ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಬೆಂಗಳೂರಿನಿಂದ ನಾವು ಪ್ರಯಾಣ ಆರಂಭ ಮಾಡಲು ಬಯಸಿದರೆ, ನಮಗೂ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ನೀಡುತ್ತದೆ. ಆ ಪೈಕಿ ಕಾಶಿ ಯಾತ್ರೆಯ ಪ್ಯಾಕೇಜ್ ಕೂಡಾ ಒಂದಾಗಿದೆ.
ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಎಂಬುವುದಾಗಿದೆ. 8 ರಾತ್ರಿ, 9 ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದ್ದು, ನಾವು ಈ ಪ್ಯಾಕೇಜ್‌ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ವಾರಾಣಾಸಿ, ಗಯಾಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ದಸರಾ ಮುಗಿದ ಬಳಿಕ ಈ ಪ್ರವಾಸ ಆರಂಭವಾಗಲಿದೆ. ಈ ಒಂಬತ್ತು ದಿನಗಳ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ
ಈ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಅಕ್ಟೋಬರ್ 31ರಂದು ಆರಂಭವಾಗುತ್ತದೆ. ಪ್ರತಿ ವ್ಯಕ್ತಿಗೆ 22,500 ರೂಪಾಯಿಯ ಪ್ಯಾಕೇಜ್ ಇದಾಗಿದ್ದು, ನೀವು ಕರ್ನಾಟಕ ಸರ್ಕಾರದಿಂದ 7,500 ರೂಪಾಯಿ ಸಬ್ಸಿಡಿಯಾಗಿ ಪಡೆಯಬಹುದಾಗಿದೆ. ನೀವು ಪ್ರವಾಸದಲ್ಲಿ ಬೆಂಗಳೂರು, ವಾರಾಣಾಸಿ, ಗಯಾ, ಅಯೋಧ್ಯೆ, ಪ್ರಯಾಗ್‌ರಾಜ್‌ಗೆ ನೀವು ಹೋಗಬಹುದಾಗಿದೆ.
ದಿನ 1: ಬೆಂಗಳೂರು
* ಬೆಂಗಳೂರಿನಿಂದ ರೈಲು ಹೊರಡುವುದು
* ಬೆಳಗ್ಗಿನ ತಿಂಡಿ, ಊಟ, ಸಂಜೆ ಚಹಾ, ರಾತ್ರಿ ಭೋಜನ ರೈಲಿನಲ್ಲೇ ಇರಲಿದೆ. ರಾತ್ರಿ ರೈಲು ಪ್ರಯಾಣವಿರಲಿದೆ.
ದಿನ 2: ರೈಲಿನ ಪ್ರಯಾಣ
* ಬೆಳಗಿನ ಚಹಾ ಮತ್ತು ಉಪಹಾರ
* ರೈಲಿನಲ್ಲೇ ಊಟ, ಸಂಜೆಯ ಚಹಾ.
* ರೈಲಿನಲ್ಲೇ ಭೋಜನ, ರಾತ್ರಿಯ ಪ್ರಯಾಣ
ದಿನ 3: ಗಯಾ
* ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ
* ಮಧ್ಯಾಹ್ನ ಗಯಾ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವುದು.
* ಹೊಟೇಲ್‌ಗೆ ಹೋಗಿ ಚೆಕ್ ಇನ್ ಆಗುವುದು
* ನಂತರ ಮಹಾಬೂದಿ ದೇವಾಲಯಕ್ಕೆ ಭೇಟಿ
* ರಾತ್ರಿ ಊಟ ಮಾಡಿ, ಗಯಾದಲ್ಲಿಯೇ ತಂಗುವುದು.
ದಿನ 4: ಅಯೋಧ್ಯೆ
* ಅಯೋಧ್ಯೆಗೆ ಮುಂಜಾನೆ ತಲುಪುವುದು.
* ಹೊಟೇಲ್‌ಗೆ ಚೆಕ್‌ಇನ್ ಆಗುವುದು
* ಉಪಾಹಾರದ ಬಳಿಕ ನಂದಿಗ್ರಾಮಕ್ಕೆ ಭೇಟಿ
* ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿಗೆ ಭೇಟಿ
* ಸಂಜೆ ಸರಯೂ ಆರತಿ
* ರಾತ್ರಿ ಭೋಜನ, ಅಯೋಧ್ಯೆಯಲ್ಲಿಯೇ ತಂಗುವುದು.
ದಿನ 5: ಪ್ರಯಾಗ್‌ರಾಜ್
* ಪ್ರಯಾಗ್‌ರಾಜ್‌ಗೆ ಮುಂಜಾನೆ ಭೇಟಿ ನೀಡಿ
* ಹೊಟೇಲ್‌ಗೆ ಚೆಕ್‌ಇನ್ ಆಗಿ
* ತ್ರಿವೇಣಿ ಸಂಗಮ ಮತ್ತು ಹನುಮಾನ್ ಮಂದಿರಕ್ಕೆ ಭೇಟಿ
* ಮಧ್ಯಾಹ್ನ ಪ್ರಯಾಗ್‌ರಾಜ್‌ನಿಂದ ಹೊರಡುವುದು
* ಊಟ, ಸಂಜೆಯ ಚಹಾ, ರಾತ್ರಿಯ ಊಟ
* ವಾರಾಣಾಸಿಗೆ ತಲುಪಿ, ರಾತ್ರಿ ತಂಗುವುದು.
ದಿನ 6: ವಾರಾಣಾಸಿ
* ತುಳಸಿ ಮಾನಸ ಮಂದಿರ ಮತ್ತು ಸಂಕಟ ಮೋಚನ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ.
* ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಮತ್ತು ಗಂಗಾನದಿಯ ಪವಿತ್ರ ಸ್ನಾನ
* ವಾರಣಾಸಿಯಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ.
ದಿನ 7: ವಾರಾಣಾಸಿ
* ಬಿಡುವಿನ ದಿನ
* ವಾರಣಾಸಿಯಲ್ಲಿ ಉಪಹಾರ ಮತ್ತು ಮಧ್ಯಾಹ್ನದ ಊಟ
* ರೈಲ್ವೆ ನಿಲ್ದಾಣಕ್ಕೆ ಸಂಜೆ ತಲುಪುವುದು.
* ಭೋಜನ ಮತ್ತು ಸಂಜೆ ವಾರಣಾಸಿಯಿಂದ ನಿರ್ಗಮನ.
ದಿನ 8: ರೈಲು ಪ್ರಯಾಣ
* ಬೆಳಗಿನ ಚಹಾ, ಉಪಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ, ರಾತ್ರಿ ಭೋಜನ ಮತ್ತು ರಾತ್ರಿ ರೈಲು ಪ್ರಯಾಣ.
ದಿನ 9: ಬೆಂಗಳೂರು
* ಬೆಳಗಿನ ಚಹಾ, ಉಪಹಾರ ಮತ್ತು ಊಟ
* ನಡುವೆ ತಮ್ಮ ತಮ್ಮ ಸ್ಥಳದಲ್ಲಿ ಜನರು ಇಳಿಯಬಹುದು.
* ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಜೆ ಆಗಮನ


Click it and Unblock the Notifications