Bangalore to Kashmir: ಬೆಂಗಳೂರಿನಿಂದ ಕಾಶ್ಮೀರಕ್ಕೆ ಪ್ರವಾಸ ಪ್ಯಾಕೇಜ್ ದರ, ಇತರೆ ಮಾಹಿತಿ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಈಗಾಗಲೇ ಕೆಲವು ಪ್ರವಾಸ ಪ್ಯಾಕೇಜ್‌ಗಳು ವಾರಕ್ಕೊಮ್ಮೆ ಇದೆ. ನಾವು ಬೆಂಗಳೂರಿಗರಾಗಿದ್ದರೆ, ಇಲ್ಲಿಂದಲೇ ಐಆರ್‌ಸಿಟಿಸಿ ಪ್ರವಾಸಕ್ಕೆ ಹೋಗಬಹುದಾಗಿದೆ. ನೀವು ಕಾಶ್ಮೀರಕ್ಕೆ ಹೋಗಲು ಬಯಸಿದರೆ ನಿಮಗೆ ಆ ಪ್ಯಾಕೇಜ್ ಅನ್ನು ಕೂಡಾ ಐಆರ್‌ಸಿಟಿಸಿ ನೀಡಿದೆ.

ಇದು ಸುಮಾರು 5 ರಾತ್ರಿಗಳು ಮತ್ತು ಆರು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಗುಲ್ಮಾರ್ಗ್, ಪಹಾಲ್‌ಗಾಮ್, ಶ್ರೀನಗರ, ಸೋನ್‌ಮಾರ್ಗಕ್ಕೆ ಈ ಪ್ರವಾಸ ಪ್ಯಾಕೇಜ್‌ನಲ್ಲಿ ನಾವು ಭೇಟಿ ನೀಡಬಹುದಾಗಿದೆ. ಹಾಗೆಯೇ ವಿಮಾನಯಾನ ಇರಲಿದೆ. ಕಾಶ್ಮೀರ ತಲುಪಿದ ಬಳಿಕ ಬಸ್ ಪ್ರವಾಸ ವ್ಯವಸ್ಥೆ ಇರುತ್ತದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಬೆಂಗಳೂರಿನಿಂದ ಕಾಶ್ಮೀರಕ್ಕೆ ಪ್ರವಾಸ ಪ್ಯಾಕೇಜ್ ದರ, ಇತರೆ ಮಾಹಿತಿ

ಪ್ಯಾಕೇಜ್‌ ಬಗ್ಗೆ ಮಾಹಿತಿ ತಿಳಿಯಿರಿ

ಪ್ಯಾಕೇಜ್‌ನ ಹೆಸರು: ಪ್ಯಾರಡೈಸ್ ಆನ್ ಅರ್ಥ್ - ಕಾಶ್ಮೀರ್ ಎಕ್ಸ್ ಬೆಂಗಳೂರು
ಸ್ಥಳ: ಶ್ರೀನಗರ, ಸೋನ್‌ಮಾರ್ಗ, ಗುಲ್ಮಾರ್ಗ್, ಪಹಾಲ್‌ಗಾಮ್
ಪ್ರಯಾಣ: ವಿಮಾನದಲ್ಲಿ
ವಿಮಾನ ನಿಲ್ದಾಣ, ಸಮಯ: ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9:25ಕ್ಕೆ
ಎಷ್ಟು ದಿನಗಳು: 5 ರಾತ್ರಿಗಳು, 6 ದಿನಗಳು - ಅಕ್ಟೋಬರ್ 7, 2023

ವಿಮಾನಯಾನ ಮಾಹಿತಿ, ಪ್ಯಾಕೇಜ್ ದರ

ಅಕ್ಟೋಬರ್ 10, 2023 ರಂದು ಬೆಂಗಳೂರು - ಅಮೃತಸರ - ಶ್ರೀನಗರ ವಾಯುಮಾರ್ಗವಾಗಿ ಪ್ರಯಾಣ ನಡೆಯಲಿದೆ. ಅಕ್ಟೋಬರ್ 12ರಂದು ಶ್ರೀನಗರ - ಅಮೃತಸರ - ಬೆಂಗಳೂರು ಮಾರ್ಗವಾಗಿ ವಾಪಾಸ್ ಬರಲಾಗುತ್ತದೆ.

ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 47,550 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 43,400 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 42,200 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 34,800 ರೂಪಾಯಿ ಆಗಿದೆ. 2 ವರ್ಷದಿಂದ 4 ವರ್ಷದವರೆಗಿನ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 32,450 ರೂಪಾಯಿ ಆಗಿದೆ.

ದಿನ 1: ಬೆಂಗಳೂರು- ಶ್ರೀನಗರ

ಪ್ರವಾಸಿಗರು ವಿಮಾನದ ನಿಗದಿತ ನಿರ್ಗಮನಕ್ಕೆ ಕನಿಷ್ಠ 02 ಗಂಟೆಗಳ ಮೊದಲು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರಬೇಕು. ಬೆಂಗಳೂರಿನಿಂದ 09:25 ಗಂಟೆಗೆ ವಿಮಾನ ಹೊರಡಲಿದ್ದು ಮತ್ತು ಶ್ರೀನಗರ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1:50 ಗಂಟೆಗೆ ತಲುಪುತ್ತದೆ. ವಿಮಾನ ನಿಲ್ದಾಣದಿಂದ ಪಿಕ್ ಅಪ್ ಮಾಡಿ ಮತ್ತು ಚೆಕ್-ಇನ್ ಮಾಡಲು ಹೋಟೆಲ್‌ಗೆ ಕರೆದೊಯ್ಯಲಾಗುತ್ತದೆ. ಸಂಜೆ, ಸೂರ್ಯಾಸ್ತ ನೋಡಲಾಗುತ್ತದೆ. ಹಾಗೆಯೇ ಚಾರ್-ಚಿನಾರ್ (ಫ್ಲೋಟಿಂಗ್ ಗಾರ್ಡನ್ಸ್) ಗೆ ಭೇಟಿ.

