ಪ್ರವಾಸ ಹೋಗುವುದೆಂದಾರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಅದೆಷ್ಟೋ ಮಂದಿಗೆ ಟ್ರಾವೆಲ್ ಸಿಕ್‌ನೆಸ್ (travel sickness) ಇದ್ದರೂ ಕೂಡಾ ಬೇರೆ ಬೇರೆ ಸ್ಥಳಗಳನ್ನು ನೋಡಬೇಕು ಎಂಬ ಆಸೆ ಮಾತ್ರ ಇದ್ದೇ ಇರುತ್ತದೆ. ಹಾಗಿದ್ದಾಗ ನಮಗೆ ಉತ್ತಮ ಆಫರ್ ಅನ್ನು ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ನೀಡುತ್ತಾ ಬರುತ್ತಿದೆ.
ಅಯ್ಯೋ, ಐಆರ್‌ಸಿಟಿಸಿ ಪ್ಯಾಕೇಜ್‌ನ ಪ್ರವಾಸಕ್ಕೆ ನಾವು ಬೆಂಗಳೂರಿನಿಂದ ಬೇರೆಡೆ ಹೋಗಬೇಕು ಅನ್ನುತ್ತೀರಾ?. ಆ ಚಿಂತೆಯೇ ಬೇಡ! ಯಾಕೆಂದರೆ ಈಗಾಗಲೇ ಐಆರ್‌ಸಿಟಿಸಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಬೆಂಗಳೂರಿನಿಂದಲೇ ಆರಂಭ ಮಾಡುತ್ತಿದೆ. ಅಂತಹ ಪ್ಯಾಕೇಜ್‌ಗಳಲ್ಲಿ ಅಂಡಮಾನ್ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ.

ಬೆಂಗಳೂರಿನಿಂದ ಅಂಡಮಾನ್ ಪ್ರವಾಸ ವಿವರ
ಪ್ಯಾಕೇಜ್ ಹೆಸರು: ಟ್ರೊಪಿಕಲ್ ವಂಡರ್ಸ್ ಆಫ್ ಅಂಡಮಾನ್ ಎಕ್ಸ್ ಬೆಂಗಳೂರು
ಯಾವೆಲ್ಲ ಸ್ಥಳ?: ಪೋರ್ಟ್ ಬ್ಲೇರ್ - ರಾಸ್ ದ್ವೀಪ - ನಾರ್ತ್ ಬೇ ಐಲ್ಯಾಂಡ್ - ಹ್ಯಾವ್ಲಾಕ್ - ನೀಲ್ ದ್ವೀಪ
ಹೇಗೆ ಪ್ರಯಾಣ?: ವಿಮಾನದಲ್ಲಿ ಪ್ರಯಾಣ
ಪ್ರವಾಸ ದಿನಾಂಕ, ಸಮಯ: ಜನವರಿ 16, 2024, ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:50
ಎಷ್ಟು ದಿನಗಳ ಪ್ರವಾಸ?: ಐದು ರಾತ್ರಿಗಳು ಆರು ದಿನಗಳ ಪ್ರವಾಸ
ಪ್ಯಾಕೇಜ್ ದರ ಎಷ್ಟಿದೆ?
ನಾವು ಈ ಹಿಂದಿನ ವರ್ಷದ ಅಂಡಮಾನ್ ಪ್ಯಾಕೇಜ್ ದರವನ್ನು ನೋಡಿದರೆ, ಈ ವರ್ಷ ಕೊಂಚ ದರ ಏರಿಕೆಯಾಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಒಬ್ಬರೆ ಪ್ರಯಾಣ ಮಾಡುವುದಾದರೆ 60,890 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಇಬ್ಬರು ಜೊತೆಯಾಗಿ ಈ ಪ್ರವಾಸ ಪ್ಯಾಕೇಜ್ ಖರೀದಿ ಮಾಡುವುದಾದರೆ ಪ್ರತಿ ವ್ಯಕ್ತಿಗೆ 50,050 ರೂಪಾಯಿ ಅಂಡಮಾನ್ ಪ್ರವಾಸ ಪ್ಯಾಕೇಜ್ ದರವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಮೂವರು ಪ್ರವಾಸ ಮಾಡುವುದಾದರೆ ಪ್ರತಿ ವ್ಯಕ್ತಿಗೆ 48,450 ರೂಪಾಯಿ ಪ್ಯಾಕೇಜ್ ದರವಾಗಿದೆ.
