ನಾವು ಪ್ರಸ್ತುತ ಎಲ್ಲಿ ಪ್ರವಾಸ ಮಾಡಬೇಕಾದರೂ ಕೂಡಾ ವಂದೇ ಭಾರತ್ ರೈಲಿನಲ್ಲಿ ಪ್ರವಾಸವು ನಮ್ಮ ಪ್ರಯಾಣವನ್ನು ಸರಳ, ಸುಲಭಗೊಡಿಸಿದೆ. ಇನ್ನು ವಂದೇ ಭಾರ್ ಎಕ್ಸ್‌ಪ್ರೆಸ್ ನಮ್ಮ ಪ್ರಯಾಣದ ಅವಧಿಯನ್ನು ಕೂಡಾ ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2047 ರ ವೇಳೆಗೆ ದೇಶವು 4,500 ವಂದೇ ಭಾರತ್ ರೈಲುಗಳನ್ನು ಹೊಂದಲಿದೆ ಎಂದು ಭರವಸೆ ನೀಡಿದ್ದಾರೆ.
ಗುರುವಾರದಿಂದ ಯಶವಂತಪುರ-ಕಾಚೇಗೌಡ ವಂದೇ ಭಾರತ್ ಎಕ್ಸ್‌ಪ್ರೆಸ್ 15 ನಿಮಿಷಗಳ ಕಡಿಮೆ ಅವಧಿಯಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲಿದೆ. ಇದು ಹಿಂದಿನ 8 ಗಂಟೆ 30 ನಿಮಿಷಗಳಿಗಿಂತ 15 ನಿಮಿಷ ಕಡಿಮೆಯಾಗಿ 8 ಗಂಟೆ 15 ನಿಮಿಷಗಳಲ್ಲಿ ದೂರವನ್ನು ಕ್ರಮಿಸುತ್ತದೆ. ಈ ರೈಲಿನ ಸಂಖ್ಯೆ, ಅವಧಿ, ಇತರೆ ವಿವರ ಇಲ್ಲಿದೆ ಮುಂದೆ ಓದಿ....

ರೈಲಿನ ಸಂಖ್ಯೆ ಅವಧಿ
ರೈಲು ಸಂಖ್ಯೆ 20703 ಕಾಚೇಗೌಡದಿಂದ ಬೆಳಗ್ಗೆ 5.30ಕ್ಕೆ ಬದಲಾಗಿ 5.45ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪಲಿದೆ. ಇತರ ನಿಲುಗಡೆಗಳ ಸಮಯವು ಮಹೆಬೂಬ್‌ನಗರ (ಬೆಳಿಗ್ಗೆ 6.54/6.55), ಕರ್ನೂಲ್ ಸಿಟಿ (ಬೆಳಿಗ್ಗೆ 8.29/8.30), ಅನಂತಪುರ (ಬೆಳಿಗ್ಗೆ 10.29/10.30), ಮತ್ತು ಧರ್ಮಾವರಂ (ಬೆಳಿಗ್ಗೆ 11.14/11.15) ಆಗಿದೆ.
ರೈಲು ಸಂಖ್ಯೆ 20704 ಯಶವಂತಪುರದಿಂದ ಮಧ್ಯಾಹ್ನ 2.45 ಕ್ಕೆ ಹೊರಟು ರಾತ್ರಿ 11.15 ಕ್ಕೆ ಬದಲಾಗಿ 11 ಗಂಟೆಗೆ ಕಾಚೇಗೌಡ ತಲುಪುತ್ತದೆ. ಇತರ ನಿಲುಗಡೆಗಳ ಸಮಯವು ಧರ್ಮಾವರಂ (4.39 pm/4.40 pm), ಅನಂತಪುರ (5.03 pm/5.06 pm), ಕರ್ನೂಲ್ ಸಿಟಿ (7.19 pm/7.20 pm), ಮತ್ತು ಮಹೆಬೂಬ್ನಗರ (9.04 pm/9.05 pm) ಆಗಿದೆ.
4500 ವಂದೇ ಭಾರತ್ ರೈಲು ಆರಂಭ
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2047 ರ ವೇಳೆಗೆ ದೇಶಾದ್ಯಂತ 4,500 ವಂದೇ ಭಾರತ್ ರೈಲುಗಳು ಇರಲಿದೆ ಎಂದು ಡಿಸೆಂಬರ್ 8 ರಂದು ತಿಳಿಸಿದರು. "2023 ರಲ್ಲಿ, ದೇಶದಲ್ಲಿ 23 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದೆ. 2047 ರ ವೇಳೆಗೆ 4,500 ವಂದೇ ಭಾರತ್ ರೈಲುಗಳು ಸಂಚರಿಸುವಂತೆ ಮಾಡುವುದು ನಮ್ಮ ಉದ್ದೇಶ," ಎಂದರು.
2026 ಮತ್ತು 27 ರ ನಡುವೆ ಭಾರತವು ತನ್ನ ಮೊದಲ ಹೈಸ್ಪೀಡ್ ಬುಲೆಟ್ ರೈಲು ಹೊಂದಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ನವಿ ಮುಂಬೈನಲ್ಲಿ ಎರಡನೇ ವಿಮಾನ ನಿಲ್ದಾಣವು 2024 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಕೂಡಾ ಇದೇ ಸಂದರ್ಭದಲ್ಲಿ ತಿಳಿಸಿದರು.
ಮುಂದಿನ ವರ್ಷದ ಅಂತ್ಯದ ವೇಳೆಗೆ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಜೆವಾರ್‌ನಲ್ಲಿ ತೆರೆಯಲಾಗುವುದು. ಡಿಸೆಂಬರ್ ಅಂತ್ಯದ ವೇಳೆಗೆ ಅಯೋಧ್ಯೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸಿದ್ಧವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದರು.


Click it and Unblock the Notifications