ನಾವು ಎಲ್ಲಿಗೋ ಪ್ರಯಾಣ ಮಾಡಲೆಂದು ಟಿಕೆಟ್ ಬುಕ್ ಮಾಡಿರುತ್ತೇವೆ. ಆದರೆ ಆ ದಿನ ನಮಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದುಕೊಳ್ಳಿ, ಆ ಸಂದರ್ಭದಲ್ಲಿ ಟಿಕೆಟ್ ರದ್ದು ಮಾಡಬಹುದು. ಅದಕ್ಕಾಗಿ ನಿಗದಿತ ಮೊತ್ತ ರಿಫಂಡ್ ಲಭ್ಯವಾಗುತ್ತದೆ. ಆದರೆ ಅದಕ್ಕೂ ಉತ್ತಮವಾಗಿ ನೀವು ಖಚಿತವಾದ ಟಿಕೆಟ್ ಅನ್ನು ಪ್ರಯಾಣ ಮಾಡಲು ಬಯಸುವ ಕುಟುಂಬಸ್ಥರಿಗೆ ವರ್ಗಾವಣೆ ಮಾಡುವ ಅವಕಾಶವಿದೆ.
ಹೌದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಪ್ರಯಾಣಿಕರಿಂದ ದೃಢೀಕೃತ ಟಿಕೆಟ್ ಅನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನೀವು ರೈಲು ಪ್ರಯಾಣ ಮಾಡುವುದಾದರೆ, ಖಚಿತ ಟಿಕೆಟ್ ಅನ್ನು ಹೊಂದಿದ್ದು, ಆದರೆ ಪ್ರಯಾಣ ಮಾಡಲು ಸಾಧ್ಯವಿಲ್ಲವೆಂದಾದರೆ ನೀವು ಆ ಟಿಕೆಟ್ ಅನ್ನು ಪ್ರಯಾಣ ಮಾಡಲು ಬಯಸುವ ಕುಟುಂಬಸ್ಥರಿಗೆ ವರ್ಗಾವಣೆ ಮಾಡಬಹುದಾಗಿದೆ.

ಯಾರಿಗೆ ಟಿಕೆಟ್ ವರ್ಗಾವಣೆ ಮಾಡುವ ಅವಕಾಶವಿದೆ?
ನೀವು ಈ ಟಿಕೆಟ್ ಅನ್ನು ವರ್ಗಾವಣೆ ಮಾಡುವ ವಿಚಾರಕ್ಕೆ ಬಂದಾಗ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅಂದರೆ ನೀವು ಈ ಟಿಕೆಟ್ ಅನ್ನು ನಿಮ್ಮ ಕುಟುಂಬ ಸದಸ್ಯರಿಗೆ ಮಾತ್ರ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ. ಅಂದರೆ ನೀವು ನಿಮ್ಮ ತಂದೆ, ತಾಯಿ, ಸಹೋದರಿ, ಸಹೋದರ, ಪುತ್ರಿ, ಪುತ್ರ, ಪತಿ ಅಥವಾ ಪತ್ನಿಗೆ ಮಾತ್ರ ನಿಮ್ಮ ಖಚಿತ ರೈಲ್ವೆ ಟಿಕೆಟ್ ಅನ್ನು ವರ್ಗಾವಣೆ ಮಾಡುವ ಅವಕಾಶವಿದೆ.
ಟಿಕೆಟ್ ಅನ್ನು ತಮ್ಮ ಕುಟುಂಬ ಸದಸ್ಯರಿಗೆ ವರ್ಗಾವಣೆ ಮಾಡಲು ನೀವು 24 ಗಂಟೆಗಳಿಗೂ ಮುನ್ನ ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಇನ್ನು ಒಂದು ಬಾರಿ ಮಾತ್ರ ಟಿಕೆಟ್ ಅನ್ನು ವರ್ಗಾವಣೆ ಮಾಡಲು ಸಾಧ್ಯ ಎಂಬುವುದನ್ನು ನೀವು ತಿಳಿದಿರಬೇಕು. ನೀವು ಒಂದು ಬಾರಿ ಟಿಕೆಟ್ ಅನ್ನು ವರ್ಗಾವಣೆ ಮಾಡಿದರೆ, ಆ ವರ್ಗಾಯಿಸಿದ ಟಿಕೆಟ್ ಅನ್ನು ಮತ್ತೆ ಬೇರೊಬ್ಬರಿಗೆ ವರ್ಗಾವಣೆ ಮಾಡಲು ನಿಮಗೆ ಅವಕಾಶವಿಲ್ಲ.
ಹಬ್ಬದ ಸೀಸನ್ ಇದ್ದಾಗ, ಮದುವೆ ಸೀಸನ್ ಇದ್ದಾಗ ಅಥವಾ ಯಾವುದೇ ವೈಯಕ್ತಿಕ ಸಮಸ್ಯೆ ಇದ್ದಾಗ ನಿರ್ಗಮನಕ್ಕೆ 48 ಗಂಟೆಗೂ ಮುನ್ನ ಟಿಕೆಟ್ ಅನ್ನು ಸಂಗ್ರಹಿಸಬೇಕಾಗುತ್ತದೆ. ಎನ್‌ಸಿಸಿ ಅಭ್ಯರ್ಥಿಗಳು ಟಿಕೆಟ್ ವರ್ಗಾವಣೆ ಸೇವೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ನಿಮ್ಮ ರೈಲ್ವೆ ಟಿಕೆಟ್ ಅನ್ನು ಬದಲಿಸುವ ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಪ್ರಯಾಣದ ವೇಳೆ ಹೊಂದಿರಬೇಕಾಗುತ್ತದೆ. ಹೇಗೆ ಟಿಕೆಟ್ ವರ್ಗಾಯಿಸುವುದು ನೋಡಿ
ರೈಲ್ವೆ ಟಿಕೆಟ್ ವರ್ಗಾವಣೆ ಮಾಡುವುದು ಹೇಗೆ?
ಹಂತ 1: ಟಿಕೆಟ್‌ನ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಿ
ಹಂತ 2: ನೀವು ಟಿಕೆಟ್ ಅನ್ನು ವರ್ಗಾಯಿಸಲು ಬಯಸುವ ವ್ಯಕ್ತಿಯ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ಹೊಂದಿರಿ.
ಹಂತ 3: ನಿಮ್ಮ ಸಮೀಪದ ರೈಲ್ವೆ ಸ್ಟೇಷನ್‌ನ ರಿಸರ್ವೇಷನ್ ಕೌಂಟರ್‌ಗೆ ಹೋಗಿ
ಹಂತ 4: ಟಿಕೆಟ್ ವರ್ಗಾವಣೆಗೆ ಅರ್ಜಿ ಸಲ್ಲಿಸಿ
ನಿಮ್ಮ ರೈಲು ರದ್ದಾಗಿದೆಯೇ ಚೆಕ್ ಮಾಡಿ
ಹಂತ 1: indianrail.gov.in/mntes ಗೆ ಭೇಟಿ ನೀಡಿ
ಹಂತ 2: ನೀವು ಯಾವ ದಿನ ಪ್ರಯಾಣ ಮಾಡಲಿದ್ದೀರಿ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ರದ್ದಾದ ರೈಲುಗಳ ಪಟ್ಟಿಯನ್ನು ನೋಡಿ
ಹಂತ 4: ರದ್ದಾದ ರೈಲುಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 5: ಸಂಪೂರ್ಣ ಅಥವಾ ಭಾಗಶಃ ಎಂಬ ಆಯ್ಕೆಯನ್ನು ಮಾಡಿ
ಹಂತ 6: ರದ್ದಾದ ರೈಲಿನ ಸಮಯ, ದಾರಿ, ಇತರೆ ಮಾಹಿತಿ ಪರಿಶೀಲಿಸಿ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications