಆಟೋ ಚಾಲಕರು, ಸಣ್ಣ ಸಣ್ಣ ಉದ್ಯಮಿಗಳು, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು, ನಿವೃತ್ತರು, ನಿರುದ್ಯೋಗಿಗಳು ಎಲ್ಲರು ಭಾಗವಹಿಸಲು ಸಾಧ್ಯವಿದೆ. ಪ್ರಮುಖವಾಗಿ ಗೃಹಿಣಿಯರು ಭಾಗವಹಿಸಿ ತಮ್ಮ ಬುದ್ಧಿವಂತಿಕೆಯಿಂದ ಹಣ ಗಳಿಸಬಹುದಾಗಿದೆ. ಇದು ಜೂಜಾಟದ ತರಹ ಅಳವಡಿಕೊಳ್ಳದೆ ಉಳಿತಾಯ, ಹೂಡಿಕೆಗಳಾಗಿ ಚಟುವಟಿಕೆ ನಡೆಸಿದಲ್ಲಿ ಸ್ವಲ್ಪಮಟ್ಟಿನ ಸುರಕ್ಷತಾ ರೀತಿ ಹಣ ಗಳಿಸಬಹುದಾಗಿದೆ.

  ಚಟುವಟಿಕೆ ಆರಂಭ ಹೇಗೆ?

  ಷೇರುಪೇಟೆಯಲ್ಲಿ ಚಟುವಟಿಕೆ ಆರಂಭಿಸಲು ಮುಖ್ಯವಾಗಿ ಒಂದು ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಅಕೌಂಟ್ ಇರಬೇಕು. ಇದನ್ನು ಸೆಬಿ ನೋಂದಾಯಿತ ಬ್ರೋಕರ್, ಸಬ್ ಬ್ರೋಕರ್, ಅಧಿಕೃತ ವ್ಯಕ್ತಿಗಳ ಮೂಲಕ ಆರಂಭಿಸಬಹುದಾಗಿದೆ. ಕೆಲವರು ಬ್ಯಾಂಕ್ ಗಳ ಮೂಲಕ ಚಟುವಟಿಕೆ ನಡೆಸಲಿಚ್ಚಿಸುವರು. ಇಲ್ಲಿ ಗಮನದಲ್ಲಿರಿಸಬೇಕಾದ ಅಂಶವೆಂದರೆ ಬ್ಯಾಂಕ್ ಗಳು ನೇರವಾಗಿ ಬ್ರೋಕಿಂಗ್ ಸೇವೆಗಳನ್ನು ಒದಗಿಸದೆ ಅವುಗಳ ಸಬ್ಸಿಡಿಯರಿ ಗಳ ಮೂಲಕ ಸೇವೆ ಒದಗಿಸುತ್ತವೆ. ಉದಾಹರಣೆಗೆ ಐಸಿಐಸಿಐ ಡೈರೆಕ್ಟ್, ಕ್ಯಾನ್ ಬ್ಯಾಂಕ್ ಫೈನಾನ್ಷಿಯಲ್ಸ್, ಒಬಿಸಿ ಡೈರೆಕ್ಟ್ ಟ್ರೇಡಿಂಗ್, ಐಒಬಿ ಇಕ್ವಿಟಿ ಟ್ರೇಡಿಂಗ್, ಬರೋಡ -ಇ ಟ್ರೇಡಿಂಗ್ ಮುಂತಾದವುಗಳಾಗಿವೆ.

  ಆರಂಭಿಕ ಹೂಡಿಕೆ ಹೇಗಿರಬೇಕು?

