For Quick Alerts
ALLOW NOTIFICATIONS  
For Daily Alerts

ಸರಕಾರದ ತಿಜೋರಿ, ಹೂಡಿಕೆದಾರರ ಖಜಾನೆ ತುಂಬಿಸಿದ ಷೇರುಗಳು

By ಕೆ.ಜಿ.ಕೃಪಾಲ್
|

ಈ ವರ್ಷದ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದಡಿ ರು.1.05 ಲಕ್ಷ ಕೋಟಿಯ ಗುರಿ ಹೊಂದಿದ್ದಾರೆ. ಈ ಕಾರ್ಯಕ್ರಮದಡಿ ಸಾಕಷ್ಟು ಸಾರ್ವಜನಿಕ ವಲಯದ ಕಂಪೆನಿಗಳ ಷೇರುಗಳನ್ನು ಕೇಂದ್ರ ಸರಕಾರವು ಮಾರಾಟ ಮಾಡುವ ಮೂಲಕ ತನ್ನ ಸ್ವಾಮ್ಯತ್ವವನ್ನು ಮೊಟಕುಗೊಳಿಸುತ್ತದೆ. ಅಂದರೆ ಸಾರ್ವಜನಿಕ ಭಾಗಿತ್ವವು ಹೆಚ್ಚುವುದು. ಇದು ಉತ್ತಮ ಕ್ರಮವೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.

ಏಕೆಂದರೆ, ಸರಕಾರವು ಕೆನರಾ ಬ್ಯಾಂಕ್, ಮಾರುತಿ ಸುಜುಕಿ ಕಂಪೆನಿಗಳಲ್ಲಿನ ತನ್ನ ಬಂಡವಾಳ ಹಿಂತೆಗೆಯಿತು. ಆಗಿನ ದಿನಗಳಲ್ಲಿ ಷೇರುಪೇಟೆ ಒಂದು ರೀತಿಯಲ್ಲಿ ನಿಶ್ಚೇಷ್ಟಿತ ಅವಸ್ಥೆಯಲ್ಲಿತ್ತು. ಈ ಎರಡು ಕಂಪೆನಿಗಳು ಪೇಟೆಗೆ ಬುಕ್ ಬ್ಯುಲ್ಡ್ ಮೂಲಕ ಪ್ರವೇಶಿಸಿದಾಗ ಬುಕ್ ಬ್ಯುಲ್ಡ್ ಪರಿಕಲ್ಪನೆ ಭಾರತೀಯ ಪೇಟೆಗೆ ಹೊಸದಾಗಿತ್ತು.

ಬಜೆಟ್ ಎಫೆಕ್ಟ್ ನಲ್ಲಿ ಸಿಲುಕಿದ ಗೂಳಿ, ಸೆನ್ಸೆಕ್ಸ್ 793 ಅಂಕ ಕುಸಿತಬಜೆಟ್ ಎಫೆಕ್ಟ್ ನಲ್ಲಿ ಸಿಲುಕಿದ ಗೂಳಿ, ಸೆನ್ಸೆಕ್ಸ್ 793 ಅಂಕ ಕುಸಿತ

ಈ ಎರಡು ಕಂಪೆನಿಗಳ ಆರಂಭಿಕ ಷೇರು ವಿತರಣೆಯು ಅಭೂತಪೂರ್ವ ಸ್ಪಂದನವನ್ನು ಸಾಮಾನ್ಯ ಗ್ರಾಹಕರಿಂದಲೂ ಪಡೆಯಿತು. ಇದಕ್ಕೆ ಮುಖ್ಯ ಕಾರಣ; ಈ ಕಂಪೆನಿಗಳು ಹೊಂದಿದ್ದ ಹೆಗ್ಗುರುತು. ಜೊತೆಗೆ ಮುಖ್ಯವಾಗಿ ಅವು ವಿತರಿಸಿದ ಆಕರ್ಷಕ ಬೆಲೆಗಳು. ಕೆನರಾ ಬ್ಯಾಂಕ್ ನವೆಂಬರ್ 2002ರಲ್ಲಿ ಪ್ರತಿ ಷೇರಿಗೆ ರು.35ರಂತೆ ವಿತರಿಸಿತ್ತು. ಜುಲೈ 2003ರಲ್ಲಿ ಮಾರುತಿ ಉದ್ಯೋಗ್ (ಈಗಿನ ಮಾರುತಿ ಸುಜುಕಿ) ಪ್ರತಿ ಷೇರಿಗೆ ರು.125ರಂತೆ ವಿತರಿಸಿದ್ದವು.

ಆ ನಂತರದ ವರ್ಷಗಳಲ್ಲಿ ಕೆನರಾ ಬ್ಯಾಂಕ್ ರು.900ರ ಗಡಿ ದಾಟಿತ್ತು ಮತ್ತು ಮಾರುತಿ ಸುಜುಕಿ ರು.10 ಸಾವಿರದ ಗಡಿ ದಾಟಿ ಹೂಡಿಕೆದಾರರ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರವಾದವು.

ಇಂಡಿಯನ್ ಬ್ಯಾಂಕ್ ಷೇರುಗಳು ಲಾಭದಲ್ಲೇ ವಹಿವಾಟು ಆಗುತ್ತಿವೆ

ಇಂಡಿಯನ್ ಬ್ಯಾಂಕ್ ಷೇರುಗಳು ಲಾಭದಲ್ಲೇ ವಹಿವಾಟು ಆಗುತ್ತಿವೆ

ಇಂಡಿಯನ್ ಬ್ಯಾಂಕ್ ಡಿಸೆಂಬರ್ 2007ರಲ್ಲಿ ಪ್ರತಿ ಷೇರಿಗೆ ರು.91ರಂತೆ ವಿತರಿಸಲಾಗಿದ್ದು, ಈ ಷೇರಿನ ಬೆಲೆ ರು.242ರ ಸಮೀಪವಿದೆ. ಈ ಕಂಪೆನಿ ಆಕರ್ಷಕವಾದ ಲಾಭಾಂಶವನ್ನು ವಿತರಿಸಿದೆ. ಹಿಂದಿನ ವರ್ಷ ಲಾಭಾಂಶ ಪ್ರಕಟಿಸಿದ ಪಿಎಸ್ ಯು ಬ್ಯಾಂಕ್ ಗಳಲ್ಲಿ ವಿಜಯ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಗಳು ಇದ್ದು, ಇಂಡಿಯನ್ ಬ್ಯಾಂಕ್ ಎಟಿಎಂ ಹಾನಿ, ಗ್ರಾಚುಯಿಟಿ ಗಳಿಗೆ ವ್ಯವಸ್ಥೆ ಮಾಡದೆ ಇರುವ ಕಾರಣ ಘೋಷಿಸಿದ ಲಾಭಾಂಶವನ್ನು ಹಿಂದಕ್ಕೆ ಪಡೆಯಿತು. ಆದರೂ ಷೇರಿನ ಬೆಲೆ ವಿತರಣೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ವಹಿವಾಟಾಗುತ್ತಿದೆ. ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಕಂಪೆನಿ ಹೆಸರು ಈಗ ಆರ್ ಇಸಿ ಲಿಮಿಟೆಡ್ ಎಂದು ಬದಲಾಗಿದೆ. ಈ ಕಂಪೆನಿಯ ಷೇರುಗಳನ್ನು ಮಾರ್ಚ್ 2008ರಲ್ಲಿ ರು.105ರಂತೆಯೂ, ಮತ್ತೊಮ್ಮೆ ಮಾರ್ಚ್ 2010ರಲ್ಲಿ ರು.203 ರಂತೆ ವಿತರಿಸುವ ಮೂಲಕ ಬಂಡವಾಳ ಹಿಂತೆಗೆಯಲಾಯಿತು. ಆ ನಂತರದಲ್ಲಿ ಈ ಕಂಪೆನಿ ಆಕರ್ಷಕ ಲಾಭಾಂಶವನ್ನು ವಿತರಿಸುತ್ತಿದೆ. ಅಲ್ಲದೆ 2016ರಲ್ಲಿ 1:1ರ ಅನುಪಾತದ ಬೋನಸ್ ಷೇರನ್ನು ಸಹ ವಿತರಿಸಿ, ಷೇರುದಾರರಿಗೆ ಉತ್ತಮ ಲಾಭ ಗಳಿಸಿದೆ. ಷೇರಿನ ಬೆಲೆ ರು.148ರ ಸಮೀಪವಿದ್ದು, ಹೂಡಿಕೆದಾರರಿಗೆ ಸಕಾರಾತ್ಮಕ ವಾತಾವರಣ ನಿರ್ಮಿಸಿಕೊಟ್ಟಿದೆ.

ಹೂಡಿಕೆದಾರರಿಗೆ ಉತ್ತಮ ಲಾಭಾಂಶ

ಹೂಡಿಕೆದಾರರಿಗೆ ಉತ್ತಮ ಲಾಭಾಂಶ

ಆಯಿಲ್ ಇಂಡಿಯಾ ಕಂಪೆನಿಯಲ್ಲಿನ ಷೇರುಗಳನ್ನು ರು.1,050ರಂತೆ ಸೆಪ್ಟೆಂಬರ್ 2009ರಲ್ಲಿ ಮಾರಾಟ ಮಾಡುವ ಮೂಲಕ ಬಂಡವಾಳ ಹಿಂತೆಗೆತ ಮಾಡಲಾಯಿತು. ಈ ಕಂಪೆನಿ ಮಾರ್ಚ್ 2012ರಲ್ಲಿ 3:2ರಂತೆ, ಜನವರಿ 2017ರಲ್ಲಿ 1:3 ಅನುಪಾತದಂತೆ, ಮಾರ್ಚ್ 2018ರಲ್ಲಿ 1:2 ರಂತೆ ಬೋನಸ್ ಷೇರು ವಿತರಿಸಿದೆ. ನಿರಂತರವಾಗಿ ಆಕರ್ಷಕ ಲಾಭಾಂಶವನ್ನು ಸಹ ವಿತರಿಸುತ್ತಿದೆ. ಪವರ್ ಗ್ರಿಡ್ ಕಾರ್ಪೊರೇಷನ್ ಅಕ್ಟೋಬರ್ 2007ರಲ್ಲಿ ಪ್ರತಿ ಷೇರಿಗೆ ರು.52ರಂತೆ ಷೇರು ವಿತರಿಸುವ ಮೂಲಕ ಬಂಡವಾಳ ಹಿಂತೆಗೆಯಲಾಯಿತು. ನವೆಂಬರ್ 2010ರಲ್ಲಿ ಮತ್ತೊಮ್ಮೆ ಈ ಕಂಪೆನಿ ಷೇರನ್ನು ರು.90ರಂತೆ ವಿತರಣೆಯಾಯಿತು. ಈ ಷೇರಿನ ಬೆಲೆ ರು.206ರ ಸಮೀಪವಿದ್ದು, ಹೂಡಿಕೆದಾರರಿಗೆ ಉತ್ತಮ ಲಾಭಾಂಶ ಗಳಿಸಿಕೊಟ್ಟಿರುವುದಲ್ಲದೆ ಷೇರಿನ ಬೆಲೆಯೂ ಹೆಚ್ಚಿನ ಏರಿಕೆ ಕಂಡುಕೊಂಡಿದೆ. ಪವರ್ ಫೈನಾನ್ಸ್ ಕಾರ್ಪೊರೇಷನ್ 2007ರ ಫೆಬ್ರವರಿಯಲ್ಲಿ ಪ್ರತಿ ಷೇರಿಗೆ ರು.85ರಂತೆ 2010ರ ಮೇ ತಿಂಗಳಲ್ಲಿ ರು.203ರಂತೆ ಷೇರು ವಿತರಿಸುವ ಮೂಲಕ ಬಂಡವಾಳ ಹಿಂತೆಗೆಯಲಾಯಿತು. ಈ ಕಂಪೆನಿ 2016ರ ಆಗಸ್ಟ್ ನಲ್ಲಿ 1:1 ರಂತೆ ಬೋನಸ್ ಷೇರು ವಿತರಿಸಿದೆ. ಈ ಮಧ್ಯೆ ಕಂಪೆನಿಯು ಆಕರ್ಷಕ ಲಾಭಾಂಶಗಳನ್ನು ವಿತರಿಸಿದೆ. ಈ ಕಂಪೆನಿ ಷೇರಿನ ಬೆಲೆ ರು.125ರ ಸಮೀಪವಿದ್ದು, ಈ ಕಂಪೆನಿಯೊಂದಿಗೆ ಆರ್ ಇಸಿ ಕಂಪೆನಿ ವಿಲೀನಗೊಳ್ಳಲಿದೆ.

ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಗೊಂದಲ; ಇದ್ಯಾಕೆ ಹೀಗೆಲ್ಲ? ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಗೊಂದಲ; ಇದ್ಯಾಕೆ ಹೀಗೆಲ್ಲ?

ಬೋನಸ್ ಷೇರುಗಳ ವಿತರಣೆ

ಬೋನಸ್ ಷೇರುಗಳ ವಿತರಣೆ

ಇಂಜಿನೀರ್ಸ್ ಇಂಡಿಯಾ ಕಂಪೆನಿ 2010ರಲ್ಲಿ ಪ್ರತಿ ಷೇರಿಗೆ ರು.290ರಂತೆ ವಿತರಿಸುವ ಮೂಲಕ ಬಂಡವಾಳ ಹಿಂತೆಗೆಯಲಾಯಿತು. ಅದೇ ವರ್ಷ 2:1ರ ಅನುಪಾತದ ಬೋನಸ್ ಷೇರನ್ನು ವಿತರಿಸಿದ ಈ ಕಂಪೆನಿ, ಮತ್ತೊಮ್ಮೆ ರು.150ರಂತೆ 2014ರಲ್ಲಿ ಷೇರು ವಿತರಿಸಿದೆ. ಡಿಸೆಂಬರ್ 2016ರಲ್ಲಿ 1:1ರ ಅನುಪಾತದ ಬೋನಸ್ ವಿತರಿಸುವ ಮೂಲಕ ಷೇರುದಾರರನ್ನು ಸಂತುಷ್ಟಗೊಳಿಸಲಾಗಿದೆ. ಮೊಯಿಲ್ ಲಿಮಿಟೆಡ್ ಕಂಪೆನಿ ಡಿಸೆಂಬರ್ 2010ರಲ್ಲಿ ಪ್ರತಿ ಷೇರಿಗೆ ರು.375 ರಂತೆ ವಿತರಿಸಲಾಯಿತು. ಈ ಕಂಪೆನಿ 2017ರ ಸೆಪ್ಟೆಂಬರ್ ನಲ್ಲಿ 1:1ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಈಗ ಷೇರಿನ ಬೆಲೆ ರು.151ರ ಸಮೀಪವಿದೆ. 2012ರ ಏಪ್ರಿಲ್ ನಲ್ಲಿ ರು.2ರ ಮುಖಬೆಲೆಯ ಎನ್ ಬಿಸಿಸಿ ಷೇರನ್ನು ರು.106ರಂತೆ ವಿತರಿಸಲಾಯಿತು. 2018ರಲ್ಲಿ ಷೇರಿನ ಮುಖಬೆಲೆಯನ್ನು ರು.2ರಿಂದ ರು.1ಕ್ಕೆ ಸೀಳಿದರೂ ಷೇರಿನ ಬೆಲೆ ಮಾತ್ರ ರು.56ರ ಸಮೀಪವಿದೆ.

