ನಮ್ಮಲ್ಲಿ ಬಹಳಷ್ಟು ಮಂದಿ ಮ್ಯೂಚುವಲ್ ಫಂಡ್ ನ ಯೋಜನೆಗಳಲ್ಲಿ ಸಿಪ್ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಹಣ ಹೂಡಲು ಪ್ರಾರಂಭಿಸಬೇಕೆಂದು ಬಯಸುತ್ತಾರೆ. ನಿಜಕ್ಕೂ ಇದೊಂದು ಅದ್ಭುತ ವಿಚಾರ.
ನಮ್ಮಲ್ಲಿ ಬಹಳಷ್ಟು ಮಂದಿ ಮ್ಯೂಚುವಲ್ ಫಂಡ್ ನ ಯೋಜನೆಗಳಲ್ಲಿ ಸಿಪ್ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಹಣ ಹೂಡಲು ಪ್ರಾರಂಭಿಸಬೇಕೆಂದು ಬಯಸುತ್ತಾರೆ. ನಿಜಕ್ಕೂ ಇದೊಂದು ಅದ್ಭುತ ವಿಚಾರ. ನೀವೂ ಸಹ ಈಕ್ವಿಟಿ ಮ್ಯೂಚುವಲ್ ಫಂಡ್ ನ ಯೋಜನೆಗಳಲ್ಲಿ ಸಿಪ್ (Systematic Investment Plan) ಮೂಲಕ ಹಣ ಹೂಡಲು ಪ್ರಾರಂಭಿಸಬೇಕೆಂದಿರುವಿರಾ? ಬನ್ನಿ ಹಾಗಾದರೆ ಸಿಪ್ ಎಂದರೇನು? ಸಿಪ್ ಯಾವ ರೀತಿ ಕೆಲಸ ಮಾಡುತ್ತದೆ.. ಸಿಪ್ ಪ್ರಾರಂಭಿಸುವುದೆ ಹೇಗೆ? ಎಂಬುದನ್ನು ತಿಳಿದುಕೋಳ್ಳೋಣ.. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?
ಸಿಪ್ ಎಂದರೇನು?
ಸಿಪ್ ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆ ಎಂಬುದು ಮ್ಯೂಚುವಲ್ ಫಂಡ್ ಗಳು ತಮ್ಮ ಹೂಡಿಕೆದಾರರಿಗೆ ನಿಯಮಿತವಾಗಿ ಹಾಗೂ ಶಿಸ್ತುಬದ್ದವಾಗಿ ಹಣ ಹೂಡಿಕೆ ಮಾಡಲು ಅವಕಾಶ ಮಾಡಿಕೊಡುವ, ಹೆಚ್ಚಿನ ಗೋಜಲುಗಳಿಲ್ಲದ ಹಣಕಾಸು ನಿರ್ವಹಣೆ ಮಾಡುವ ಜಾಣ ಸಾಧನವಾಗಿದೆ.
ಸಿಪ್ ನಿಮಗೆ ಮೊದಲೇ ನಿಗದಿಪಡಿಸಿಕೊಂಡ ಹಣದ ಮೊತ್ತವನ್ನು, ನಿಗದಿತ ಆವರ್ತನದಲ್ಲಿ, ಬೇಕಾದ ಅವಧಿಗೆ ಹೂಡಿಕೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ಆವರ್ತನವು ಸಾಪ್ತಾಹಿಕ, ಮಾಸಿಕ ಅಥವಾ ತ್ರೈಮಾಸಿಕ ಆಗಿರುತ್ತದೆ. ಸಿಪ್ ಪರಿಕಲ್ಪನೆಯನ್ನು ನಿಗದಿತ ಸಮಯಕ್ಕೆ, ನಿಗದಿತ ಪ್ರಮಾಣದ ಹಣವನ್ನು ಹೂಡಿಕೆ ಮಾಡುವ ರಿಕರಿಂಗ್ ಡಿಪಾಸಿಟ್ ಗೆ ಹೋಲಿಸಬಹುದು.
ಒಂದೇ ಬಾರಿಗೆ ಹೆಚ್ಚಿನ ಮೊತ್ತದ ಹಣವನ್ನು ಹೂಡಿಕೆ ಮಾಡದೇ ಅಲ್ಪ ಮೊತ್ತದ ಹಣವನ್ನು ನಿಯಮಿತ ಆವರ್ತನದಲ್ಲಿ ಹೂಡಿಕೆ ಮಾಡಿ, ನಿಮ್ಮ ಹಣಕಾಸಿನ ಸ್ಥಿತಿಯನ್ನು ಕಾಲಕ್ರಮೇಣ ಉತ್ತಮ ಪಡಿಸಿಕೊಳ್ಳಲು ಸಿಪ್ ಸಹಕಾರಿಯಾಗಿರುತ್ತದೆ. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..
