For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಅವಾಸ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲಿ ಚೆಕ್ ಮಾಡಿ..

ಫಲಾನುಭವಿಗಳ ಪಟ್ಟಿಯನ್ನು 2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ ಗುರುತಿಸಲಾಗಿದೆ. ನೀವು ನಿಮ್ಮ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿರುವುದನ್ನು ಪ್ರಧಾನ ಮಂತ್ರಿ ಅವಾಸ ಯೋಜನೆಯ pmaymis.gov.in ನಲ್ಲಿ ಪರಿಶೀಲಿಸಿ.

|

ಪ್ರಧಾನ ಮಂತ್ರಿ ಅವಾಸ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಂತದ ಸೂರು ಕಲ್ಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಎರಡನೇ ಅವಧಿಗೆ ಅಧಿಕಾರಕ್ಕೆ ಏರಿರುವ ಎನ್ಡಿಎ ಸರ್ಕಾರ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಸಜ್ಜಾಗಿದೆ. ಪ್ರತಿಯೊಬ್ಬರಿಗೂ ಮನೆ (Housing for All) ಮಿಷನ್ ನೊಂದಿಗೆ 2 ಕೋಟಿ ಮನೆ ನಿರ್ಮಾಣದ ಗುರಿ ಹೊಂದಿದೆ.
ಫಲಾನುಭವಿಗಳ ಪಟ್ಟಿಯನ್ನು 2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ ಗುರುತಿಸಲಾಗಿದೆ. ನೀವು ನಿಮ್ಮ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿರುವುದನ್ನು ಪ್ರಧಾನ ಮಂತ್ರಿ ಅವಾಸ ಯೋಜನೆಯ pmaymis.gov.in ನಲ್ಲಿ ಪರಿಶೀಲಿಸಬಹುದು.

ಪಿಎಂಎವೈ ನಗರ ಯೋಜನೆ

ಪಿಎಂಎವೈ ನಗರ ಯೋಜನೆ

ಪ್ರಧಾನ ಮಂತ್ರಿ ಅವಾಸ ಯೋಜನೆ (PMAY-U)ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯವು ಜಾರಿಗೊಳಿಸುತ್ತದೆ. ಸರ್ಕಾರವು ಬಜೆಟ್ ಅನ್ನು ನಿಗದಿಪಡಿಸಿದ್ದು, ಎಲ್ಲ ಅಗತ್ಯ ಅನುಮೋದನೆಗಳನ್ನು ಒದಗಿಸಿದೆ. ಈಗಾಗಲೇ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. 2022ರ ಒಳಗಾಗಿ ಸರ್ಕಾರವು 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ.

ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS)

ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS)

ರೂ. ವರ್ಷಕ್ಕೆ 18 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳಿಗೆ ಈ ಹೌಸಿಂಗ್ ಸ್ಕೀಮ್ ರೂಪಿಸಲಾಗಿದೆ. PMAY-U ಅಡಿಯಲ್ಲಿ ಮನೆ ಸಾಲದ ಬಡ್ಡಿ ಮೇಲೆ ಸಬ್ಸಿಡಿ ನೀಡಲಾಗುತ್ತದೆ.

2018ರ PMAY ಫಲಾನುಭವಿಗಳ ಪಟ್ಟಿ

2018ರ PMAY ಫಲಾನುಭವಿಗಳ ಪಟ್ಟಿ

2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ (SECC-2011) ಡೇಟಾವನ್ನು ಆಧರಿಸಿದ ಸರ್ಕಾರವು ಗುರುತಿಸಿದ ಫಲಾನುಭವಿಗಳ ಪಟ್ಟಿ ಇದಾಗಿದೆ. PMAY-U ಫಲಾನುಭವಿಗಳ ಪಟ್ಟಿಯಲ್ಲಿ 2018 ರಲ್ಲಿ ಎಲ್ಲರಿಗೂ ಹೆಸರನ್ನು ನೀಡಲಾಗುವುದು. ಪ್ರಧಾನ ಮಂತ್ರಿ ಅವಾಸ ಯೋಜನೆಯಲ್ಲಿ (PMAY-U) ಇರುವ ಫಲಾನುಭವಿಗಳ ಹೆಸರನ್ನು 2018ರ PMAY ಫಲಾನುಭವಿಗಳ ಪಟ್ಟಿಯಲ್ಲಿ ನೀಡಲಾಗುವುದು.

PMAY ಫಲಾನುಭವಿಗಳ ಪಟ್ಟಿಯಲ್ಲಿರುವ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

PMAY ಫಲಾನುಭವಿಗಳ ಪಟ್ಟಿಯಲ್ಲಿರುವ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

STEP 1: PMAY ಫಲಾನುಭವಿಗಳ ಪಟ್ಟಿಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.
STEP 2: Search by Name (ಹೆಸರು ಹುಡುಕಾಡಿ) ನಿಮ್ಮ ಹೆಸರನ್ನು ನಮೂದಿಸಿ ಮತ್ತು ಶೋ ಬಟನ್ ಅನ್ನು ಕ್ಲಿಕ್ ಮಾಡಿ.

ಮುಂದಿನ ಹಂತ

ಮುಂದಿನ ಹಂತ

STEP 3: ನಿಮ್ಮ ಹೆಸರಿಗೆ ಹೊಂದಿಕೆಯಾಗುವ ಎಲ್ಲ ಫಲಾನುಭವಿಗಳ ಪಟ್ಟಿಯು PMAY ಫಲಾನುಭವಿ ಕೋಡ್, ತಂದೆ ಹೆಸರು, ನಗರ ಹೆಸರು, ರಾಜ್ಯದ ಹೆಸರಿನೊಂದಿಗೆ ಕಾಣುತ್ತದೆ.
STEP 4: ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
STEP 5: ನಿಮ್ಮ ಮೊಬೈಲ್ ಗೆ OTP ಯನ್ನು ಸ್ವೀಕರಿಸುತ್ತೀರಿ. ಸಂಪೂರ್ಣ ವಿವರಗಳನ್ನು ಪಡೆಯಲು OTP ಮರು ದಾಖಲಿಸಿ. (https://pmaymis.gov.in/Track_Application_Status.aspx)

ಬಳಕೆದಾರರು ಲಾಗಿನ್ ಹೇಗೆ?

ಬಳಕೆದಾರರು ಲಾಗಿನ್ ಹೇಗೆ?

ಪ್ರಧಾನ ಮಂತ್ರಿ ಅವಾಸ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಪ್ರಧಾನ ಮಂತ್ರಿ ಅವಾಸ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? 

ಅರ್ಜಿ ಸ್ಟೇಟಸ್ ಪರಿಶೀಲನೆ ಹೇಗೆ?

ಅರ್ಜಿ ಸ್ಟೇಟಸ್ ಪರಿಶೀಲನೆ ಹೇಗೆ?

ಪ್ರಧಾನ ಮಂತ್ರಿ ಅವಾಸ ಯೋಜನೆಯ ಅರ್ಜಿಯ ಪ್ರಸ್ತುತ ಸ್ಟೇಟಸ್ ನ್ನು pmaymis.gov.in ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ತುಂಬಲ್ಪಟ್ಟಿರುವ ನಿಮ್ಮ ಬಗೆಗಿನ ಸಂಪೂರ್ಣ ಮಾಹಿತಿ ಒಳಗೊಂಡಿರುವ ಆನ್ಲೈನ್ ಅರ್ಜಿಯ ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ನಿಮ್ಮ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು (By Name, Father's Name & Mobile No ಹಾಗು By Assessment ID ಆಯ್ಕೆ ಮೂಲಕ ಮುನ್ನಡೆಯಿರಿ) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.(http://pmaymis.gov.in/Track_Application_Status.aspx

ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

English summary

How to Check your name in Pradhan Mantri Awas Yojana beneficiaries list?

The list of beneficiaries for PMAY-U are identified based on the Socio-Economic Caste Census 2011 (SECC-2011) data.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X