ಆಯುಷ್ಮಾನ್ ಭಾರತ್ ಯೋಜನೆಯ ಆಯುಷ್ಮಾನ್ ಮಿತ್ರದಡಿ ದೇಶದ ಸುಮಾರು ಹತ್ತು ಲಕ್ಷ ಯುವಕರಿಗೆ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಿದೆ. ಇದನ್ನು ಆಯುಷ್ಮಾನ್ ಮಿತ್ರ ಎಂದು ಕರೆಯಲಾಗುತ್ತದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ಅತಿದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಆಗಸ್ಟ್ ೧೫ ರಂದು ಘೋಷಿಸಿದ್ದು, ಪಂಡಿತ ದೀನದಯಾಳ ಉಪಾದ್ಯಾಯ ಅವರ ಜನ್ಮದಿನದಿಂದ ಕಾರ್ಯರೂಪಕ್ಕೆ ಬಂದಿದೆ. ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಮಂತ್ರ ಜನ ಆರೋಗ್ಯ ಯೋಜನೆ ಅಥವಾ ಮೋದಿ ಕೇರ್ ಅಂತಲೂ ಕರೆಯಲಾಗುತ್ತದೆ.
ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ (ಎಬಿ-ಎನ್ಎಚ್ ಪಿಎಂ) ಭಾಗವಾಗಿರುವ ಆಯುಷ್ಮಾನ್ ಭಾರತ್ ಯೋಜನೆಯು 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಒಂದು ಕುಟುಂಬಕ್ಕೆ ವಾರ್ಷಿಕವಾಗಿ ರೂ. 5 ಲಕ್ಷದವರೆಗೆ ಆರೋಗ್ಯ ವಿಮೆ ಕಲ್ಪಿಸಲಾಗುತ್ತದೆ. ಪ್ರಸ್ತುತ ಯೋಜನೆಗೆ ನೋಂದಾಯಿಸಿಕೊಂಡಿರುವ ರಾಜ್ಯಗಳ ಆರೋಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಫಲಾನುಭವಿಗಳು ಕೂಡ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆಗೆ (CMEGP) ನೋಂದಣಿ, ಅರ್ಜಿ ಸಲ್ಲಿಸುವುದು ಹೇಗೆ?
ಆಯುಷ್ಮಾನ್ ಮಿತ್ರದಡಿ 10 ಲಕ್ಷ ಉದ್ಯೋಗ
ಆಯುಷ್ಮಾನ್ ಭಾರತ್ ಯೋಜನೆಯ ಆಯುಷ್ಮಾನ್ ಮಿತ್ರದಡಿ ದೇಶದ ಸುಮಾರು ಹತ್ತು ಲಕ್ಷ ಯುವಕರಿಗೆ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಿದೆ. ಇದನ್ನು ಆಯುಷ್ಮಾನ್ ಮಿತ್ರ ಎಂದು ಕರೆಯಲಾಗುತ್ತದೆ. ಸರ್ಕಾರ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿದ್ದು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯುಷ್ಮಾನ್ ಮಿತ್ರ ಅರ್ಹತೆ?
- ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಶೈಕ್ಷಣಿಕ ಅರ್ಹತೆ: 10+2/12th
- ವಯಸ್ಸಿನ ಮಿತಿ: 18 - 40 ವರ್ಷ
- ಮಹಿಳೆ/ಮಾನ್ಯತೆ ಇರುವ ಸಾಮಾಜಿಕ ಆರೋಗ್ಯ ಕಾರ್ಯಕರ್ತರು/ಆರೋಗ್ಯ ಆರೈಕೆಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ
- ಬೇಸಿಕ್ ಕಂಪ್ಯೂಟರ್/ಇಂಟರ್ನೆಟ್ ಜ್ಞಾನ, ಅನುಭವ
- ಪ್ರಾದೇಶಿಕ ಭಾಷೆ ಅಥವಾ ಹಿಂದಿ, ಇಂಗ್ಲಿಷ ಭಾಷೆ ಬಲ್ಲವರಾಗಿರಬೇಕು.
ಆಯುಷ್ಮಾನ್ ಮಿತ್ರ ತರಬೇತಿ
- ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ತರಬೇತಯನ್ನು ನೀಡಲಾಗುವುದು.
- ಆಸಕ್ತ ಅಭ್ಯರ್ಥಿಗಳು ಆಯುಷ್ಮಾನ್ ಮಿತ್ರಕ್ಕೆ ಬರುವ ಮುನ್ನವೇ ತರಬೇತಿ ಪಡೆಯಬಹುದು.
- ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆಯು ಹಲವಾರು ಕೋರ್ಸ್ ಗಳನ್ನು ಹೊಂದಿದೆ.
- ಈಗಾಗಲೇ ತರಬೇತಿ ಪಡೆದಿರುವ ಅನುಭವವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
- ತರಬೇತಿ ಪೂರ್ಣಗೊಂಡ ನಂತರ ಪ್ರಮಾಣಪತ್ರ ನೀಡಲಾಗುವುದು.
ಆಯುಷ್ಮಾನ್ ಮಿತ್ರ ಸಂಬಳ
- ಸರ್ಕಾರ ಯಾವುದೇ ಅಧಿಕೃತ ಮೊತ್ತವನ್ನು ಉಲ್ಲೇಖಿಸದಿದ್ದರೂ, ತಿಂಗಳಿಗೆ ರೂ. 15 ಸಾವಿರದವರೆಗೆ ಸಂಬಳ ನೀಡುವ ಸಾದ್ಯತೆ ಇದೆ.
- ಸಂಬಳದ ಹೊರತಾಗಿ ಒಬ್ಬ ರೋಗಿಯ ಮೇಲೆ ರೂ. ೫೦ ಪ್ರೋತ್ಸಾಹ ಧನ ಸಿಗುತ್ತದೆ.
ಆಯುಷ್ಮಾನ್ ಮಿತ್ರ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್ಸೈಟ್ https://www.abnhpm.gov.in/work-with-nha ಅಥವಾ www.abnhpm.gov.in ಗೆ ಬೇಟಿ ನೀಡಿ.
- ಆಯುಷ್ಮಾನ್ ಮಿತ್ರ ನೇಮಕಾತಿ (ayushman mitra recruitment) ಮೇಲೆ ಕ್ಲಿಕ್ ಮಾಡಿ. () ಉಲ್ಲೇಖಿಸಲಾಗಿರುವ ಸೂಚನೆಗಳನ್ನು ಅನುಸರಿಸಿ.
- ಅರ್ಜಿಯನ್ನು ತುಂಬಿ
- ಅರ್ಜಿಯನ್ನು ಸಬ್ಮಿಟ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ
ಆಯಷ್ಮಾನ್ ಭಾರತ್ ಸೌಲಭ್ಯ ಯಾರಿಗೆ ಸಿಗಲಿದೆ?
ಜಾತಿ ಗಣತಿ/ಪಡಿತರ ಚೀಟಿ ಮಾನದಂಡದ ಆಧಾರದ ಮೇಲೆ ವಿಮೆ ಸಗಲಿದೆ.
- ಪ.ಜಾತಿ/ಪ.ಪಂಗಡ ಬುಡಕಟ್ಟು ಸಮುದಾಯದವರು
- ನಿರ್ವಸಿತರು (ವಸತಿ ಸೌಲಭ್ಯ ಇಲ್ಲದವರು)
- ಒಂದು ಕೊಠಡಿಯಲ್ಲಿ ವಾಸಿಸುವ ಕುಟುಂಬಗಳು
- ಕೂಲಿ ಕಾರ್ಮಿಕರು, ಜೀತ ವಿಮುಕ್ತರು
- ರದ್ದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು - ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರು
- ಟೈಲರ್, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾವಾಲಾಗಳು
- ಎಲೆಕ್ಟ್ರಿಷಿಯನ್, ಮೆಕಾನಿಕ್, ಸಹಾಯಕರು


Click it and Unblock the Notifications