ಬಂಡವಾಳ ಹಿಂತೆಗೆತದ ಯಶೋಗಾಥೆ

ಬಂಡವಾಳ ಹಿಂತೆಗೆತದ ಯಶೋಗಾಥೆ

ಮಹಾನಗರ ಗ್ಯಾಸ್ ಕಂಪೆನಿ ಜುಲೈ 2016ರಲ್ಲಿ ರು.421ರಂತೆ ಷೇರು ವಿತರಿಸಿದೆ. ಅಂದಿನಿಂದಲೂ ಸತತವಾದ ಆಕರ್ಷಕ ಲಾಭಾಂಶ ಪ್ರಕಟಿಸುತ್ತಿರುವ ಈ ಕಂಪೆನಿ ಸದ್ಯ ರು.805ರ ಸಮೀಪ ವಹಿವಾಟಾಗುತ್ತಿದೆ. ಆಗಸ್ಟ್ 2018ರಲ್ಲಿ ಮಿಶ್ರ ದಾತು ನಿಗಮ ಪ್ರತಿ ಷೇರಿಗೆ ರು.90ರಂತೆ ವಿತರಿಸಿ, ಸದ್ಯ ರು.122ರ ಸಮೀಪ ವಹಿವಾಟಾಗುತ್ತಿದೆ. ಜುಲೈ 2018ರಲ್ಲಿ ಪ್ರತಿ ಷೇರಿಗೆ ರು.90ರಂತೆ ವಿತರಿಸಿದ ರೈಟ್ಸ್ ಷೇರು ಸದ್ಯ ರು. 286ರ ಸಮೀಪ ವಹಿವಾಟಾಗುತ್ತಿದೆ. ಇನ್ನು ಏಪ್ರಿಲ್ 2019ರಲ್ಲಿ ರು.19ರಂತೆ ವಿತರಿಸಿದ ರೇಲ್ ವಿಕಾಸ್ ನಿಗಮ್ ಸದ್ಯ ರು.26ರ ಸಮೀಪ ವಹಿವಾಟಾಗುತ್ತಿದೆ. ಇದು ಬಂಡವಾಳ ಹಿಂತೆಗೆತ ಕಾರ್ಯಕ್ರಮದಡಿ ಷೇರು ಬಿಡುಗಡೆಯಾಗಿ, ಸರಕಾರದ ಖಜಾನೆ ತುಂಬಿಸಿಕೊಟ್ಟು, ಸ್ವಲ್ಪ ಮಟ್ಟಿನ ಆಶಾದಾಯಕ ಲಾಭ ಗಳಿಸಿ ಕೊಟ್ಟ ಕಂಪೆನಿಗಳ ಪಟ್ಟಿಯಾಗಿದೆ. ಒಟ್ಟಿನಲ್ಲಿ ಬಂಡವಾಳ ಹಿಂತೆಗೆತದ ಅಡಿ ಪೇಟೆ ಪ್ರವೇಶಿಸಿದ ಮೇಲಿನ ಹೆಚ್ಚಿನ ಕಂಪೆನಿಗಳು ಹೂಡಿಕೆದಾರರಿಗೆ ಉತ್ತಮ ಕಾರ್ಪೊರೇಟ್ ಫಲಗಳನ್ನು ವಿತರಿಸಿವೆ. ಕೆಲವು ಷೇರಿನ ಬೆಲೆಗಳನ್ನು ಸಹ ಹೆಚ್ಚಿಸಿಕೊಂಡಿವೆ. ಇವು ಬಂಡವಾಳ ಹಿಂತೆಗೆತದ ಯಶೋಗಾಥೆಯ ಕಥೆಯಾಗಿದೆ. ಮುಂದಿನ ಕಂತಿನಲ್ಲಿ ಬಂಡವಾಳ ಹಿಂತೆಗೆತದಲ್ಲಿ ಹೂಡಿಕೆದಾರರ ಬಂಡವಾಳವನ್ನು ಕರಗಿಸಿದ ಕಂಪೆನಿಗಳ ವಿವರ ನೀಡಲಾಗುವುದು.

ಪರ್ಸನಲ್ ಸರ್ವಿಸಸ್ ಬ್ರೋಕರ್ - ಅವಶ್ಯವೆನಿಸುತ್ತಿರುವ ಪೇಟೆಪರ್ಸನಲ್ ಸರ್ವಿಸಸ್ ಬ್ರೋಕರ್ - ಅವಶ್ಯವೆನಿಸುತ್ತಿರುವ ಪೇಟೆ

English summary

Disinvestment of shares successful stories; benefited to investors, government both

Here is the list of disinvestment of shares successful stories; benefited to investors, government both. Explained by Oneindia columnist K.G.Krupal with examples.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X