Startups: ಬೆಂಗಳೂರು ಅಲ್ಲದೆ ಬೇರೆ ಜಿಲ್ಲೆಗಳಲ್ಲೂ ಸ್ಟಾರ್ಟ್‌ಅಪ್‌ ರಾಜ್ಯ ಸರ್ಕಾರದ ಬಯಕೆ, ಇಲ್ಲಿದೆ ವಿವರ

ಹೂಡಿಕೆಯನ್ನು ಕರ್ನಾಟಕದ ಇತರೆ ಜಿಲ್ಲೆಗಳಿವೂ ವಿಸ್ತರಣೆ ಮಾಡಬೇಕು, ಬೆಂಗಳೂರಿನಲ್ಲೂ ಸ್ಟಾರ್ಟ್‌ಅಪ್ ವಿಸ್ತರಿಬೇಕು. ಆದ್ದರಿಂದಾಗಿ ಸ್ಟಾರ್ಟ್‌ಅಪ್‌ಗಳು ರಾಜಧಾನಿಯನ್ನು ಹೊರತಾಗಿ ಬೇರೆ ಜಿಲ್ಲೆಗಳ ಬಗ್ಗೆಯೂ ಚಿಂತನೆ ಮಾಡಬೇಕು ಎಂಬುವುದು ಕರ್ನಾಟಕ ರಾಜ್ಯ ಸರ್ಕಾರದ ಬಯಕೆಯಾಗಿದೆ. ಬೆಂಗಳೂರಿನ ಹೊರಗಿನ ಜಿಲ್ಲೆಗಳಾದ ಮೈಸೂರು, ಮಂಗಳೂರು, ತುಮಕೂರು, ಧಾರಾವಾಡ, ಶಿವಮೊಗ್ಗ, ಬೆಳವಾವಿ, ಮಂಡ್ಯ, ಚಾಮರಾಜನಗರ, ಉಡುಪಿ, ಮಣಿಪಾಲ, ಕಲಬುರಗಿಯಲ್ಲಿ ಟೆಕ್ ಕ್ಲಸ್ಟರ್ ಸೃಷ್ಟಿಸುವ ಪ್ರಸ್ತಾಪ ಇಟ್ಟಿದೆ.

ಬೆಂಗಳೂರು ಹೊರತಾಗಿ ಇತರೆ ಜಿಲ್ಲೆಗಳಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯನ್ನು 2032ರ ಒಳಗೆ 2,955ರಿಂದ 10,000ಕ್ಕೆ ಏರಿಸಲು ಸರ್ಕಾರ ಬಯಸಿದೆ. 2032ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿನ ಕಾರ್ಯತಂತ್ರದ ಚರ್ಚೆ ವೇಳೆ ಈ ಬಯಕೆಯನ್ನು ಸರ್ಕಾರವು ಪ್ರಸ್ತಾಪ ಮಾಡಿದೆ. ಬೆಂಗಳೂರಿನ ಹೊರಗೆ ಸ್ಟಾರ್ಟ್‌ಅಪ್‌ ಪ್ರಾರಂಭಿಸಲು, ಆರಂಭಿಕವಾಗಿ ಜಿಎಸ್‌ಟಿ ಮರುಪಾವತಿ, ಇತರೆ ಶುಲ್ಕ ಮರುಪಾವತಿ ಮಾಡಲಾಗುವುದು ಎಂದು ಹೇಳಿಕೊಂಡಿದೆ.

