ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವಾರು ಸಂಸ್ಥೆಗಳು ವೆಚ್ಚವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಮತ್ತು ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಾ ಬಂದಿದೆ. ಹಾಗೆಯೇ ಶಿಕ್ಷಣ ಪ್ಲಾಟ್‌ಫಾರ್ಮ್ ಆದ ಫ್ರಂಟ್‌ರೋ ಸುಮಾರು ಶೇಕಡ 75ರಷ್ಟು ಉದ್ಯೋಗವನ್ನು ಕಡಿತ ಮಾಡಿತ್ತು. ಈಗ ಈ ದೀಪಿಕಾ ಪಡುಕೋಣೆ ಮತ್ತು ರಫ್ತಾರ್ ನೇತೃತ್ವದ ಸಂಸ್ಥೆಯು ಸಂಪೂರ್ಣವಾಗಿ ಬಂದ್ ಆಗಿದೆ.
ಸೋಮವಾರ ಬಿಕ್ಯೂ ಪ್ರೈಮ್‌ಗೆ ನೀಡಿದ ಹೇಳಿಕೆಯಲ್ಲಿ, ಸಹ-ಸಂಸ್ಥಾಪಕ ಇಶಾನ್ ಪ್ರೀತ್ ಸಿಂಗ್ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜೂನ್ 30 ರಂದು ಸ್ಟಾರ್ಟ್ಅಪ್ ಅಧಿಕೃತವಾಗಿ ನಿಯಮಿತ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ. "ಈ ಪ್ಲಾಟ್‌ಫಾರ್ಮ್ ಸದ್ಯ ಮುಚ್ಚಲಾಗುತ್ತದೆ. ಸಂಭವನೀಯ ಖರೀದಿ ಒಪ್ಪಂದಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿಕೆಯಲ್ಲಿ ಇಶಾನ್ ಪ್ರೀತ್ ಸಿಂಗ್ ತಿಳಿಸಿದ್ದಾರೆ.

ಮುಂದಿನ ತಿಂಗಳುಗಳಲ್ಲಿ ಒಪ್ಪಂದದ ಬಗ್ಗೆ ನಿರ್ಧಾರವನ್ನು ಮಾಡಲಾಗುತ್ತದೆ. "ಮಕ್ಕಳ ಶಿಕ್ಷಣದ ನಿಟ್ಟಿನಲ್ಲಿ ನಾವು ಮೂರರಿಂದ ನಾಲ್ಕು ಟೆಸ್ಟ್‌ಗಳನ್ನು ಮಾಡಿದ್ದೇವೆ. ಎಲಿವೇಶನ್ ಕ್ಯಾಪಿಟಲ್, ಲೈಟ್‌ಸ್ಪೀಡ್ ವೆಂಚರ್ ಪಾರ್ಟ್‌ನರ್ಸ್, ಕ್ರೆಡ್‌ನ ಕುನಾಲ್ ಶಾ, ಅನಾಕಾಡೆಮಿಯ ಗೌರವ್ ಮುಂಜಾಲ್ ಮತ್ತು ಶೇರ್‌ಚಾಟ್‌ನ ಫರೀದ್ ಅಹ್ಸನ್‌ನಂತಹ ಹೂಡಿಕೆದಾರರ ಸಹಾಯದಿಂದ ಈ ಸ್ಟಾರ್ಟ್‌ಅಪ್ ಸರಿಸುಮಾರು 17.2 ಮಿಲಿಯನ್ ಡಾಲರ್ ಅಥವಾ 130 ಕೋಟಿ ರೂಪಾಯಿ ಫಂಡ್ ರೈಸ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Startups: ಬೆಂಗಳೂರು ಅಲ್ಲದೆ ಬೇರೆ ಜಿಲ್ಲೆಗಳಲ್ಲೂ ಸ್ಟಾರ್ಟ್‌ಅಪ್ ರಾಜ್ಯ ಸರ್ಕಾರದ ಬಯಕೆ, ಇಲ್ಲಿದೆ ವಿವರ
"ಕಂಪನಿಯನ್ನು ಎಲ್ಲಿ ಲೋಕೆಟ್ ಮಾಡುವುದು ಎಂಬ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ನಮ್ಮ ಸಂಸ್ಥೆಯು ಉತ್ತಮ ಬೆಳವಣಿಗೆಯನ್ನು ಕಂಡಿದೆ. ಉತ್ತಮ ಮಾರ್ಜಿನ್ ಅನ್ನು ಕೂಡಾ ಗಳಿಸಿದ್ದೇವೆ. ಆದರೆ ಸಣ್ಣ ಸಂಸ್ಥೆಯಾಗಿದೆ," ಎಂದು ಇಶಾನ್ ಪ್ರೀತ್ ಸಿಂಗ್ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದು ಫಂಡಿಂಗ್ ಅಥವಾ ಹಣದ ವಿವಾರವಲ್ಲ. ರನ್‌ವೇ ಮೂರು ವರ್ಷಕ್ಕಿಂತ ಹೆಚ್ಚು ಎಂದು ಘೋಷಣೆ ಮಾಡಿದ್ದಾರೆ. ನೀವು ಹೆಚ್ಚಿನ ಜ್ಞಾನವನ್ನು ಪಡೆದಂತೆ, ಒಂದು ಪ್ರಮುಖ ಕಂಪನಿಯನ್ನು ರಚಿಸುವ ನಿಮ್ಮ ಗುರಿಯು ವಾಸ್ತವಿಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಹೆಚ್ಚು ಮುಖ್ಯವಾಗಿದೆ ಎಂದು ಕೂಡಾ ಹೇಳಿದ್ದಾರೆ.
ದೀಪಿಕಾ ಪಡುಕೋಣೆ ವ್ಯವಹಾರ
ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ದೀಪಿಕಾ ಪಡುಕೋಣೆ ಹೆಸರುವಾಸಿಯಾಗಿದ್ದಾರೆ. ಹಲವಾರು ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ. 2014 ರಲ್ಲಿ ಕೆಎ ಎಂಟರ್‌ಪ್ರೈಸಸ್ ಅನ್ನು ಸ್ಥಾಪನೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಸ್ಕಿನ್‌ಕೇರ್ ಸಂಸ್ಥೆಗಳಿಗೆ ಹೂಡಿಕೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಬೆಂಬಲ ಮಾಡಿದ ಫ್ರಂಟ್‌ರೋ ಬಂದ್ ಆದರೂ ಕೂಡಾ ಬೇರೆ ಬೇರೆ ವ್ಯಾಪಾರಗಳಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ.


Click it and Unblock the Notifications