ರೈಲಿನಲ್ಲಿ ಪ್ರಯಾಣ ಮಾಡುವುದು ಒಂದು ಅದ್ಭುತವಾದ ಅನುಭವವಾಗಿದೆ. ಸುತ್ತಲ ವಾತಾವರಣವನ್ನು ನೋಡುತ್ತಾ, ಬೇರೆ ಬೇರೆ ಪ್ರದೇಶಗಳನ್ನು ದಾಟುತ್ತಾ, ರೈಲಿನ ಪ್ರಯಾಣ ಮಾಡುವುದು ಅತೀ ಸುಂದರವಾದ ಅನುಭವವಾಗಿದೆ. ಈ ನಮ್ಮ ಅದ್ಭುತ ಪ್ರಯಾಣದ ವೇಳೆ ನಾವು ಇಷ್ಟಪಡುವ ಇಟಾಲಿಯನ್ ಆಹಾರವನ್ನು ಸೇವನೆ ಮಾಡಿದರೆ ಹೇಗೆ? ರೈಲಿನಲ್ಲಿ ಸಹ ಪ್ರಯಾಣಿಕರೊಂದಿಗೆ ಸ್ನೇಹ ಬೆಳೆಸಿಕೊಂಡು, ಹಾಡು ಆಡುತ್ತಾ ಮನರಂಜನೆ ಮಾಡುತ್ತಾ, ಪ್ರಯಾಣವನ್ನು ಆನಂಧಿಸಬಹುದು. ಇಂತಹ ಸಂದರ್ಭದಲ್ಲಿ ಉತ್ತಮ ಆಹಾರವು ನಮ್ಮ ಆದ್ಯತೆಯಾಗುತ್ತದೆ.
ಹಾಗಿರುವಾಗ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಪಿಜ್ಜಾವನ್ನು ಸೇವಿಸಬೇಕೆಂದು ಮನಸ್ಸಾದರೆ ಏನು ಮಾಡುವುದು. ಅದಕ್ಕಾಗಿ ನಮಗೆ ಆಯ್ಕೆಯಿದೆ. ಇತ್ತೀಚೆಗೆ ಭಾರತೀಯ ರೈಲ್ವೆಯು ಇ-ಕ್ಯಾಟೆರಿಂಗ್ ಸೇವೆಯನ್ನು ಆರಂಭ ಮಾಡಿದೆ. ಪ್ರಯಾಣಿಕರು ವಾಟ್ಸಾಪ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಬಹುದು. ಯಾವ ಸ್ಟೇಷನ್‌ನಲ್ಲಿ ಆರ್ಡರ್ ಪಡೆಯಲು ಬಯಸುತ್ತೇವೆಯೋ ಆ ಸ್ಟೇಷನ್‌ನಲ್ಲಿ ಆರ್ಡರ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
ಪ್ರಸ್ತುತ ಪಿಜ್ಜಾವನ್ನು ಕೂಡಾ ಆರ್ಡರ್ ಮಾಡಬಹುದು. ಸಾಮಾನ್ಯವಾಗಿ ಇ-ಕ್ಯಾಟೆರಿಂಗ್ ವ್ಯವಸ್ಥೆಯಲ್ಲಿ ನಾವು ಹಲವಾರು ವೆರೈಟಿಯ ಪಿಜ್ಜಾವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಡೊಮೀನೋಸ್ ಐಆರ್‌ಸಿಟಿಸಿ ಇ-ಕ್ಯಾಟೆರಿಂಗ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿದೆ. ಇದರಿಂದಾಗಿ ಹಲವಾರು ವಿಧದ ಪಿಜ್ಜಾ ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ರೈಲಿನಲ್ಲಿ ಪಿಜ್ಜಾ ಆರ್ಡರ್ ಮಾಡುವ ವಿಧಾನ
ಐಆರ್‌ಸಿಟಿಸಿ ಅಧಿಕೃತ ಇ-ಕ್ಯಾಟೆರಿಂಗ್ ಆಪ್ "Food on Track" (ಫುಡ್ ಆನ್ ಟ್ರಾಕ್) ಮೂಲಕ ಪ್ರಯಾಣಿಕರು ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗಲಿದೆ. ಈ ಆಪ್ ತರಕಾರಿ ಮತ್ತು ಮಾಂಸಹಾರಿ ಆಹಾರವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ.