  ಹೊಸದಾಗಿ ಪ್ರವೇಶಿಸಿದವರಿಗೆ ಸ್ವಲ್ಪ ಅನುಭವ ಬರುವವರೆಗೂ ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಒಂದೇ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡದೆ ತಮ್ಮ ಹೂಡಿಕೆಯ ಗಾತ್ರಕ್ಕನುಗುಣವಾಗಿ ಷೇರಿನ ಬೆಲೆ ಆಧರಿಸಿ ಐದು, ಹತ್ತು ಷೇರುಗಳನ್ನು ಕೊಳ್ಳುವ ಮೂಲಕ ಆರಂಭಿಸಬಹುದು. ಉಳಿತಾಯದ ದೃಷ್ಟಿಯಿಂದ ಹೂಡಿಕೆ ಮಾಡುವವರಿಗೆ ಈಗಿನ ಅಲ್ಪ ಬಡ್ಡಿ ದರದ ಯುಗದಲ್ಲಿ ಹೆಚ್ಚು ಅವಕಾಶಗಳು ಒದಗಿಬರುತ್ತವೆ. ಬ್ಯಾಂಕ್ ಬಡ್ಡಿ ದರವು ಕ್ಷೀಣಿತವಾಗುತ್ತಿರುವುದು ಮತ್ತು ಸಾಧ್ಯವಾದಷ್ಟು ಹೆಚ್ಚಿನ ಹಣ ಗಳಿಸಬೇಕೆಂಬುವ ಹಂಬಲವು ಪೇಟೆಯ ಚಟುವಟಿಕೆ ಹೆಚ್ಚಾಗುವಂತೆ ಮಾಡುತ್ತದೆ. ಪೇಟೆಯಲ್ಲಿ ಚಟುವಟಿಕೆ ನಡೆಸುವ ಮುನ್ನ ಕಂಪನಿಯ ಷೇರಿನ ಬಗ್ಗೆ ಸ್ವಲ್ಪ ಅರಿತು ನಂತರ ಹೂಡಿಕೆ ಮಾಡುವುದು ಉತ್ತಮ. ಅಗ್ರಮಾನ್ಯ ಕಂಪನಿಗಳ ಷೇರುಗಳ ಬೆಲೆಗಳು ಇಳಿಕೆ ಕಂಡಾಗ ದೀರ್ಘಕಾಲೀನ ಹೂಡಿಕೆ ಎಂದು ಭಾವಿಸಿ ಖರೀದಿಸಿರಿ. ಖರೀದಿಸಿದ ಬೆಲೆಗಿಂತ ಅಲ್ಪ ಸಮಯದಲ್ಲೇ ಶೇ. 20 ರಿಂದ 25 ರಷ್ಟು ಲಾಭ ಗಳಿಕೆ ಆಗುವಂತಾದರೆ ಸಾಕು ಲಾಭವನ್ನು ನಗದೀಕರಿಕೊಳ್ಳುವುದು ಸುರಕ್ಷಿತ ವಿಧ. ಈ ವಿಧವೇ ' ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ' ಆಗಿದೆ. ಇದರಿಂದ ಹೂಡಿದ ಬಂಡವಾಳ ಸುರಕ್ಷಿತವೂ ಮತ್ತು ಲಾಭದಾಯಕವೂ ಆಗಿರುತ್ತದೆ. ಹೂಡಿಕೆ ಮಾಡುವಾಗ ಮಾತ್ರ ಕಂಪನಿಗಳ ಯೋಗ್ಯತೆ, ಘನತೆಗಳ ಬಗ್ಗೆ ಚಿಂತಿಸಿರಿ. ನಂತರ ಕೇವಲ ಲಾಭ ಗಳಿಕೆಯ ಪ್ರಮಾಣದತ್ತ ಗಮನವಿರಲಿ. ಯಾವುದೇ ಭಾವನಾತ್ಮಕ ಅಂಶಗಳಿಗೆ ಅವಕಾಶವಿರಬಾರದು.

  ಹೂಡಿಕೆದಾರರು ಅನುಸರಿಸಬೇಕಾದ ಕ್ರಮಗಳು

  * ಬೆಲೆಗಳು ಕುಸಿತದಲ್ಲಿದ್ದಾಗ ದೀರ್ಘಕಾಲೀನ ಚಿಂತನೆ, ಏರಿಕೆಯಲ್ಲಿದ್ದಾಗ ಅಲ್ಪಕಾಲೀನ ಭಾವನೆ.
  * ಲಾರ್ಜ್ ಕ್ಯಾಪ್ ಕಂಪೆನಿಗಳಲ್ಲಿ ಷೇರು ಬೆಲೆ ಕಡಿಮೆ ಇದ್ದಾಗ ಹೂಡಿಕೆ ಮಾಡಿದರೆ ಕಾರ್ಪೊರೇಟ್ ಫಲಗಳು ಹೆಚ್ಚಿನ ಲಾಭ ಗಳಿಸಿಕೊಡುತ್ತವೆ.
  * ಸ್ಮಾಲ್ ಕ್ಯಾಪ್ ಮತ್ತು ಕಳಪೆ ಕಂಪನಿಗಳ ಬಗ್ಗೆ ಹೆಚ್ಚು ಪ್ರಚಾರವಿರುತ್ತದೆ. ಇಲ್ಲಿ ಹಿತಾಸಕ್ತರ ಚಟುವಟಿಕೆಯು ಹೆಚ್ಚಿರುವ ಸಾಧ್ಯತೆ ಇರುತ್ತದೆ.
  * ನಡೆಸಿದ ಎಲ್ಲಾ ಚಟುವಟಿಕೆಗೆ ದಾಖಲೆ ಇಟ್ಟುಕೊಂಡು, ಮಿತಿ ದಾಟಿದ ನಂತರದ ಲಾಭಕ್ಕೆ ತೆರಿಗೆ ಸ್ವಯಂ ಪ್ರೇರಿತವಾಗಿ ಪಾವತಿಸಿರಿ.
  * ಎಲ್ಲ ಚಟುವಟಿಕೆಗಳನ್ನು ಅಧಿಕೃತ ಬ್ರೋಕರ್, ಸಬ್ ಬ್ರೋಕರ್, ಅಧಿಕೃತ ವ್ಯಕ್ತಿಗಳೊಂದಿಗೆ ನಿರ್ವಹಿಸಿದಲ್ಲಿ ತೆರಿಗೆ ಸೌಲಭ್ಯಗಳು ಪಡೆಯಲು ಸಾಧ್ಯ.
  * ಬ್ರೋಕರೇಜ್ ಬಗ್ಗೆ ಚಿಂತಿಸದೆ ಅದಕ್ಕೆ ಅವರು ಪೂರಕವಾಗಿ ಒದಗಿಸಬಹುದಾದ ಸೇವಾ ಕಾರ್ಯಗಳ ಬಗ್ಗೆ ಗಮನ ಹರಿಸಿ.
  * ಲೋ ಬ್ರೋಕರೇಜ್ ಎಂದು ಅರಿಯದೆ ಹೂಡಿಕೆ ಮಾಡಿ ಬಂಡವಾಳವನ್ನು ಆಪತ್ತಿಗೆ ಸಿಲುಕಿಸಬೇಡಿರಿ.

