ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಿದೆ. ಬೇರೆ ರಾಜ್ಯಗಳ ಸೌಂದರ್ಯವನ್ನು ನಾವು ಸವಿಯಲು ಐಆರ್‌ಸಿಟಿಸಿ ನಮಗೆ ಅವಕಾಶವಿದೆ. ನಾವು ಬೆಂಗಳೂರಿನಲ್ಲಿರುವವರಾದರೆ ಇಲ್ಲಿಂದಲೇ ಪ್ರವಾಸ ಮಾಡಬಹುದಾಗಿದೆ. ಇಲ್ಲಿಂದ ನಾವು ಆರಂಭ ಮಾಡಬಹುದಾದ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಪರಿಚಯಿಸಿದೆ.
ಬೆಂಗಳೂರಿನಿಂದ ಅಸ್ಸಾಂ & ಮೇಘಾಲಯ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಪರಿಚಯಿಸಿದೆ. ಇದು 6 ದಿನಗಳು, 5 ರಾತ್ರಿಗಳ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್‌ನಲ್ಲಿ ವಿಮಾನ ಪ್ರಯಾಣ ಇರಲಿದೆ. ಈ ಪ್ರವಾಸದಲ್ಲಿ ನಾವು ಚಿರಾಪುಂಜಿ, ಗುವಾಹಟಿ, ಕಾಜಿರಂಗ, ಮಾವ್ಲಿನ್‌ನಾಂಗ್, ಶಿಲ್ಲಾಂಗ್‌ಗೆ ಭೇಟಿ ನೀಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಪ್ರವಾಸ ಪ್ಯಾಕೇಜ್ ವಿವರ
ಪ್ಯಾಕೇಜ್ ಹೆಸರು: ವಂಡರ್ಸ್ ಆಫ್ ಅಸ್ಸಾಂ & ಮೇಘಾಲಯ ಎಕ್ಸ್ ಬೆಂಗಳೂರು
ಸ್ಥಳ: ಚಿರಾಪುಂಜಿ, ಗುವಾಹಟಿ, ಕಾಜಿರಂಗ, ಮಾವ್ಲಿನ್‌ನಾಂಗ್, ಶಿಲ್ಲಾಂಗ್
ಪ್ರಯಾಣ: ವಿಮಾನಯಾನ
ಪ್ರಯಾಣ ಎಲ್ಲಿಂದ ಆರಂಭ: ಬೆಂಗಳೂರು
ಪ್ರಯಾಣ ಯಾವಾಗ ಆರಂಭ: ಡಿಸೆಂಬರ್ 11, ಡಿಸೆಂಬರ್ 16
ಪ್ಯಾಕೇಜ್ ದರ ಎಷ್ಟಿದೆ ನೋಡಿ
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 43,800 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 37,150 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 35,500 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 32,150 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 28,650 ರೂಪಾಯಿ ಆಗಿದೆ. 2- 4 ವರ್ಷದ ಮಕ್ಕಳಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 21,900 ರೂಪಾಯಿ ಆಗಿದೆ.
ಪ್ಯಾಕೇಜ್‌ನಲ್ಲಿ ಎಲ್ಲೆಲ್ಲಿ ಪ್ರಯಾಣ?
ದಿನ 1: ಬೆಂಗಳೂರು - ಪ್ರವಾಸಿಗರು ವಿಮಾನ ಹಾರಾಟಕ್ಕೂ 2 ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ಇರಬೇಕು. ಬೆಂಗಳೂರಿನಿಂದ ಬೆಳ್ಳಿಗ್ಗೆ 08.20 ಗಂಟೆಗೆ ವಿಮಾನ ಹೊರಡಲಿದೆ.
ಗುವಾಹಟಿ- ಶಿಲ್ಲಾಂಗ್: 11.20 ಗಂಟೆಗೆ ಗುವಾಹಟಿಗೆ ಆಗಮನ. ಪಿಕ್ ಅಪ್ ಆಗಿ ಶಿಲ್ಲಾಂಗ್‌ಗೆ ವರ್ಗಾವಣೆ. ಹೋಟೆಲ್‌ಗೆ ಚೆಕ್ ಇನ್ ಆಗಿ. ಶಿಲ್ಲಾಂಗ್‌ನಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು.
