For Quick Alerts
ALLOW NOTIFICATIONS  
For Daily Alerts

ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಯ ಎಟಿಎಂ ಕಾರ್ಡ್, ಇಬ್ಯಾಂಕಿಂಗ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

|

ಇಬ್ಯಾಂಕಿಂಗ್/ಎಂಬ್ಯಾಂಕಿಂಗ್ ಸೇವೆ ಮತ್ತು ಚೆಕ್ ಬುಕ್ ಅನ್ನು ಸಕ್ರಿಯಗೊಳಿಸುವ ಮೂಲಕ ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಬಯಸುವ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಗಳ ಖಾತೆದಾರರು, ಆರ್‌ಐಸಿಟಿ-ಸಿಬಿಎಸ್ ಶಾಖೆಯ ಅಂಚೆ ಕಚೇರಿಗಳಲ್ಲಿಯೂ ತಮ್ಮ ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.

ಪೋಸ್ಟ್‌ ಆಫೀಸ್‌ನ ಖಾತೆಯಲ್ಲಿ ಎಟಿಎಂ ಕಾರ್ಡ್ ಅಥವಾ ಇಬ್ಯಾಂಕಿಂಗ್/ಎಂಬ್ಯಾಂಕಿಂಗ್ ಸೇವೆಗಳಿಗೆ ಅರ್ಜಿ ಸಲ್ಲಿಸಲು ಖಾತೆದಾರರು ಮಾನ್ಯವಾದ ಪ್ಯಾನ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ಈ ಅಂಶಗಳನ್ನು ಮರೆಯದಿರಿ..ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ಈ ಅಂಶಗಳನ್ನು ಮರೆಯದಿರಿ..

ಈ ಬಗ್ಗೆ ಅಂಚೆ ಇಲಾಖೆಯು (ಡಿಒಪಿ) ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ ವಿವಿಧ ಅಂಚೆ ಕಚೇರಿ ಉಳಿತಾಯ ಖಾತೆ ಸೇವೆಗಳನ್ನು ಪಡೆಯಲು ಪ್ರಕ್ರಿಯೆಯನ್ನು ವಿವರಿಸಿದೆ. ಅಂಚೆ ಇಲಾಖೆಯ ಸುತ್ತೋಲೆಯ ಪ್ರಕಾರ ಎಟಿಎಂ ಕಾರ್ಡ್ ವಿತರಣೆ ಮಾಡಲು, ಇಬ್ಯಾಂಕಿಂಗ್/ಎಂಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸಲು, ಶಾಖಾ ಅಂಚೆ ಕಚೇರಿಗಳಿಂದ ಚೆಕ್‌ ಬುಕ್‌ ಅನ್ನು ಪಡೆಯಬೇಕಾದರೆ, ಈ ಕೆಳಗಿನ ವಿಧಾನವನ್ನು ಅನುಸರಿಸಬೇಕಾಗುತ್ತದೆ.

 ಪೋಸ್ಟ್‌ ಆಫೀಸ್‌ ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಪೋಸ್ಟ್‌ ಆಫೀಸ್‌ ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