  ಆದಾಯ ತೆರಿಗೆ ಸವಲತ್ತುಗಳೇನು?

  * ಹೂಡಿಕೆಯನ್ನು ಒಂದು ವರ್ಷಕ್ಕೂ ಹೆಚ್ಚಿನ ಅವಧಿ ಹೊಂದಿದ್ದರೆ ನಂತರ ಮಾರಾಟ ಮಾಡಿ ಬಂದ ಲಾಭವು ಸಂಪೂರ್ಣವಾದ ತೆರಿಗೆ ವಿನಾಯಿತಿ ಪಡೆದಿರುತ್ತದೆ. ಅದಕ್ಕೆ ಚಟುವಟಿಕೆಯು ಅಧಿಕೃತ ಬ್ರೋಕರ್, ಸಬ್ ಬ್ರೋಕರ್, ಅಧಿಕೃತ ವ್ಯಕ್ತಿಗಳೊಂದಿಗೆ ನಿರ್ವಹಿಸಿರಬೇಕು, ಸೆಕ್ಯೂರಿಟಿ ಟ್ರಾನ್ಸ್ಯಾಕ್ಷನ್ ಟ್ಯಾಕ್ಸ್ ಪಾವತಿಯಾಗಿರಬೇಕು ಮತ್ತು ಬ್ರೋಕಿಂಗ್ ಸಂಸ್ಥೆ ನೀಡಿರುವ ಕಾಂಟ್ರಾಕ್ಟ್ ನೋಟ್ ಹೊಂದಿರಬೇಕು.
  * ಕೊಂಡ ಷೇರುಗಳನ್ನು ಒಂದು ವರ್ಷಕ್ಕೆ ಮುನ್ನವೇ ಮಾರಾಟ ಮಾಡಿದಲ್ಲಿ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಗೆ ಒಳಪಡುತ್ತದೆ.
  * ಡೇ ಟ್ರೇಡಿಂಗ್ ಮಾಡಿದಲ್ಲಿ ಅದು ವ್ಯಾವಹಾರಿಕ ಲಾಭವಾಗಿ ವಿಶೇಷ ತೆರಿಗೆ ಸವಲತ್ತುಗಳಿರುವುದಿಲ್ಲ.
  * ಕಂಪನಿಗಳು ಘೋಷಿಸುವ ಡಿವಿಡೆಂಡ್ ಗಳು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

  ಕೊನೆ ಮಾತು

  ಒಟ್ಟಾರೆ ಷೇರುಪೇಟೆ ಒಂದು ರೀತಿಯ ಗಂಗಾ ಜಲವಿದ್ದಂತೆ. ನಮಗೆ ಬೇಕಾದ ರೀತಿ ಪರಿವರ್ತಿಸಿಕೊಳ್ಳಬಹುದು. ಇಲ್ಲಿ ಬಂಡವಾಳ ಕರಗುವ ವೇಗ ತ್ವರಿತ. ಬಂಡವಾಳ ವೃದ್ಧಿಗೆ ಸ್ಪರ್ಧೆ ಹೆಚ್ಚಾಗಿರುವುದರಿಂದ ಶ್ವಾನ ನಿದ್ದೆ ತರಹ ಸದಾ ಎಚ್ಚರವಾಗಿ ಕಾರ್ಯ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಸಾಧ್ಯ. ಆಸೆಗಳು ಸೀಮಿತವಾಗಿದ್ದಲ್ಲಿ ಅವಕಾಶಗಳು ಅಗಾಧವಾಗಿರುತ್ತವೆ.
  ಮಾರ್ಗದರ್ಶನಕ್ಕೆ ಇತ್ತೀಚಿಗೆ ಬಿಡುಗಡೆಯಾದ ' ಷೇರು ಸಂಪತ್ತು ' ಕನ್ನಡ ಪುಸ್ತಕದ ಮೇಲೆ ಕಣ್ಣಾಯಿಸಬಹುದು. ಷೇರುಗಳಲ್ಲಿ ಹಣ ಹೂಡುವ ಮುನ್ನ ಇಲ್ಲೊಮ್ಮೆ ನೋಡಿ...

  Read more about: stock share sensex bse
  English summary

  What is Share Market?

  A stock market, equity market or share market is the aggregation of buyers and sellers (a loose network of economic transactions, not a physical facility or discrete entity) of stocks (also called shares); these may include securities listed on a stock exchange as well as those only traded privately.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more