For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಪಿವಿಸಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ: ವಿಧಾನ ತಿಳಿಯಿರಿ

|

ನವದೆಹಲಿ, ಫೆಬ್ರವರಿ 4: ಭಾರತದಲ್ಲಿ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮವು ಈಗಾಗಲೇ ಜಾರಿಯಲ್ಲಿದೆ. ಇದರ ಮಧ್ಯೆ ಒಂದು ಕುಟುಂಬದ ಒಬ್ಬ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಂಡು ಇಡೀ ಕುಟುಂಬದ ಎಲ್ಲ ಸದಸ್ಯರಿಗಾಗಿ ಪಿವಿಸಿ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಘೋಷಣೆ ಮಾಡಿದೆ.

ಯಾವುದೇ ರೀತಿ ಆನ್‌ಲೈನ್ ದೃಢೀಕರಣದ ಸಂದರ್ಭದಲ್ಲಿ OTP ಅನ್ನು ಪಡೆದುಕೊಳ್ಳಲು ಯಾವುದೇ ಮೊಬೈಲ್ ಫೋನ್ ಸಂಖ್ಯೆಯನ್ನು ಬಳಸಬಹುದಾಗಿತ್ತು. ಆದ್ದರಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಈ ನಿಯಮವನ್ನು ಜಾರಿಗೊಳಿಸಿದೆ. ಅದಾಗ್ಯೂ, ಪ್ರತಿ ಪಿವಿಸಿ ಆಧಾರ್ ಕಾರ್ಡ್ ಆರ್ಡರ್‌ಗೆ ಬಳಕೆದಾರರು 50 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.

ಮತ್ತೆ ಕುಸಿತದ ಹಾದಿ ಹಿಡಿದ ಮುಂಬೈನ ಷೇರುಮಾರುಕಟ್ಟೆಮತ್ತೆ ಕುಸಿತದ ಹಾದಿ ಹಿಡಿದ ಮುಂಬೈನ ಷೇರುಮಾರುಕಟ್ಟೆ

"ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಯ ಹೊರತಾಗಿ ದೃಢೀಕರಣಕ್ಕೆ OTP ಸ್ವೀಕರಿಸಲು ನೀವು ಯಾವುದೇ ಮೊಬೈಲ್ ಸಂಖ್ಯೆ ಬಳಸಬಹುದು. ಆದ್ದರಿಂದ, ಒಬ್ಬ ವ್ಯಕ್ತಿಯು ಇಡೀ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಆಧಾರ್ ಪಿವಿಸಿ ಕಾರ್ಡ್‌ಗಳನ್ನು ಆರ್ಡರ್ ಮಾಡಬಹುದು ಎಂದು ಯುಐಡಿಎಐ ಆದೇಶದಲ್ಲಿ ತಿಳಿಸಿದೆ. ಹಾಗಿದ್ದರೆ ಈ ಪಿವಿಸಿ ಆಧಾರ್ ಕಾರ್ಡ್ ಎಂದರೇನು?, ಪಿವಿಸಿ ಆಧಾರ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?, ಪಿವಿಸಿ ಆಧಾರ್ ಕಾರ್ಡ್ ಪಡೆದುಕೊಂಡರೆ ಏನು ಪ್ರಯೋಜನೆ ಎಂಬುದರ ಕುರಿತು ಇಲ್ಲಿ ಓದಿ ತಿಳಿಯಿರಿ.

ಏನಿದು ಪಿವಿಸಿ ಆಧಾರ್ ಕಾರ್ಡ್?

ಏನಿದು ಪಿವಿಸಿ ಆಧಾರ್ ಕಾರ್ಡ್?

ಆಧಾರ್ PVC ಕಾರ್ಡ್ ಅನ್ನು ತೆಗೆದುಕೊಂಡು ಹೋಗುವುದಕ್ಕೆ ಸುಲಭ ಮತ್ತು ಬಾಳಿಕೆ ಬರುವಂತಹದ್ದಾಗಿದೆ ಎಂಬುದನ್ನು ಬಳಕೆದಾರರು ಗಮನಿಸಬೇಕು. ಇದರ ಜೊತೆಗೆ ಡಿಜಿಟಲ್ ಸಹಿಯುಳ್ಳ ಸುರಕ್ಷಿತ ಕ್ಯೂಆರ್(QR) ಕೋಡ್ ಸೇರಿದಂತೆ ಅನೇಕ ಸುರಕ್ಷತೆಯನ್ನು ಪಿವಿಸಿ ಆಧಾರ್ ಕಾರ್ಡ್ ಹೊಂದಿರುತ್ತದೆ. ಆಧಾರ್ ಪಿವಿಸಿ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ uidai.gov.in ಅಥವಾ ರೆಸಿಡೆಂಟ್.uidai.gov.in ಮೂಲಕ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಬಳಸಿ ಆರ್ಡರ್ ಮಾಡಬಹುದು. 50 ರೂಪಾಯಿ ಶುಲ್ಕ ಪಾವತಿಸುವ ಮೂಲಕ ಬಳಕೆದಾರರು ಪಿವಿಸಿ ಆಧಾರ್ ಅನ್ನು ಆರ್ಡರ್ ಮಾಡಬಹುದು ಹಾಗೂ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ವಿಳಾಸಕ್ಕೆ ಆಧಾರ್ ಪಿವಿಸಿ ಅನ್ನು ತಲುಪಿಸಲಾಗುತ್ತದೆ.

ಏನಿದು ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಸೇವೆ?

ಏನಿದು ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಸೇವೆ?

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 'ಆರ್ಡರ್ ಆಧಾರ್ ಪಿವಿಸಿ ಕಾರ್ಡ್' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದು ಆಧಾರ್ ಹೊಂದಿರುವವರು ನಾಮಮಾತ್ರ ಶುಲ್ಕವನ್ನು ಪಾವತಿಸುವ ಮೂಲಕ ಪಿವಿಸಿ ಕಾರ್ಡ್‌ನಲ್ಲಿ ಆಧಾರ್ ವಿವರಗಳನ್ನು ಮುದ್ರಿಸಲು ಅನುಕೂಲವಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರದ ಬಳಕೆದಾರರು ನೋಂದಾಯಿತವಲ್ಲದ/ಪರ್ಯಾಯ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಆರ್ಡರ್ ಮಾಡಬಹುದು.

ಆಧಾರ್ PVC ಕಾರ್ಡ್ ಭದ್ರತಾ ವೈಶಿಷ್ಟ್ಯಗಳೇನು?

ಆಧಾರ್ PVC ಕಾರ್ಡ್ ಭದ್ರತಾ ವೈಶಿಷ್ಟ್ಯಗಳೇನು?

- ಸುರಕ್ಷಿತ QR ಕೋಡ್

- ಹೊಲೊಗ್ರಾಮ್

- ಸೂಕ್ಷ್ಮ ಬರಹ

- ವ್ಯಕ್ತಿಯ ಮಸುಕಾದ ಚಿತ್ರ

- ಬಿಡುಗಡೆ ದಿನಾಂಕ ಮತ್ತು ಮುದ್ರಣ ದಿನಾಂಕ

- ಗಿಲೋಚೆ ಪ್ಯಾಟರ್ನ್

- ಎಂಬೋಸ್ಡ್ ಆಧಾರ್ ಲೋಗೋ

 

ಆನ್‌ಲೈನ್‌ನಲ್ಲಿ PVC ಆಧಾರ್ ಕಾರ್ಡ್ ಆರ್ಡರ್ ಮಾಡುವ ವಿಧಾನ

ಆನ್‌ಲೈನ್‌ನಲ್ಲಿ PVC ಆಧಾರ್ ಕಾರ್ಡ್ ಆರ್ಡರ್ ಮಾಡುವ ವಿಧಾನ

- ನೇರ UIDAI ಲಿಂಕ್‌ನಲ್ಲಿ ಲಾಗಿನ್ ಆಗಿರಿ - myaadhaar.uidai.gov.in/genricPVC

- ಆಧಾರ್ ಸಂಖ್ಯೆಯನ್ನು ನಮೂದಿಸಿ

- ಕ್ಯಾಪ್ಚಾ ನಮೂದಿಸಿ

- 'ಸೆಂಡ್ OTP' ಆಯ್ಕೆಯನ್ನು ಕ್ಲಿಕ್ ಮಾಡಿ

- OTP ನಮೂದಿಸಿ ಮತ್ತು "ನಿಯಮಗಳು ಮತ್ತು ಷರತ್ತುಗಳು" ಎಂಬ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿರಿ

- OTP ಪರಿಶೀಲನೆಯನ್ನು ಪೂರ್ಣಗೊಳಿಸಲು "ಸಲ್ಲಿಸು" ಬಟನ್ ಮೇಲೆ ಕ್ಲಿಕ್ ಮಾಡಿರಿ

- ಈಗ ನಿಮ್ಮ ಕಂಪ್ಯೂಟರ್ ಮಾನಿಟರ್‌ನಲ್ಲಿ ಆಧಾರ್ ಕಾರ್ಡ್ ಪೂರ್ಣ ವಿವರಗಳು ಗೋಚರಿಸುತ್ತವೆ

- ಆಗ "ಪಾವತಿ ಮಾಡಿ" ಎಂಬ ಬಟನ್ ಮೇಲೆ ಕ್ಲಿಕ್ ಮಾಡಿರಿ

- ಕ್ರೆಡಿಟ್/ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು UPI ನಂತಹ ಪಾವತಿ ಆಯ್ಕೆಗಳೊಂದಿಗೆ ನಿಮ್ಮನ್ನು ಪಾವತಿ ಗೇಟ್‌ವೇ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ

- ಪಾವತಿ ಯಶಸ್ವಿ ನಂತರ, ಡಿಜಿಟಲ್ ಸಹಿಯನ್ನು ಹೊಂದಿರುವ ರಶೀದಿಯನ್ನು ರಚಿಸಲಾಗುತ್ತದೆ, ಅದನ್ನು ನಿವಾಸಿಗಳು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು

- ಒಬ್ಬರ PVC ಆಧಾರ್ ಕಾರ್ಡ್ ಸ್ವೀಕರಿಸುವ ಸ್ಥಿತಿಯನ್ನು ಪರಿಶೀಲಿಸಲು ಒಬ್ಬರು ಬಳಸಬಹುದಾದ SMS ಮೂಲಕ ನಿವಾಸಿಗಳು ಸೇವಾ ವಿನಂತಿ ಸಂಖ್ಯೆಯನ್ನು ಸಹ ಪಡೆಯುತ್ತಾರೆ.

 

English summary

How To Order PVC Aadhaar Card Online For Whole Family Using Single Phone Number in Kannada

PVC Aadhaar Card: Here’s How To Order It Online For Whole Family Using Single Phone Number; Step by step procedure in kannada. Take a look.
Story first published: Friday, February 4, 2022, 18:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X