ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಬೆಂಗಳೂರಿನಿಂದ ನಾವು ಪ್ರಯಾಣ ಆರಂಭ ಮಾಡಲು ಬಯಸಿದರೆ, ನಮಗೂ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ನೀಡುತ್ತದೆ. ಆ ಪೈಕಿ ಕಾಶಿ ಯಾತ್ರೆಯ ಪ್ಯಾಕೇಜ್ ಕೂಡಾ ಒಂದಾಗಿದೆ.
ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಎಂಬುವುದಾಗಿದೆ. 8 ರಾತ್ರಿ, 9 ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದ್ದು, ನಾವು ಈ ಪ್ಯಾಕೇಜ್‌ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ವಾರಾಣಾಸಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಈ ಒಂಬತ್ತು ದಿನಗಳ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ
ಈ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಆಗಸ್ಟ್ 29ರಂದು ಆರಂಭವಾಗುತ್ತದೆ. ಪ್ರತಿ ವ್ಯಕ್ತಿಗೆ 22,500 ರೂಪಾಯಿಯ ಪ್ಯಾಕೇಜ್ ಇದಾಗಿದ್ದು, ನೀವು ಕರ್ನಾಟಕ ಸರ್ಕಾರದಿಂದ 7,500 ರೂಪಾಯಿ ಸಬ್ಸಿಡಿಯಾಗಿ ಪಡೆಯಬಹುದಾಗಿದೆ. ನೀವು ಪ್ರವಾಸದಲ್ಲಿ ಬೆಂಗಳೂರು, ವಾರಾಣಾಸಿ, ಗಯಾ, ಅಯೋಧ್ಯೆ, ಪ್ರಯಾಗ್‌ರಾಜ್‌ಗೆ ನೀವು ಹೋಗಬಹುದಾಗಿದೆ.
ದಿನ 1: ಬೆಂಗಳೂರು
* ಬೆಂಗಳೂರಿನಿಂದ ರೈಲು ಹೊರಡುವುದು
* ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ನಿಲ್ದಾಣಗಳಲ್ಲಿ ಪ್ರವಾಸಿಗರು ಹತ್ತಬಹುದು.
* ಊಟ, ಸಂಜೆ ಚಹಾ, ರಾತ್ರಿ ಭೋಜನ ರೈಲಿನಲ್ಲೇ ಇರಲಿದೆ. ರಾತ್ರಿ ರೈಲು ಪ್ರಯಾಣವಿರಲಿದೆ.
ದಿನ 2: ರೈಲಿನ ಪ್ರಯಾಣ
* ಬೆಳಗಿನ ಚಹಾ ಮತ್ತು ಉಪಹಾರ
* ರೈಲಿನಲ್ಲೇ ಊಟದ ಸಂಜೆಯ ಚಹಾ.
* ರೈಲಿನಲ್ಲೇ ಭೋಜನ, ರಾತ್ರಿಯ ಪ್ರಯಾಣ
ದಿನ 3: ವಾರಾಣಾಸಿ
* ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ
* ಸಂಜೆ ವಾರಣಾಸಿ ರೈಲು ನಿಲ್ದಾಣಕ್ಕೆ ಆಗಮನ
* ಹೊಟೇಲ್‌ಗೆ ಹೋಗಿ ಚೆಕ್ ಇನ್ ಆಗುವುದು
* ವಾರಣಾಸಿಯಲ್ಲಿ ಭೋಜನ ಮತ್ತು ರಾತ್ರಿ ಅಲ್ಲಿಯೇ ತಂಗುವುದು
ದಿನ 4: ವಾರಾಣಾಸಿ
* ಉಪಹಾರದ ನಂತರ ತುಳಸಿ ಮಂದಿರ ಮತ್ತು ಸಂಕಟ್ ಮೋಚನ್ ಹನುಮಾನ್ ಮಂದಿರಕ್ಕೆ ಭೇಟಿ .