ಸಿಪ್ ಯಾವ ರೀತಿ ಕೆಲಸ ಮಾಡುತ್ತದೆ?
ಸಿಪ್ ನಿಯಮಿತ ಹೂಡಿಕೆಯ ಸೂತ್ರದ ಮೇಲೆ ಕೆಲಸ ಮಾಡುತ್ತದೆ. ಸಿಪ್ ನಲ್ಲಿ ಮೊದಲೇ ನಿರ್ಣಯಿಸಿದ ಹಣದ ಮೊತ್ತವು ನಿಮ್ಮ ಬ್ಯಾಂಕ್ ಖಾತೆಯಿಂದ ಆಟೊ ಡೆಬಿಟ್ ಆಗಿ, ಆ ಮೊತ್ತವನ್ನು ನೀವು ಮೊದಲೇ ಗುರುತಿಸಿರುವ ಮ್ಯೂಚುವಲ್ ಫಂಡ್ ಸ್ಕೀಂ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ನೀವು ಹೂಡಿಕೆ ಮಾಡಿದ ದಿನದ ಮಾರ್ಕೆಟ್ ದರದ (NAV) ಆಧಾರದ ಮೇಲೆ ನಿಮಗೆ ಮ್ಯೂಚುವಲ್ ಫಂಡ್ ಯೂನಿಟ್ ಅನ್ನು ಹಂಚಲಾಗುತ್ತದೆ. ಈ ರೀತಿ ಪ್ರತಿಬಾರಿ ಹಣ ಹೂಡಿಕೆ ಮಾಡಿದಾಗಲೂ ಕೂಡ ಅಂದಿನ ಮಾರ್ಕೆಟ್ ದರದ ಅನ್ವಯ ನಿಮಗೆ ಯೂನಿಟ್ ಅನ್ನು ಹಂಚಲಾಗುತ್ತದೆ. ಈ ರೀತಿ ಸಿಪ್ ನಿಮಗೆ ದರ ಕಡಿಮೆಯಾದಾಗ ಹೆಚ್ಚಿನ ಯೂನಿಟ್ ಹೊಂದುವ ಹಾಗೂ ದರ ಹೆಚ್ಚಾದಾಗ ಕಡಿಮೆ ಯೂನಿಟ್ ಕೊಳ್ಳುವ ಅವಕಾಶ ಕಲ್ಪಿಸುತ್ತದೆ. ಈ ರೀತಿ ಬೇರೆ ಬೇರೆ ಮಾರ್ಕೆಟ್ ದರದಲ್ಲಿ ಪಡೆದ ಯೂನಿಟ್ ಗಳಿಂದ ಹೂಡಿಕೆದಾರರು ಸರಾಸರಿ ರೂಪಾಯಿ ವೆಚ್ಚ ತತ್ವ ಹಾಗೂ ಕಾಲಾಂತರದಲ್ಲಿ ಹಣ ಸಂಯೋಜನೆಯಿಂದ ಲಾಭ ಗಳಿಸುತ್ತಾರೆ.
ಸಿಪ್ ಪ್ರಾರಂಭಿಸುವುದು ಹೇಗೆ?
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಸಿಪ್ ಖಾತೆ ಪ್ರಾರಂಭಿಸುವ ವಿವಿಧ ಹಂತಗಳು:
ಕೆವೈಸಿ ಅನುಸರಣೆ
ಭಾರತದಲ್ಲಿ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಲು ಕೆ ವೈ ಸಿ ಕಾಂಪ್ಲಿಯನ್ಸ್ ಆಗಿರುವುದು ಕಡ್ಡಾಯ. ನೀವು ನಿಮ್ಮ ಕೆ ವೈ ಸಿ ಕಾಂಪ್ಲಿಯನ್ಸ್ ಫಾರ್ಮ್ ಅನ್ನು ಯಾವುದಾದರೂ ಏ ಎಂ ಸಿ (ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ) ಗಳಿಗೆ ಅಥವಾ ಪರವಾನಿಗೆ ಹೊಂದಿದ ಮಧ್ಯವರ್ತಿಗಳಿಗೆ ಅಥವಾ ಸಿಎಎಮ್ಎಸ್ ಕಛೇರಿಗೆ ಸಲ್ಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಬೇಕಾಗುವ ದಾಖಲೆಗಳೆಂದರೆ ಕೆ ವೈ ಸಿ ಅರ್ಜಿ, ಪ್ಯಾನ್ ಕಾರ್ಡ್, ವಿಳಾಸದ ಪುರಾವೆ (ಆಧಾರ್ ಕಾರ್ಡ್, ಪಾಸ್ಪೋರ್ಟ್, ಮತದಾರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಇತ್ತೀಚಿನ ಲ್ಯಾಂಡ್ ಲೈನ್ ಟೆಲೀಫೋನ್ ಬಿಲ್, ಇತ್ತೀಚಿಗಿನ ವಿದ್ಯುತ್ ಬಿಲ್ ಇವುಗಳಲ್ಲಿ ಯಾವುದಾದರ ನಕಲು), ನಿಮ್ಮ ಭಾವಚಿತ್ರ ಹಾಗೂ ರದ್ದು ಮಾಡಿದ ಒಂದು ಚೆಕ್ ಹಾಳೆ. ಕೆವೈಸಿ ಅರ್ಜಿಯೊಂದಿಗೆ ಈ ದಾಖಲೆಗಳ ನಕಲಿಗೆ ನೀವು ಸಹಿ ಮಾಡಿ (ಸೆಲ್ಫ್ ಅಟೆಸ್ಟಿಂಗ್) ಅದರ ಮೂಲ ಪ್ರತಿಯನ್ನು ರುಜುವಾತಿಗಾಗಿ (ವೆರಿಫಿಕೇಷನ್) ಸಲ್ಲಿಸಬೇಕು. ಕೆವೈಸಿ ಯು ಒಂದು ಬಾರಿಯ ಕಾರ್ಯವಾಗಿದ್ದು, ಪೂರ್ಣಗೊಂಡ ನಂತರ ನೀವು ಯಾವುದೇ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಬಹುದು.
ನೀವು ಎರಡು ವಿಧಾನದಲ್ಲಿ ಕೆವೈಸಿ ಕಾಂಪ್ಲಿಯನ್ಸ್ ಆಗಬಹುದು:
1. ಆಫ್ ಲೈನ್ ಕೆವೈಸಿ ಪ್ರಕ್ರಿಯೆ
2. ಇ-ಕೆವೈಸಿ ಪ್ರಕ್ರಿಯೆ ಆನ್ಲೈನ್
ನೀವು ನಿಮ್ಮ ಕೆ ವೈ ಸಿ ಸ್ಥಿತಿಯನ್ನು ನಿಮ್ಮ ಪ್ಯಾನ್ ಸಂಖ್ಯೆ ನಮೂದಿಸುವುದರ ಮೂಲಕ ಕೆಳಕಂಡ ಯಾವುದೇ ವೆಬ್ ಸೈಟ್ ನಿಂದ ತಿಳಿದುಕೊಳ್ಳಬಹುದು
https://www.nsekra.com/
https://kra.ndml.in
https://www.karvykra.com
https://www.cvlkra.com/
ನಿಮ್ಮ ಫಂಡ್ ಆಯ್ದುಕೊಳ್ಳಿ
ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅಗತ್ಯಕ್ಕೆ ಯಾವ ಮ್ಯೂಚುವಲ್ ಫಂಡ್ ಅತ್ಯಂತ ಸೂಕ್ತ ಎಂದು ಕಂಡುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಬಹಳಷ್ಟು ವಿಧದ ಮ್ಯೂಚುವಲ್ ಫಂಡ್ ಸ್ಕೀಂ ಗಳು ಉಪಲಬ್ದವಿದೆ. ನಿಮ್ಮ ಹಣಕಾಸಿನ ಸ್ಥಿತಿಯನ್ನವಲಂಬಿಸಿ, ಯಾವ ಪ್ರಮಾಣದಲ್ಲಿ ಅಪಾಯ ಸಂಭಾವ್ಯತೆಯನ್ನು ನೀವು ನಿರ್ವಹಿಸ ಬಲ್ಲಿರಿ ಹಾಗೂ ನಿಮ್ಮ ಹೂಡಿಕೆಯ ಭವಿಷ್ಯದ ಗುರಿ ಏನು ಎಂದು ನಿರ್ಧರಿಸಿಕೊಂಡು ಸ್ಕೀಂ ಆಯ್ಕೆ ಮಾಡಿಕೊಳ್ಳುವುದು ಬಹು ಮುಖ್ಯ. ನೀವು ಯಾವುದೇ ಸಲಹೆಗಾರರ ಯಾ ಡಿಸ್ಟ್ರಿಬ್ಯೂಷನ್ ಸಂಸ್ಥೆಯ ಮೂಲಕ ಅಥವಾ ನೇರವಾಗಿ ಹಣ ಹೂಡಬಯಸುವಿರಾ ಎಂಬುದನ್ನೂ ಮೊದಲೇ ನಿಗದಿಪಡಿಸಿಕೊಳ್ಳಬೇಕು.