ಹಂತ 1: Food on Track ಅನ್ನು ಡೌನ್‌ಲೋಡ್ ಮಾಡಿ, ಖಾತೆಯನ್ನು ತೆರೆಯಿರಿ
ಹಂತ 2: ಪಿಎನ್‌ಆರ್ ಸಂಖ್ಯೆಯಲ್ಲಿ ನಮೂದಿಸಿ, ಆರ್ಡರ್ ಮಾಡುವುದನ್ನು ಮುಂದುವರಿಸಿ
ಹಂತ 3: ನೀವು ಯಾವ ಸ್ಟೇಷನ್‌ನಲ್ಲಿಆರ್ಡರ್ ಮಾಡಲು ಬಯಸುತ್ತಾರೋ ಅದನ್ನು ಆಯ್ಕೆ ಮಾಡಿ
ಹಂತ 4: ಡೊಮೀನೋಸ್ ಆನ್ನು ಆಯ್ಕೆ ಮಾಡಿ ಕಾರ್ಟ್‌ಗೆ ಆಹಾರವನ್ನು ಆಡ್ ಮಾಡಿ
ಹಂತ 5: ಆರ್ಡರ್ ಮಾಡಿದ ಐಟಮ್ ಅನ್ನು ಪರಿಶೀಲಿಸಿ, ಡೆಲಿವರಿ ಮಾಹಿತಿಯನ್ನು ಹಾಕಿ (ಹೆಸರು, ಸೀಟು ಸಂಖ್ಯೆ, ಮೊಬೈಲ್ ಸಂಖ್ಯೆ ಇತರೆ ಮಾಹಿತಿ)
ಹಂತ 6: ಮಾಹಿತಿ ಪರಿಶೀಲನೆ ಮಾಡಿದ ಬಳಿಕ ಆರ್ಡರ್ Confirm ಮಾಡಿ
ನೇರವಾಗಿ ಡೊಮೀನೋಸ್ ಆಪ್‌ನಲ್ಲಿ ಆರ್ಡರ್ ಮಾಡಿ
ಹಂತ 1: ನೀವು ಆಪ್ ಅನ್ನು ತೆರೆಯುವಾಗ, ಬಲ ಭಾಗದಲ್ಲಿ deliver on train (ರೈಲಿನಲ್ಲಿ ಡೆಲಿವರಿ) ಎಂಬ ಆಯ್ಕೆ ಲಭ್ಯವಾಗಲಿದೆ.
ಹಂತ 2: ಆಯ್ಕೆಯನ್ನು ಕ್ಲಿಕ್ ಮಾಡಿ, ಪಿಎನ್‌ಆರ್ ನಂಬರ್ ಅನ್ನು ನಮೂದಿಸಿ
ಹಂತ 3: ಆರ್ಡರ್ ಪಡೆಯಲು ಬಯಸುವ ಸ್ಟೇಷನ್ ಅನ್ನು ಆಯ್ಕೆ ಮಾಡಿ
ಹಂತ 4: ನಿಮ್ಮ ಫೇವರೆಟ್ ಪಿಜ್ಜಾವನ್ನು ಆಡ್ ಮಾಡಿ, ಪಾವತಿ ಮಾಡಿ
ಪಿಜ್ಜಾ ಆರ್ಡರ್ ಮಾಡುವಾಗ ಇದು ನೆನಪಿರಲಿ
1. ನೀವು ಯಾವ ಸಮಯಕ್ಕೆ ಆರ್ಡರ್ ಅನ್ನು ಪಡೆಯಲು ಬಯಸುತ್ತೀರೋ ಅದಕ್ಕೂ 2 ಗಂಟೆಗೂ ಮುನ್ನ ಆರ್ಡರ್ ಮಾಡಬೇಕಾಗುತ್ತದೆ. ಸ್ಟೇಷನ್ ಅನ್ನು ಕೂಡಾ ಆಯ್ಕೆ ಮಾಡಿಕೊಳ್ಳಿ.
2. ಆರ್ಡರ್ ಪ್ಲೇಸ್ ಮಾಡುವಾಗ ಪಾವತಿಯನ್ನು ಆನ್‌ಲೈನ್ ಮೂಲಕವೇ ಮಾಡಬೇಕಾಗುತ್ತದೆ.
3. ಸಮಯಕ್ಕೆ ಸರಿಯಾಗಿ ನಿಮ್ಮ ಆರ್ಡರ್ ಅನ್ನು ಪಡೆಯಬೇಕಾದರೆ, ಡೊಮೀನೋಸ್ ಸೇವೆ ಇರುವ ಸ್ಟೇಷನ್ ಅನ್ನು ಆಯ್ಕೆಮಾಡಿಕೊಳ್ಳಿ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications