ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಭಾರತ್ ಗೌರವ್ ವಿಶೇಷ ರೋಯಲ್ ರಾಜಸ್ಥಾನ ಪ್ರವಾಸ ಪ್ಯಾಕೇಜ್ ಅನ್ನು ಪ್ರಾರಂಭ ಮಾಡಿದೆ. ಈಗಾಗಲೇ ಐಆರ್‌ಸಿಟಿಸಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡಿದೆ. ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಭಾರತ್ ಗೌರವ್ ವಿಶೇಷ ರೋಯರ್ ರಾಜಸ್ಥಾನ ಪ್ರವಾಸ ಪ್ಯಾಕೇಜ್ ಎಂದಾಗಿದೆ.
ಈ ಪ್ರವಾಸ ಬೆಂಗಳೂರಿನಿಂದ ಆರಂಭವಾಗಲಿದೆ. ಇದು 6 ರಾತ್ರಿಗಳ, 7 ರಾತ್ರಿಗಳ ಪ್ರವಾಸ ಪ್ಯಾಕೇಜ್ ಆಗಿದೆ. ವಿಮಾನಯಾನವನ್ನು ನೀವು ಮಾಡಬಹುದು. ಈ ಪ್ರವಾಸದಲ್ಲಿ, ಅಜ್ಮೀರ್, ಬಿಕಾನೆರ್, ಜೈಪುರ, ಜೈಸಲ್ಮಾರ್, ಜೋಧಪುರ, ಪುಷ್ಕರ್‌ಗೆ ಭೇಟಿ ನೀಡಬಹುದಾಗಿದೆ. ಈ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಮುಂದೆ ಓದಿ....

ಪ್ಯಾಕೇಜ್ ಮಾಹಿತಿ
ಪ್ಯಾಕೇಜ್ ಹೆಸರು: ರೋಯಲ್ ರಾಜಸ್ಥಾನ ಎಕ್ಸ್ ಬೆಂಗಳೂರು
ಸ್ಥಳ: ಅಜ್ಮೀರ್, ಬಿಕಾನೆರ್, ಜೈಪುರ, ಜೈಸಲ್ಮಾರ್, ಜೋಧಪುರ, ಪುಷ್ಕರ್
ಪ್ರಯಾಣ: ವಿಮಾನ
ದಿನಾಂಕ: ಡಿಸೆಂಬರ್ 11 ಮತ್ತು 2024ರ ಜನವರಿ 22
ಪ್ಯಾಕೇಜ್ ದರ ಎಷ್ಟಿದೆ ನೋಡಿ
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 49,350 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 39,550 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 37,650 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 34,100 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 30,450 ರೂಪಾಯಿ ಆಗಿದೆ. 2-4 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 24,400 ರೂಪಾಯಿ ಆಗಿದೆ.
ದಿನ 1: ಪ್ರವಾಸಿಗರು ವಿಮಾನದ ನಿಗದಿತ ಸಮಯಕ್ಕಿಂತ ನಿಷ್ಠ 02 ಗಂಟೆಗಳ ಮೊದಲು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬೇಕು. 7:55 ಕ್ಕೆ ಬೆಂಗಳೂರಿನಿಂದ ಪ್ರವಾಸ ಆರಂಭವಾಗಲಿದೆ. 10:40 ಕ್ಕೆ ಜೈಪುರಕ್ಕೆ ತಲುಪುವುದು. ಹೊಟೇಲ್‌ಗೆ ಚೆಕಿನ್ ಆಗುವುದು. ನಂತರ, ಅಮೇರ್ ಕೋಟೆಗೆ ಜಲ್ ಮಹಲ್‌ಗೆ ಭೇಟಿ. ಹೊಟೇಲ್‌ಗೆ ವಾಪಾಸ್ ಜೈಪುರದಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು.
