ವಾಣಿಜ್ಯ ತುಳಸಿ ಕೃಷಿಯು ಪ್ರಸ್ತುತ ಅತೀ ಲಾಭದಾಯಕ ಉದ್ಯಮವಾಗಿ ಪರಿವರ್ತನೆಯಾಗುತ್ತಿದೆ. ವಿಶ್ವದಾದ್ಯಂತ ತುಳಸಿ ಕೃಷಿಗೆ ಅತೀ ಹೆಚ್ಚಿನ ಬೇಡಿಕೆ ಇದ್ದು, ಇದು ಲಾಭದಾಯಕ ಕೃಷಿಯಾಗಿದೆ. ಅದು ಕೂಡಾ ಮುಖ್ಯವಾಗಿ ಭಾರತದಲ್ಲಿ ಹೆಚ್ಚಾಗಿ ತುಳಸಿ ಕೃಷಿಗೆ ಅಧಿಕ ಲಾಭವಿದೆ.
ತುಳಸಿ ಉತ್ಪನ್ನಗಳಿಗೆ ಬೇಡಿಕೆಯು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ನಮಗೆ ತುಳಸಿ ಕೃಷಿಯ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ಮತ್ತು ನಮಗೆ ತಂತ್ರಜ್ಞಾನದ ಸರಿಯಾದ ಮಾಹಿತಿ ಇದ್ದರೆ, ನಾವು ಈ ತುಳಸಿ ಕೃಷಿಯಿಂದ ಸುಮಾರು 3 ಲಕ್ಷ ರೂಪಾಯಿವರೆಗೆ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

15 ಸಾವಿರ ರೂಪಾಯಿ ಹೂಡಿಕೆ ಮಾಡಿ
ಆರಂಭಿಕವಾಗಿ ನೀವು ತುಳಸಿ ಕೃಷಿಯ ಮೇಲೆ 15 ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಬೇಕಾಗುತ್ತದೆ. ತುಳಸಿ ತೋಟವನ್ನು ನೀವು ಬೆಳೆಸಬೇಕಾದರೆ ಆರಂಭಿಕವಾಗಿ ನೀವು 15 ಸಾವಿರ ರೂಪಾಯಿಯನ್ನು ಹೊಂದಿರುವುದು ಮುಖ್ಯವಾಗುತ್ತದೆ. ಹಾಗೆಯೇ 3 ತಿಂಗಳೊಳಗೆ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ.
ರೈತನಾಗಿ ಬದಲಾದ ಇಂಜಿನಿಯರ್: 22,000 ರೂ. ವೇತನ ಪಡೆಯುತ್ತಿದ್ದಾತನ ಗಳಿಕೆ ಈಗ ಮಿಲಿಯನ್ ರೂಪಾಯಿ!
ತಾನು ತುಳಸಿ ಕೃಷಿಯನ್ನು ಮಾಡಿ ಉತ್ತಮ ಲಾಭವನ್ನು ಪಡೆದ ಬಗ್ಗೆ ರೈತರೊಬ್ಬರು ಪೋರ್ಟಲ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಜೇಶ್ ವರ್ಮಾ ಎಂಬ ರೈತರೊಬ್ಬರು, ತುಳಸಿ ಕೃಷಿ ಉದ್ಯಮವನ್ನು ಆರಂಭ ಮಾಡಿದ್ದು, ಅದರಿಂದ ಪಡೆದ ಲಾಭ, ಹೂಡಿಕೆಗಳ ಬಗ್ಗೆ ಪೋರ್ಟಲ್‌ನಲ್ಲಿ ಹಂಚಿಕೊಂಡಿದ್ದಾರೆ. ರೈತ ರಾಜೇಶ್ ವರ್ಮಾ ಬಾರಾಬಂಕಿಯ ತೆಹಸಿಲ್ ಫತೇಪುರ್ ಜಿಲ್ಲೆಯ ಬಂಭನ್‌ಪುರವಾದಲ್ಲಿ ವಾಸಿಸುತ್ತಿದ್ದಾರೆ.
ರೈತ ರಾಜೇಶ್ ವರ್ಮಾ ಕೃಷಿ ಹೇಗೆ ನಡೆಸಿದರು ನೋಡಿ
ರಾಜೇಶ್ ವರ್ಮಾ ಅರ್ಧ ಬಿಘಾ (13500 ಸ್ಕ್ವೇರ್ ಫೀಟ್) ವಿಸ್ತೀರ್ಣದ ತುಳಸಿ ತೋಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ರಾಜೇಶ್ ವರ್ಮಾ ಇದರಲ್ಲೇ ಉತ್ತಮ ಆದಾಯ ಗಳಿಸಿದ್ದು, ಈಗ 4 ಬಿಘಾಗಳನ್ನು ಒಳಗೊಂಡಿರುವ ಜಮೀನಿನಲ್ಲಿ ಕಾರ್ಯನಿರ್ವಹಣೆ ಮಾಡಲು ಆರಂಭ ಮಾಡಿದ್ದಾರೆ. ಈಗ 2 ಲಕ್ಷ ರೂಪಾಯಿ ಲಾಭವನ್ನು ಗಳಿಸುತ್ತಿದ್ದಾರೆ.
ರಾಜೇಶ್ ವರ್ಮಾರ ಉದಾಹರಣೆಯನ್ನು ತೆಗೆದುಕೊಂಡ ರೈತರು ಇತರೆ ರೈತರುಗಳು ಕೂಡಾ ತುಳಸಿ ಕೃಷಿಯನ್ನು ಮಾಡಲು ಆರಂಭ ಮಾಡಿದ್ದಾರೆ. ರಾಜೇಶ್ ವರ್ಮಾರ ಪ್ರಕಾರ ಅವರು ಸಾಂಪ್ರದಾಯಿಕ ಕೃಷಿಯನ್ನು ಮಾಡುತ್ತಿದ್ದ ಕಾರಣದಿಂದಾಗಿ ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗಲಿಲ್ಲ.
ಆದರೆ ಅದಾದ ಬಳಿಕ ರಾಜೇಶ್ ವರ್ಮಾ ತಮ್ಮ ಕೃಷಿಯ ವಿಧಾನವನ್ನು ಬದಲಾವಣೆ ಮಾಡಿದ್ದಾರೆ. ನಂತರ ರಾಜೇಶ್ ವರ್ಮಾ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್‌ನಿಂದ ತುಳಸಿ ಕೃಷಿಯ ಬಗ್ಗೆ ತಿಳಿದುಕೊಂಡಿದ್ದಾರೆ. 1 ಬಿಘಾ (14400.00 ಸ್ಕ್ವೇರ್ ಫೀಟ್) ಜಮೀನಿನಲ್ಲಿ ರಾಜೇಶ್ ಆರಂಭಿಕವಾಗಿ 4-5 ಸಾವಿರ ರೂಪಾಯಿ ಹೂಡಿಕೆ ಮಾಡಿ, 40-50 ಸಾವಿರ ಲಾಭವನ್ನು ಪಡೆದುಕೊಂಡಿದ್ದಾರೆ.
ತುಳಸಿ ಕೃಷಿಯ ಪ್ರಯೋಜನಗಳು ಏನಿದೆ?
ತುಳಸಿ ಉತ್ಪನ್ನಗಳ ಔಷಧೀಯ ಗುಣಗಳಿಂದಾಗಿ ಮಾರುಕಟ್ಟೆಯಲ್ಲಿ ಗಮನಾರ್ಹ ಬೇಡಿಕೆಯನ್ನು ತುಳಸಿ ಹೊಂದಿದೆ. ತುಳಸಿಗೆ ಇರುವ ಈ ಬೇಡಿಕೆಯು ಕ್ರಮೇಣ ಹೆಚ್ಚುತ್ತಿದೆ ಮತ್ತು ಇದು ಲಾಭದಾಯಕ ವ್ಯವಹಾರವಾಗಿದೆ. ಇನ್ನು ತುಳಸಿ ಕೃಷಿಯಲ್ಲಿ ನಾಟಿ ಮತ್ತು ಇತರ ವೆಚ್ಚಗಳು ಕಡಿಮೆಯಾಗಿದೆ, ಆದರೆ ಹೂಡಿಕೆಯ ಲಾಭವು ಅತೀ ಉತ್ತಮವಾಗಿರುತ್ತದೆ. ನೀವು ಹೂಡಿಕೆ ಮಾಡಿದ ಹಣವನ್ನು ಅಲ್ಪಾವಧಿಯಲ್ಲಿ ಮರಳಿ ಪಡೆಯಬಹುದಾಗಿದೆ.
ತುಳಸಿ ಬೆಳೆಯು ಎರಡು ಪ್ರಮುಖ ಉತ್ಪನ್ನಗಳನ್ನು ನೀಡುತ್ತದೆ. ಆದ್ದರಿಂದಾಗಿ ವಾಣಿಜ್ಯ ತುಳಸಿ ಕೃಷಿಯು ಬಹಳ ಲಾಭದಾಯಕವಾಗಿದೆ. ತುಳಸಿ ಬೆಳೆಯು ಮೊದಲನೆಯದಾಗಿ ಬೀಜಗಳು ಮತ್ತು ಎರಡನೆಯದಾಗಿ ಎಲೆಗಳನ್ನು ನೀಡುತ್ತದೆ. ಆದರೆ ತುಳಸಿ ಕೃಷಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವುದು ಮುಖ್ಯವಾಗುತ್ತದೆ.
ರೈತರು ತುಳಸಿ ಕೃಷಿಗೆ ಬೇಕಾದ ಹವಾಮಾನದ ಅಗತ್ಯತೆ, ಬೆಳೆಸುವ ಪ್ರಕ್ರಿಯೆ, ಭೂಮಿ, ಇತರೆ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ತುಳಸಿ ಕೃಷಿ ಬೇಸಾಯದಲ್ಲಿ ಬಳಕೆ ಮಾಡಬೇಕಾದ ಕೀಟನಾಶಕಗಳು, ಕೊಯ್ಲು ಪ್ರಕ್ರಿಯೆ ಮತ್ತು ಈ ಸಸ್ಯದ ಕೊಯ್ಲಿನ ನಂತರದ ನಿರ್ವಹಣೆಯ ಬಗ್ಗೆಯೂ ನಾವು ತಿಳಿದಿರುವುದು ಮುಖ್ಯವಾಗುತ್ತದೆ. ವಾಣಿಜ್ಯ ಕೃಷಿ ಉದ್ದೇಶಗಳಿಗಾಗಿ ರಾಮ ತುಳಸಿ ಅತ್ಯುತ್ತಮ ತಳಿಗಳಲ್ಲಿ ಒಂದಾಗಿದೆ.


Click it and Unblock the Notifications