For Quick Alerts
ALLOW NOTIFICATIONS  
For Daily Alerts

ನಿಮ್ಮ ಆಧಾರ್ ಸಂಖ್ಯೆ ಎಲ್ಲೆಲ್ಲಿ ಬಳಕೆಯಾಗುತ್ತಿದೆ? ಪತ್ತೆ ಹಚ್ಚಿ

By ಗುಡ್‌ರಿಟರ್ನ್ಸ್ ಡೆಸ್ಕ್
|

ವಿಶಿಷ್ಟ ಗುರುತಿನ ಚೀಟಿ ಯುಐಡಿಎಐ ಆಧಾರ್ ಸಂಖ್ಯೆಯ ನೋಂದಣಿ ಹಲವು ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ದೃಡೀಕರಣಕ್ಕೆ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದಿಂದ ಎಲ್ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಅಗತ್ಯ. ನರೇಗಾ ಕೂಲಿ ಪಡೆಯಲು ಆಧಾರ್ ಸಂಖ್ಯೆಯನ್ನು ಬ್ಯಾಂಕ್‌ಗೆ ನೀಡಿ ಖಾತೆ ತೆರೆಯಬೇಕಾಗುತ್ತದೆ. ಆದರೆ, ನಿಮ್ಮ ಆಧಾರ್ ಸಂಖ್ಯೆ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬ

ಉದ್ಯೋಗ, ಶಿಕ್ಷಣ, ಪಿಂಚಣಿ ಯೋಜನೆಗಳು, ವಿಮೆ, ಮೊಬೈಲ್ ಸಿಮ್ ಖರೀದಿ, ಹೊಸ ಗ್ಯಾಸ್ ಖರೀದಿ, ಪಾಸ್ ಪೋರ್ಟ್ ಪಡೆಯವುದು ಸೇರಿದಂತೆ ಆಧಾರ್ ಕಾರ್ಡ್‌ನಿಂದ ಹಲವು ಉಪಯೋಗಗಳಿವೆ. ಇದೊಂದು ಬಹುಮುಖ್ಯವಾದ ವಿಳಾಸ ದೃಡೀಕರಣ ಪತ್ರವಾಗಿದೆ

ಆದರೆ, ಆಧಾರ್ ಕಡ್ಡಾಯ ಮಾಡಿಲ್ಲ, ಫಲಾನುಭವಿಗಳನ್ನು ಹೇಗೆ ಗುರುತಿಸಬೇಕೆಂಬುದು ಕೇಂದ್ರೀಯ ಇಲಾಖೆಗಳು, ಸಚಿವರು ಹಾಗೂ ರಾಜ್ಯ ಸರಕಾರಗಳ ನಿರ್ಧಾರಕ್ಕೆ ಸೇರಿದ ವಿಷಯವಾಗಿದೆ. ಆಧಾರ್, ವ್ಯಕ್ತಿಯ ಗುರುತನ್ನು ಸಾಬೀತುಪಡಿಸುತ್ತದೆಯೇ ಹೊರತು ಆತನ ರಾಷ್ಟ್ರೀಯತೆಯನ್ನಲ್ಲ. ಅದು ವಾಸ್ತವ್ಯ ದಾಖಲೆ ಯಾಗಿಯೂ ಕೆಲಸ ಮಾಡುತ್ತದೆ. ಅಲ್ಲದೆ ಅದು ಐಚ್ಛಿಕ ಸೌಲಭ್ಯ ವಾಗಿದ್ದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸ್ಪಷ್ಟನೆ ನೀಡಿದೆ.

ಅಧಾರ್ ದೃಢೀಕರಣ ಇತಿಹಾಸದಿಂದ ಯಾವ ಮಾಹಿತಿ ಲಭ್ಯ

ಅಧಾರ್ ದೃಢೀಕರಣ ಇತಿಹಾಸದಿಂದ ಯಾವ ಮಾಹಿತಿ ಲಭ್ಯ

ಆಧಾರ್ ದೃಢೀಕರಣ ಪ್ರಕ್ರಿಯೆಯ ಇತಿಹಾಸ
ಆಧಾರ್ ದೃಢೀಕರಣ ಪ್ರಕ್ರಿಯೆಯ ಇತಿಹಾಸ ಕೆದಕಿದರೆ UIDAI ಲಾಗಿನ್ ಕಡತದಲ್ಲಿರುವ ಎಲ್ಲಾ ಮಾಹಿತಿಗಳು ಲಭ್ಯವಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆ Authentication ಮಾಡುವಾಗ ಯಾವೆಲ್ಲ ಮಾಹಿತಿ ನೀಡಲಾಗುತ್ತದೆ ಹಾಗೂ ಬಳಕೆಯಾಗುತ್ತದೆ ಎಂಬ ಇತಿಹಾಸ ತಿಳಿಯಬಹುದು.
* ದೃಢೀಕರಣ ವಿಧಾನ
* ದೃಢೀಕರಣ ದಿನಾಂಕ ಹಾಗೂ ಸಮಯ
* UIDAI ಪ್ರತಿಕ್ರಿಯೆ ಕೋಡ್.
* Authentication User Agency(AUA) ಹೆಸರು
* AUA ಪ್ರಕ್ರಿಯೆ ಐಟಿ(ಕೋಡ್ ಸಹಿತ)
* ದೃಢೀಕರಣ ಯಶಸ್ವಿಯೇ ವಿಫಲವೇ ಎಂಬ ಪ್ರತಿಕ್ರಿಯೆ
* UIDAI ದೋಷ ಕೋಡ್

ಇದಲ್ಲದೆ, ಬೆರಳಚ್ಚು, ಕಪ್ಪಿನ ಪಾಪೆ, ಒಟಿಪಿ, ಯಾವ ಸ್ಥಳದಿಂದ ಬಳಕೆ ಹೀಗೆ ವಿಶಿಷ್ಟ ದೃಢೀಕರಣ ಪ್ರಕ್ರಿಯೆಯ ವಿವರಗಳನ್ನು ಪಡೆದುಕೊಳ್ಳಬಹುದು.