ದಿನ 2: ಶಿಲ್ಲಾಂಗ್ - ಚಿರಾಪುಂಜಿ: ಉಪಹಾರದ ನಂತರ, ಚಿರಾಪುಂಜಿಗೆ ಭೇಟಿ ನೀಡುವುದು. ನೋಹ್ಕಾಲಿಕೈ ಜಲಪಾತ, ಮಾವ್ಸ್ಮೈ ಗುಹೆಗಳಿಗೆ ಭೇಟಿ. ಸಂಜೆ ಶಿಲ್ಲಾಂಗ್‌ಗೆ ಹಿಂತಿರುಗಿ. ಮಾರ್ಗದಲ್ಲಿ ಎಲಿಫೆಂಟಾ ಜಲಪಾತಕ್ಕೆ ಭೇಟಿ. ಶಿಲ್ಲಾಂಗ್‌ನಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು. (ಆಹಾರದಲ್ಲಿ ಬೆಳಗಿನ ಉಪಾಹಾರ ಮತ್ತು ರಾತ್ರಿ ಭೋಜನ ಸೇರಿರುತ್ತದೆ).
ದಿನ 3: ಶಿಲ್ಲಾಂಗ್- ಮಾವ್ಲಿನ್ನಾಂಗ್: ಉಪಹಾರದ ನಂತರ, ಮಾವ್ಲಿನ್ನಾಂಗ್ "ಏಷ್ಯಾದ ಸ್ವಚ್ಛ ಗ್ರಾಮ" ಭೇಟಿ. ಲಿವಿಂಗ್ ರೂಟ್ ಬ್ರಿಡ್ಜ್, ಡಾಕಿ ಲೇಕ್‌ಗೆ ಭೇಟಿ. ಸಂಜೆಯ ವೇಳೆಗೆ ಶಿಲ್ಲಾಂಗ್‌ಗೆ ವಾಪಾಸ್. ಶಿಲ್ಲಾಂಗ್‌ನಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು. (ಆಹಾರದಲ್ಲಿ ಬೆಳಗಿನ ಉಪಾಹಾರ ಮತ್ತು ರಾತ್ರಿ ಭೋಜನ ಸೇರಿರುತ್ತದೆ).
ದಿನ 4: ಶಿಲ್ಲಾಂಗ್- ಕಾಜಿರಂಗ: ಉಪಹಾರದ ನಂತರ, ಚೆಕ್‌ಔಟ್ ಆಗಿ, ಡಾನ್ ಬಾಸ್ಕೋ ಮ್ಯೂಸಿಯಂ, ಉಮಿಯಂ ಸರೋವರಕ್ಕೆ ಭೇಟಿ. ಕಾಜಿರಂಗಕ್ಕೆ ಆಗಮಿಸಿ ಹೋಟೆಲ್‌ಗೆ ಚೆಕ್ ಇನ್. ಕಾಜಿರಂಗದಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು. (ಆಹಾರದಲ್ಲಿ ಬೆಳಗಿನ ಉಪಾಹಾರ ಮತ್ತು ರಾತ್ರಿ ಭೋಜನ ಸೇರಿರುತ್ತದೆ).
ದಿನ 5: ಕಾಜಿರಂಗ-ಗುವಾಹಟಿ: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್ ಆಗಿ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿ (ನೇರ ಪಾವತಿ) ಮಾಡಿ. ನಂತರ ಗುವಾಹಟಿಗೆ ಭೇಟಿ ನೀಡಿ. ಹೋಟೆಲ್‌ಗೆ ಚೆಕ್ ಇನ್ ಆಗಿ. ಗುವಾಹಟಿಯಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು. (ಆಹಾರದಲ್ಲಿ ಬೆಳಗಿನ ಉಪಾಹಾರ ಮತ್ತು ರಾತ್ರಿ ಭೋಜನ ಸೇರಿರುತ್ತದೆ).
ದಿನ 6: ಗುವಾಹಟಿ-ಬೆಂಗಳೂರು: ಮುಂಜಾನೆ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ. ಹೋಟೆಲ್‌ನಿಂದ ಚೆಕ್‌ಔಟ್. ಊಟದ ನಂತರ, ಬಾಲಾಜಿ ದೇವಸ್ಥಾನಕ್ಕೆ ಭೇಟಿ. ಗುವಾಹಟಿ ವಿಮಾನ ನಿಲ್ದಾಣಕ್ಕೆ ಹೋಗಿ. ಗುವಾಹಟಿಯಿಂದ 17.50 (5:50) ನಿರ್ಗಮಣ. 21.10 ಗಂಟೆಗೆ (9:10) ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ. ಪ್ರವಾಸ ಇಲ್ಲಿಗೆ ಅಂತ್ಯವಾಗುತ್ತದೆ.


Click it and Unblock the Notifications