ನಿಮ್ಮ ಜೊತೆ 5ರಿಂದ 11 ವರ್ಷದ ಮಗು ಇದ್ದರೆ ಬೆಡ್ ಸಹಿತ ಸಂಪೂರ್ಣ ಪ್ಯಾಕೇಜ್‌ಗೆ 44,950 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಜೊತೆ 5ರಿಂದ 11 ವರ್ಷದ ಮಗು ಇದ್ದರೆ ಬೆಡ್ ಇಲ್ಲದೆ ಸಂಪೂರ್ಣ ಪ್ಯಾಕೇಜ್‌ಗೆ 41,750 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇನ್ನು 2ರಿಂದ 11 ವರ್ಷಕ್ಕಿಂತ ಕೆಳವಯಸ್ಸಾಗಿದ್ದರೆ, 36,200 ರೂಪಾಯಿ ಪೂರ್ಣ ಪ್ಯಾಕೇಜ್ ದರವಾಗಿದೆ.
ಯಾವ ದಿನ, ಎಲ್ಲಿ ಪ್ರವಾಸ?
ದಿನ 1: ಪ್ರವಾಸಿಗರು ವಿಮಾನದ ನಿಗದಿತ ನಿರ್ಗಮನಕ್ಕೆ ಕನಿಷ್ಠ 02 ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ಇರಬೇಕು. ಬೆಂಗಳೂರು ವಿಮಾನ ನಿಲ್ದಾಣದಿಂದ ಜನವರಿ 16 10.50 ಗಂಟೆಗೆ ವಿಮಾನ ಹೊರಡಲಿದೆ. 13.10 (ಮಧ್ಯಾಹ್ನ 1.10) ಗಂಟೆಗೆ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣವನ್ನು ತಲುಪುತ್ತೀರಿ. ಹೊಟೇಲ್‌ಗೆ ಚೆಕಿನ್ ಆಗಿ, ಕಾರ್ಬಿನ್ ಕೋವ್ಸ್ ಬೀಚ್‌ಗೆ ಭೇಟಿ. ನಂತರ ಸೌಂಡ್ ಮತ್ತು ಲೈಟ್ ಶೋನೊಂದಿಗೆ ಸೆಲ್ಯುಲಾರ್ ಜೈಲಿಗೆ ಭೇಟಿ. ಪೋರ್ಟ್ ಬ್ಲೇರ್‌ನಲ್ಲಿ ರಾತ್ರಿ ತಂಗುವುದು. ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಲಭ್ಯ.
ದಿನ 2: ಬೆಳಗಿನ ಉಪಾಹಾರದ ನಂತರ, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಪೋರ್ಟ್ ಬ್ಲೇರ್‌ನ ಹಿಂದಿನ ರಾಜಧಾನಿಯಾಗಿದ್ದ ರಾಸ್ ದ್ವೀಪಕ್ಕೆ ಪ್ರಯಾಣ. ನಂತರ ನಾರ್ತ್ ಬೇ ಐಲ್ಯಾಂಡ್‌ಗೆ ಭೇಟಿ. ಜಲಕ್ರೀಡೆ ಆನಂದಿಸಬಹುದು (ಸ್ವಂತ ವೆಚ್ಚದಲ್ಲಿ). ಪೋರ್ಟ್ ಬ್ಲೇರ್‌ಗೆ ವಾಪಾಸ್ ಬಂದು ಶಾಪಿಂಗ್ ಮಾಡಲು ಸಂಜೆಯ ಸಮಯ ಅವಕಾಶ. ರಾತ್ರಿ ಪೋರ್ಟ್ ಬ್ಲೇರ್‌ನಲ್ಲಿ ತಂಗುವುದು. ಉಪಾಹಾರ ಮತ್ತು ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರ್ಪಡೆ.