* ಎಟಿಎಂ ಕಾರ್ಡ್ ಸೌಲಭ್ಯವನ್ನು ಪಡೆಯಲು, ಖಾತೆದಾರರು ಎಸ್‌ಬಿ-ಎಟಿಎಂಐ ಫಾರ್ಮ್ ಅನ್ನು (ಎಟಿಎಂ ಕಾರ್ಡ್/ಇಂಟರ್ನೆಟ್/ಮೊಬೈಲ್/ಎಸ್‌ಎಂಎಸ್ ಬ್ಯಾಂಕಿಂಗ್ ಸೇವಾ ವಿನಂತಿ ಫಾರ್ಮ್) ಭರ್ತಿ ಮಾಡಬೇಕು ಮತ್ತು ಎಸ್‌ಬಿ-ಎಟಿಎಂ-ಎಲ್ ಫಾರ್ಮ್ ಅನ್ನು ಸಂಬಂಧಿತ ಬ್ರಾಂಚ್‌ ಆಫೀಸ್‌ನಲ್ಲಿ ಪಾಸ್‌ಬುಕ್‌ನೊಂದಿಗೆ ಸಲ್ಲಿಸಬೇಕು.
* ಜಿಡಿಎಸ್ (ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌) ಬಿಪಿಎಂ ನಮೂನೆಯನ್ನು ಪರಿಶೀಲಿಸಬೇಕು ಮತ್ತು ಸಂಗ್ರಹಿಸಿದ ಪಾಸ್‌ಬುಕ್‌ಗಾಗಿ ಖಾತೆದಾರರಿಗೆ ಎಸ್‌ಬಿ -28 ರಶೀದಿಯನ್ನು ನೀಡಬೇಕು.
* ಜಿಡಿಎಸ್ ಬಿಪಿಎಂ ಎಸ್‌ಬಿ-ಎಟಿಎಂ ಫಾರ್ಮ್ ಅನ್ನು ಪಾಸ್‌ಬುಕ್‌ನೊಂದಿಗೆ ಬಿಒ ಜರ್ನಲ್/ಬಿಒ ಡೈಲಿ ಅಕೌಂಟ್‌ಗೆ ಸರಿಯಾಗಿ ನಮೂದಿಸಿದ ಆಯಾ ಖಾತೆ ಕಚೇರಿಗೆ ಕಳುಹಿಸಬೇಕು.
* ಖಾತೆ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ಎಸ್‌ಬಿ-ಎಟಿಎಂಐ ಫಾರ್ಮ್ ಅನ್ನು ಸ್ವೀಕರಿಸಿದ ನಂತರ, ಪೋಸ್ಟ್‌ಮಾಸ್ಟರ್ ಎಟಿಎಂ ಕಾರ್ಡ್‌ಗಾಗಿ ಖಾತೆದಾರರ ಅರ್ಹತೆಗಾಗಿ ಫಾರ್ಮ್ ಅನ್ನು ಪರೀಕ್ಷಿಸಬೇಕು.
* ಅರ್ಹತೆ ಹೊಂದಿದ್ದರೆ, ಎಟಿಎಂ ಕಾರ್ಡ್‌ಗಳ ವಿತರಣೆಗೆ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಗ್ರಾಹಕರ ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಯ ವಿರುದ್ದ ಎಸ್‌ಪಿಎಂ ಫಿನಾಕಲ್‌ನಲ್ಲಿ ಎಟಿಎಂ ಕಾರ್ಡ್ ಅನ್ನು ವಿತರಿಸುತ್ತದೆ.
* ಎಟಿಎಂ ಕಾರ್ಡ್ ನೀಡಿದ ನಂತರ ಎಸ್‌ಪಿಎಮ್‌ ಎಸ್‌-ಎಟಿಎಂಐ ಫಾರ್ಮ್ ಅನ್ನು ಎಸ್‌ಬಿ-ಎಟಿಎಮ್‌ಐ ಫಾರ್ಮ್‌ನ ಗಾರ್ಡ್ ಫೈಲ್‌ನಲ್ಲಿ ಇಡಬೇಕು
* ಎಟಿಎಂ ಕಾರ್ಡ್ ವಿತರಣೆ ರಿಜಿಸ್ಟರ್‌ನಲ್ಲಿ, ಎಸ್‌ಪಿಎಂ ಬಿಒ ಮತ್ತು ಎಟಿಎಂ ಕಾರ್ಡ್ ರವಾನೆಯ ದಿನಾಂಕವನ್ನು ಬಿಒಗೆ ಬರೆದು ಸಹಿ ಮಾಡಬೇಕು.
* ಎಟಿಎಂ ಕಾರ್ಡ್ ಮತ್ತು ಸಹಿಗಾಗಿ ಎಸ್‌ಪಿಎಂ ಗ್ರಾಹಕರ ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆ ಪಾಸ್‌ಬುಕ್‌ನಲ್ಲಿ ರಿಮಾರ್ಕ್ ಹಾಕಬೇಕು.
* ಎಸ್‌ಪಿಎಂ ಎಟಿಎಂ ಕಾರ್ಡ್ ಮತ್ತು ಪಾಸ್‌ಬುಕ್ ಅನ್ನು ಬಿಒ ಸ್ಲಿಪ್‌ನಲ್ಲಿ ನಮೂದಿಸಿದ ಸಂಬಂಧಿತ ಶಾಖೆಯ ಅಂಚೆ ಕಚೇರಿಗೆ ಕಳುಹಿಸಬೇಕು.
* ಪೋಸ್ಟ್‌ ಆಫೀಸ್‌ನ ಖಾತೆ ಕಚೇರಿಯಿಂದ ಎಟಿಎಂ ಕಾರ್ಡ್ ಮತ್ತು ಪಾಸ್‌ಬುಕ್ ಪಡೆದ ಮೇಲೆ, ಜಿಡಿಎಸ್ ಬಿಪಿಎಂ ಎಸ್‌ಬಿ 28 ರ ಠೇವಣಿದಾರರ ನಕಲನ್ನು ವಾಪಸ್ ತೆಗೆದುಕೊಂಡು ಕಚೇರಿಯ ನಕಲಿನಲ್ಲಿ ಅಂಟಿಸಿ ಎಟಿಎಂ ಕಾರ್ಡ್/ಪಾಸ್‌ಬುಕ್ ಅನ್ನು ಎಸ್‌ಬಿ 28 ರ ಸ್ವೀಕೃತಿಯ ಅಡಿಯಲ್ಲಿ ಠೇವಣಿದಾರರಿಗೆ ಅಂಚೆ ಕಚೇರಿ ನೀಡಬೇಕು.

 ಇಬ್ಯಾಂಕಿಂಗ್‌/ಎಮ್‌ಬ್ಯಾಂಕಿಂಗ್‌ ಸಕ್ರಿಯಗೊಳಿಸಲು ಪಾಲಿಸಬೇಕಾದ ಪ್ರಕ್ರಿಯೆ

ಇಬ್ಯಾಂಕಿಂಗ್‌/ಎಮ್‌ಬ್ಯಾಂಕಿಂಗ್‌ ಸಕ್ರಿಯಗೊಳಿಸಲು ಪಾಲಿಸಬೇಕಾದ ಪ್ರಕ್ರಿಯೆ

ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ ಇಬ್ಯಾಂಕಿಂಗ್/ಎಂಬ್ಯಾಂಕಿಂಗ್ ಸೇವೆಯನ್ನು ಸಕ್ರಿಯಗೊಳಿಸಲು ಡಿಒಪಿ ಈ ಕೆಳಗಿನ ಹಂತಗಳನ್ನು ಬಿಡುಗಡೆ ಮಾಡಿದೆ.

* ಇಬ್ಯಾಂಕಿಂಗ್‌ ಅಥವಾ ಎಂಬ್ಯಾಂಕಿಂಗ್ ಸೇವೆಯನ್ನು ಸಕ್ರಿಯಗೊಳಿಸಲು ಖಾತೆದಾರರು ಎಸ್‌ಬಿ-ಎಟಿಎಮ್‌-ಐ ಫಾರ್ಮ್ ಅನ್ನು ಭರ್ತಿ ಆಗಬೇಕು, (ಎಟಿಎಂ ಕಾರ್ಡ್/ಇಂಟರ್ನೆಟ್/ಮೊಬೈಲ್/ಎಸ್‌ಎಮ್‌ಎಸ್‌ ಬ್ಯಾಂಕಿಂಗ್ ಸೇವಾ ಅರ್ಜಿ ನಮೂನೆ), ಸರಿಯಾದ ಸ್ಥಳದಲ್ಲಿ ಸಹಿ ಮಾಡಿ ಮತ್ತು ಎಸ್‌ಬಿ-ಎಟಿಎಮ್‌-ಐ ಫಾರ್ಮ್ ಅನ್ನು ಸಂಬಂಧಿತ ಬ್ರಾಂಚ್‌ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ಸಲ್ಲಿಸಿ
* ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ಬಿಪಿಎಂ ನಮೂನೆಯನ್ನು ಪರಿಶೀಲಿಸಬೇಕು ಮತ್ತು ಸಂಗ್ರಹಿಸಿದ ಪಾಸ್‌ಬುಕ್‌ಗಾಗಿ ಖಾತೆದಾರರಿಗೆ ಎಸ್‌ಬಿ -28 ರಶೀದಿಯನ್ನು ನೀಡಬೇಕು
* ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ಅಥವಾ ಜಿಡಿಎಸ್ ಬಿಪಿಎಂ ಎಸ್‌ಬಿ-ಎಟಿಎಂ ಫಾರ್ಮ್ ಅನ್ನು ಪಾಸ್‌ಬುಕ್‌ನೊಂದಿಗೆ ಬಿಒ ಜರ್ನಲ್/ಬಿಒ ಡೈಲಿ ಅಕೌಂಟ್‌ಗೆ ಸರಿಯಾಗಿ ನಮೂದಿಸಿದ ಆಯಾ ಖಾತೆ ಕಚೇರಿಗೆ ಕಳುಹಿಸಬೇಕು.
* ಖಾತೆ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ಎಸ್‌ಬಿ-ಎಟಿಎಂ ಐ ಫಾರಂ ಪಡೆದ ನಂತರ, ಇ-ಬ್ಯಾಂಕಿಂಗ್/ಎಬ್ಯಾಂಕಿಂಗ್ ಒದಗಿಸಲು ಖಾತೆದಾರರ ಅರ್ಹತೆಗಾಗಿ ಖಾತೆ ಕಚೇರಿಯು ಫಾರ್ಮ್ ಅನ್ನು ಪರಿಶೀಲನೆ ನಡೆಸುತ್ತದೆ.
* ಅರ್ಹತೆ ಹೊಂದಿದ್ದರೆ, ಎಸ್‌ಬಿಎಂ ಇ -ಬ್ಯಾಂಕಿಂಗ್/ಎಮ್‌ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸಲು ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಗ್ರಾಹಕರ ಪಿಒ ಉಳಿತಾಯ ಖಾತೆಯ ಇ -ಬ್ಯಾಂಕಿಂಗ್/ಎಮ್‌ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ.
* ಎಸ್‌ಬಿಎಂ ಗ್ರಾಹಕರ ಪಿಒ ಉಳಿತಾಯ ಖಾತೆ ಪಾಸ್‌ಬುಕ್‌ನಲ್ಲಿ ಇಬ್ಯಾಂಕಿಂಗ್/ಎಮ್‌ಬ್ಯಾಂಕಿಂಗ್ ಮತ್ತು ಸಹಿಯನ್ನು ಸಕ್ರಿಯಗೊಳಿಸಲು ಒಂದು ರಿಮಾರ್ಕ್ ಅನ್ನು ಹಾಕುತ್ತದೆ.
* ಇಬ್ಯಾಂಕಿಂಗ್‌/ಎಮ್‌ಬ್ಯಾಂಕಿಂಗ್‌ ಅನ್ನು ಸಕ್ರಿಯಗೊಳಿಸಿದ ನಂತರ ಎಸ್‌ಪಿಎಮ್‌ ಎಸ್‌ಬಿ-ಎಟಿಎಮ್‌ಐ ಫಾರ್ಮ್ ಅನ್ನು ಇಬ್ಯಾಂಕಿಂಗ್/ಎಮ್‌ಬ್ಯಾಂಕಿಂಗ್‌ ಫಾರ್ಮ್‌ನ ಗಾರ್ಡ್ ಫೈಲ್‌ನಲ್ಲಿ ಇಡಬೇಕು.
* ಖಾತೆ ಕಚೇರಿಯಿಂದ ಪಾಸ್‌ಬುಕ್ ಪಡೆದ ನಂತರ, ಜಿಡಿಎಸ್ ಶಾಖೆಯ ಪೋಸ್ಟ್‌ಮಾಸ್ಟರ್ ಎಸ್‌ಬಿ -28 ರ ಠೇವಣಿದಾರರ ಪ್ರತಿಯನ್ನು ಹಿಂಪಡೆದು ಕಛೇರಿಯ ಪ್ರತಿಯ ಮೇಲೆ ಅಂಟಿಸಿದ ನಂತರ ಪಾಸ್‌ಬುಕ್ ಅನ್ನು ಠೇವಣಿದಾರರಿಗೆ ರಶೀದಿಯಲ್ಲಿ ನೀಡಲಾಗುತ್ತದೆ.
* ಇಬ್ಯಾಂಕಿಂಗ್‌/ಎಮ್‌ಬ್ಯಾಂಕಿಂಗ್‌ ಸಕ್ರಿಯಗೊಳಿಸಲು ಖಾತೆದಾರರ ಮೊಬೈಲ್ ಮೂಲಕ ಎಸ್‌ಎಮ್‌ಎಸ್‌ ಬಂದ ಬಳಿಕ ಖಾತೆದಾರರು ಹೊಸ ಬಳಕೆದಾರ ಸಕ್ರಿಯಗೊಳಿಸುವಿಕೆಗಾಗಿ https://ebanking.indiapost.gov.in ಅಥವಾ lndia Post Mobile Banking App ನಲ್ಲಿ ಪ್ರಕ್ರಿಯೆ ಮುಂದುವರಿಸಬೇಕು.

