ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಹೊಂದಿದೆ. ಈ ಪ್ಯಾಕೇಜ್ ಅನ್ನು ಖರೀದಿ ಮಾಡಿದರೆ, ನೀವು ಕಡಿಮೆ ದರದಲ್ಲಿ ನಿಮ್ಮ ನೆಚ್ಚಿನ ಸ್ಥಳಗಳಿಗೆ ಪ್ರವಾಸ ಮಾಡಲು ಸಾಧ್ಯವಾಗುತ್ತದೆ. ಅಂತಹುದ್ದೆ ಪ್ರವಾಸ ಪ್ಯಾಕೇಜ್‌ಗಳನ್ನು ಬೆಂಗಳೂರಿನ ಜನರಿಗೂ ಐಆರ್‌ಸಿಟಿಸಿ ನೀಡುತ್ತಾ ಬರುತ್ತಿದೆ.
ಇಂತಹ ಪ್ಯಾಕೇಜ್‌ಗಳಲ್ಲಿ ಬೆಂಗಳೂರಿನಿಂದ ಗುಜರಾತ್‌ನ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ. ಇದು ಸುಮಾರು 7 ರಾತ್ರಿಗಳು ಮತ್ತು 8 ದಿನಗಳ ಪ್ರವಾಸ ಪ್ಯಾಕೇಜ್ ಆಗಿದ್ದು, ಗುಜರಾತ್‌ನ ಹಲವಾರು ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ನಿಮಗಿದೆ. ವಿಮಾನಯಾನವು ಇರಲಿದ್ದು, ಈ ಪ್ಯಾಕೇಜ್‌ನ ಅಧಿಕ ವಿವರ ಇಲ್ಲಿದೆ ಮುಂದೆ ಓದಿ....

ಪ್ಯಾಕೇಜ್ ಬಗ್ಗೆ ವಿವರ ತಿಳಿಯಿರಿ
ಪ್ಯಾಕೇಜ್ ಹೆಸರು: ವೈಬ್ರೆಂಟ್ ಗುಜರಾತ್ ಎಕ್ಸ್ ಬೆಂಗಳೂರು
ಯಾವೆಲ್ಲ ಸ್ಥಳಗಳಿಗೆ ಪ್ರವಾಸ?: ದ್ವಾರಕಾ, ಪೋರಬಂದರ್, ಸೋಮನಾಥ್, ಭಾವನಗರ, ಅಹಮದಾಬಾದ್, ಕೆವಾಡಿಯಾ, ವಡೋದರಾ
ಪ್ರಯಾಣ: ವಿಮಾನ
ಪ್ರವಾಸ ದಿನಾಂಕ: ನವೆಂಬರ್ 30 ರಿಂದ ಡಿಸೆಂಬರ್ 16
ಪ್ಯಾಕೇಜ್ ದರ ಎಷ್ಟಿದೆ ನೋಡಿ
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 53,910 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 41,900 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 40,450 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 37,160 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 34,940 ರೂಪಾಯಿ ಆಗಿದೆ. 2-4 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 26,350 ರೂಪಾಯಿ ಆಗಿದೆ.
ದಿನ 1: ಬೆಂಗಳೂರಿನಿಂದ ಮಧ್ಯಾಹ್ನ 12:20 ಕ್ಕೆ ವಿಮಾನ ಪ್ರಯಾಣ ಆರಂಭವಾಗಲಿದೆ. ಪ್ರಯಾಣಿಕರು 2 ಗಂಟೆ ಮುನ್ನವೇ ಸ್ಥಳಕ್ಕೆ ತಲುಪಬಹುದು. ಮಧ್ಯಾಹ್ನ 2:35 ಕ್ಕೆ ರಜ್‌ಕೋಟ್ ವಿಮಾನ ನಿಲ್ದಾಣಕ್ಕೆ ತಲುಪುವುದು. ಹೊಟೇಲ್‌ಗೆ ಚೆಕಿನ್ ಆಗಿ, ಅಲ್ಲಿಯೆ ಊಟ.
ದಿನ 2: ಮುಂಜಾನೆ, ದ್ವಾರಕಾ ದೇವಾಲಯಕ್ಕೆ ಭೇಟಿ. ಹೊಟೇಲ್‌ನಲ್ಲಿ ಉಪಾಹಾರ. ನಂತರ ನಾಗೇಶ್ವರ ದೇವಸ್ಥಾನ, ಗೋಪಿ ತಲವ್ ಮತ್ತು ಬೆಟ್ ದ್ವಾರಕಾಕ್ಕೆ ಭೇಟಿ. ದೋಣಿಗೆ ಪ್ರತ್ಯೇಕ ಶುಲ್ಕ. ಬಳಿಕ ದ್ವಾರಕಾಗೆ ಹಿಂತಿರುಗಿ, ರುಕ್ಮಿಣಿ ದೇವಿ ದೇವಸ್ಥಾನಕ್ಕೆ ಭೇಟಿ. ಹೋಟೆಲ್‌ಗೆ ಬಂದು ರಾತ್ರಿ ಊಟ. ಅಲ್ಲಿಯೇ ತಂಗುವುದು. ಮಧ್ಯಾಹ್ನದ ಊಟ ಪ್ಯಾಕೇಜ್‌ನಲ್ಲಿ ಇರುವುದಿಲ್ಲ.
ದಿನ 3: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. ಪೋರಬಂದರ್‌ಗೆ ಭೇಟಿ. ಕೀರ್ತಿ ಮಂದಿರ ಮತ್ತು ಸುದಾಮ ದೇವಸ್ಥಾನಕ್ಕೆ ಭೇಟಿ. ನಂತರ ಸೋಮನಾಥಕ್ಕೆ ಭೇಟಿ. ಭಾಲ್ಕಾ ತೀರ್ಥ ದೇವಸ್ಥಾನ ಮತ್ತು ಸೋಮನಾಥ ದೇವಸ್ಥಾನಕ್ಕೆ ಭೇಟಿ. ಸೋಮನಾಥದಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು.
ದಿನ 4: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್. ಭಾವನಗರಕ್ಕೆ ಪ್ರಯಾಣ. ಮಾರ್ಗದಲ್ಲಿ ನಿಷ್ಕಲಂಕ್ ಮಹಾದೇವ ದೇವಸ್ಥಾನಕ್ಕೆ ಭೇಟಿ. ನಂತರ ಭಾವನಗರಕ್ಕೆ ಭೇಟಿ. ಹೋಟೆಲ್‌ಗೆ ಚೆಕ್ ಇನ್ ಆಗಿ. ಭಾವನಗರದಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು.
ದಿನ 5: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್. ಅಹಮದಾಬಾದ್‌ಗೆ ಪ್ರಯಾಣ. ಹೋಟೆಲ್‌ಗೆ ಚೆಕ್ ಇನ್ ಆಗಿ, ಅಹಮದಾಬಾದ್‌ನಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು.
ದಿನ 6: ಉಪಹಾರದ ನಂತರ, ಸಬರಮತಿ ಆಶ್ರಮ, ಅದಲಾಜ್ ಸ್ಟೆಪ್‌ವೆಲ್ ಮತ್ತು ಅಕ್ಷರಧಾಮ ದೇವಾಲಯಕ್ಕೆ ಭೇಟಿ. ಶಾಪಿಂಗ್‌ಗೆ ಸಮಯ. ಅಹಮದಾಬಾದ್‌ನಲ್ಲಿ ಭೋಜನ, ರಾತ್ರಿ ಅಲ್ಲಿಯೇ ತಂಗುವುದು.
ದಿನ 7: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. ಕೆವಾಡಿಯಾಗೆ ಪ್ರಯಾಣ, ಯೂನಿಟಿ ಪ್ರತಿಮೆಗೆ ಭೇಟಿ. ನಂತರ ಬರೋಡಕ್ಕೆ ಪ್ರಯಾಣ. ಹೋಟೆಲ್‌ಗೆ ಚೆಕ್ ಇನ್. ವಡೋದರದಲ್ಲಿ ಭೋಜನ, ರಾತ್ರಿ ಅಲ್ಲಿಯೇ ತಂಗುವುದು.


Click it and Unblock the Notifications