ಸಿಪ್ ಹೆಚ್ಚಿನ ವಿವರ
ನಿಮ್ಮ ಕೆ ವೈ ಸಿ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡು, ನೀವು ನಿಮ್ಮ ಫಂಡ್ ಆಯ್ಕೆ ಮಾಡಿದ ನಂತರ, ಸಿಪ್ ನ ದಿನಾಂಕ ಹಾಗೂ ಅವಧಿಯನ್ನು ನಿರ್ಧರಿಸಿಕೊಳ್ಳಬೇಕು. ನೀವು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಹಣ ತೊಡಗಿಸಬಹುದು. ನೀವು ಮ್ಯೂಚುವಲ್ ಫಂಡ್ ಸಂಸ್ಠೆ ಅಥವಾ ಮಧ್ಯವರ್ತಿ ಕಂಪನಿಗೆ ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ನೀಡಬೇಕು. ಇದರಿಂದ ನಿಮ್ಮ ಬ್ಯಾಂಕ್ ಖಾತೆಯಿಂದ ಮೊದಲೇ ನಿಗದಿ ಪಡಿಸಿದ ಮೊತ್ತವು ನಿಗದಿತ ದಿನಾಂಕದಂದು ತಾನಾಗೆ ಕಡಿತಗೊಂಡು ಅದನ್ನು ಸಿಪ್ ನಲ್ಲಿ ವಿನಿಯೋಗಿಸಲಾಗುತ್ತದೆ. ಇದನ್ನು ನೀವು ಮ್ಯೂಚುವಲ್ ಫಂಡ್ ಸಂಸ್ಥೆ ಅಥವಾ ಮಧ್ಯವರ್ತಿ ಕಂಪನಿಗೆ ಒಂದು ಬ್ಯಾಂಕ್ ಮ್ಯಾಂಡೇಟ್ ಸಲ್ಲಿಸುವುದರ ಮೂಲಕ ಅಥವಾ ನಿಮ್ಮ ಮ್ಯೂಚುವಲ್ ಫಂಡ್ ಸಂಸ್ಠೆ ಅಥವಾ ಮಧ್ಯವರ್ತಿ ಕಂಪನಿಯನ್ನು ನಿಮ್ಮ ಬ್ಯಾಂಕ್ ನ ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಒಂದು ಬಿಲ್ಲರ್ ಆಗಿ ದಾಖಲಿಸುವುದರ ಮೂಲಕ ಮಾಡಬಹುದು.
ನಿಮ್ಮ ಸಂಪತ್ತನ್ನು ಕಾಲಕ್ರಮೇಣದಲ್ಲಿ ವೃದ್ಧಿಸಿಕೊಂಡು ನಿಮ್ಮ ಆರ್ಥಿಕ ಗುರಿಯನ್ನು ಮುಟ್ಟಲು ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan) ಒಂದು ಅತ್ಯುತ್ತಮ ಸಾಧನವಾಗಿದೆ. ಒಮ್ಮೆ ನೀವು ಹೂಡಿಕೆ ಪ್ರಾರಂಭಿಸಿದ ಮೇಲೆ ಶಾಂತಚಿತ್ತದಿಂದ ನಿಮ್ಮ ಹಣ ವೃದ್ಧಿ ಹೊಂದುವುದನ್ನು ಗಮನಿಸುತ್ತಿರಬೇಕಷ್ಟೆ. ಪ್ರತಿದಿನವೂ ನಿಮ್ಮ ಫಂಡ್ ದರವನ್ನು ಪರಿಶೀಲಿಸುವ ಸ್ವಭಾವ ಬೇಡ. ಪ್ರತಿದಿನದ ಮಾರುಕಟ್ಟೆಯ ಏರಿಳಿತದೊಂದಿಗೆ ಸಿಪ್ ಅನ್ನು ತಾಳೆ ನೋಡುವ ಪರಿಪಾಠ ಬೆಳೆಸಿಕೊಳ್ಳದಿರಿ.
More From GoodReturns

SEBI: ಹೂಡಿಕೆದಾರರ ಸುರಕ್ಷತೆಗೆ ಸೆಬಿ ಹೊಸ ಲಾಕ್ ಸೌಲಭ್ಯ…ಮ್ಯೂಚುವಲ್ ಫಂಡ್ ಹಿಂಪಡೆಯುವಿಕೆ ತಡೆಯಿರಿ!

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications