For Quick Alerts
ALLOW NOTIFICATIONS  
For Daily Alerts

ಟಿಡಿಎಸ್ ಎಂದರೇನು? ಟಿಡಿಎಸ್ ಹೇಗೆ ಲೆಕ್ಕ ಹಾಕಲಾಗುತ್ತದೆ?

ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (ಟಿಡಿಎಸ್) ತೆರಿಗೆ ಸಂಗ್ರಹದ ಉದ್ದೇಶ ಹೊಂದಿದ್ದು, ಹೆಸರೇ ಸೂಚಿಸುವಂತೆ ಇದು ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವ ವ್ಯವಸ್ಥೆಯಾಗಿದೆ.

By Siddu
|

ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (ಟಿಡಿಎಸ್) ತೆರಿಗೆ ಸಂಗ್ರಹದ ಉದ್ದೇಶ ಹೊಂದಿದ್ದು, ಹೆಸರೇ ಸೂಚಿಸುವಂತೆ ಇದು ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವ ವ್ಯವಸ್ಥೆಯಾಗಿದೆ. ಉದ್ಯೋಗದಾತ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ಪಾವತಿಸುವ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ.

ಆದಾಯ ತೆರಿಗೆ ಕಾಯಿದೆ 1961ರ ಅನ್ವಯ ವೇತನಗಳು ಟಿಡಿಎಸ್ ಅಡಿಯಲ್ಲಿ ಬರುತ್ತವೆ. ಹಾಗೆಯೇ ಬ್ಯಾಂಕ್ ಠೇವಣಿಗಳು ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿ, ವಿಮಾ ಕಂಪನಿಗಳ ಏಜೆಂಟರ ಕಮಿಷನ್ ಇತ್ಯಾದಿಗಳೂ ಟಿಡಿಎಸ್ ವ್ಯಾಪ್ತಿಗೆ ಒಳಪಟ್ಟಿವೆ. ಈ ಆದಾಯಗಳ ಮೇಲೆ ಟಿಡಿಎಸ್ ಕಡಿತವಾಗುತ್ತದೆ..

ಅರ್ಜಿ ನಮೂನೆ

ಅರ್ಜಿ ನಮೂನೆ

ಪ್ರತಿ ತಿಂಗಳ ಕೊನೆಯೊಳಗೆ ಟಿಡಿಎಸ್ ತೆರಿಗೆ ಮುರಿದುಕೊಳ್ಳುವ ಉದ್ಯೋಗದಾತರು ಅಥವಾ ಸಂಸ್ಥೆಗಳು ಅದನ್ನು ಒಂದೇ ವಾರದ ಅವಧಿಯಲ್ಲಿ ಠೇವಣಿ ಇಡಬೇಕು. ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಳ್ಳುವ ಎಲ್ಲಾ ಉದ್ಯೋಗದಾತರು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಕಡ್ಡಾಯವಾಗಿ ಸಲ್ಲಿಸಬೇಕು.

ವಿವರ ಸಲ್ಲಿಕೆ ಕಡ್ಡಾಯ

ವಿವರ ಸಲ್ಲಿಕೆ ಕಡ್ಡಾಯ

ಪ್ರತಿ ವರ್ಷದ ಜುಲೈ 15, ಅಕ್ಟೋಬರ್ 15, ಜನವರಿ 15 ಮತ್ತು ಮೇ 15 ರೊಳಗೆ ಉದ್ಯೋಗದಾತರು ಅಥವಾ ತೆರಿಗೆ ಮುರಿದುಕೊಳ್ಳುವಾತ ವಿವರ ಸಲ್ಲಿಸುವುದು ಕಡ್ಡಾಯ. ಆದಾಯ ಅಥವಾ ವರಮಾನ ನೀಡುವ (ಪಾವತಿಸುವ) ವ್ಯಕ್ತಿಯು (ಉದಾಹರಣೆಗೆ ಉದ್ಯೋಗದಾತ) ತೆರಿಗೆಯನ್ನು ಮುರಿದುಕೊಂಡು ಉಳಿದ ಮೊತ್ತವನ್ನು ಆದಾಯದಾರನಿಗೆ ನೀಡುತ್ತಾನೆ. ಮೂಲದಲ್ಲಿ ತೆರಿಗೆ ಕಡಿತ ಮಾಡಿರುವುದಕ್ಕೆ ಉದ್ಯೋಗದಾತರು ಉದ್ಯೋಗಿಗೆ ಟಿಡಿಎಸ್ ಪ್ರಮಾಣಪತ್ರ ಒದಗಿಸುತ್ತಾರೆ. ಮೂಲದಲ್ಲಿ ತೆರಿಗೆ ಕಡಿತ ಪ್ರಮಾಣ ಪತ್ರದಲ್ಲಿ ಎರಡು ವಿಧಗಳಿವೆ.

ಟಿಡಿಎಸ್ ಪ್ರಮಾಣಪತ್ರ

ಟಿಡಿಎಸ್ ಪ್ರಮಾಣಪತ್ರ

ಆದಾಯ ಅಥವಾ ವರಮಾನ ನೀಡುವ(ಪಾವತಿಸುವ) ವ್ಯಕ್ತಿಯು(ಉದಾಹರಣೆಗೆ ಉದ್ಯೋಗದಾತ) ತೆರಿಗೆಯನ್ನು ಮುರಿದುಕೊಂಡು ಉಳಿದ ಮೊತ್ತವನ್ನು ಆದಾಯದಾರನಿಗೆ ನೀಡುತ್ತಾನೆ. ಮೂಲದಲ್ಲಿ ತೆರಿಗೆ ಕಡಿತ ಮಾಡಿರುವುದಕ್ಕೆ ಉದ್ಯೋಗದಾತರು ಉದ್ಯೋಗಿಗೆ ಟಿಡಿಎಸ್ ಪ್ರಮಾಣಪತ್ರ ಒದಗಿಸುತ್ತಾರೆ.

ಈ ಆದಾಯಗಳಿಗೆ ಟಿಡಿಎಸ್ ಕಡಿತ ಇದೆ

ಈ ಆದಾಯಗಳಿಗೆ ಟಿಡಿಎಸ್ ಕಡಿತ ಇದೆ

ಉದ್ಯೋಗಿಗಳಿಗೆ ಪಾವತಿಸುವ ವೇತನದಂತಹ ಆದಾಯಗಳಿಗೆ ಟಿಡಿಎಸ್ ಅನ್ವಯವಾಗುತ್ತದೆ. ಜೊತೆಗೆ ಬ್ಯಾಂಕ್ ಮತ್ತು ಬಾಂಡ್ ಠೇವಣಿಗಳಿಗೆ ಸಿಗುವ ಬಡ್ಡಿಹಣ, ಲಾಟರಿ ಮತ್ತು ಕುದುರೆ ಸ್ಪರ್ಧೆಗಳಲ್ಲಿ ಗೆಲ್ಲುವ ಹಣ ಇತ್ಯಾದಿಗಳಿಗೆ ಟಿಡಿಎಸ್ ತೆರಿಗೆ ಕಟ್ಟಬೇಕಾಗುತ್ತದೆ. ಜೂಜಾಟದಲ್ಲಿ ಗೆದ್ದ ಬಹುಮಾನದ ಮೇಲೆ ಶೇ. 30 ರಷ್ಟು ಟಿಡಿಎಸ್ ಕಡಿತವಾಗುತ್ತದೆ.

ಟಿಡಿಎಸ್ ಕಡಿತವಾಗುವ ವಿಧಗಳು

ಟಿಡಿಎಸ್ ಕಡಿತವಾಗುವ ವಿಧಗಳು

ಈ ಕೆಳಗಿನ ವಿವಧ ಬಗೆಯ ಪಾವತಿಗಳ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
- ವೇತನಗಳು
- ಬ್ಯಾಂಕುಗಳ ಬಡ್ಡಿ ಪಾವತಿ
- ಕಮಿಷನ್ ಪೇಮೆಂಟ್
- ಬಾಡಿಗೆ ಪಾವತಿ
- ಸಮಾಲೋಚನೆ ಶುಲ್ಕಗಳು(Consultation fees)
- ವೃತ್ತಿಪರ ಶುಲ್ಕ  ಭಾರತದಲ್ಲಿ ಟಿಡಿಎಸ್ (TDS) ಇಲ್ಲದಿರುವ ಹೂಡಿಕೆಗಳು ಯಾವುವು ಗೊತ್ತೆ?

ಅರ್ಜಿ 16, 16A

ಅರ್ಜಿ 16, 16A

ಸಂಬಳದಾರರು:
ಅರ್ಜಿ 16 ಅರ್ಜಿ ಮೂಲಕ ಸಂಬಳದಾರರ ತೆರಿಗೆ ಪಾವತಿ ಹಾಗೂ ಕಡಿತದ ಸಂಪೂರ್ಣ ಮಾಹಿತಿ ಸಿಗಲಿದೆ.
ಸಂಬಳದಾರರಲ್ಲದವರು:
ಅರ್ಜಿ 16 A ಇದು ಕೂಡಾ ಪ್ರತ್ಯೇಕವಾಗಿ ಪ್ರತಿ ತೆರಿಗೆ ಕಡಿತ ಹಾಗೂ ಪಾವತಿ ವಿವರಗಳನ್ನು ಹೊಂದಿರುತ್ತದೆ. ಪ್ರತ್ಯೇಕ ವಿಭಾಗಕ್ಕೆ ಪ್ರತ್ಯೇಕವಾಗಿ ಅರ್ಜಿ ತುಂಬಬೇಕಾಗುತ್ತದೆ.

ಟಿಡಿಎಸ್ ಹೇಗೆ ಲೆಕ್ಕ ಹಾಕಲಾಗುತ್ತದೆ?

ಟಿಡಿಎಸ್ ಹೇಗೆ ಲೆಕ್ಕ ಹಾಕಲಾಗುತ್ತದೆ?

ಒಂದು ಹಣಕಾಸು ವರ್ಷದಲ್ಲಿ, ಒಟ್ಟು ಆದಾಯದಲ್ಲಿ ನೀವು ಮಾಡಲು ಉದ್ದೇಶಿಸಿರುವ ತೆರಿಗೆ ಉಳಿತಾಯ ವೆಚ್ಚಗಳನ್ನು ಕಳೆದು ಅಂದಾಜು ತೆರಿಗೆಗೆ ಅರ್ಹ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ. ತೆರಿಗೆ ಉಳಿತಾಯವನ್ನು ಮಾಡುವ ಯಾವುದೇ ಉದ್ದೇಶಿತ ಹೂಡಿಕೆ ಘೋಷಿಸದಿದ್ದರೆ ಪೂರ್ಣ ವೇತನದ ಮೇಲೆ ಮೂಲದಲ್ಲಿಯೇ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

ಟಿಡಿಎಸ್ ಮರು ಪಾವತಿ?

ಟಿಡಿಎಸ್ ಮರು ಪಾವತಿ?

ಟಿಡಿಎಸ್ ಮರುಪಾವತಿ ಸಾಧ್ಯವಿದೆ. ಕೆಲವು ಸಂದರ್ಭದಲ್ಲಿ ಮೂಲ ತೆರಿಗೆಗಿಂತ ಹೆಚ್ಚಿನ ಟಿಡಿಎಸ್ ಕಡಿತವಾಗಿದ್ದರೆ ನೀವು ರೀಫಂಡ್ ಗೆ ಬೇಡಿಕೆ ಇಡಬಹುದು. ಆದರೆ ಸಂಬಂಧಿತ ಪುರಾವೆ/ದಾಖಲಾತಿಗಳನ್ನು ಉದ್ಯೋಗದಾತರಿಗೆ ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಒದಗಿಸಿದ ನಂತರ ಲೆಕ್ಕಪತ್ರ ವಿಭಾಗವು ಅವುಗಳ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕ ಹಾಕಿ, ನಿಮ್ಮ ವೇತನದಿಂದ ಹೆಚ್ಚುವರಿ ತೆರಿಗೆ ಕಡಿತ ಆಗುವುದಿಲ್ಲ.

ಬಡ್ಡಿದರ, ಟಿಡಿಎಸ್ ಪಾವತಿ

ಬಡ್ಡಿದರ, ಟಿಡಿಎಸ್ ಪಾವತಿ

ಬ್ಯಾಂಕಿಂಗ್ ಸಂಸ್ಥೆ, ಕೋ ಆಪರೇಟಿವ್ ಸೊಸೈಟಿ, ಪೈನಾನ್ಸಿಂಗ್ ಅಥವಾ ವಸತಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಬಡ್ಡಿ ದರ ಮಿತಿ ರೂ. 10,000ವರೆಗೆ ಇದ್ದು, ಟಿಡಿಎಸ್ ಶೇ. 10 ರಷ್ಟು ಪಾವತಿ ಮಾಡಬೇಕಾಗುತ್ತದೆ. ತೆರಿಗೆ ಉಳಿತಾಯದ ಲಾಭ ಪಡೆಯ ಬಯಸುವವರು ಅಗತ್ಯ ದಾಖಲೆಗಳನ್ನು ಉದ್ಯೋಗದಾತರಿಗೆ ಸಲ್ಲಿಸಬೇಕು.

ಸಿಬಿಡಿಟಿ ನಿರ್ವಹಣೆ

ಸಿಬಿಡಿಟಿ ನಿರ್ವಹಣೆ

ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಕೇಂದ್ರ ಹಣಕಾಸು ಸಚಿವಾಲಯದ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ನಿರ್ವಹಣೆ ಮಾಡುತ್ತದೆ. ಸಿಬಿಡಿಟಿ ಆದಾಯ ತೆರಿಗೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಗಳ ಲೆಕ್ಕಪತ್ರ ವಿಭಾಗವು ಉದ್ಯೋಗಿಯ ಅಂದಾಜು ತೆರಿಗೆಯನ್ನು ವೇತನದ ಆಧಾರದಲ್ಲಿ ಲೆಕ್ಕ ಹಾಕಲು ನೆರವಾಗುತ್ತದೆ.

Read more about: tds income tax money finance news
English summary

What is Tax Deducted at Source (TDS)? How is TDS calculated?

TDS stands for tax deducted at source. As per the Income Tax Act, any company or person making a payment is required to deduct tax at source if the payment exceeds certain threshold limits.
Story first published: Friday, August 3, 2018, 10:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X