ಕೊರೊನಾ ನಂತರದ ಜೀವನ ವೈಯಕ್ತಿಕ ಆರ್ಥಿಕ ಸಲಹೆಗಾರ ವೃತ್ತಿಯತ್ತ, ಯಾಕೆ?ಕೊರೊನಾ ನಂತರದ ಜೀವನ ವೈಯಕ್ತಿಕ ಆರ್ಥಿಕ ಸಲಹೆಗಾರ ವೃತ್ತಿಯತ್ತ, ಯಾಕೆ?

 ಚೆಕ್‌ ಬುಕ್‌ಗಾಗಿ ಪಾಲಿಸಬೇಕಾದ ವಿಧಾನಗಳು

ಚೆಕ್‌ ಬುಕ್‌ಗಾಗಿ ಪಾಲಿಸಬೇಕಾದ ವಿಧಾನಗಳು

ಅಂಚೆ ಇಲಾಖೆಯು (ಡಿಒಪಿ) ಹೊರಡಿಸಿದ ಸುತ್ತೋಲೆಯ ಪ್ರಕಾರ, ಪೋಸ್ಟ್ ಆಫೀಸ್ ಉಳಿತಾಯ ಖಾತೆಗಾಗಿ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನವನ್ನು ಅನುಸರಿಸಬೇಕು.
* ಶಾಖೆಯ ಅಂಚೆ ಕಚೇರಿಗಳಲ್ಲಿನ ಪೋಸ್ಟ್‌ ಆಫೀಸ್ ಉಳಿತಾಯ ಖಾತೆಯ ಖಾತೆದಾರರು ಚೆಕ್ ಬುಕ್ ಸೌಲಭ್ಯವನ್ನು ಖಾತೆ ತೆರೆಯುವ ಸಮಯದಲ್ಲಿ ಅಥವಾ ಎಸ್‌ಬಿ/ಸಿಕ್ಯೂಇ-4 ನಮೂನೆಯನ್ನು (ಚೆಕ್ ಸೌಲಭ್ಯ ಪಡೆಯಲು ಅರ್ಜಿ/ಹೊಸ ಚೆಕ್ ಪುಸ್ತಕವನ್ನು) ಸಂಬಂಧಿತ ಬ್ರಾಂಚ್‌ ಆಫೀಸ್‌ನಲ್ಲಿ ಸಲ್ಲಿಸಬಹುದು.
* ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ಅಥವಾ ಜಿಡಿಎಸ್ ಬಿಪಿಎಂ ನಮೂನೆಯನ್ನು ಪರಿಶೀಲಿಸಬೇಕು ಮತ್ತು ಸಂಗ್ರಹಿಸಿದ ಪಾಸ್‌ಬುಕ್‌ಗಾಗಿ ಖಾತೆದಾರರಿಗೆ ಎಸ್‌ಬಿ -28 ರಶೀದಿಯನ್ನು ನೀಡಬೇಕು.
* ಚೆಕ್ ಬುಕ್ ಸೌಲಭ್ಯವು ಅನಕ್ಷರಸ್ಥ ಠೇವಣಿದಾರರಿಗೆ ಲಭ್ಯವಿಲ್ಲ. ಸಣ್ಣ ಖಾತೆ (ಸ್ವಯಂ) ಮತ್ತು ಕೈಯಲ್ಲಿ ಸಹಿ ಮಾಡದವರಿಗೆಯೂ ಚೆಕ್ ಬುಕ್ ಸೌಲಭ್ಯವು ಇಲ್ಲ. ಖಾತೆ ಕಚೇರಿಗೆ ನಮೂನೆಯನ್ನು ಕಳುಹಿಸುವ ಮೊದಲು ಜಿಡಿಎಸ್ ಬಿಪಿಎಂ ಅರ್ಹತೆಯನ್ನು ಪರೀಕ್ಷಿಸಬೇಕು.
* ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ಬಿಪಿಎಂ ಎಸ್‌ಬಿ/ಸಿಕ್ಯೂಇ -4 ಫಾರ್ಮ್ ಅನ್ನು ಪಾಸ್‌ಬುಕ್‌ನೊಂದಿಗೆ ಬಿಒ ಜರ್ನಲ್/ಬಿಒ ಡೈಲಿ ಅಕೌಂಟ್‌ಗೆ ಸರಿಯಾಗಿ ನಮೂದಿಸಿದ ಆಯಾ ಖಾತೆ ಕಚೇರಿಗೆ ಕಳುಹಿಸಬೇಕು.
