For Quick Alerts
ALLOW NOTIFICATIONS  
For Daily Alerts

ಎಸ್‌ಬಿಐನಲ್ಲಿ ಎನ್‌ಪಿಎಸ್‌ ಖಾತೆ ತೆರೆಯುವುದು ಹೇಗೆ?

|

ರಾಷ್ಟ್ರೀಯ ಪಿಂಚಣಿ ಯೋಜನೆಯು (ಎನ್‌ಪಿಎಸ್‌) ಪಿಂಚಣಿ ಉಳಿತಾಯ ಹಾಗೂ ಹೂಡಿಕೆ ತಂತ್ರವಾಗಿದ್ದು, ಅದು ನಿಮ್ಮ ನಿವೃತ್ತಿ ಜೀವನಕ್ಕೆ ಈಗಲೇ ತಯಾರಿ ನಡೆಸಲು ಸಹಕಾರಿಯಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ನಿರ್ವಹಣೆ ಮಾಡುತ್ತದೆ. ಈ ಯೋಜನೆಯ ಪ್ರಯೋಜನವನ್ನು 18-70 ವರ್ಷದ ಎಲ್ಲಾ ಭಾರತೀಯರು ಹಾಗೂ ಎನ್‌‌ಆರ್‌ಸಿಗಳು ಪಡೆಯಬಹುದು.

ಈ ಯೋಜನೆಯಡಿಯಲ್ಲಿ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ಯೋಗಿಗಳು ಸೇರ್ಪಡೆಯಾಗಬಹುದು. ಹಾಗಾದರೆ ಈ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ (ಎನ್‌ಪಿಎಸ್‌) ನಾವು ಭಾರತದ ಅತಿ ದೊಡ್ಡ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಎನ್‌ಪಿಎಸ್‌ ಖಾತೆಯನ್ನು ತೆರೆಯುವುದು ಹೇಗೆ ಎಂದು ನಾವು ಈ ವರದಿಯಲ್ಲಿ ತಿಳಿಯೋಣ.

ಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಮೊದಲನೆಯಾಗಿ ನಾವು ಎನ್‌ಪಿಎಸ್‌ ಖಾತೆಯನ್ನು ತೆರೆಯುವುದಾದರೆ ಅದಕ್ಕೆ ಬೇಕಾದ ಅರ್ಹತೆಗಳನ್ನು ತಿಳಿಯುವುದು ಮುಖ್ಯವಾಗಿದೆ. ಎಲ್ಲಾ ಭಾರತೀಯರು ಹಾಗೂ ಎನ್‌ಆರ್‌ಸಿಗಳು 18-70 ವರ್ಷದಲ್ಲಿ ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ ನಿಮ್ಮ KYC ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು.

 ಎಸ್‌ಬಿಐನಲ್ಲಿ ಎನ್‌ಪಿಎಸ್‌ ಖಾತೆ ತೆರೆಯುವುದು ಹೇಗೆ?

ಇನ್ನು ಈ ಖಾತೆಯನ್ನು ತೆರೆಯಲು ತಗಲುವ ವವೆಚ್ಚವನ್ನು ಈ ಯೋಜನೆಯ ಚಂದಾದಾರರು ಪಾವತಿ ಮಾಡಬೇಕಾಗುತ್ತದೆ. ಸೇವಾ ಶುಲ್ಕ ಹಾಗೂ ಇತರೆ ಶುಲ್ಕಗಳು ಇರುತ್ತದೆ. ಪ್ರತಿ ಚಂದಾದಾರರ ಆರಂಭಿಕ ನೋಂದಣಿಗೆ ಜಿಎಸ್‌ಟಿ ಹೊರತುಪಡಿಸಿ 200 ರೂಪಾಯಿ ಆಗಿದೆ. ಪ್ರತಿ ಚಂದಾದಾರರಿಗೆ ಆರಂಭಿಕ ಕೊಡುಗೆ ಮೊತ್ತವು ಕನಿಷ್ಠ 25 ರೂಪಾಯಿಂದ ಗರಿಷ್ಠ 25 ಸಾವಿರ ರೂಪಾಯಿ ಆಗಿದೆ. ಇತರೆ ಸೇವೆಗಾಗಿ 20 ರೂಪಾಯಿ ತಗುಲುತ್ತದೆ. ಇನ್ನು ಪ್ರತಿ ವರ್ಷವು 50 ರೂಪಾಯಿ ನಿಮ್ಮ ಖಾತೆಯಿಂದ ಸೇವಾ ಶುಲ್ಕವಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಪಡೆಯಲಾಗುತ್ತದೆ.

ಹಣವನ್ನ ಫಿಕ್ಸೆಡ್ ಡೆಪಾಸಿಟ್‌ ಮಾಡೋಕು ಮುನ್ನ ಈ ವಿಚಾರಗಳನ್ನು ತಿಳಿಯಿರಿಹಣವನ್ನ ಫಿಕ್ಸೆಡ್ ಡೆಪಾಸಿಟ್‌ ಮಾಡೋಕು ಮುನ್ನ ಈ ವಿಚಾರಗಳನ್ನು ತಿಳಿಯಿರಿ

ಎಸ್‌ಬಿಐನಲ್ಲಿ ಎನ್‌ಪಿಎಸ್‌ ಖಾತೆಯನ್ನು ತೆರೆಯುವುದು ಹೇಗೆ?

ಕಡ್ಡಾಯವಾಗಿರುವ ಈ ಪಿಂಚಣಿ ಖಾತೆಯನ್ನು ಎಸ್‌ಬಿಐನಲ್ಲಿ 18-70 ವರ್ಷದ ಎಲ್ಲಾ ಭಾರತೀಯರು ಹಾಗೂ ಎನ್‌‌ಆರ್‌ಸಿಗಳು ತೆರೆಯಬಹುದು. ಇನ್ನು ವರ್ಷಕ್ಕೆ ಒಮ್ಮೆ 50 ಸಾವಿರವಾದ ಸಂದರ್ಭದಲ್ಲಿ ನಾವು ಆ ಹಣವನ್ನು ಹಿಂದಕ್ಕೆ ಪಡೆದುಕೊಳ್ಳಬಹುದು. ಕನಿಷ್ಠ ಕೊಡುಗೆಯು 500 ರೂಪಾಯಿ ಆಗಿದೆ. ಗರಿಷ್ಠ ಕೊಡುಗೆ 1 ಸಾವಿ ರೂಪಾಯಿ ಆಗಿದೆ. ಹಾಗಾದರೆ ಎಸ್‌ಬಿಐನ ಯುನೋ ಆಪ್‌ ಮೂಲಕ ಖಾತೆಯನ್ನು ತೆರೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.

 ಎಸ್‌ಬಿಐನಲ್ಲಿ ಎನ್‌ಪಿಎಸ್‌ ಖಾತೆ ತೆರೆಯುವುದು ಹೇಗೆ?

* ಮೊದಲು ನಿಮ್ಮ ಮೊಬೈಲ್‌ನಲ್ಲಿ ಎಸ್‌ಬಿಐ ಯೂನೋ ಆಪ್‌ ಅನ್ನು ತೆರೆಯಿರಿ. ಅಥವಾ ಚಂದಾದಾರರು www.onlinesbi.com ಗೆ ಭೇಟಿ ನೀಡಬಹುದು. * www.onlinesbi.com ಗೆ ಭೇಟಿ ನೀಡಿದರೆ, NPS Contribution ಆಯ್ಕೆ ಮಾಡಿ, ಈ ಆಯ್ಕೆಯು Payments/ Transfers ಆಯ್ಕೆಯ ಅಡಿಯಲ್ಲಿ ಲಭಿಸುತ್ತದೆ.
* NPS Account Opening ಅಥವಾ http://onlinesbi.co.in ಮೇಲೆ ಟ್ಯಾಪ್‌ ಮಾಡಿ
* ಈಗ e-Services ಆಯ್ಕೆಯನ್ನು ಒತ್ತಿ ಬಳಿಕ
* ಈ ನಂತರ NPS Registration ಅಥವಾ 'Nearest SBI Branch' ಆಯ್ಕೆಯನ್ನು ಕ್ಲಿಕ್‌ ಮಾಡಿ
* ಈಗ ಅಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ನಮೂದಿಸಿ, ಅಪ್ಲಿಕೇಶನ್‌ಗಾಗಿ ಕಡ್ಡಾಯ ಕೊಡುಗೆಯನ್ನು ನೀಡಿ
* ಬಳಿಕ ಖಾತೆಯನ್ನು ತೆರೆಯಿರಿ
* ಖಾತೆಯನ್ನು ತೆರೆದ ಬಳಿಕ ಚಂದಾದಾರರು ಪಿಂಚಣಿ ನಿಧಿ ವ್ಯವಸ್ಥಾಪಕ ಆಯ್ಕೆಯನ್ನು ಮಾಡಬಹುದು.
* ಚಂದಾದಾರರು ತಮ್ಮ ಆಸ್ತಿ ಹಂಚಿಕೆಯನ್ನು ಸಹ ಆಯ್ಕೆ ಮಾಡಬಹುದು, ಒಂದು ವರ್ಷವನ್ನು ಎರಡು ವರ್ಷವಾಗಿ ಮಾರ್ಪಾಡು ಕೂಡಾ ಮಾಡಬಹುದು

English summary

How To Open An NPS Account With SBI YONO?, Explained in Kannada

How To Open An NPS Account With SBI YONO?, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X