ದಿನ 2: ಶ್ರೀನಗರ-ಸೋನಾಮಾರ್ಗ್-ಶ್ರೀನಗರ

ಉಪಹಾರದ ನಂತರ, ಶ್ರೀನಗರದಿಂದ ಹೊರಟು ಸೋನ್‌ಮಾರ್ಗ ಕಡೆಗೆ ಸಾಗಲಾಗುತ್ತದೆ. ಸೋನ್‌ಮಾರ್ಗ ಹಿಮಭರಿತ ಪರ್ವತಗಳು ಇದೆ. ಸಿಂಧ್‌ನಲ್ಲಿ ಸುತ್ತಾಟ, ಅಲ್ಲಿಂದ ಶ್ರೀನಗರಕ್ಕೆ ಪ್ರಯಾಣ. ಶ್ರೀನಗರದ ಹೋಟೆಲ್‌ನಲ್ಲಿ ಭೋಜನ ಮತ್ತು ರಾತ್ರಿ ತಂಗುವುದು.

ದಿನ 3: ಶ್ರೀನಗರ-ಗುಲ್ಮಾರ್ಗ್-ಶ್ರೀನಗರ

ಉಪಹಾರದ ನಂತರ, ಗುಲ್ಮಾರ್ಗ್‌ಗೆ ಪ್ರಯಾಣ, ಅಲ್ಲಿ ಗೊಂಡೊಲಾ ರೈಡ್ ಮಾಡಬಹುದು. ಸಂಜೆ ಶ್ರೀನಗರಕ್ಕೆ ವಾಪಾಸ್ ಬರಲಾಗುತ್ತದೆ. ಶ್ರೀನಗರದಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗಲಾಗುತ್ತದೆ.

ದಿನ 4: ಶ್ರೀನಗರ-ಪಹಲ್‌ಗಾಮ

ಉಪಹಾರದ ನಂತರ, ಪಹಲ್‌ಗಾಮಕ್ಕೆ ಪ್ರವಾಸ. ದಾರಿಯಲ್ಲಿ ಸಫ್ರಾನ್ ಫೀಲ್ಡ್ ಮತ್ತು ಅವಂತಿಪುರಕ್ಕೆ ಭೇಟಿ ಮಾಡಲಾಗುತ್ತದೆ. ಪಹಲ್‌ಗಾಮ ಭಾರತೀಯ ಚಲನಚಿತ್ರೋದ್ಯಮಕ್ಕೆ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದೆ. ಕಣಿವೆಯ ಮೋಡಿಯನ್ನು ನೀವು ಆನಂದಿಸಬಹುದಾಗಿದೆ. ಪಹಲ್‌ಗಾಮದಲ್ಲಿರುವ ಬೇತಾಬ್ ವ್ಯಾಲಿ, ಚಂದನ್ವಾರಿ ಮತ್ತು ಅರು ಕಣಿವೆಗೆ ಭೇಟಿ ನೀಡಬಹುದು. ಸಂಜೆ ಪಹಲ್‌ಗಾಮದಲ್ಲಿರುವ ಹೋಟೆಲ್‌ಗೆ ಚೆಕ್ ಇನ್ ಮಾಡಿ. ಪಹಲ್‌ಗಾಮದಲ್ಲಿ ರಾತ್ರಿ ಭೋಜನ ಮಾಡಿ ಅಲ್ಲಿಯೇ ತಂಗಲಾಗುತ್ತದೆ.

ದಿನ 5: ಪಹಲ್‌ಗಾಮ-ಶ್ರೀನಗರ

ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್ ಮಾಡಿ ಮತ್ತು ಶ್ರೀನಗರಕ್ಕೆ ಮತ್ತೆ ಪ್ರವಾಸ. ಶ್ರೀನಗರಕ್ಕೆ ಆಗಮಿಸಿ ಶಂಕರಾಚಾರ್ಯ ದೇವಸ್ಥಾನದ ದರ್ಶನ ನೀಡಬಹುದು. ನಂತರ ದಾಲ್ ಸರೋವರದ ದಡದಲ್ಲಿರುವ ಪ್ರಸಿದ್ಧ ಹಜರತಾಲಬ್‌ ದೇವಾಲಯಕ್ಕೆ ಭೇಟಿ ನೀಡಿ. ಸಂಜೆ ಹೌಸ್ ಬೋಟ್ ಗೆ ವರ್ಗಾವಣೆ. ಶ್ರೀನಗರದ ಹೌಸ್‌ಬೋಟ್‌ನಲ್ಲಿ ರಾತ್ರಿಯ ಊಟ ಮತ್ತು ಅಲ್ಲಿಯೇ ತಂಗುವುದು. ಕ್ರೂಸಿಂಗ್ ಇರದು.

ದಿನ 6: ಶ್ರೀನಗರ-ಬೆಂಗಳೂರು

ಉಪಹಾರದ ನಂತರ, ಹೌಸ್‌ಬೋಟ್‌ನಿಂದ ಚೆಕ್‌ ಔಟ್ ಮತ್ತು 11:45 ಗಂಟೆಗೆ ಬೆಂಗಳೂರಿಗೆ ಬರಲು ಶ್ರೀನಗರ ವಿಮಾನ ಹತ್ತಿ. 6.30 ಗಂಟೆಗೆ ಬೆಂಗಳೂರಿಗೆ ಆಗಮನ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+