ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಆಗಾಗೇ ಆರಂಭ ಮಾಡುತ್ತಾ ಬರುತ್ತಿದೆ. ಈ ಹಿಂದೆ ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಬಯಸುವವರು ವಿಶಾಖಪಟ್ಟಣದಿಂದ ತಿರುಪತಿ ಪ್ರಯಾಣ ಆರಂಭಿಸುವ ಪ್ಯಾಕೇಜ್ ಅನ್ನು ಆರಂಭಿಸಲಾಗಿತ್ತು.
ಆದರೆ ನಮ್ಮ ಕರ್ನಾಟಕದವರು, ಬೆಂಗಳೂರಿನ ಜನರಿಗಾಗಿ ಈಗ ಐಆರ್‌ಸಿಟಿಸಿ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಿದೆ. ಆ ಪ್ರವಾಸ ಪ್ಯಾಕೇಜ್ ಹೆಸರು ಬೆಂಗಳೂರು ತಿರುಪತಿ ಬಾಲಜಿ ದರ್ಶನ ಆಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ನಾವು ಬೆಂಗಳೂರಿನಿಂದ ಪ್ರಯಾಣ ಆರಂಭಿಸಬಹುದು. ಹಾಗೆಯೇ ಇದು ಐಎಸ್‌ಆರ್‌ಟಿಸಿಯ ಬಸ್ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಪ್ರವಾಸ ಪ್ಯಾಕೇಜ್ ಬಗ್ಗೆ ಮಾಹಿತಿ
ಬೆಂಗಳೂರು ತಿರುಪತಿ ಬಾಲಾಜಿ ದರ್ಶನ ಪ್ರವಾಸ ಪ್ಯಾಕೇಜ್ ಒಟ್ಟಾಗಿ ಎರಡು ದಿನ, ಒಂದು ರಾತ್ರಿಯ ಪ್ರವಾಸ ಪ್ಯಾಕೇಜ್ ಆಗಿದೆ. ತಿರುಮಲ ಹಾಗೂ ತಿರುಪತಿಗೆ ಭೇಟಿ ನೀಡುವ ಅವಕಾಶ ಈ ಪ್ರವಾಸ ಪ್ಯಾಕೇಜ್‌ನಲ್ಲಿದೆ. ಎಸಿ ಬಸ್ ಪ್ರಯಾಣವಿರಲಿದ್ದು, ಒಂದು ರಾತ್ರಿಗೆ ಹೊಟೇಲ್ ವ್ಯವಸ್ಥೆಯನ್ನು ಪ್ಯಾಕೇಜ್‌ನಲ್ಲೇ ಕಲ್ಪಿಸಲಾಗುತ್ತದೆ. ದೇವರ ದರ್ಶನದ ಟಿಕೆಟ್ ಮೊತ್ತವು ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗುತ್ತದೆ.
ಬೆಂಗಳೂರಿನಿಂದ ಈ ಪ್ರಯಾಣ ಆರಂಭವಾಗಲಿದೆ. ಸದ್ಯಕ್ಕೆ ಪ್ರತಿ ದಿನ ಈ ಪ್ರವಾಸ್ ಪ್ಯಾಕೇಜ್ ಇದ್ದು, ನಾವು ಪ್ರಯಾಣ ಮಾಡಲು ಬಯಸುವ ದಿನಕ್ಕೂ ಕನಿಷ್ಠ 7 ದಿನಗಳ ಮುನ್ನವೇ ಬುಕ್ಕಿಂಗ್ ಮಾಡಬೇಕಾಗುತ್ತದೆ. ಇನ್ನು ವಾರಾಂತ್ಯದಲ್ಲಿ ದರವು ಹೆಚ್ಚಳವಾಗಲಿದೆ. ಹಾಗೆಯೇ ಒಮ್ಮೆ ಬುಕ್ ಮಾಡಿದ ಬಳಿಕ ಟಿಕೆಟ್ ರದ್ದು ಮಾಡುವ ಅವಕಾಶ ಈ ಪ್ಯಾಕೇಜ್‌ನಲ್ಲಿ ಇಲ್ಲ. ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ ಬಸ್ ಪ್ರಯಾಣವು ಪ್ರತಿ ದಿನ ರಾತ್ರ 9:30 ಗೆ ಆರಂಭವಾಗುತ್ತದೆ. ಪ್ರತಿ ವ್ಯಕ್ತಿಗೆ ಪ್ಯಾಕೇಜ್ ದರವು 1,930 ರೂಪಾಯಿ ಆಗಿದೆ.
ಮೊದಲ ದಿನ: ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ನಿಂದ ರಾತ್ರಿ 9:30 ಗಂಟೆಗೆ ಪ್ರಯಾಣ ಆರಂಭವಾಗಲಿದೆ.
ಎರಡನೇ ದಿನ: 3:30 ಗಂಟೆಗಳ ಪ್ರಯಾಣದ ಬಳಿಕ ತಿರುಪತಿ ತಲುಪಲಿದ್ದು, ಹೊಟೇಲ್‌ನಲ್ಲಿ ಆರಾಮ ಮಾಡಲು ವ್ಯವಸ್ಥೆ ಇರುತ್ತದೆ. ತಿರುಚಾನೂರ್ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿಂದ ಅಲಮೇಲು ಮಂಗಾಪುರದ ಪದ್ಮಾವತಿ ದೇವಿಯ ದರ್ಶನ ಮಾಡಲಾಗುತ್ತದೆ. ಬೆಳ್ಳಿಗ್ಗೆ 8 ಗಂಟೆಗೆ ತಿರುಪತಿಯಿಂದ ತಿರುಮಲಕ್ಕೆ ಪ್ರಯಾಣ ಮಾಡಲಾಗುತ್ತದೆ.
ಮುಡಿ ನೀಡಲು ಬಯಸುವವರಿಗೆ ಬಿಡುವಿನ ಸಮಯ ಇರುತ್ತದೆ. (ಸಮಯವಿದ್ದರೆ ಮಾತ್ರ). ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ರವರೆಗೆ ವೆಂಕಟೇಶ್ವರನ ದರ್ಶ ಮಾಡಿ, ನಂತರ ಲಡ್ಡು ಪ್ರಸಾದವನ್ನು ಪಡೆದು, ಮಧ್ಯಾಹ್ನ 02.00 ರ ಸುಮಾರಿಗೆ ತಿರುಪತಿಗೆ ವಾಪಾಸ್ ಬರಲಾಗುತ್ತದೆ. ತಿರುಪತಿಯಿಂದ ಮಧ್ಯಾಹ್ನ 03.30 ರ ಸುಮಾರಿಗೆ ವಾಪಾಸ್ ಹೊರಡಲಿದ್ದು, ರಾತ್ರಿ 09.00 ರ ಸುಮಾರಿಗೆ ಬೆಂಗಳೂರು ನಗರಕ್ಕೆ ಬಸ್ ತಲುಪಲಿದೆ.
ಪ್ಯಾಕೇಜ್‌ನಲ್ಲಿ ಏನೆಲ್ಲ ಸೇರಿರುತ್ತದೆ?
* ಮಲ್ಟಿ ಆಕ್ಸಲ್ ಎಸಿ ಬಸ್‌ನಿಂದ ಸಂಪೂರ್ಣ ಪ್ರಯಾಣ
* ಸ್ನಾನಕ್ಕಾಗಿ ಹೋಟೆಲ್‌ನಲ್ಲಿ ಸೌಲಭ್ಯಗಳು ಇರಲಿದೆ. ಕೋಣೆಯನ್ನು ಹಂಚಲಾಗುತ್ತದೆ.
* ನಾನ್ ಎಸಿ ಬಸ್ ಮೂಲಕ ತಿರುಪತಿಯಿಂದ ತಿರುಮಲಕ್ಕೆ ಪ್ರವಾಸ
* ತಿರುಮಲ ಬಾಲಾಜಿ ಶೀಘ್ರ ದರ್ಶನ ಟಿಕೆಟ್
* ತಿರುಪತಿಯಲ್ಲಿ ಪ್ರವಾಸಿ ಮಾರ್ಗದರ್ಶಿಯ ಸೇವೆಗಳು
* 500 ಮಿಲಿ ಲೀಟರ್‌ನ ಎರಡು ಪ್ಯಾಕ್ ಮಾಡಿದ ಕುಡಿಯುವ ನೀರು
* ಪ್ರವಾಸ ವಿಮೆ ಮತ್ತು ಜಿಎಸ್‌ಟಿ
ಯಾವೆಲ್ಲ ದರ ಸೇರ್ಪಡೆಯಾಗುವುದಿಲ್ಲ?
* ಎಲ್ಲ ಊಟದ ಖರ್ಚು ಪ್ಯಾಕೇಜ್‌ನಲ್ಲಿ ಸೇರುವುದಿಲ್ಲ
* ದೂರವಾಣಿ, ಪಾನೀಯಗಳು, ಪೋರ್ಟರೇಜ್ ಮುಂತಾದ ಯಾವುದೇ ವೈಯಕ್ತಿಕ ವೆಚ್ಚಗಳು ನಿಮ್ಮದಾಗಿರುತ್ತದೆ,
* ಮೇಲೆ ನೀಡಲಾಗುತ್ತದೆ ಎಂದು ತಿಳಿಸಿರುವ ಸೇವೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಸೇವೆಗಳು
* ತಿರುಮಲದಲ್ಲಿ ತಲೆ ಬೋಳಿಸಿಕೊಳ್ಳಲು ಅಥವಾ ಮುಡಿ ನೀಡಲು ಆಗುವ ಶುಲ್ಕ ಪ್ಯಾಕೇಜ್‌ನಲ್ಲಿ ಸೇರುವುದಿಲ್ಲ
* ಕ್ಯಾಮರಾ ಪ್ರವೇಶ ಶುಲ್ಕಗಳು
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications