For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಬಜೆಟ್ 2019: ಎಚ್.ಡಿ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

ಒಂದೇಡೆ ಲೋಕಸಭಾ ಚುನಾವಣಾ ಪೂರ್ವದ ಬಜೆಟ್ ಎಂಬ ಕಾರಣಕ್ಕೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರೆ ಇನ್ನೊಂದೆಡೆ ಸರ್ಕಾರದ ಉಳಿಯುತ್ತಾ ಅಥವಾ ಬೀಳುತ್ತಾ, ಬಜೆಟ್ ಮಂಡನೆ ಯಶಶ್ವಿಯಾಗಿ ನಡೆಯುತ್ತಾ ಇತ್ಯಾದಿ ಪ್ರಶ್ನೆಗಳು ಕಾಡುತ್ತಿದ್ದವು!

|

ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರದ ಎರಡನೇ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಮಂಡಿಸಿದ್ದಾರೆ. ಲೋಕಸಭಾ ಚುನಾವಣಾ ಪೂರ್ವದ ಬಜೆಟ್ ಎಂಬ ಕಾರಣಕ್ಕೆ ಭಾರೀ ನಿರೀಕ್ಷೆಯೊಂದಿಗೆ ಹಾಗು ಮೈತ್ರಿ ಸರ್ಕಾರ ಉಳಿಯುತ್ತಾ ಅಥವಾ ಬೀಳುತ್ತಾ, ಬಜೆಟ್ ಮಂಡನೆ ಯಶಶ್ವಿಯಾಗಿ ನಡೆಯುತ್ತಾ ಇತ್ಯಾದಿ ಪ್ರಶ್ನೆಗಳ ನಡುವೆಯೇ ಬಜೆಟ್ ಮಂಡನೆ ಮುಗಿದಿದೆ.

 

ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಿರುವ ಎಚ್. ಡಿ ಕುಮಾರಸ್ವಾಮಿಯವರು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದು, ಯಾವ ಯಾವ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ನೋಡೋಣ ಬನ್ನಿ..

ಮೈತ್ರಿ ಸರ್ಕಾರದ ಹೆಗ್ಗಳಿಕೆ

ಮೈತ್ರಿ ಸರ್ಕಾರದ ಹೆಗ್ಗಳಿಕೆ

ಹಲವು ಗೊಂದಲಗಳ ಮಧ್ಯೆ ೨೦೧೯-೨೦ನೆ ಸಾಲಿ ಬಜೆಟ್ ಅನ್ನು ಮಂಡಿಸುತ್ತಿರುವ ಕುಮಾರಸ್ವಾಮಿಯವರು, ಹಲವು ಜನಪರ ಯೋಜನೆಗಳನ್ನು ನೀಡಿದ ಹೆಗ್ಗಳಿಕೆ ನಮ್ಮ ಸರ್ಕಾರಕ್ಕೆ ಇದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ ಎಂದರು.

ಉದ್ಯೋಗ ಸೃಷ್ಟಿ

ಉದ್ಯೋಗ ಸೃಷ್ಟಿ

ಕರ್ನಾಟಕ ರಾಜ್ಯದ ಅಬಿವೃದ್ಧಿಗೆ ಬಗ್ಗೆ ಮೈತ್ರಿ ಸರ್ಕಾರದ ಗುರಿ ಸ್ಪಷ್ಟವಾಗಿದೆ. ಉದ್ಯೋಗ ಸೃಷ್ಟಿ, ನಗರಾಭಿವೃದ್ಧಿ ಹಾಗು ಗ್ರಾಮೀಣಾಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದಾರೆ. ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು.

ಕೊಡಗಿನ ನಿರಾಶ್ರೀತರಿಗೆ ಕೊಡುಗೆ

ಕೊಡಗಿನ ನಿರಾಶ್ರೀತರಿಗೆ ಕೊಡುಗೆ

ಕೊಡಗು ಜಿಲ್ಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರೀತರಿಗೆ ಮನೆ ಕಟ್ಟಿಸಿಕೊಟ್ಟಿದ್ದೇವೆ. ಅತಿವೃಷ್ಟಿಯಿಂದ ತೀವ್ರ ಹಾನಿಯಾದವರಿಗೆ ಶಾಸ್ವತ ನೈಸರ್ಗಿಕ ವಿಕೋಪ ತಡೆಗೆ ಆದ್ಯತೆ ನಿಡಲಾಗುವುದು.

ಬರ ಪರಿಹಾರಕ್ಕಾಗಿ ಮೀಸಲು
 

ಬರ ಪರಿಹಾರಕ್ಕಾಗಿ ಮೀಸಲು

ರಾಜ್ಯ ಕಳೆದ 14 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದು, ಬರ ಪರಿಹಾರಕ್ಕಾಗಿ 2.5 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ರಾಜ್ಯದ 156 ತಾಲೂಕುಗಳು ಬರದಿಂದ ತತ್ತರಿಸಿದ್ದು, ಪ್ರಾದೇಶಿಕ ಭೇಧಭಾವವಿಲ್ಲದೆ ಅಭಿವೃದ್ಧಿ ಪಥವನ್ನು ನಿಖರವಾಗಿ ಗುರುತಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಬರ ಪರಿಹಾರ ಕಾರ್ಯಕ್ಕಾಗಿ ಜಿ.ಪಂ. ಗೆ ೩೦೦ ಕೋಟಿ ಹನ ನೀಡಲಾಗಿದೆ.

ರೈತರ ಸಾಲಮನ್ನಾ

ರೈತರ ಸಾಲಮನ್ನಾ

ರೈತರ ಸಾಲಮನ್ನಾ ಸರ್ಕಾರದ ಹೆಗ್ಗಳಿಕೆಯಾಗಿದ್ದು, ತೆರಿಗೆದಾರರ ಹಣ ಪೋಲಾಗದಂತೆ ರೈತರ ಸಾಲಮನ್ನಾ ಮಾಡಲಾಗಿದೆ ಎಂದರು. ರೈತರ ಸುಮಾರು ೧೨ ಲಕ್ಷ ಖಾತೆಗಳಿಗೆ 5,400 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

ಇಸ್ರೇಲ್ ಮಾದರಿ ಕೃಷಿ

ಇಸ್ರೇಲ್ ಮಾದರಿ ಕೃಷಿ

ಕಳೆದ ಬಜೆಟ್ ನಲ್ಲಿ ಮಂಡಿಸಿರುವಂತೆ ಇಸ್ರೇಲ್ ಮಾದರಿಯ ತಂತ್ರಜ್ಞಾನ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಇದಕ್ಕಾಗಿ ರೈತರ ಜೊತೆಗೆ ಸಭೆ ನಡೆಸಿ ನಂತರ ಅನುಷ್ಠಾನ ಮಾಡಲಾಗುವುದು ಎಂದರು. ಮಳೆ ಆಶ್ರಯ ಇರದ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಅಳವಡಿಕೆಗೆ ಆಧ್ಯತೆ.

ಶಿಕ್ಷಣ ಅಭಿವೃದ್ಧಿಗೆ 1200 ಕೋಟಿ

ಶಿಕ್ಷಣ ಅಭಿವೃದ್ಧಿಗೆ 1200 ಕೋಟಿ

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಲು ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ಶಾಲೆಗಲ ಅಭಿವೃದ್ಧಿಗಾಗಿ 1200 ಕೋಟಿ ಮೀಸಲು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. 176 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ. 3,389 ಪ್ರಾಥಮಿಕ ಶಿಕ್ಷಕರ ನೇಮಕ.

ಒಳಚರಂಡಿ, ನೀರು ಸರಬರಾಜು

ಒಳಚರಂಡಿ, ನೀರು ಸರಬರಾಜು

415 ಕೋಟಿ ಖರ್ಚಿನಲ್ಲಿ ಒಳಚರಂಡಿ ವ್ಯವಸ್ಥೆಗೆ ಹಾಗು ನೀರು ಸರಬರಾಜು ಯೋಜನೆ ಹಾಗು ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು.

10 ಕೋಟಿ ಉದ್ಯೋಗ ಸೃಷ್ಟಿ

10 ಕೋಟಿ ಉದ್ಯೋಗ ಸೃಷ್ಟಿ

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಕಾ್ರ 10 ಕೋಟಿ ಉದ್ಯೋಗ ಸೃಷ್ಟಿ ಮಾಡಲಿದೆ.

ಆಯುಷ್ಮಾನ್ ಭವ

ಆಯುಷ್ಮಾನ್ ಭವ

ಆಯುಷ್ಮಾನ್ ಭವ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ 1614 ಪ್ರೊಸಿಜರ್ ಗಳಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಕರ್ನಾಟಕ ಯೋಜನೆಯನ್ನು ಆಯುಷ್ಮಾನ್ ಜೊತೆ ವಿಲೀನಗೊಳಿಸಲಾಗಿದೆ. ಎಪಿಎಲ್ ಕುಟುಂಬಗಳಿಗೂ ಆರೋಗ್ಯ ಭಾಗ್ಯ ನೀಡಲಾಗುತ್ತಿದ್ದು, ಕರ್ನಾಟಕ ಬಯಲು ಶೌಚಮುಕ್ತ ರಾಜ್ಯವಾಗಿದೆ.

ಕೃಷಿ ಭಾಗ್ಯ

ಕೃಷಿ ಭಾಗ್ಯ

ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿ ಒಣ ಬೂಮಿಯಲ್ಲಿ ಕೃಷಿ ಹೊಂಡಗಳನ್ನು ಸ್ಥಾಪಿಸಲು ರೂ.250 ಕೋಟಿ ಅನುದಾನ ನೀಡಲಾಗುವುದು. ಜೊತೆಗೆ ಸಾವಯವ ಕೃಷಿ ಉತ್ತೇಜನಕ್ಕೆ ರೂ. ೩೫ ಕೋಟಿ ಮೀಸಲಿಡಲಾಗುವುದು.

ಮಾತೃಶ್ರೀ, ಸಂಧ್ಯಾ ಯೋಜನೆ

ಮಾತೃಶ್ರೀ, ಸಂಧ್ಯಾ ಯೋಜನೆ

ಮಾತೃಶ್ರೀ ಯೋಜನೆ ಮೂಲಕ ಗರ್ಭಿಣಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂಪಾಯಿ ನೀಡಲಾಗುವುದು. ಸಂಧ್ಯಾ ಸುರಕ್ಷಾ ಪಿಂಚಣಿಯನ್ನು ರೂ. 600 ರಿಂದ 1000 ರೂಪಾಯಿಗೆ ಏರಿಕೆ ಮಾಡಲಾಗುವುದು.

ಬರಪೀಡಿತರಿಗೆ ಪ್ರೋತ್ಸಾಹ ಧನ

ಬರಪೀಡಿತರಿಗೆ ಪ್ರೋತ್ಸಾಹ ಧನ

ಇಸ್ರೇಲ್ ಮಾದರಿಯ ಕಿರು ನೀರಾವರಿ ಯೋಜನೆಗೆ ರೂ. ೧೪೫ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಬರಪೀಡಿತ ಪ್ರತಿ ಹೆಕ್ಟೇರ್ ಗೆ ರೂ. ೭೫೦೦ ಪ್ರೋತ್ಸಾಹ ಧನ ನೀಡಲಾಗುವುದು.ಜೊತೆಗೆ ಕರಾವಳಿ ಭಾಗದ ರೈತರಿಗೂ ಪ್ರೋತ್ಸಾಹ ಧನ ನೀಡಲಾಗುವುದು. ಸಿರಿಧಾನ್ಯ ಬೆಳೆಯುವ ರೈತರಿಗೂ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ.

ಎತ್ತಿನ ಹೊಳೆ ಯೋಜನೆ

ಎತ್ತಿನ ಹೊಳೆ ಯೋಜನೆ

ಎತ್ತಿನ ಹೊಳೆ ಯೋಜನೆ ಮುಖಾಂತರ ತುಮಕೂರು, ಕೋಲಾರ, ಚಿಕ್ಕಬಳ್ಲಾಪುರ ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ.

