ಇಂಡಿಯನ್ ರೈಲ್ವೆ ಕ್ಯಾಟೆರಿಂಗ್ ಮತ್ತು ಟೂರಿಸಂ ಕಾಪೋರೇಷನ್ (ಐಆರ್‌ಸಿಟಿಸಿ) ಆದಾಯವುದು ಗಮನೀಯವಾಗಿ ಏರಿಕೆಯಾಗಿದೆ. ಪ್ರಮುಖವಾಗಿ ಆನ್‌ಲೈನ್ ಬುಕ್ಕಿಂಗ್ ವೇಳೆ ವಿಧಿಸಲಾಗುವ ಶುಲ್ಕದಿಂದಾಗಿ (convenience fee) ಐಆರ್‌ಸಿಟಿಸಿ ಆದಾಯವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಸತ್ತಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೀಡಿದ ಮಾಹಿತಿ ಪ್ರಕಾರ, ಐಆರ್‌ಸಿಟಿಸಿ ಆದಾಯವು ಕಳೆದ ಮೂರು ವರ್ಷದಲ್ಲಿ ದುಪ್ಪಟ್ಟಾಗಿದೆ. ಹಣಕಾಸು ವರ್ಷ 2019-20ರಲ್ಲಿ ಐಆರ್‌ಸಿಟಿಸಿಯು ಆನ್‌ಲೈನ್ ಬುಕ್ಕಿಂಗ್ ವೇಳೆ ವಿಧಿಸುವ ಶುಲ್ಕದ ಮೂಲಕ 352.33 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಈ ಆದಾಯವು ಹಣಕಾಸು ವರ್ಷ 2021-22ರಲ್ಲಿ 694 ಕೋಟಿ ರೂಪಾಯಿಗೆ ಜಿಗಿದಿದೆ.
ಲೋಕಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದ್ದು ಈ ಸಂದರ್ಭದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಐಆರ್‌ಸಿಟಿಸಿ ಆದಾಯದ ಬಗ್ಗೆ ಲಿಖಿತ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಚಿವರು ಐಆರ್‌ಸಿಟಿಸಿ ಆದಾಯ ಏರಿಕೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಹಾಗಾದರೆ ಐಆರ್‌ಸಿಟಿಸಿ ಆದಾಯ ಯಾವ ರೀತಿ ಏರಿಳಿತವಾಗಿದೆ ನೋಡೋಣ ಮುಂದೆ ಓದಿ....

ಐಆರ್‌ಸಿಟಿಸಿ ಆದಾಯದಲ್ಲಿ ಏರಿಳಿತ ಹೀಗಿದೆ
ಫೆಸಿಲಿಟಿ ಶುಲ್ಕದಿಂದ ಐಆರ್‌ಸಿಟಿಸಿ ಆದಾಯ 2019-20 ಹಣಕಾಸು ವರ್ಷದಲ್ಲಿ 352.33 ಕೋಟಿ ರೂಪಾಯಿ ಆಗಿದೆ. ಆದರೆ 2020-21ರಲ್ಲಿ ಲಾಕ್‌ಡೌನ್ ಹಾಗೂ ರೈಲು ಸಂಚಾರ ನಿಷೇಧ ಮಾಡಿದ ಕಾರಣದಿಂದಾಗಿ ಆದಾಯವು 299.17 ಕೋಟಿ ರೂಪಾಯಿಗೆ ಇಳಿದಿದೆ.
ಆದರೆ 2021-22ರಲ್ಲಿ ಐಆರ್‌ಸಿಟಿಸಿಯ ಸೇವಾ ಶುಲ್ಕ ಸಂಗ್ರಹವು 694.08 ಕೋಟಿ ರೂಪಾಯಿಗೆ ತಲುಪಿದೆ. ಅಂದರೆ ಆನ್‌ಲೈನ್ ಬುಕ್ಕಿಂಗ್ ವೇಳೆ ವಿಧಿಸಲಾಗುವ ಶುಲ್ಕದ ಮೂಲಕ ಐಆರ್‌ಸಿಟಿಸಿ ಸರಿಸುಮಾರು ಶೇಕಡ 100ರಷ್ಟು ಅಧಿಕ ಆದಾಯವನ್ನು ಸಂಗ್ರಹ ಮಾಡಿದೆ. ಹಣಕಾಸು ವರ್ಷ 2022-23ರ ಡಿಸೆಂಬರ್‌ವರೆಗೆ ಐಆರ್‌ಸಿಟಿಸಿ 604.40 ಕೋಟಿ ರೂಪಾಯಿ ಫೆಸಿಲಿಟಿ ಶುಲ್ಕವನ್ನು ಸಂಗ್ರಹಿಸಿದೆ.
ಏನಿದು convenience fee, ಎಷ್ಟಿದೆ?
ರೈಲ್ವೆ ಟಿಕೆಟ್ ಅನ್ನು ಆನ್‌ಲೈನ್ ಬುಕ್ಕಿಂಗ್ ಮಾಡುವ ವೇಳೆ ವಿಧಿಸಲಾಗುವ ಶುಲ್ಕವನ್ನು convenience fee ಎಂದು ಕರೆಯಲಾಗುತ್ತದೆ. ಎಸಿ ಕ್ಲಾಸ್‌ಗೆ ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿದರೆ 30 ರೂಪಾಯಿ convenience fee ಆಗಿದ್ದು, ಯುಪಿಐ ಮೂಲಕ ಟಿಕೆಟ್ ಬುಕ್ಕಿಂಗ್‌ಗೆ 20 ರೂಪಾಯಿ ಶುಲ್ಕವಾಗಿದೆ.
ನಾನ್-ಎಸಿ ಕ್ಲಾಸ್‌ಗೆ ಐಆರ್‌ಸಿಟಿಸಿ ಆನ್‌ಲೈನ್ ಬುಕ್ಕಿಂಗ್ ಶುಲ್ಕವಾಗಿ ನೆಟ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ವಹಿವಾಟಿಗೆ 15 ರೂಪಾಯಿ ವಿಧಿಸುತ್ತದೆ, ಆದರೆ ಯುಪಿಐ ವಹಿವಾಟಿಗೆ ಬರೀ 10 ರೂಪಾಯಿ ವಿಧಿಸಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು, ಈ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಶುಲ್ಕವನ್ನು ಟಿಕೆಟ್ ಕ್ಯಾನ್ಸೆಲ್ ಮಾಡಿದರೆ ರಿಫಂಡ್ ಮಾಡಲಾಗದು ಎಂದು ತಿಳಿಸಿದ್ದಾರೆ.
ರೈಲ್ವೆ ಪ್ರಯಾಣಿಕರ ನಿಯಮ 2015ರ ಅಡಿಯಲ್ಲಿ ಈ ಟಿಕೆಟ್ ಕ್ಯಾನ್ಸೆಲೇಷನ್‌ಗೂ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಮೊತ್ತವನ್ನು ಐಆರ್‌ಸಿಟಿಸಿಯು ನಿರ್ಧಾರ ಮಾಡುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications