ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಆಗಾಗೇ ಆರಂಭ ಮಾಡುತ್ತಾ ಬರುತ್ತಿದೆ. ನಾವು ಬೆಂಗಳೂರಿನಲ್ಲಿರುವವರಾದರೆ ಇಲ್ಲಿಂದಲೇ ಪ್ರವಾಸ ಮಾಡಬಹುದಾಗಿದೆ.
ಐಆರ್‌ಸಿಟಿಸಿಯ ಪ್ರವಾಸ ಪ್ಯಾಕೇಜ್‌ಗಳಲ್ಲಿ ಶಿರಡಿ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ. ನೀವು ಶಿರಡಿಗೆ ಹೋಗಲು ಬಯಸುವುದಾದರೆ ನೀವು ಈ ಪ್ಯಾಕೇಜ್ ಅನ್ನು ಖರೀದಿ ಮಾಡಬಹುದಾಗಿದೆ. ಇದು 3 ರಾತ್ರಿಗಳು ಮತ್ತು 4 ದಿನಗಳ ಪ್ರವಾಸ ಪ್ಯಾಕೇಜ್ ಆಗಿದ್ದು, ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಪ್ಯಾಕೇಜ್ ದರ ಎಷ್ಟಿದೆ ನೋಡಿ
ಕನ್ಫರ್ಟ್ ಕ್ಯಾಟಗರಿಯಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 10350 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 8090 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 7690 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 7070 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 5950 ರೂಪಾಯಿ ಆಗಿದೆ.
ಸ್ಟಾಡರ್ಡ್ ಕ್ಯಾಟಗರಿಯಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 7890 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 5630 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 5230 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 4610 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 3500 ರೂಪಾಯಿ ಆಗಿದೆ.
ಯಾವೆಲ್ಲ ದಿನ ಪ್ರವಾಸ ತಿಳಿಯಿರಿ
ದಿನ 01: ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ರೈಲು ಸಂಖ್ಯೆ 12627 ಮೂಲಕ 19:20 ಗಂಟೆಗೆ ಪ್ರಯಾಣ ಆರಂಭವಾಗುತ್ತದೆ. ರಾತ್ರಿ ಪ್ರಯಾಣ ಮಾಡಲಾಗುತ್ತದೆ.
ದಿನ 02: ಕೊಪ್ರಗಾಂವ್ ನಿಲ್ದಾಣಕ್ಕೆ 1:47 ಕ್ಕೆ ತಲುಪುತ್ತೀರಿ. ಶಿರಡಿ ಹೋಟೆಲ್‌ಗೆ ಚೆಕಿನ್ ಆಗಿ. ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ. ಶಿರಡಿಯಲ್ಲಿ ರಾತ್ರಿ ಉಳಿಯಿರಿ.
ದಿನ 03: ಬೆಳಗಿನ ಉಪಹಾರದ ನಂತರ ಚೆಕ್ ಔಟ್ ಆಗಿ. ಶನಿಸಿಂಗನಾಪುರ ದೇವಸ್ಥಾನಕ್ಕೆ ಹೋಗಿ. ಕೋಪರ್ಗೊನ್ ರೈಲು ನಿಲ್ದಾಣಕ್ಕೆ 3.30 ಗಂಟೆಗೆ ತಲುಪಿ.
ದಿನ 04: 12.30 ಗಂಟೆಗೆ ಕೆಎಸ್ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣವನ್ನು ತಲುಪಿ.


Click it and Unblock the Notifications