ತೋಟಗಾರಿಕೆಗೆ 150 ಕೋಟಿ ಪ್ಯಾಕೇಜ್

ತೋಟಗಾರಿಕೆಗೆ 150 ಕೋಟಿ ಪ್ಯಾಕೇಜ್

ಕೃಷಿ ತೋಟಗಾರಿಕೆ, ರೇಷ್ಮೆ, ದಾಳಿಂಬೆ, ದ್ರಾಕ್ಷಿ ಬೆಳೆಯುವ ರೈತರಿಗೆ ರೂ. 150 ಕೋಟಿ ಮೀಸಲು. ಹೊಸ ಬೆಳೆ ವಿಮೆ ಯೋಜನೆಗೆ ನಿರ್ಧರಿಸಲಾಗಿದೆ. ತೋಟಗಾರಿಕೆಗೆ 150 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್. ಧಾರವಾಡದಲ್ಲಿ ಮಾವು ಉತ್ಪಾದನಾ ಘಟಕ ಹಾಗು ಕೋಲಾರದಲ್ಲಿ ಟೊಮ್ಯಾಟೋ ಉತ್ಪಾದನಾ ಘಟಕ ನಿರ್ಮಿಸಲಾಗುವುದು.

ಹಾಲಿನ ಪ್ರೋತ್ಸಾಹ ಧನ, ಕ್ಷೇಮಾಭಿವೃದ್ಧಿಗೆ 2500 ಕೋಟಿ

ಹಾಲಿನ ಪ್ರೋತ್ಸಾಹ ಧನ, ಕ್ಷೇಮಾಭಿವೃದ್ಧಿಗೆ 2500 ಕೋಟಿ

ಹಾಲಿನ ಪ್ರೋತ್ಸಾಹ ಧನ ರೂ. 1 ಹೆಚ್ಚಳ. ಈಗಾಗಲೆ ೫ ರೂಪಾಯಿ ನೀಡಲಾಗುತ್ತಿದೆ. ಒಟ್ಟು ಹಾಲು ಉತ್ಪಾದನಾ ಪ್ರೋತ್ಸಾಹ ಧನ 6 ಆಗುತ್ತದೆ. ಜೊತೆಗೆ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ 2500 ಕೋಟಿ ಮೀಸಲು.

ರೇಷ್ಮೆ ಮಾರುಕಟ್ಟೆಗೆ 10 ಕೋಟಿ

ರೇಷ್ಮೆ ಮಾರುಕಟ್ಟೆಗೆ 10 ಕೋಟಿ

ಸರ್ಕಾರ ರೇಷ್ಮೆ ಮಾರುಕಟ್ಟೆಯ ಬಲವರ್ಧನೆಗಾಗಿ ರೂ. 10 ಕೋಟಿ ರೂಪಾಯಿ ಮೀಸಲಿಟ್ಟಿದೆ. ರೇಷ್ಮೆ ಕಾರ್ಮಿಕರ ಹೊಸ ತಾಂತ್ರಿಕತೆ ಹೆಚಚ್ಲಕ್ಕೆ ಆಧ್ಯತೆ ನಿಡಲಾಗುವುದು.

ಗೃಹಲಕ್ಷ್ಮೀ ಬೆಳೆ ಸಾಲ

ಗೃಹಲಕ್ಷ್ಮೀ ಬೆಳೆ ಸಾಲ

ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿ ಮಾಡಲಾಗುವುದು. ಆಭರಣಗಳ ಮೇಲೆ ಬೆಳೆ ಸಾಲ ನೀಡಲಾಗುವುದು. ರೈತ ಮಹಿಳೆಯರ ಚಿನ್ನದ ಮೇಲೆ ಶೇ. 3ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುವುದು. 500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂಪಾಯಿ ಅನುದಾನ ಮೀಸಲು.

ಬೆಂಬಲ ಬೆಲೆ 60 ಕೋಟಿ ಮೀಸಲು

ಬೆಂಬಲ ಬೆಲೆ 60 ಕೋಟಿ ಮೀಸಲು

ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ ಬೆಂಬಲ ಬೆಲೆ 50 ಕೋಟಿ ಹಾಗು ಪ್ರಮುಖ 6 ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ರೂ. 10 ಕೋಟಿ ಅನುದಾನ ಮೀಸಲು.

