For Quick Alerts
ALLOW NOTIFICATIONS  
For Daily Alerts

ಉಮಂಗ್ ಆಪ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

|

ಉಮಂಗ್ ಆಪ್ ಮೂಲಕ ಇಪಿಎಫ್, ಪ್ಯಾನ್, ಆಧಾರ್, ಮೊಬೈಲ್ ಬಿಲ್ ಪಾವತಿ, ಗ್ಯಾಸ್ ಬುಕಿಂಗ್, ವಿದ್ಯುತ್ ಬಿಲ್ ಪಾವತಿಯಂತಹ ಸೇವೆಗಳನ್ನು ನಿರ್ವಹಿಸಬಹುದು. ಇದು ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಉಚಿತ ಮೊಬೈಲ್‌ ಆ್ಯಪ್ ಉಮಂಗ್. ಈ ಆಪ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ವಿವರಗಳನ್ನು ಪಡೆಯಬಹುದು.

'ಯುನಿಫೈಡ್‌ ಮೊಬೈಲ್‌ ಅಪ್ಲಿಕೇಶನ್‌ ಫಾರ್‌ ನ್ಯೂ ಏಜ್‌ ಗವರ್ನೆನ್ಸ್‌-ಉಮಂಗ್‌' ಎಂಬ ಹೆಸರಿನ ಈ ಮೊಬೈಲ್‌ ಆ್ಯಪ್‌ ಮೂಲಕ ಮೊಬೈಲ್‌ ಫೋನಿನಲ್ಲಿಯೇ ಭವಿಷ್ಯನಿಧಿ (ಪಿಎಫ್‌) ವಿವರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಉಮಂಗ್ ವಿಶೇಷತೆ
 

ಉಮಂಗ್ ವಿಶೇಷತೆ

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ನ್ಯಾಶನಲ್‌ ಇ-ಗವರ್ನೆನ್ಸ್ ಇಲಾಖೆಗಳು ಜಂಟಿಯಾಗಿ ಉಮಂಗ್ ಮೊಬೈಲ್‌ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದೆ. ಕೇವಲ ಉಮಂಗ್ ಆ್ಯಪ್‌ ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಇಪಿಎಫ್‌ ಕುರಿತ ಸೇವೆಗಳಿಗೆ ಸಂಬಂಧಿಸಿದಂತೆ ಇದು ಉಪಯುಕ್ತ. ನೀವು ಬೇರೆ ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡಿದ್ದರೂ ಪಿಎಫ್‌ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ತಿಳಿಯಬಹುದು. ಆದರೆ ಸಕ್ರಿಯವಾದ ಯುಎಎನ್‌ (ಯುನಿವರ್ಸಲ್‌ ಅಕೌಂಟ್‌ ನಂಬರ್‌) ಪಡೆಯಬೇಕು. ಇದು ಇಪಿಎಫ್‌ಒ ಜತೆ ನೋಂದಾಯಿತ ಮೊಬೈಲ್‌ ಸಂಖ್ಯೆ ಹೊಂದಿರಬೇಕು.

ಉಮಂಗ್ ಆಪ್ ನಲ್ಲಿ ಕೆಳಕಂಡ ವಿಧಾನಗಳ ಮೂಲಕ ನೀವು ಇಪಿಎಫ್‌ ಬ್ಯಾಲೆನ್ಸ್ ನೋಡಬಹುದು.

ಹಂತ 1

ಹಂತ 1

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಉಮಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಗ್ರಾಹಕರು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಹಂತ 2

ಹಂತ 2

ಉಮಂಗ್ ಆ್ಯಪ್‌ ಅನ್ನು ತೆರೆದ ನಂತರ ಇಪಿಎಫ್‌ಒ ಆಯ್ಕೆಯನ್ನು ಕ್ಲಿಕ್‌ ಮಾಡಿರಿ. ಸರ್ಕಾರಿ ಸೇವೆಗಳನ್ನು ಪಡೆಯಲು ಈ 5 ಮೊಬೈಲ್ ಆ್ಯಪ್ ನಿಮ್ಮ ಬಳಿ ಇರಲಿ

ಹಂತ 3

ಹಂತ 3

ನೀವು ಇಪಿಎಫ್‌ಒ ಪೇಜ್‌ ಅನ್ನು ಕಾಣುತ್ತೀರಿ.

ಎಂಪ್ಲಾಯಿ ಆ್ಯಂಡ್‌ ಎಂಪ್ಲಾಯರ್‌ ಸೆಂಟ್ರಿಕ್‌ ಸರ್ವಿಸ್‌, ಜನರಲ್‌ ಸರ್ವಿಸ್ ಆ್ಯಂಡ್‌ ಪೆನ್ಷನರ್‌ ಸರ್ವಿಸ್‌ ಸೌಲಭ್ಯದ ಆಯ್ಕೆಗಳು ಅಲ್ಲಿರುತ್ತವೆ. ನೀವು 'ಎಂಪ್ಲಾಯಿ ಸೆಂಟ್ರಿಕ್‌ ಸರ್ವಿಸ್' ಅನ್ನು ಕ್ಲಿಕ್‌ ಮಾಬೇಕು.

ಹಂತ 4
 

ಹಂತ 4

ನಿಮ್ಮ ಪಿಎಫ್‌ ಬ್ಯಾಲೆನ್ಸ್‌ ವಿವರಗಳನ್ನು ತಿಳಿದುಕೊಳ್ಳಲು ಎಂಪ್ಲಾಯಿ ಸೆಂಟ್ರಿಕ್‌ ಸರ್ವಿಸ್‌' ಅಡಿಯಲ್ಲಿ 'ವ್ಯೂ ಪಾಸ್‌ಬುಕ್‌' ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಹಂತ 5

ಹಂತ 5

ವ್ಯೂ ಪಾಸ್‌ಬುಕ್‌ (View Passbook) ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿದ ನಂತರ ಯುಎಎನ್‌ ಸಂಖ್ಯೆಯನ್ನು ನಮೂದಿಸಬೇಕು. ನಂತರ 'ಗೆಟ್‌ ಒಟಿಪಿ' ಒತ್ತಿರಿ. ನೋಂದಾಯಿತ ಮೊಬೈಲ್‌ ಗೆ ಒಟಿಪಿ ಸಂದೇಶ ಬರುತ್ತದೆ.

ಹಂತ 6

ಹಂತ 6

ಒಟಿಪಿ ನಮೂದಿಸಿದ ನಂತರ ಇಪಿಎಫ್‌ ಖಾತೆಗಳ ವಿವರ ಪಡೆಯಬಹುದು. ನೀವು ನಾನಾ ಕಂಪನಿಗಳಲ್ಲಿ ಕೆಲಸ ಮಾಡಿರಬಹುದು. ಆಗಿನ ಎಲ್ಲ ಇಪಿಎಫ್‌ ಖಾತೆಗಳ ವಿವರ ಪಡೆಯಬಹುದು.

Read more about: umang app money epf mobile apps
English summary

How to check EPF Balance via UMANG app?

UMANG allows a user to view/access multiple customer-centric services like EPF, PAN, Aadhaar, digilocker, gas booking, mobile bill payment, electricity bill payment, etc. through one app.
Story first published: Saturday, April 20, 2019, 15:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more