ನೀವು ಬೆಂಗಳೂರಿಗರೇ ಅಥವಾ ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದು ನೀವು ಬೆಂಗಳೂರಿನಲ್ಲಿ ನೆಲೆಸಿದ್ದೀರಾ? ಇಲ್ಲಿಂದಲೇ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಮಾಡುತ್ತಿದ್ದೀರಾ?, ಹಾಗಿದ್ದರೆ ನಿಮಗೆ ಉತ್ತಮ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ನೀಡುತ್ತದೆ. ಈ ಹಿಂದೆಯೇ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಜಾರಿ ಮಾಡಿರುವ ಐಆರ್‌ಸಿಟಿಸಿ ಈಗ ಅಂಡಮಾನ್ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ.
6 ದಿನಗಳ 5 ರಾತ್ರಿಗಳ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರವಾಸಿಗಳು ವಿಮಾನಯಾನವನ್ನು ಮಾಡಲಿದ್ದಾರೆ. ಇದು ಪ್ಯಾಕೇಜ್‌ನಲ್ಲೇ ಒಳಗೊಳ್ಳಲಿದೆ. ಅದು ಕೂಡಾ ಕಡಿಮೆ ದರ ಪ್ಯಾಕೇಜ್ ಇದಾಗಿದೆ. ನೀವು ಐವತ್ತು ಸಾವಿರ ರೂಪಾಯಿ ಇದ್ದರೆ ಅಂಡಮಾನ್‌ಗೆ ಪ್ರವಾಸ ಹೋಗಬಹುದಾಗಿದೆ. ಈ ಪ್ಯಾಕೇಜ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

ಅಂಡಮಾನ್ ಪ್ಯಾಕೇಜ್‌ನ ಮಾಹಿತಿ
ಬೆಂಗಳೂರಿನಿಂದ ಅಂಡಮಾನ್‌ಗೆ ಪ್ರವಾಸ ಹೋಗಲು ಅವಕಾಶವನ್ನು ನೀಡುವ ಈ ಪ್ಯಾಕೇಜ್‌ನ ಹೆಸರು ಟ್ರೋಪಿಕಲ್ ವಡರ್ಸ್ ಆಫ್ ಅಂಡಮಾನ್ ಎಂದಾಗಿದೆ. ಈ ಪ್ರವಾಸದಲ್ಲಿ ನೀವು ಮುಖ್ಯವಾಗಿ, ಪೋರ್ಟ್ ಬ್ಲೇರ್, ರೋಸ್ ಐಲ್ಯಾಂಡ್, ನಾರ್ತ್ ಬೇ ಐಲ್ಯಾಂಡ್, ಹಾವ್‌ಲಾಲ್, ನೇಲ್ ಐಲ್ಯಾಂಡ್‌ಗ ಭೇಟಿ ನೀಡಬಹುದಾಗಿದೆ. ಸೆಪ್ಟೆಂಬರ್ 25ರಂದು ಬೆಳ್ಳಿಗ್ಗೆ 7:20ಕ್ಕೆ ಪ್ರವಾಸ ಆರಂಭವಾಗಲಿದೆ. ಮುಂಜಾನೆಯ ಉಪಾಹಾರ ಹಾಗೂ ರಾತ್ರಿಯ ಊಟ ಮಾತ್ರ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ. ಮಧ್ಯಾಹ್ನದ ಊಟದ ವ್ಯವಸ್ಥೆ ನೀವಾಗಿಯೇ ಮಾಡಿಕೊಳ್ಳಬೇಕಾಗುತ್ತದೆ.
ಪ್ಯಾಕೇಜ್ ದರ ಎಷ್ಟಿದೆ ನೋಡಿಕೊಳ್ಳಿ
ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಒಬ್ಬರೆ ಪ್ರಯಾಣ ಮಾಡುವುದಾದರೆ 59,430 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಇಬ್ಬರು ಜೊತೆಯಾಗಿ ಈ ಪ್ರವಾಸ ಪ್ಯಾಕೇಜ್ ಖರೀದಿ ಮಾಡುವುದಾದರೆ ಪ್ರತಿ ವ್ಯಕ್ತಿಗೆ 46,460 ರೂಪಾಯಿ ಅಂಡಮಾನ್ ಪ್ರವಾಸ ಪ್ಯಾಕೇಜ್ ದರವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಮೂವರು ಪ್ರವಾಸ ಮಾಡುವುದಾದರೆ ಪ್ರತಿ ವ್ಯಕ್ತಿಗೆ 46,040 ರೂಪಾಯಿ ಪ್ಯಾಕೇಜ್ ದರವಾಗಿದೆ.
ನಿಮ್ಮ ಜೊತೆ 5ರಿಂದ 11 ವರ್ಷದ ಮಗು ಇದ್ದರೆ ಬೆಡ್ ಸಹಿತ ಸಂಪೂರ್ಣ ಪ್ಯಾಕೇಜ್‌ಗೆ 41,510 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಜೊತೆ 5ರಿಂದ 11 ವರ್ಷದ ಮಗು ಇದ್ದರೆ ಬೆಡ್ ಇಲ್ಲದೆ ಸಂಪೂರ್ಣ ಪ್ಯಾಕೇಜ್‌ಗೆ 38,110 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇನ್ನು 2ರಿಂದ 11 ವರ್ಷಕ್ಕಿಂತ ಕೆಳವಯಸ್ಸಾಗಿದ್ದರೆ, 33,480 ರೂಪಾಯಿ ಪೂರ್ಣ ಪ್ಯಾಕೇಜ್ ದರವಾಗಿದೆ.
ದಿನ ಒಂದು: ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಪ್ರಯಾಣಿಕರು 2 ಗಂಟೆಗೂ ಮುನ್ನ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗುತ್ತದೆ. ಮಧ್ಯಾಹ್ನ ಸುಮಾರು 1:10ಕ್ಕೆ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣಕ್ಕೆ ನೀವು ತಲುಪಲಿದ್ದೀರಿ. ಅಲ್ಲಿ ಹೊಟೇಲ್‌ನಲ್ಲಿ ತಂಗಿ, ಸಂಜೆ ವೇಳೆಗೆ ಕಾರ್ಬಿನ್ ಕೋವ್ ಬೀಚ್‌ಗೆ ಭೇಟಿ ನೀಡಬಹುದಾಗಿದೆ. ಅಲ್ಲಿಂದ ಸೆಲ್ಯೂಲರ್ ಜೈಲ್‌ಗೆ ಭೇಟಿ, ಪೋರ್ಟ್ ಬ್ಲೇರ್‌ನಲ್ಲೇ ತಂಗುವುದು
ದಿನ 2: ರೋಸ್ ಐಲ್ಯಾಂಡ್‌ಗೆ ಭೇಟಿ. ಅಲ್ಲಿಂದ ನಾರ್ತ್ ಬೇ ಐಲ್ಯಾಂಡ್‌ಗೆ ಭೇಟಿ. ಪೋರ್ಟ್ ಬ್ಲೇರ್‌ಗೆ ವಾಪಸ್, ಶಾಪಿಂಗ್‌ಗೆ ಸಮಯವಕಾಶ.
ದಿನ 3: ಹಾವ್‌ಲಾಕ್‌ನಲ್ಲಿ ಹೊಟೇಲ್‌ಗೆ ಚೆಕ್‌ಇನ್ ಆಗಿ, ರಾಧನಗರ ಚೀಚ್‌ಗೆ ಭೇಟಿ. ಈ ಪ್ರದೇಶದಲ್ಲಿಯೇ ರಾತ್ರಿ ತಂಗುವ ವ್ಯವಸ್ಥೆ
ದಿನ 4: ಕಾಲ ಪತ್ತರ್ ಬೀಚ್‌ಗೆ ಭೇಟಿ, ಅಲ್ಲಿಂದ ನೇಲ್ ಐಲ್ಯಾಂಡ್‌ಗೆ ಅಲ್ಲಿಂದ ಲಕ್ಷ್ಮಣಪುರ ಬೀಚ್‌ಗೆ ಭೇಟಿ.
ದಿನ 5: ಭಾರತ್‌ಪುರ ಬೀಚ್‌ಗೆ ಭೇಟಿ, ಪೋರ್ಟ್ ಬ್ಲೇಗೆ ಪಾವಾಸ್ ಬಂದು. ಅಲ್ಲಿಯೇ ತಂಗುವುದು.
ದಿನ 6: ಆರನೇ ದಿನ ಪೋರ್ಟ್ ಬ್ಲೇರ್‌ನಿಂದ ಬೆಂಗಳೂರಿಗೆ ವಾಪಾಸ್ ಬರಲಾಗುತ್ತದೆ.


Click it and Unblock the Notifications