ಮೀನುಗಾರರಿಗೆ ಬಂಪರ್

ಮೀನುಗಾರರಿಗೆ ಬಂಪರ್

ಮೀನುಗಾರರ ಪ್ರೋತ್ಸಾಹಕ್ಕಾಗಿ ಮೀನುಗಾರಿಕೆ ಮಾಡುವವರ ದೋಣಿಗಳಿಗೆ ಶೇ. 50ರಷ್ಟು ಸಹಾಯಧನ ನೀಡಲಾಗುವುದು. ಸಿಗಡಿ ಮೀನು ಕೃಷಿ ಪ್ರೋತ್ಸಾಹಕ್ಕೆ ಶೇ. 50ರಷ್ಟು ಅನುದಾನ ನೀಡಲಾಗುವುದು.

ರೈತರ ಸಾಲ ಪರಿಹಾರ ಆಯೋಗ ಸ್ಥಾಪನೆ

ರೈತರ ಸಾಲ ಪರಿಹಾರ ಆಯೋಗ ಸ್ಥಾಪನೆ

ಕುಮಾರಸ್ವಾಮಿಯವರು ರೈತರಿಗೆ ಹೆಚ್ಚಿನ ಒತ್ತು ನಿಡಿದ್ದು, ಕೇರಳ ಸರ್ಕಾರದ ಮಾದರಿಯಲ್ಲಿ ರೈತರ ಸಾಲ ಪರಿಹಾರ ಆಯೋಗ ಸ್ಥಾಪನೆ ಮಾಡಲಾಗುವುದು. ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ 8 ತಿಂಗಳವರೆಗೆ ಉಚಿತ ಉಗ್ರಾಣ ವ್ಯವಸ್ಥೆ ಕಲ್ಪಿಸಲಾಗುವುದು.

ಕೆರೆಗಳ ಸಮಗ್ರ ಅಭಿವೃದ್ಧಿ

ಕೆರೆಗಳ ಸಮಗ್ರ ಅಭಿವೃದ್ಧಿ

ಕೆರೆಗಳ ಸಮಗ್ರ ಅಭಿವೃದ್ಧಿಗೆ ರೂ. 449 ಕೋಟಿ ಮೀಸಲು. ೪೦ ಕೋಟಿ ವೆಚ್ಚದಲ್ಲಿ ಮುಂಡಗೋಡಿನಲ್ಲಿ ಕೆರೆಗಳ ಭರ್ತಿ.

ನೀರಾವರಿ ಯೋಜನೆಗೆ ೧೫೬೩ ಕೋಟಿ ಮೀಸಲು

ನೀರಾವರಿ ಯೋಜನೆಗೆ ೧೫೬೩ ಕೋಟಿ ಮೀಸಲು

ರಾಜ್ಯದಲ್ಲಿ ನಿರಾವರಿ ಯೊಜನೆಗಾಗಿ ರೂ. ೧೫೬೩ ಕೋಟಿ ಮೀಸಲು. ಬಾದಾಮಿಯಲ್ಲಿ ೩೦೦ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ. ಕೆರೆ ತುಮಬಿಸುವ ಯೋಜನೆಗೆ ೧೬೦೦ ಕೋಟಿ ಮೀಸಲು.

ಪಶು ಚಿಕಿತ್ಸೆ ಕೇಂದ್ರ, ನಾಟಿ ಕೋಳಿ ಸಾಕಾಣಿಕೆಗೆ ಏನು?

ಪಶು ಚಿಕಿತ್ಸೆ ಕೇಂದ್ರ, ನಾಟಿ ಕೋಳಿ ಸಾಕಾಣಿಕೆಗೆ ಏನು?

15 ಜಿಲ್ಲೆಗಳಿಗೆ ಸುಸಜ್ಜಿತ ಪಶು ಚಿಕಿತ್ಸೆ ಕೇಂದ್ರ ಸ್ಥಾಪನೆ. ನಾಟಿ ಕೋಳಿ ಸಾಕಾಣಿಕೆಗೆ ರು. 5 ಕೋಟಿ ಮೀಸಲು. ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ. ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ಕಲಬುರಗಿಯಲ್ಲಿ ಭಾಷಾ ಕೌಶಲ್ಯ ಕೇಂದ್ರಗಲ ಸ್ಥಾಪನೆ. ಅಡಮಾನ ಸಾಲದ ಮೇಲೆ ಬಡ್ಡಿ ಸಹಾಯಧನ.