ದಿನ 3: ಹೋಟೆಲ್‌ನಿಂದ ಚೆಕ್ ಔಟ್. ಪ್ಯಾಕ್ ಮಾಡಿದ ಉಪಹಾರದೊಂದಿಗೆ ಕ್ರೂಸ್ ಸಮಯದ ಪ್ರಕಾರ ಹ್ಯಾವ್‌ಲಾಕ್‌ಗೆ ಪ್ರಯಾಣ. ಹ್ಯಾವ್‌ಲಾಕ್‌ಗೆ ಬಂದ ನಂತರ ಹೋಟೆಲ್‌ಗೆ ಚೆಕ್ ಇನ್. ಊಟದ ನಂತರ ರಾಧಾನಗರ ಬೀಚ್‌ಗೆ ಭೇಟಿ. ಹ್ಯಾವ್‌ಲಾಕ್‌ನಲ್ಲಿರುವ ಏಷ್ಯಾದ ಸ್ವಚ್ಛ ಈಜು. ರಾತ್ರಿ ಊಟ ಮಾಡಿ ಅಲ್ಲಿಯೇ ತಂಗುವುದು. ಉಪಾಹಾರ ಮತ್ತು ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರ್ಪಡೆ.
ದಿನ 4: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್, ಕಾಲಾ ಪಥರ್ ಬೀಚ್‌ಗೆ ಪ್ರಯಾಣ. ನಂತರ ಕ್ರೂಸ್ ಸಮಯದ ಪ್ರಕಾರ ನೀಲ್ ದ್ವೀಪಕ್ಕೆ ಪ್ರಯಾಣ. ಆಗಮನದ ನಂತರ ಹೋಟೆಲ್‌ಗೆ ಚೆಕ್ ಇನ್. ಸಂಜೆಯ ನಂತರ ಲಕ್ಷ್ಮಣಪುರ ಬೀಚ್‌ಗೆ ಭೇಟಿ. ಸೂರ್ಯಾಸ್ತವನ್ನು ಆನಂದಿಸುವುದು. ನೀಲ್ ಐಲ್ಯಾಂಡ್‌ನಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು. ಉಪಾಹಾರ ಮತ್ತು ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರ್ಪಡೆ.
ದಿನ 5: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. ಭರತ್‌ಪುರ ಬೀಚ್‌ಗೆ ಭೇಟಿ. ಈಜು ಮತ್ತು ಗ್ಲಾಸ್ ಬಾಟಮ್ ಬೋಟ್ ಸವಾರಿ ಮತ್ತು ಜಲ ಕ್ರೀಡೆಗಳು/ಚಟುವಟಿಕೆಗಳನ್ನು ಆನಂದಿಸಿ (ಸ್ವಂತ ವೆಚ್ಚದಲ್ಲಿ). ಪೋರ್ಟ್ ಬ್ಲೇರ್‌ಗೆ, ಸಂಜೆ ಬಿಡುವಿನ ವೇಳೆಗೆ ಪ್ರಯಾಣ. ಪೋರ್ಟ್ ಬ್ಲೇರ್‌ನಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು. ಉಪಾಹಾರ ಮತ್ತು ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರ್ಪಡೆ.
ದಿನ 5: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. 13.50 ಗಂಟೆಗೆ (ಮಧ್ಯಾಹ್ನ 1:50) ವಿಮಾನವಿದ್ದು ಬೆಳಿಗ್ಗೆ 11.00 ಗಂಟೆಗೆ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಇರಬೇಕು. 16.20 ಗಂಟೆಗೆ (ಸಂಜೆ 4:20) ಬೆಂಗಳೂರಿಗೆ ಆಗಮನ. ಪ್ರವಾಸ ಇಲ್ಲಿಗೆ ಅಂತ್ಯ.
ನೀವು ಈ ಪ್ರವಾಸ ಪ್ಯಾಕೇಜ್ ಖರೀದಿ ಮಾಡಬೇಕಾದರೆ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. (https://www.irctctourism.com/pacakage_description?packageCode=SBA07). ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಬಹುದು.
ಪ್ರಾದೇಶಿಕ ಕಚೇರಿ (ಬೆಂಗಳೂರು)
ಸಂ. 82, ಎಸ್‌ಎಂಆರ್ ಆರ್ಕೇಡ್, ಡಾ. ರಾಜ್ ಕುಮಾರ್ ರಸ್ತೆ,
ರಾಜಾಜಿನಗರ, ಬೆಂಗಳೂರು - 560 010.
ದೂರವಾಣಿ: 8595931291
ಇ-ಮೇಲ್:- [email protected]
www.irctctourism.com


Click it and Unblock the Notifications