ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಹೊಂದಿದೆ. ವಾರದಲ್ಲಿ ಕನಿಷ್ಠ ಮೂರಾದರೂ ಪ್ರವಾಸ ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ಪರಿಚಯಿಸುತ್ತಾ ಬರುತ್ತಿದೆ. ಅವುಗಳಲ್ಲಿ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ನೀಡುವ ಅತೀ ಕಡಿಮೆ ದರದ ಪ್ಯಾಕೇಜ್‌ಗಳು ಕೂಡಾ ಇದೆ.
ನೀವು ಬೆಂಗಳೂರಿನಲ್ಲಿದ್ದರೆ, ಇಲ್ಲಿಂದ ಅತೀ ಕಡಿಮೆ ದರದಲ್ಲಿ ಧಾರ್ಮಿಕ ಕೇಂದ್ರಕ್ಕೆ ಪ್ರವಾಸ ಹೋಗಬೇಕೆಂದಿದ್ದರೆ ಅದಕ್ಕೆ ಐಆರ್‌ಸಿಟಿಸಿಯ ಈ ಐಆರ್‌ಸಿಟಿಸಿಯ ಶಿರಡಿ ಪ್ರವಾಸ ಪ್ಯಾಕೇಜ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಮುಂದಿನ ಪ್ರವಾಸ ಡಿಸೆಂಬರ್ 13 ರಂದು ಇರಲಿದೆ ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಪ್ಯಾಕೇಜ್ ಮಾಹಿತಿ ತಿಳಿಯಿರಿ
ಪ್ಯಾಕೇಜ್ ಪೂರ್ಣ ಹೆಸರು: ಶಿರಡಿ ರೈಲ್ ಟೂರ್ ಪ್ಯಾಕೇಜ್ ಎಕ್ಸ್ ಬೆಂಗಳೂರು (SBR001)
ಪ್ರವಾಸ ಅವಧಿ: ಮೂರು ರಾತ್ರಿಗಳು, ನಾಲ್ಕು ದಿನಗಳ ಪ್ರವಾಸ ಪ್ಯಾಕೇಜ್
ಪ್ರವಾಸ: ರೈಲಿನಲ್ಲಿ ಪ್ರವಾಸ, ಸ್ಥಳೀಯವಾಗಿ ಕ್ಯಾಬ್‌ನಲ್ಲಿ ಪ್ರವಾಸ
ಯಾವ ದಿನ, ಎಲ್ಲಿ ಪ್ರವಾಸ?
ದಿನ 01: ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ರೈಲು ಸಂಖ್ಯೆ 12627 ಮೂಲಕ 19:20 (7:20) ಗಂಟೆಗೆ ಪ್ರಯಾಣ ಆರಂಭವಾಗುತ್ತದೆ. ರಾತ್ರಿ ಪ್ರಯಾಣ ಮಾಡಲಾಗುತ್ತದೆ.
ದಿನ 02: ಕೊಪ್ರಗಾಂವ್ ನಿಲ್ದಾಣಕ್ಕೆ 1:47 ಕ್ಕೆ ತಲುಪುತ್ತೀರಿ. ಶಿರಡಿ ಹೋಟೆಲ್‌ಗೆ ಚೆಕ್ ಇನ್ ಆಗಿ. ಬಳಿಕ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ. ಶಿರಡಿಯಲ್ಲಿ ರಾತ್ರಿ ತಂಗುವುದು.
ದಿನ 03: ಬೆಳಗಿನ ಉಪಹಾರದ ನಂತರ ಚೆಕ್ ಔಟ್ ಆಗುವುದು. ಶನಿಸಿಂಗನಾಪುರ ದೇವಸ್ಥಾನಕ್ಕೆ ಭೇಟಿ ನೀಡುವುದು. ಕೋಪರ್ಗೊನ್ ರೈಲು ನಿಲ್ದಾಣಕ್ಕೆ 3.30 ಗಂಟೆಗೆ ತಲುಪುವುದು.
ದಿನ 04: 12.30 ಗಂಟೆಗೆ ಕೆಎಸ್ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣವನ್ನು ತಲುಪುವುದು.
ಪ್ಯಾಕೇಜ್ ದರ ಎಷ್ಟಿದೆ ನೋಡಿ
ಕನ್ಫರ್ಟ್ ಕ್ಯಾಟಗರಿಯಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 10350 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 8090 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 7690 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 7070 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 5950 ರೂಪಾಯಿ ಆಗಿದೆ.
ಸ್ಟಾಡರ್ಡ್ ಕ್ಯಾಟಗರಿಯಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 7890 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 5630 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 5230 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 4610 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 3500 ರೂಪಾಯಿ ಆಗಿದೆ.


Click it and Unblock the Notifications