 

UIDAI ನೀಡುವ ಇತಿಹಾಸ ಕೆದಕುವುದು ಹೇಗೆ?

UIDAI ನೀಡುವ ಇತಿಹಾಸ ಕೆದಕುವುದು ಹೇಗೆ?

How to Check Your Aadhaar Authentication History Online?
ಎಷ್ಟು ಬಾರಿ ಆಧಾರ್ ಕಾರ್ಡ್ ಬಳಕೆಯಾಗಿದೆ ಎಂಬುದನ್ನು ಸುಲಭವಾಗಿ ಗುರುತಿಸಬಹುದು. UIDAI ವೆಬ್ ತಾಣದಲ್ಲೇ ಮಾಹಿತಿ ಲಭ್ಯವಿದೆ.
ಹಂತ 1: UIDAI ಅಧಿಕೃತ ವೆಬ್ ತಾಣ https://uidai.gov.in/ ಗೆ ಭೇಟಿ ಕೊಡಿ.
ಹಂತ 2: Aadhaar Authentication History ಆಯ್ಕೆ ಮಾಡಿಕೊಳ್ಳಿ
ಹಂತ 3: 12 ಅಂಕಿಗಳ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ನಮೂದಿಸಿ.
ಹಂತ 4: Generate OTP ಬಟನ್ ಒತ್ತಿ.
ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಒಟಿಪಿ ಬರಲಿದೆ.
ಹಂತ 6: ಈಗ ದೃಢೀಕರಣ ಮಾದರಿ, ದಿನಾಂಕ ಅವಧಿ, ಒಟ್ಟು ದಾಖಲೆ ಹಾಗೂ ಒಟಿಪಿ ಆಯ್ಕೆ ಮಾಡಿಕೊಳ್ಳಿ
ಹಂತ 7: Submit ಬಟನ್ ಒತ್ತಿ, ಈಗ adhaar authentication transactions ಪೂರ್ಣ ವಿವರ ಲಭ್ಯವಾಗಲಿದೆ.

ಪಾಸ್ ವರ್ಡ್ ಮೂಲಕ ವರದಿ ನೋಡುವುದು ಹೇಗೆ?

ಪಾಸ್ ವರ್ಡ್ ಮೂಲಕ ವರದಿ ನೋಡುವುದು ಹೇಗೆ?

ಈ ವರದಿ ಪಾಸ್ ವರ್ಡ್ ಸಂರಕ್ಷಿತವಾಗಿದ್ದು, ಈ ಕೆಳಗೆ ನೀಡಿರುವ ವಿಧಾನ ಬಳಸಿ ಪಾಸ್ ವರ್ಡ್ ನೀಡಬಹುದು. ಮೊದಲ 4 ಅಕ್ಷರಗಳು ಕ್ಯಾಪಿಟಲ್ ನಲ್ಲಿರಬೇಕು ಹಾಗೂ ಜೊತೆಗೆ ಹುಟ್ಟಿದ ವರ್ಷ(YYYY) ಜೋಡಿಸಬೇಕು.

ಉದಾಹರಣೆಗೆ:
ಹೆಸರು: PRATHAM
ಹುಟ್ಟಿದ ವರ್ಷ: 1993
ಪಾಸ್ ವರ್ಡ್: PRAT1993

ಉದಾಹರಣೆ 2:
ಹೆಸರು: SAHIL
ಹುಟ್ಟಿದ ವರ್ಷ: 1990
ಪಾಸ್ ವರ್ಡ್: SAHI1990

 

ಈ ಅಂಶಗಳ ಮೇಲೆ ಗಮನ ವಿರಲಿ

ಈ ಅಂಶಗಳ ಮೇಲೆ ಗಮನ ವಿರಲಿ

* ಮೇಲ್ಕಂಡ ವಿಧಾನ ಅನುಸರಿಸಿ ನಿಮ್ಮ authentication transaction ಬಗ್ಗೆ ವಿವರ ಪಡೆಯಲು ಸಾಧ್ಯವಾಗದಿದ್ದರೆ, Authentication User Agency (AUA) ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.
* ವಿಫಲವಾದ ಆಧಾರ್ Authentication ವ್ಯವಹಾರ ಹಾಗೂ ಆಧಾರ್ ವಿಫಲವಾಗಲು ಕಾರಣ ಪಟ್ಟಿಯಲ್ಲಿರಲಿದೆ.
* ಆಧಾರ್ Authentication ಇತಿಹಾಸವನ್ನು ತಿಳಿಯಲು ಮೊಬೈಲ್ ಸಂಖ್ಯೆ ಜೊತೆ ಜೋಡಣೆಯಾಗಿರಬೇಕು.
* ಕಳೆದ ಆರು ತಿಂಗಳಲ್ಲಿ ನಡೆಸಲಾದ ದೃಢೀಕರಣ ದಾಖಲೆ ಪ್ರಕ್ರಿಯೆಗಳ ವಿವರಗಳನ್ನು ಪಡೆದುಕೊಳ್ಳಬಹುದು. 50 ದಾಖಲೆಗಳ ತನಕ ಒಮ್ಮೆಗೆ ಪಡೆದುಕೊಳ್ಳಬಹುದು.

English summary

How to Check Where Your Aadhaar Number is Used?

But do we know how many times our aadhaar has been used for verification or for any monetary transactions?. Here is method step by step How to Check Where Your Aadhaar Number is Used?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X