ದಿನ 2: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್ ಆಗಿ. ಪುಷ್ಕರ್‌ಗೆ ಪ್ರಯಾಣ. ಅಜ್ಮೀರ್ ದರ್ಗಾ ಶರೀಫ್ ಮತ್ತು ಪುಷ್ಕರ್ ದೇವಸ್ಥಾನಕ್ಕೆ ಭೇಟಿ. ಪುಷ್ಕರ್‌ನಲ್ಲಿರುವ ಹೋಟೆಲ್‌ಗೆ ಚೆಕ್ ಇನ್. ರಾತ್ರಿ ಊಟ ಮಾಡಿ ಅಲ್ಲಿಯೆ ತಂಗುವುದು.
ದಿನ 3: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್ ಆಗಿ. ಮೆಹ್ರಾನ್‌ಘಡ್ ಪೋರ್ಟ್ ಮತ್ತು ಜಸ್ವಂತ್ ಥಾಡಾಕ್ಕೆ ಭೇಟಿ. ಹೋಟೆಲ್‌ಗೆ ಚೆಕ್ ಇನ್. ಜೋಧ್‌ಪುರದಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು.
ದಿನ 4: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. ಉಮೈದ್ ಭವನ್ ಮ್ಯೂಸಿಯಂಗೆ ಭೇಟಿ. ಜೈಸಲ್ಮೇರ್‌ಗೆ ವರ್ಗಾವಣೆ. ಅಲ್ಲಿ ಸ್ಯಾಮ್ ಸ್ಯಾಂಡ್ ಡ್ಯೂನ್ಸ್‌ಗೆ ಭೇಟಿ. ಸಂಜೆ ಸೂರ್ಯಾಸ್ತ ನೋಡುವುದು. ಹೋಟೆಲ್‌ಗೆ ಚೆಕ್ ಇನ್. ಜೈಸಲ್ಮೇರ್‌ನಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು.
ದಿನ 5: ಉಪಹಾರದ ನಂತರ, ಹೋಟೆಲ್‌ಗೆ ಭೇಟಿ. ಜೈಸಲ್ಮೇರ್ ಕೋಟೆ, ಪಟ್ವೊನ್ ಕಿ ಹವೇಲಿ, ವಾರ್ ಮ್ಯೂಸಿಯಂಗೆ ಭೇಟಿ. ಬಿಕಾನೇರ್‌ಗೆ ಪ್ರವಾಸ ಹೋಟೆಲ್‌ಗೆ ಚೆಕ್ ಇನ್. ಬಿಕಾನೇರ್‌ನಲ್ಲಿ ರಾತ್ರಿಯ ಊಟ, ಅಲ್ಲಿಯೇ ತಂಗುವುದು.
ದಿನ 6: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. ಜುನಗರ್ ಕೋಟೆಗೆ ದೇಶನೋಕ್ ದೇವಸ್ಥಾನಕ್ಕೆ ಭೇಟಿ. ನಂತರ ಜೈಪುರಕ್ಕೆ ಪ್ರವಾಸ. ಹೋಟೆಲ್‌ಗೆ ಚೆಕ್ ಇನ್. ಜೈಪುರದಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು.
ದಿನ 7: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. ಹವಾ ಮಹಲ್, ಸಿಟಿ ಪ್ಯಾಲೇಸ್ ಮತ್ತು ಜಂತರ್ ಮಂತರ್‌ಗೆ ಭೇಟಿ. ಊಟದ ನಂತರ, ಶಾಪಿಂಗ್. ನಂತರ ಸಂಜೆ 4:30 ಗೆ ಜೈಪುರ ವಿಮಾನ ನಿಲ್ದಾಣದಿಂದ ಪ್ರವಾಸ. 22:50 ಕ್ಕೆ ಬೆಂಗಳೂರಿಗೆ ಆಗಮನ. ಪ್ರವಾಸ ಅಲ್ಲಿಗೆ ಕೊನೆಯಾಗುತ್ತದೆ.


Click it and Unblock the Notifications