ಕ್ರೈಸ್ತ ಸಮುದಾಯಕ್ಕೆ ಬಂಪರ್

ಕ್ರೈಸ್ತ ಸಮುದಾಯಕ್ಕೆ ಬಂಪರ್

ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರೂ. 200 ಕೋಟಿ ಮಿಸಲು ಇಡಲಾಗಿದೆ. ಆಟೋ, ಟ್ಯಾಕ್ಸಿ ಚಾಲಕರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುವದು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ರೂ. 50 ಕೋಟಿ ಅನುದಾನ. ವಿಜಯಪುರದಲ್ಲಿ ಆಸ್ಪತ್ರೆಗೆಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ರೂ. 40 ಕೋಟಿ.

ಅನ್ನ ಭಾಗ್ಯ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರು

ಅನ್ನ ಭಾಗ್ಯ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರು

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ರೂ. 500 ಹೆಚ್ಚಳ ಮಾಡಲಾಗುವುದು. ಅನ್ನ ಭಾಗ್ಯ ಯೋಜನೆಗೆ 3700 ಕೋಟಿ ಮೀಸಲು. ಈ ಯೋಜನೆ ಸೋರಿಕೆ ಪತ್ತೆಗಾಗಿ ವಿಚಕ್ಷಣ ದಳ ಘೋಷಣೆ ಮಾಡಲಾಗಿದೆ..

ಆರೋಗ್ಯಭಾಗ್ಯ ಯೋಜನೆ

ಆರೋಗ್ಯಭಾಗ್ಯ ಯೋಜನೆ

ಆರೋಗ್ಯಭಾಗ್ಯ ಯೋಜನೆ ಮೂಲಕ ಕಾರ್ಮಿಕರಿಗೆ 1 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಕೆಲಸದ ವೇಳೆ ಮೃತಪಟ್ಟರೆ ರೂ. 2 ಲಕ್ಷ . ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ರೂ. 2,500 ಸಹಾಯಧನ ಕಲ್ಪಿಸಲಾಗುವುದು.

ಸಾಲ ಮನ್ನಾಕ್ಕಾಗಿ ೧೨,೬೫೦ ಕೋಟಿ

ಸಾಲ ಮನ್ನಾಕ್ಕಾಗಿ ೧೨,೬೫೦ ಕೋಟಿ

ರೈತರ ಸಾಲ ಮನ್ನಾಕ್ಕೆ ಸಹಕಾರಿ ಬ್ಯಾಂಕುಗಳಿಗೆ ರೂ. 6150 ಕೋಟಿ ಹಾಗು ವಾಣಿಜ್ಯ ಬ್ಯಾಂಕುಗಳಿಗೆ ರೂ. 6500 ಕೋಟಿ ಮೀಸಲು. ಜೂನ್ ಒಳಗೆ ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮಕಯಗೊಳ್ಲಲಾಗುವುದು. ಸಾಲ ಮನ್ನಾಕ್ಕಾಗಿ ಒಟ್ಟು ರೂ. ೧೨,೬೫೦ ಕೋಟಿ ಮೀಸಲು.

4 ಹೊಸ ತಾಲೂಕು ಘೋಷಣೆ

4 ಹೊಸ ತಾಲೂಕು ಘೋಷಣೆ

ಹಾರೋಹಳ್ಳಿ
ಕಳಸ
ಚೇಳೂರು
ತೇರದಾಳ

ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟೂರಿಗೆ ಕಾಣಿಕೆ

ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟೂರಿಗೆ ಕಾಣಿಕೆ

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಾಣಂದೂರಿನ ಅಭಿವೃದ್ಧಿಗೆ ರೂ. 25 ಕೋಟಿ. ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟೂರು ವಿರಾಪುರದಲ್ಲಿ ಪಾರಂಪರಿಕ ಕೇಂದ್ರ ಸ್ಥಾಪನೆ ಮಾಡಲಾಗುವುದು. ಹಾಸನ ಜಿಲ್ಲೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ.
ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು.

ಬೆಂಗಳೂರಿಗೆ ಏನು?

ಬೆಂಗಳೂರಿಗೆ ಏನು?

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ರೂ. 1000 ಕೋಟಿ.
ಬೆಂಗಳೂರು ಏರ್ಪೋರ್ಟ್ ಗೆ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ ರೂ. 32 ಕೋಟಿ
3 ಮಹಾನಗರ ಪಾಲಿಕೆಗೆ ತಲಾ ರೂ. 150 ಕೋಟಿ
ಬೆಳಗಾವಿ, ಬಳ್ಳಾರಿ ಮತ್ತು ತುಮಕೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ, ವಿಜಯಪುರ ಪಾಲಿಕೆ ಅಭಿವೃದ್ಧಿಗೆ ತಲಾ ರೂ. 125 ಕೋಟಿ ಮೀಸಲುಬೆಂಗಳೂರಿಗೆ ಏನು?
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ರೂ. 1000 ಕೋಟಿ.
ಬೆಂಗಳೂರು ಏರ್ಪೋರ್ಟ್ ಗೆ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ ರೂ. 32 ಕೋಟಿ
3 ಮಹಾನಗರ ಪಾಲಿಕೆಗೆ ತಲಾ ರೂ. 150 ಕೋಟಿ
ಬೆಳಗಾವಿ, ಬಳ್ಳಾರಿ ಮತ್ತು ತುಮಕೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ, ವಿಜಯಪುರ ಪಾಲಿಕೆ ಅಭಿವೃದ್ಧಿಗೆ ತಲಾ ರೂ. 125 ಕೋಟಿ ಮೀಸಲು.

ಡಿಜಿಟಲ್ ಶಿಕ್ಷಣಕ್ಕೆ ಒತ್ತು

ಡಿಜಿಟಲ್ ಶಿಕ್ಷಣಕ್ಕೆ ಒತ್ತು

SSLC ಮೌಲ್ಯಮಾಪನ ಕೇಂದ್ರಗಳ ಡಿಜಿಟಲೀಕರಣಕ್ಕೆ ರೂ. 1 ಕೋಟಿ ಅನುದಾನ.
ನ್ಲೈನ್ ಮೂಲಕ CET ಪರೀಕ್ಷೆ ನಡೆಸಲು ಕ್ರಮ.
ಡಿಜಿಟಲ್ ಸ್ತನರೇಖನ ವ್ಯವಸ್ಥೆ (Mammogram) ಹಾಗೂ Papsmear Scanning ವ್ಯವಸ್ಥೆ ಪ್ರಾರಂಭ: ಮಂಗಳೂರು, ತುಮಕೂರು, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ 10 ಜಿಲ್ಲೆಗಳಲ್ಲಿ ಆರಂಭಿಸಲಾಗುವುದು.

ರೈತ ಸಿರಿ, ಸಾವಯವ ಕೃಷಿ

ರೈತ ಸಿರಿ, ಸಾವಯವ ಕೃಷಿ

ಸಾವಯವ ಕೃಷಿ ಯೋಜನೆಗೆ ರೂ. 35 ಕೋಟಿ ಮೀಸಲು.
ರೈತ ಸಿರಿ ಯೋಜನೆಗೆ ರೂ. 10 ಕೋಟಿ ಮೀಸಲು.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಈಒಟ್ಟು ರೂ. 46,850 ಕೋಟಿ ಮೀಸಲು.

ವಿದ್ಯುಚ್ಛಕ್ತಿ ಪೂರೈಕೆ

ವಿದ್ಯುಚ್ಛಕ್ತಿ ಪೂರೈಕೆ

ರೈತರಿಗೆ ವಿದ್ಯುಚ್ಚಕ್ತಿ ಒದಗಿಸಲು ೪೦ ಸಾವಿರ ಹೊಸ ಟ್ರಾನ್ಸಫಾರ್ಮರ್ ಅಳವಡಿಕೆ
ನೀರಾವರೀ ಪಂಪಸೇಟ್, ಭಾಗ್ಯಜ್ಯೋತಿ , ಕುಟೀರ ಜ್ಯೋತಿ ಸಹಾಯಧನ ೧೧,೨೫೦ ಕೋಟಿಗೆ ಏರಿಕೆ ಮಾಡಲಾಗಿದೆ.

