ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಈಗಾಗಲೇ 2 ವರ್ಷಗಳು ಕಳೆದಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಈಗ ಮುಂದಿನ ವರ್ಷವೇ ಅಂದರೆ 2024ರ ಜನವರಿಯಲ್ಲೇ ರಾಮ ಮಂದಿರವನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ.
ಅದಕ್ಕೂ ಮುನ್ನವೇ ನೀವು ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿಯನ್ನು ನೋಡಲು ಬಯಸುವಿರಾ?. ಹಾಗಿದ್ದರೆ ನಿಮಗೆ ಉತ್ತಮ ಆಫರ್ ಅನ್ನು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ನೀಡಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಅಯೋಧ್ಯೆ ಮಾತ್ರವಲ್ಲದೆ ಬೇರೆ ಹಲವಾರು ಧಾರ್ಮಿಕ ಸ್ಥಳಗಳಿಗೆ, ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಅಯೋಧ್ಯೆ ಪ್ರವಾಸ ಪ್ಯಾಕೇಜ್ ವಿವರ
ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಪವಿತ್ರ ಅಯೋಧ್ಯೆ, ಗಯಾ, ಕಾಶಿ, ಪ್ರಯಾಗ್‌ರಾಜ್ ಆಗಿದೆ. ವಿಮಾನ ಪ್ರವಾಸ ಇದಾಗಿದ್ದು, ನೀವು ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಪ್ರಯಾಣ ಮಾಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಗಯಾ, ವಾರಾಣಾಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಬಹುದಾಗಿದೆ. ಆಗಸ್ಟ್ 14ರಂದು ಮತ್ತು ಸೆಪ್ಟೆಂಬರ್ 11ರಂದು ಈ ಪ್ರವಾಸ ಆರಂಭವಾಗಲಿದೆ. ಐದು ರಾತ್ರಿಗಳು ಮತ್ತು ಆರು ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದೆ.
ಪ್ಯಾಕೇಜ್ ದರ ಎಷ್ಟಿದೆ ನೋಡಿ
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 42,800 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 34,900 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 33,050 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 28,900 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 24,230 ರೂಪಾಯಿ ಆಗಿದೆ. 2 ವರ್ಷದಿಂದ 4 ವರ್ಷದವರೆಗಿನ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 21,720 ರೂಪಾಯಿ ಆಗಿದೆ. ಉಪಾಹಾರ ಹಾಗೂ ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ.
ಯಾವ ದಿನ ಎಲ್ಲಿ ಪ್ರವಾಸ?
ದಿನ 1: ಬೆಂಗಳೂರಿನಿಂದ ಪ್ರವಾಸ ಬೆಳ್ಳಿಗ್ಗೆ 5 ಗಂಟೆಗೆ ಆರಂಭವಾಗಲಿದೆ. ವಾರಾಣಾಸಿಗೆ 7:50ಕ್ಕೆ ತಲುಪಲಿದ್ದು, ಬುದ್ಧ ಗಯಾಕ್ಕೆ ಮೊದಲು ಪ್ರವಾಸ ಆರಂಭವಾಗಲಿದೆ. ಮಹಾಭೋದಿ ದೇವಾಲಯಕ್ಕೆ ಭೇಟಿ ನೀಡಲಾಗುತ್ತದೆ.
ದಿನ 2: ಮುಂಜಾನೆ, ಗಯಾದಲ್ಲಿರುವ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ, ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್ ಆಗಿ, ವಾರಣಾಸಿಗೆ ಪ್ರಯಾಣ. ವಾರಣಾಸಿಯಲ್ಲಿರುವ ಹೋಟೆಲ್‌ಗೆ ಚೆಕ್ ಇನ್ ಆಗಿ ಅಲ್ಲಿ ತಂಗಲಿದ್ದೀರಿ.
ದಿನ 3: ಮುಂಜಾನೆ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ, ಉಪಹಾರದ ನಂತರ, ಸಾರನಾಥಕ್ಕೆ ಭೇಟಿ, ಸಂಜೆ, ಗಂಗಾ ಆರತಿ, ರಾತ್ರಿ ಭೋಜನವಾಗಿ ಹೋಟೆಲ್‌ನಲ್ಲಿ ತಂಗಲಿದ್ದೀರಿ.
ದಿನ 4: ಬೆಳಗಿನ ಉಪಾಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್ ಆಗಿ. ಅಯೋಧ್ಯೆಗೆ ಸಾಗಲಿದ್ದೀರಿ. ನಂತರ ಅಯೋಧ್ಯೆ, ರಾಮ ಜನ್ಮಭೂಮಿ, ಲಕ್ಷ್ಮಣ ಘಾಟ್, ಕಲಾ ರಾಮ್ ದೇವಾಲಯ ಮತ್ತು ಕನಕ ಭವನ ದೇವಾಲಯಲಕ್ಕೆ ಭೇಟಿ ನೀಡಬಹುದಾಗಿದೆ. ಅಯೋಧ್ಯೆಯಲ್ಲಿ ರಾತ್ರಿ ಊಟವಾಗಿ ಅಲ್ಲಿ ಹೊಟೇಲ್‌ನಲ್ಲಿ ತಂಗಲಿದ್ದೀರಿ.
ದಿನ 5: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್ ಆಗಿ. ಪ್ರಯಾಗ್‌ರಾಜ್‌ಗೆ ತೆರಳಿ, ಹೊಟೇಲ್‌ಗೆ ಚೆಕ್ ಇನ್ ಆಗಿ. ಮಧ್ಯಾಹ್ನದ ನಂತರ, ತ್ರಿವೇಣಿ ಸಂಗಮ, ಅಲಹಾಬಾದ್ ಕೋಟೆ ಮತ್ತು ಪಾತಾಳಪುರಿ ದೇವಸ್ಥಾನಕ್ಕೆ ಭೇಟಿ ನೀಡಿ. ಅಲ್ಲಿಯೇ ಹೊಟೇಲ್‌ನಲ್ಲಿ ತಂಗಬಹುದಾಗಿದೆ.
ದಿನ 6: ಹೊಟೇಲ್‌ನಲ್ಲಿ ಉಪಹಾರ. ಮಧ್ಯಾಹ್ನ 12 ಗಂಟೆಗೆ ಹೋಟೆಲ್‌ನಿಂದ ಚೆಕ್ ಔಟ್ ಆಗಿ. ವಾರಣಾಸಿಗೆ ಪ್ರಯಾಣ ಮಾಡಲಿದ್ದೀರಿ. ವಾರಣಾಸಿ ವಿಮಾನ ನಿಲ್ದಾಣಕ್ಕೆ 6 ಗಂಟೆಗೆ ತಲುಪಬೇಕು, 9 ಗಂಟೆಗೆ ವಿಮಾನ ಹೊರಡಲಿದ್ದು, ರಾತ್ರಿ 11:40ಕ್ಕೆ ಬೆಂಗಳೂರಿಗೆ ತಲುಪಲಿದ್ದೀರಿ.


Click it and Unblock the Notifications