ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಜನವರಿ 22 ರಂದು ಉದ್ಘಾಟನೆ ಮಾಡಲಾಗುತ್ತಿದೆ. ಈ ನಡುವೆ ಅಯೋಧ್ಯೆಯ ಪ್ಯಾಕೇಜ್‌ಗೂ ಅಧಿಕ ಬೇಡಿಕೆ ಕಾಣಿಸಿಕೊಂಡಿದೆ. ನೀವು ನೇರವಾಗಿ ಪ್ಯಾಕೇಜ್ ಮೂಲಕ ಬೆಂಗಳೂರಿನಿಂದಲೇ ಅಯೋಧ್ಯೆಗೆ ಪ್ರವಾಸ ಹೋಗಲು ಬಯಸಿದರೆ ಅದಕ್ಕೆ ಉತ್ತಮ ಅವಕಾಶವನ್ನು ಐಆರ್‌ಸಿಟಿಸಿ ನಿಮಗೆ ನೀಡಿದೆ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್ ಅನ್ನು ಜಾರಿ ಮಾಡುತ್ತಾ, ಪರಿಚಯಿಸುತ್ತಾ ಬರುತ್ತಿದೆ. ಇದರಲ್ಲಿ ಅಯೋಧ್ಯೆ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಅಯೋಧ್ಯೆ ಪ್ಯಾಕೇಜ್ ವಿವರ
ಪ್ಯಾಕೇಜ್ ಹೆಸರು: ಹೋಲಿ ಅಯೋಧ್ಯಾ ವಿತ್ ಗಯಾ, ಕಾಶಿ & ಪ್ರಯಾಗ್‌ರಾಜ್ ಎಕ್ಸ್ ಬೆಂಗಳೂರು
ಯಾವೆಲ್ಲ ಪ್ರದೇಶಕ್ಕೆ ಪ್ರವಾಸ?: ಗಯಾ, ವಾರಾಣಾಸಿ (ಕಾಶಿ), ಪ್ರಯಾಗ್‌ರಾಜ್, ಅಯೋಧ್ಯೆ
ಪ್ರಯಾಣ ಹೇಗೆ?: ವಿಮಾನದಲ್ಲಿ ಪ್ರಯಾಣ
ದಿನಾಂಕ ಸಮಯ: ಮಾರ್ಚ್ 25, 2024- ಬೆಳಿಗ್ಗೆ 5:10
ಪ್ರವಾಸ ಪ್ಯಾಕೇಜ್ ದರ ಎಷ್ಟಿದೆ?
ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಅಯೋಧ್ಯೆ ಪ್ರವಾಸ ಪ್ಯಾಕೇಜ್ ದರವು ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 42,800 ರೂಪಾಯಿ ಆಗಿತ್ತು. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 34,900 ರೂಪಾಯಿ ಆಗಿತ್ತು. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 33,050 ರೂಪಾಯಿ ಆಗಿತ್ತು.
5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 28,900 ರೂಪಾಯಿ ಆಗಿತ್ತು. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 24,230 ರೂಪಾಯಿ ಆಗಿತ್ತು. 2 ವರ್ಷದಿಂದ 4 ವರ್ಷದವರೆಗಿನ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 21,720 ರೂಪಾಯಿ ಆಗಿತ್ತು. ಉಪಾಹಾರ ಹಾಗೂ ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ.
ಆದರೆ ಮಾರ್ಚ್‌ನಲ್ಲಿ ಇರುವ ಈ ಪ್ರವಾಸದ ಪ್ಯಾಕೇಜ್ ಮೊತ್ತವನ್ನು ಐಆರ್‌ಸಿಟಿಸಿ ಇನ್ನು ಕೂಡಾ ಬಿಡುಗಡೆ ಮಾಡಿಲ್ಲ. ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದಷ್ಟೇ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಆದರೆ ಈ ಬಾರಿ ರಾಮ ಮಂದಿರ ತೆರೆಯುವ ಕಾರಣದಿಂದಾಗಿ ಬೇಡಿಕೆ ಅಧಿಕವಾಗಿ, ಪ್ಯಾಕೇಜ್ ದರವು ಕೂಡಾ ಹೆಚ್ಚಾಗುವ ಸಾಧ್ಯತೆಯಿದೆ.
ಅಯೋಧ್ಯೆ ಆರಂಭ
ಅಯೋಧ್ಯೆ ರಾಮಮಂದಿರ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಸಮಾರಂಭಕ್ಕೆ ಅಗತ್ಯವಿರುವ ಎಲ್ಲಾ ತಯಾರಿ ಉತ್ತರಪ್ರದೇಶ ಸರ್ಕಾರ ಮಾಡಿಕೊಂಡಿದೆ. ಮಾರಂಭಕ್ಕೆ ಆಗಮನಿಸುವ ಭಕ್ತರಿಗೆ ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌ಗಳ ಸೇವೆ ನೀಡುವ ನಿರ್ಧಾರ ಮಾಡಲಾಗಿದೆ.


Click it and Unblock the Notifications