* ಊಟದ ನಂತರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಮತ್ತು ಗಂಗಾನದಿಯಲ್ಲಿ ಪವಿತ್ರ ಸ್ನಾನ
* ರಾತ್ರಿ ಊಟ ಮತ್ತು ವಾರಣಾಸಿಯಿಂದ ನಿರ್ಗಮನ.
ದಿನ 5: ಗಯಾ
* ಬೆಳಿಗ್ಗೆ ಗಯಾ ರೈಲು ನಿಲ್ದಾಣಕ್ಕೆ ಆಗಮನ.
* ಗಯಾದಲ್ಲಿ ಹೊಟೇಲ್‌ಗೆ ಭೇಟಿ ನೀಡುವುದು
* ಬೆಳಗಿನ ಉಪಾಹಾರದ ನಂತರ ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ
* ಊಟದ ನಂತರ ಬೋಧಗಯಾದ ಮಹಾಬೋಧಿ ದೇವಸ್ಥಾನಕ್ಕೆ ಭೇಟಿ
* ರಾತ್ರಿಯ ಭೋಜನ ಮತ್ತು ರಾತ್ರಿ ಗಯಾದಿಂದ ನಿರ್ಗಮನ.
ದಿನ 6: ಅಯೋಧ್ಯೆ
* ಅಯೋಧ್ಯೆಗೆ ಮುಂಜಾನೆ ಆಗಮನ.
* ಅಲ್ಲಿಯೇ ಹೊಟೇಲ್‌ಗೆ ನೀವು ವರ್ಗಾವಣೆ
* ಉಪಹಾರದ ನಂತರ, ನಂದಿಗ್ರಾಮಕ್ಕೆ ಭೇಟಿ
* ಊಟದ ನಂತರ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿಗೆ ಭೇಟಿ
* ಸಂಜೆ ಸರಾಯು ಆರತಿ.
* ಭೋಜನ ಮತ್ತು ರಾತ್ರಿ ಅಯೋಧ್ಯೆಯಿಂದ ನಿರ್ಗಮನ.
ದಿನ 7: ಪ್ರಯಾಗ್‌ರಾಜ್
* ಪ್ರಯಾಗರಾಜ್‌ಗೆ ಮುಂಜಾನೆ ಆಗಮನ.
* ಪ್ರಯಾಣ ವೇಳೆ ಉಪಹಾರ
* ಪ್ರಯಾಗರಾಜ್‌ನಲ್ಲಿ ಹೊಟೇಲ್‌ಗೆ ಭೇಟಿ
* ಸಂಗಮ ಪ್ರಯಾಗದಲ್ಲಿ ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನಕ್ಕೆ ಭೇಟಿ
* ಮಧ್ಯಾಹ್ನ ಪ್ರಯಾಗ್‌ರಾಜ್‌ನಿಂದ ನಿರ್ಗಮನ
* ಊಟ, ಸಂಜೆ ಚಹಾ ಮತ್ತು ರಾತ್ರಿಯ ಊಟ
ದಿನ 8: ರೈಲು ಪ್ರಯಾಣ
* ಬೆಳಗಿನ ಚಹಾ ಮತ್ತು ಉಪಹಾರ
* ಪ್ರಯಾಣದಲ್ಲಿ ಊಟ, ಸಂಜೆಯ ಚಹಾ
* ರೈಲು ಪ್ರಯಾಣದಲ್ಲಿಯೇ ಭೋಜನ, ರಾತ್ರಿ ರೈಲು ಪ್ರಯಾಣ
ದಿನ 9: ಬೆಂಗಳೂರು
* ಬೆಳಗಿನ ಚಹಾ, ಉಪಹಾರ ಮತ್ತು ಊಟ
* ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ನಿಲ್ದಾಣಗಳಲ್ಲಿ ಪ್ರವಾಸಿಗರು ಇಳಿಯಬಹುದು.
* ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಜೆ ಆಗಮನ


Click it and Unblock the Notifications