* ಖಾತೆ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ಎಸ್‌ಬಿ/ಸಿಕ್ಯೂಇ-4 ನಮೂನೆಯನ್ನು ಸ್ವೀಕರಿಸಿದ ನಂತರ, ಖಾತೆ ಕಚೇರಿಯು ಚೆಕ್ ಪುಸ್ತಕವನ್ನು ಪಡೆಯಲು ಖಾತೆದಾರರ ಅರ್ಹತೆಗಾಗಿ ಫಾರ್ಮ್ ಅನ್ನು ಪರೀಕ್ಷಿಸಬೇಕು.
* ಎಸ್‌ಪಿಎಂ ನಿಗದಿತ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಗ್ರಾಹಕರ ಪಿಒ ಉಳಿತಾಯ ಖಾತೆಯ ಫಿನಾಕಲ್‌ನಲ್ಲಿ ಚೆಕ್ ಪುಸ್ತಕವನ್ನು ನೀಡತಕ್ಕದ್ದು
* ಎಸ್‌ಪಿಎಂ ಗ್ರಾಹಕರ ಪಿಒ ಉಳಿತಾಯ ಖಾತೆ ಪಾಸ್‌ಬುಕ್‌ನಲ್ಲಿ ಚೆಕ್ ಪುಸ್ತಕವನ್ನು ನೀಡಿ ಸಹಿ ಹಾಕಲು ಒಂದು ರಿಮಾರ್ಕ್ ಅನ್ನು ಹಾಕಬೇಕು.
* ಚೆಕ್ ಬುಕ್ ನೀಡಿದ ನಂತರ ಎಸ್‌ಪಿಎಮ್‌ ಎಸ್‌ಬಿ/ಸಿಕ್ಯೂಇ-4 ಫಾರ್ಮ್ ಅನ್ನು ಎಸ್‌ಬಿ-ಸಿಕ್ಯೂಇ-4 ಫಾರ್ಮ್‌ಗಳ ಗಾರ್ಡ್ ಫೈಲ್‌ನಲ್ಲಿ ಇಡಬೇಕು.
* ಚೆಕ್ ಬುಕ್ ಇಶ್ಯೂ ರಿಜಿಸ್ಟರ್ ನಲ್ಲಿ ಎಸ್‌ಪಿಎಂ ಬಿಒ ಹೆಸರು ಮತ್ತು ಚೆಕ್ ಬುಕ್ ರವಾನೆಯ ದಿನಾಂಕವನ್ನು ಬಿಒಗೆ ಬರೆದು ಸಹಿ ಮಾಡಬೇಕು.
* ಎಸ್‌ಪಿಎಂ ಚೆಕ್ ಬುಕ್ ಮತ್ತು ಪಾಸ್‌ಬುಕ್ ಅನ್ನು ಬಿಒ ಸ್ಲಿಪ್‌ನಲ್ಲಿ ನಮೂದಿಸಿದ ಸಂಬಂಧಪಟ್ಟ ಶಾಖಾ ಅಂಚೆ ಕಚೇರಿಗೆ ಕಳುಹಿಸಬೇಕು.
* ಖಾತೆ ಕಚೇರಿಯಿಂದ ಚೆಕ್ ಬುಕ್ ಮತ್ತು ಪಾಸ್ ಬುಕ್ ಪಡೆದ ಮೇಲೆ, ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ಶಾಖೆಯ ಪೋಸ್ಟ್ ಮಾಸ್ಟರ್ ಎಸ್ ಬಿ -28 ರ ಠೇವಣಿದಾರರ ಪ್ರತಿಯನ್ನು ತೆಗೆದ ನಂತರ ಚೆಕ್ ಬುಕ್ ಮತ್ತು ಪಾಸ್ ಬುಕ್ ಅನ್ನು ಖಾತೆದಾರರಿಗೆ ನೀಡಬೇಕು ಮತ್ತು ಆಫೀಸ್ ಕಾಪಿಗೆ ಅಂಟಿಸಬೇಕು.

ದುಂದುವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌ದುಂದುವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌

 ತಪ್ಪದೇ ಗಮನಿಸಿ

ತಪ್ಪದೇ ಗಮನಿಸಿ

ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆದಾರರು ತಮ್ಮ ಬ್ರಾಂಚ್‌ ಆಫೀಸ್‌ನ ಎಟಿಎಂ ಅರ್ಜಿ ನಮೂನೆಯನ್ನು ಪಾಸ್‌ಬುಕ್‌ನೊಂದಿಗೆ ಖಾತೆ ಕಚೇರಿಯಲ್ಲಿ ಸಲ್ಲಿಸಬಹುದು ಮತ್ತು ಖಾತೆ ಕಚೇರಿಯು ಡಿಒಪಿಯ ಸುತ್ತೋಲೆಯ ಪ್ರಕಾರ ಈ ಅರ್ಜಿಯ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಬ್ರಾಂಚ್‌ ಆಫೀಸ್‌ನ ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆದಾರರು ಸಹ ಇ -ಬ್ಯಾಂಕಿಂಗ್/ಎಮ್‌ಬ್ಯಾಂಕಿಂಗ್‌ ಮನವಿಯ ಅರ್ಜಿ ನಮೂನೆಯನ್ನು ಪಾಸ್‌ಬುಕ್ ಜೊತೆಗೆ ಖಾತೆ ಕಚೇರಿಯಲ್ಲಿ ಮತ್ತು ಖಾತೆ ಕಚೇರಿಯಲ್ಲಿ ಸೂಚಿಸಿದಂತೆ ಸಲ್ಲಿಸಿ ಮನವಿಯನ್ನು ಪ್ರಕ್ರಿಯೆಗೊಳಿಸಬೇಕು.

ಬಿಒ ಯ ಪಿಒ ಉಳಿತಾಯ ಖಾತೆದಾರರು ಖಾತೆಯ ಕಛೇರಿಯಲ್ಲಿ ಪಾಸ್‌ಬುಕ್ ಜೊತೆಗೆ ಚೆಕ್ ಬುಕ್ ಮನವಿಯ ಅರ್ಜಿ ನಮೂನೆಯನ್ನು ಸಹ ಸಲ್ಲಿಸಬಹುದು ಮತ್ತು ಖಾತೆ ಕಚೇರಿಯು ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿ ಚೆಕ್ ಪುಸ್ತಕವನ್ನು ನೀಡತಕ್ಕದ್ದು.

English summary

How To Apply For ATM Card, eBanking/mBanking Service & Cheque Book For Post Office Savings Account?

How To Apply For ATM Card, eBanking/mBanking Service & Cheque Book For Post Office Savings Account?. To know Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X