For Quick Alerts
ALLOW NOTIFICATIONS  
For Daily Alerts

ಮನೆ ಕಟ್ಟುವ ಖರ್ಚಿನಲ್ಲಿ ಉಳಿಸಬಹುದು ಶೇಕಡಾ 25ರಷ್ಟು ಹಣ; ಹೇಗೆ ತಿಳಿಯೋಣ

By ಅನಿಲ್ ಆಚಾರ್
|

ಮನೆ ಕಟ್ಟುವಾಗ ಖರ್ಚು, ವೆಚ್ಚಗಳ ಕಡೆಗೆ ಗಮನ ಇಟ್ಟುಕೊಂಡು, ಅದನ್ನು ಕಡಿಮೆ ಮಾಡಬೇಕು ಅಂತ ಪ್ಲ್ಯಾನ್ ಮಾಡಿದರೆ ಕನಿಷ್ಠ ಶೇಕಡಾ ಇಪ್ಪತ್ತೈದರಷ್ಟು ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಈ ಲೇಖನದಲ್ಲಿ ಉದಾಹರಣೆ ಸಹಿತ ವಿವರಿಸಲಾಗುತ್ತಿದೆ. ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುವ ಕುಮಾರ್ ಗೆ ಹೆಚ್ಚಿನ ಸಾಲ ಮಾಡುವ ಮನಸ್ಸಿರಲಿಲ್ಲ. ಆದರೆ ಹೊಸ ಮನೆ ಕಟ್ಟಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದರು.

ಅವರು ವಾಸವಿದ್ದ ಮನೆ ತೀರಾ ಹಳ್ಳದಲ್ಲಿ ಇದ್ದುದರಿಂದ ಮಳೆಗಾಲದಲ್ಲಿ ನೀರು ನುಗ್ಗುತ್ತಿತ್ತು. ಮನೆಯಲ್ಲಿ ಚಿಕ್ಕ ವಯಸ್ಸಿನ ಮಗು ಇರುವುದರಿಂದ ಕೂಡಲೇ ಮನೆ ಕಟ್ಟಬೇಕು ಎಂಬುದು ಅನಿವಾರ್ಯ ಆಗಿತ್ತು. ಮನೆ ನಿರ್ಮಾಣವನ್ನು ತಾವೇ ನಿಂತು ಮಾಡಿಸಬೇಕು ಎಂದು ನಿರ್ಧರಿಸಿದ್ದರಿಂದ ಎಷ್ಟು ಖರ್ಚಾಗಬಹುದು ಎಂದು ಲೆಕ್ಕ ಹಾಕಿದ ಮೇಲೆ 16 ಲಕ್ಷ ರುಪಾಯಿ ಎಂಬ ಅಂದಾಜು ಸಿಕ್ಕಿತ್ತು.

ಕ್ವಾಲಿಟಿ ಚೆನ್ನಾಗಿರುವ ಸೆಕೆಂಡ್ಸ್ ವಸ್ತುಗಳನ್ನು ಹುಡುಕಬೇಕು

ಕ್ವಾಲಿಟಿ ಚೆನ್ನಾಗಿರುವ ಸೆಕೆಂಡ್ಸ್ ವಸ್ತುಗಳನ್ನು ಹುಡುಕಬೇಕು

ಆದರೆ, ಈ ವೆಚ್ಚ ಕೂಡ ಅವರನ್ನು ಹೆಚ್ಚಿನ ಸಾಲಕ್ಕೆ ದೂಡುತ್ತಿತ್ತು. ಆಗಲೇ ಅವರಿಗೆ ಹೊಳೆದಿದ್ದು ಈಗಾಗಲೇ ಬಳಕೆಯಾದ ವಸ್ತುಗಳನ್ನು ಮನೆಗೆ ಯಾಕೆ ಬಳಸಬಾರದು ಎಂಬ ಆಲೋಚನೆ. ಅಂದರೆ, ಕೆಲವರು ಕಟ್ಟಿದ್ದ ಮನೆಯನ್ನು ಕೆಡವಿ, ಹೊಸ ಮನೆ ನಿರ್ಮಾಣ ಮಾಡುತ್ತಾರೆ. ಇನ್ನೂ ಕೆಲವರು ಮನೆಯ ಕೆಲವು ವಸ್ರುಗಳು ಸಣ್ಣ- ಪುಟ್ಟ ಡ್ಯಾಮೇಜ್ ಆದರೂ ತಕ್ಷಣ ಬದಲಾಯಿಸುತ್ತಾರೆ. ಮನೆ ನಿರ್ಮಾಣ ಪೂರ್ತಿಯಾದ ಮೇಲೆ ಉಳಿಯುವ ವಸ್ತುಗಳು ಕೂಡ ಸೆಕೆಂಡ್ಸ್ ಲೆಕ್ಕಕ್ಕೆ ಬರುತ್ತವೆ. ಇವೆಲ್ಲವೂ ಇವತ್ತಿಗೆ ಖರೀದಿಗೆ ಸಿಗುತ್ತವೆ. ಆದರೆ ಕ್ವಾಲಿಟಿ ಚೆನ್ನಾಗಿದೆಯಾ ಎಂದು ನಿರ್ಧಾರ ಮಾಡುವುದು ಹಾಗೂ ಅಂಥದ್ದನ್ನು ಹುಡುಕಿಕೊಳ್ಳುವುದು ಸವಾಲಿನ ಕೆಲಸ. ಜತೆಗೆ ಸಮಯ ಎತ್ತಿಡಬೇಕು, ತಾಳ್ಮೆ ಕೂಡ ಇರಬೇಕು ಅಂತಲೇ ಮಾತಿಗೆ ಶುರು ಮಾಡುತ್ತಾರೆ ಕುಮಾರ್.

ಸಣ್ಣ- ಪುಟ್ಟ ಖರ್ಚಿನಲ್ಲೇ ಸರಿಹೋಗುತ್ತವೆ

ಸಣ್ಣ- ಪುಟ್ಟ ಖರ್ಚಿನಲ್ಲೇ ಸರಿಹೋಗುತ್ತವೆ

"ನಾವು ಮನೆಗೆ ಹಾಕಿರುವ ನಲ್ಲಿ, ಅಡುಗೆ ಮನೆಯಲ್ಲಿ ಬಳಸಿರುವ ಸಿಂಕ್, ಸ್ಲ್ಯಾಬ್, ಮನೆಯ ಗೇಟ್, ರೂಮ್ ಗಳ ಬಾಗಿಲು, ವಾಸಗಲ್, ಕಿಟಕಿ... ಹೀಗೆ ಬಹುತೇಕವಾಗಿ ಬಳಕೆ ಆಗಿದ್ದ ವಸ್ತುಗಳೇ. ಆದರೆ ಅವು ಉತ್ತಮ ಗುಣಮಟ್ಟದ ಹಾಗೂ ಮತ್ತೆ ಬಳಸಬಹುದಾದ ಸ್ಥಿತಿಯಲ್ಲೇ ಇದ್ದವು. ಉದಾಹರಣೆಗೆ ಬಾತ್ ರೂಮ್ ನಲ್ಲಿ ಬಳಸುವ ವಾಟರ್ ಮಿಕ್ಸರ್ ಒಳಭಾಗದಲ್ಲಿ ಯಾವುದೋ ಒಂದು ಭಾಗ ಡ್ಯಾಮೇಜ್ ಆದರೆ ಇಡೀ ಸೆಟ್ ಬದಲಿಸಿ ಬಿಡುತ್ತಾರೆ. ಆದರೆ ಅಂಥದ್ದಕ್ಕೆ ನೂರು ರುಪಾಯಿಯೊಳಗೆ ಖರ್ಚಾಗಬಹುದು, ಆದರೆ ಅಷ್ಟನ್ನು ಸರಿಪಡಿಸಿಕೊಂಡು, ವರ್ಷಗಟ್ಟಲೆ ಮತ್ತೆ ಬಳಸುವ ಅವಕಾಶ ಇದೆ. ನಮಗೂ ಅಂಥದ್ದೇ ಲೀಕೇಜ್ ಆಗುತ್ತಿದ್ದ ವಾಟರ್ ಮಿಕ್ಸರ್ ಸಿಕ್ಕಿತ್ತು. ಅದಕ್ಕೆ ಐವತ್ತೋ ನೂರು ರುಪಾಯಿಯೋ ಖರ್ಚು ಮಾಡಿದೆವು. ಅವುಗಳು ಸರಿಹೋದವು. ಇವತ್ತಿಗೆ ಅವೇ ನಮ್ಮ ಮನೆಯಲ್ಲಿ ಬಳಸುತ್ತಿದ್ದೀವಿ. ನಲ್ಲಿಗಳು ಸಹ ಹಾಗೆ ತಂದಿದ್ದೇವೆ" ಎಂದರು.

ಯಾವ್ಯಾವ ವಸ್ತುಗಳು ಸೆಕೆಂಡ್ಸ್ ತರಬಹುದು ಎಂಬ ಪಟ್ಟಿ ಮಾಡಿ

ಯಾವ್ಯಾವ ವಸ್ತುಗಳು ಸೆಕೆಂಡ್ಸ್ ತರಬಹುದು ಎಂಬ ಪಟ್ಟಿ ಮಾಡಿ

ಕಬ್ಬಿಣದ ವಸ್ತುಗಳು, ಮರದ ವಸ್ತುಗಳು, ಎಲೆಕ್ಟ್ರಿಕಲ್, ಪ್ಲಂಬಿಂಗ್ ಹೀಗೆ ವಿಭಾಗ ಮಾಡಿಕೊಂಡು, ಈ ಪೈಕಿ ಯಾವ್ಯಾವುದಕ್ಕೆ ಬಳಕೆ ಮಾಡಿದ ವಸ್ತುಗಳನ್ನು ತರಬಹುದು ಎಂದು ಪಟ್ಟಿ ಮಾಡಿಕೊಳ್ಳಬೇಕು. ಆ ನಂತರ ಗುಜರಿ ಅಂಗಡಿಗಳಲ್ಲಿ ಹುಡುಕಾಟ ಶುರು ಮಾಡಬೇಕು. ಇದಕ್ಕೆ ಸಮಯ ನೀಡಬೇಕಾಗುತ್ತದೆ. ವಸ್ತುಗಳು ಸಿಕ್ಕ ಮೇಲೆ ಸಣ್ಣ- ಪುಟ್ಟ ರಿಪೇರಿಗಳು ಸಹ ಇರಬಹುದು. ತಂದ ಮೇಲೆ ಆಸಿಡ್ ವಾಷ್ ಮಾಡಿ, ಸ್ವಚ್ಛ ಮಾಡಿದರೆ ಆಯಿತು. ಅವುಗಳನ್ನು ಹೊಸ ವಸ್ತುಗಳ ರೀತಿಯಲ್ಲೇ ಬಳಸಬಹುದು. ಒಂದು ಸಲ ಪೇಂಟ್ ಆದ ಮೇಲೆ ಯಾವುದು ಹೊಸದು, ಯಾವುದು ಹಳೆಯದು ಅಂತ ನೀವಾಗಿಯೇ ಹೇಳದ ಹೊರತು ಇತರರಿಗೆ ಖಂಡಿತಾ ಗೊತ್ತಾಗಲ್ಲ. ಕೆಲವರಿಗೆ ಮನೆಯ ಮುಖ್ಯ ಬಾಗಿಲು, ವಾಸಗಲ್ ಹೊಸದನ್ನೇ ತರಬೇಕು ಅಂತ ಇರುತ್ತದೆ. ಅಂಥ ಸನ್ನಿವೇಶದಲ್ಲಿ ಹೊಸ ಬಾಗಿಲನ್ನು ಖರೀದಿಸಿ ತರಬಹುದು. ಇಲ್ಲ ಅಂದರೆ ಅದು ಕೂಡ ಬಳಕೆ ಮಾಡಿರುವುದೇ ಸಿಗುತ್ತದೆ.

ಖರ್ಚು ಉಳಿಸುವುದು ಜಾಣ್ಮೆಯ ಮೇಲೆ ನಿರ್ಧಾರ

ಖರ್ಚು ಉಳಿಸುವುದು ಜಾಣ್ಮೆಯ ಮೇಲೆ ನಿರ್ಧಾರ

ಯಜಮಾನರೇ ನಿಂತು ಮನೆ ಕಟ್ಟಿಸಿದರೆ ಖರ್ಚು ಉಳಿಸಿಕೊಳ್ಳಲು ನಾನಾ ಅವಕಾಶ ಇರುತ್ತದೆ. ಮನೆಯ ಗೇಟ್, ಮನೆಯ ಸುತ್ತ ಬಳಸುವ ಕಬ್ಬಿಣದ ಗ್ರಿಲ್ ಗಳು, ಪ್ಲಂಬಿಂಗ್ ಕೆಲಸದ ನಲ್ಲಿ- ಪೈಪ್ ಮುಂತಾದವು, ಕಿಟಕಿ- ಬಾಗಿಲು, ವಾಸಗಲ್, ಎಲೆಕ್ಟ್ರಿಕ್ ವೈರ್, ಸ್ವಿಚ್ ಹೀಗೆ ಹಲವು ವಸ್ತುಗಳು ಸೆಕೆಂಡ್ ಹ್ಯಾಂಡ್ ದೊರೆಯುತ್ತವೆ. ಅವುಗಳನ್ನು ಇನ್ನಷ್ಟು ಕಾಲ ಬಳಸುವುದಕ್ಕೆ ಸಾಧ್ಯವೂ ಇರುತ್ತದೆ. ಗುಣಮಟ್ಟ ಚೆನ್ನಾಗಿಯೇ ಇರುವಂಥವು, ತೀರಾ ಸಣ್ಣ- ಪುಟ್ಟ ಡ್ಯಾಮೇಜ್ ಆಗಿರುವುದಕ್ಕೆ ದೊಡ್ಡ ಡಿಸ್ಕೌಂಟ್ ಸಹ ಸಿಗುತ್ತವೆ. ಆದರೆ ಇಂಥ ಸಲಹೆಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಆಯಾ ವ್ಯಕ್ತಿಯ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಇನ್ನು ಎಷ್ಟು ಖರ್ಚು ಉಳಿಸಬಹುದು ಎಂಬುದು ಕೂಡ ಜಾಣ್ಮೆಯ ಮೇಲೆ ನಿರ್ಧಾರ ಆಗುತ್ತದೆ. ಈ ಮೇಲೆ ತಿಳಿಸಿದ ಉದಾಹರಣೆಯಲ್ಲಿ ಕುಮಾರ್ ಶೇಕಡಾ 25ರಷ್ಟು ಖರ್ಚನ್ನು ಉಳಿಸಿದ್ದಾರೆ. ಅದೇ ರೀತಿ ಆಯಾ ವ್ಯಕ್ತಿ ಯಾವ್ಯಾವುದಕ್ಕೆ ಸೆಕೆಂಡ್ಸ್ ವಸ್ತುಗಳನ್ನು ಬಳಸುತ್ತಾರೆ ಎಂಬುದರ ಮೇಲೆ ಎಷ್ಟು ಉಳಿಸಲು ಸಾಧ್ಯವಾಯಿತು ಎಂದು ನಿರ್ಧಾರ ಆಗುತ್ತದೆ.

English summary

How To Save Money During House Construction By Utilising Used Products?

Here is an explainer about how to save money during house construction by utilising used products.
Story first published: Wednesday, May 20, 2020, 13:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X