ಎಲ್ ಪಿಜಿ ಸಿಲಿಂಡರ್ ಉಚಿತವಾಗಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಪೈಪ್ ಲೈನ್ ಗ್ಯಾಸ್ ಸಂಪರ್ಕ ಪಡೆಯದಂಥ ಮನೆಗಳಲ್ಲಿ ಎಲ್ ಪಿಜಿ ಸಿಲಿಂಡರ್ ಗೆ ಹಣವೇ ಪಾವತಿಸದೆ ಪೇಟಿಎಂ ಮೂಲಕ ಬುಕ್ ಮಾಡುವ ಅವಕಾಶವೊಂದಿದೆ. ಸೀಮಿತ ಅವಧಿಗೆ ಈ ಆಫರ್ ನೀಡಲಾಗುತ್ತಿದೆ. ಜನವರಿ 31, 2021ರ ತನಕ ಅವಕಾಶ ಇದ್ದು, ರು. 700ರ ತನಕ ಕ್ಯಾಶ್ ಬ್ಯಾಕ್ ದೊರೆಯಲಿದೆ.
ದೇಶದ ಬಹುತೇಕ ಭಾಗಗಳಲ್ಲಿ ಸಬ್ಸಿಡಿ ನಂತರ ಎಲ್ ಪಿಜಿ ದರ ರು. 700ರಿಂದ 750 ಇದೆ. ಯಾರು ಪೇಟಿಎಂನಲ್ಲಿ ಮೊದಲ ಬಾರಿಗೆ ಸಿಲಿಂಡರ್ ಬುಕ್ ಮಾಡುತ್ತಾರೋ ಅವರಿಗೆ ಈ ಆಫರ್ ದೊರೆಯುತ್ತದೆ. ಇನ್ನು ಮೊದಲ ಬಾರಿಗೆ ಐವಿಆರ್ ಎಸ್ ಮತ್ತು ಅದೇ ರೀತಿಯ ಇತರ ವಿಧಾನಗಳಲ್ಲಿ ಬುಕ್ ಮಾಡಿದಾಗಲೂ ಆಫರ್ ಸಿಗುತ್ತದೆ.
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
ಕ್ಯಾಶ್ ಬ್ಯಾಕ್ ತಾನಾಗಿಯೇ ಬಳಕೆದಾರರಿಗೆ ಅನ್ ಲಾಕ್ ಆಗುತ್ತದೆ. ಎಚ್ ಪಿ, ಇಂಡೇನ್, ಭಾರತ್ ಗ್ಯಾಸ್ ಎಲ್ಲ ಎಲ್ ಪಿಜಿ ಬುಕ್ಕಿಂಗ್ ಗೂ ಇದು ಆನ್ವಯ ಆಗುತ್ತದೆ. ಬುಕ್ಕಿಂಗ್ ಪಾವತಿ ಯಶಸ್ವಿಯಾದ ಇಪ್ಪತ್ನಾಲ್ಕು ಗಂಟೆಯೊಳಗಾಗಿ ಗ್ರಾಹಕರು ಕ್ಯಾಶ್ ಬ್ಯಾಕ್ ಪಡೆಯುತ್ತಾರೆ. ಒಂದು ವೇಳೆ ಕಾರ್ಡ್ ಸ್ಕ್ರಾಚ್ ಮಾಡುವುದರಲ್ಲಿ ಸಮಸ್ಯೆ ಕಂಡುಬಂದಲ್ಲಿ ಪೇಟಿಎಂ ಅಪ್ಲಿಕೇಷನ್ ನ ಆಫರ್ಸ್ ವಿಭಾಗಕ್ಕೆ ಭೇಟಿ ನೀಡಬಹುದು.
ಇನ್ನೊಂದು ಸಂಗತಿ ನೆನಪಿಟ್ಟುಕೊಳ್ಳಬೇಕು. ಪ್ರತಿ ಸ್ಕ್ರಾಚ್ ಕಾರ್ಡ್ ವಿತರಣೆ ಆದ ಏಳು ದಿನಗಳೊಳಗೆ ಎಕ್ಸ್ ಪೈರ್ ಆಗುತ್ತದೆ. ಅಷ್ಟರೊಳಗಾಗಿ ಸ್ಕ್ರಾಚ್ ಮಾಡಿ, ರಿವಾರ್ಡ್ ಪಡೆಯಬೇಕು.