ವಿಶೇಷ ಅನುದಾನ

ವಿಶೇಷ ಅನುದಾನ

- ಮಹಾತ್ಮ ಗಾಂಧೀಜಿ ೧೫೦ನೇ ಜನ್ಮದಿನ ಆಚರಣೆಗೆ ರೂ ೫ ಕೋಟಿ
- ಹಂಪಿ ವ್ಯಾಖ್ಯಾನ ಕೇಂದ್ರ ಮತ್ತು ವಿಜಯಪುರ
- ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರಕ್ಕೆ ತಲಾ ರೂ. ೧ ಕೋಟಿ ಮೀಸಲು
- ಕರ್ನಾಟಕ ಅಂತಾರಾಷ್ಟ್ರೀಯ ಪ್ರಬಾಸೋದ್ಯಮ ಯೋಜನೆಗೆ ರೂ. ೨ ಕೋಟಿ

ವಿದ್ಯಾರ್ಥಿಗಳಿಗೆ ಬಂಪರ್

ವಿದ್ಯಾರ್ಥಿಗಳಿಗೆ ಬಂಪರ್

- ಪದವಿಪೂರ್ವ ವಿದ್ಯಾರ್ಥಿಗಳ ವೃತ್ತಿಪರ ಚಟುವಟಿಕೆಗಳಿಗಾಗಿ ರೂ. 2 ಕೋಟಿ ಮೀಸಲು
- ಮಲೆನಾಡಿನ ಶಾಲಾಮಕ್ಕಳಿಗೆ ಛತ್ರಿ, ರೈನ್ಕೋಟ್ ಭಾಗ್ಯ
- ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸುಭದ್ರ ಶಾಲೆ ಯೋಜನೆ
- ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಪಬ್ಲಿಕ್ ಸ್ಕೂಲ್
- ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆ

ಕಾರ್ಮಿಕ ಕುಟುಂಬಗಳ ವಿಶೇಷ ಕಾಳಜಿ

ಕಾರ್ಮಿಕ ಕುಟುಂಬಗಳ ವಿಶೇಷ ಕಾಳಜಿ

ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟರೆ ರೂ. 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕಾರ್ಮಿಕರ ಮಕ್ಕಳ LKG, ನರ್ಸರಿ ಶಿಕ್ಷಣಕ್ಕಾಗಿ ರೂ. 2500 ಪ್ರೋತ್ಸಾಹಧನ ನೀಡಲಾಗುವುದು.
ಫಲಾನುಭವಿಗಳಿಗೆ ಆಧಾರ್ ಆಧಾರಿತ 'ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು.

ಪತ್ರಕರ್ತರ ಕ್ಷೇಮ ನಿಧಿ

ಪತ್ರಕರ್ತರ ಕ್ಷೇಮ ನಿಧಿ

ಕಾರ್ಯನಿರತ ಪತ್ರಕರ್ತರ ಕ್ಷೇಮ ನಿಧಿ ದತ್ತಿ ಹಾಗೂ ಹಿರಿಯ ಪತ್ರಕರ್ತರ ಕ್ಷೇಮ ನಿಧಿ ದತ್ತಿಗಳಿಗೆ ತಲಾ ರೂ. 2 ಕೋಟಿ ಹೆಚ್ಚುವರಿ ಅನುದಾನ ಘೋಷಿಸಲಾಗಿದೆ.
ತುಳು, ಕೊಡವ ಮತ್ತು ಕೊಂಕಣಿ ಭಾಷೆಯ ಚಲನಚಿತ್ರಗಳನ್ನು ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮದಡಿ ರೂ. 1 ಕೋಟಿ ಮೀಸಲು.

English summary

Karnataka Budget 2019: Complete details on Popular Plans of H D Kumaraswamy Government

Karnataka Budget 2019: Given here Complete details of Popular Plans on H D Kumaraswamy government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X