 ಇತರೆ ಜಿಲ್ಲೆಗಳಿಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆ

ಇತರೆ ಜಿಲ್ಲೆಗಳಿಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆ

ಫಾಕ್ಟರಿಗಳ ಕಾಯ್ದೆ, ವೇತನ ಕಾಯ್ದೆ ಅಡಿಯಲ್ಲಿ ಸ್ವಯಂ ಪ್ರಮಾಣಪತ್ರ ಫೈಲ್ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಡಿಜಿಟಲ್ ಇಕಾಮನಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವ್ ಕುಮಾರ್ ಗುಪ್ತಾ, "ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್‌ಗಳು ಅಧಿಕವಾಗಿದೆ. ಬೆಂಗಳೂರು ಮಾತ್ರವಲ್ಲದೆ ಬೇರೆಡೆ ಸ್ಟಾರ್ಟ್‌ಅಪ್‌ಗಳ ವಿಸ್ತರಣೆಯಾಗಬೇಕಾಗಿದೆ, ಪ್ರಮುಖವಾಗಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರಾವಾಡ," ಎಂದು ತಿಳಿಸಿದ್ದಾರೆ.

"ಸರ್ಕಾರವು ಈಗಾಗಲೇ ಅದಕ್ಕಾಗಿ ಯೋಜನೆಯನ್ನು ರೂಪಿಸಿದೆ. ಸ್ಟಾರ್ಟ್‌ಅಪ್‌ಗಳಿಗೆ 50 ಲಕ್ಷ ರೂಪಾಯಿವರೆಗೆ ನೀಡುತ್ತಿದೆ. ನಾವು ಕೂಡಾ ಬಿಯಾಂಡ್ ಬೆಂಗಳೂರು ಬ್ಲ್ಯೂ ಎಂಬುವುದನ್ನು ಆರಂಭಿಸಿದೆ. ಸ್ಟಾರ್ಟ್‌ಅಪ್ ಬೆಂಗಳೂರು ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲಿ ವಿಸ್ತರಿಸುವ ಗುರಿ ಹೊಂದಲಾಗಿದೆ," ಎಂದು ಹೇಳಿದ್ದಾರೆ.

 ಅತೀ ಹೆಚ್ಚು ದಟ್ಟಣೆ ಹೊಂದಿರುವ ನಗರ ಬೆಂಗಳೂರು

ಅತೀ ಹೆಚ್ಚು ದಟ್ಟಣೆ ಹೊಂದಿರುವ ನಗರ ಬೆಂಗಳೂರು

ಇನ್ನು ಪ್ರಮುಖವಾಗಿ ಬೆಂಗಳೂರು ಅತೀ ಟ್ರಾಫಿಕ್ ಹೊಂದಿರುವ ನಗರವಾದ ಕಾರಣ ಬೇರೆ ಜಿಲ್ಲೆಗಳಿಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಬೆಂಗಳೂರು ಅತೀ ದಟ್ಟಣೆಯನ್ನು ಹೊಂದಿರುವ ವಿಶ್ವದ ಎರಡನೇ ನಗರವಾಗಿದೆ ಎಂದು ಈಗಾಗಲೇ ಲೋಕೇಷನ್ ಟೆಕ್ನಾಲಜಿ ಸಂಸ್ಥೆಯಾದ ಟಾಮ್ ಟಾಮ್ ಹೇಳಿದೆ. ಮೊದಲ ಸ್ಥಾನದಲ್ಲಿ ಲಂಡನ್ ಇದೆ. ಇದು 10 ಕಿಲೋ ಮೀಟರ್ ಸಂಚಾರಕ್ಕೆ ಎಷ್ಟು ಸಮಯ ತಗಲುತ್ತದೆ ಎಂದು ಲೆಕ್ಕಾಚಾರದಲ್ಲಿ ಮಾಡಲಾದ ಅತೀ ಹೆಚ್ಚು ದಟ್ಟಣೆಯ ಪ್ರದೇಶದ ಪಟ್ಟಿಯಾಗಿದೆ.

 ಸರ್ಕಾರವು ಹಣ ಹೂಡಿಕೆ ಮಾಡಬೇಕು

ಸರ್ಕಾರವು ಹಣ ಹೂಡಿಕೆ ಮಾಡಬೇಕು

"2031ರ ವೇಳೆಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಆರ್ಥಿಕತೆ ಹೊಂದಿರಯವ ರಾಜ್ಯವನ್ನಾಗಿಸುವ ಕರ್ನಾಟಕ ಸರ್ಕಾರದ ಗುರಿ ಸರಿಯಾದದ್ದು, ಆದರೆ ಅದಕ್ಕಾಗಿ ಸರ್ಕಾರವು ಕೂಡಾ ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿಯೊಂದು ಸ್ಥಳದ ಮೇಲೂ ಭಾರೀ ಪ್ರಮಾಣದ ಹೂಡಿಕೆ ಮಾಡುವುದು ಅತೀ ಮುಖ್ಯವಾಗುತ್ತದೆ. ಮಂಗಳೂರು, ಮೈಸೂರು, ಮೊದಲಾದೆಡೆ ಟೆಕ್ ಹಬ್ ಸ್ಥಾಪಿಸಬೇಕಾಗುತ್ತದೆ, ಸ್ಟಾರ್ಟ್‌ಅಪ್‌ಗಳ ವಿಸ್ತರಣೆಯಾಗಬೇಕಾಗಿದೆ," ಎಂದು ಮಾಜಿ ಇನ್ಫೋಸಿಸ್ ನಿರ್ದೇಶಕ, ಆರಿನ್ ಕ್ಯಾಪಿಟಲ್ ಟಿವಿಯ ಚೇರ್‌ಮನ್ ಮೋಹನ್‌ದಾಸ್ ಪೈ ಹೇಳಿದ್ದಾರೆ.

 ಪ್ರತಿ ಜಿಲ್ಲೆಗೊಂದು ಸ್ಟಾರ್ಟ್‌ಅಪ್‌ ಪ್ಲ್ಯಾನ್

ಪ್ರತಿ ಜಿಲ್ಲೆಗೊಂದು ಸ್ಟಾರ್ಟ್‌ಅಪ್‌ ಪ್ಲ್ಯಾನ್

ಬೆಂಗಳೂರು ಹೊರತಾಗಿ ಇತರೆ ಜಿಲ್ಲೆಗಳಲ್ಲಿ, ಗ್ರಾಮೀಣ ಸಂಶೋಧನಾ ಕೇಂದ್ರ, ಕಾಲೇಜುಗಳಲ್ಲಿ ಲ್ಯಾಬ್‌/ ಸೆಂಟರ್‌ಗಳು ಮೊದಲಾದವುಗಳನ್ನು ಸ್ಥಾಪನೆ ಮಾಡಬಹುದಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಮಂಗಳೂರು, ಉಡುಪಿ, ಮಣಿಪಾಲ, ಹುಬ್ಬಳ್ಳಿ, ಬೆಳಗಾವಿ ಮತ್ತು ಧಾರಾವಾಡದ ಸರಿ ಸುಮಾರು 400,000 ಸ್ಕ್ವೇರ್‌ ಫೀಟ್ ವಿಸ್ತಾರದಲ್ಲಿ 5,000 ಆಸನದ ಟೆಕ್ನಾಲಜಿ ಕ್ಲಸ್ಟರ್‌ಗಳ ಆರಂಭದ ಚಿಂತನೆಯಿದೆ. ಪ್ರತಿ ಒಂದು ಜಿಲ್ಲೆಯಲ್ಲಿ ಒಂದಾದರೂ ಸ್ಟಾರ್ಟ್‌ಅಪ್‌ಗಳ ಆರಂಭಕ್ಕೆ ಯೋಜನೆ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ. ಇನ್ನು ಮಹಿಳೆಯರು ಸ್ಟಾರ್ಟ್‌ಅಪ್‌ ಆರಂಭಿಸಲು ಹೆಚ್ಚಿನ ಪ್ರೋತ್ಸಾಹ ನೀಡುವ ಚಿಂತನೆಯನ್ನು ಕೂಡಾ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+