ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಬೆಂಗಳೂರಿನಿಂದ ನಾವು ಪ್ರಯಾಣ ಆರಂಭ ಮಾಡಲು ಬಯಸಿದರೆ, ನಮಗೂ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ನೀಡುತ್ತದೆ. ನೀವು ಬೆಂಗಳೂರಿನಿಂದ ಕಾಶಿ ಯಾತ್ರೆಗೂ ಹೋಗಬಹುದಾಗಿದೆ.
ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಎಂಬುವುದಾಗಿದೆ. 9 ರಾತ್ರಿ, 10 ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದ್ದು, ನಾವು ಈ ಪ್ಯಾಕೇಜ್‌ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ವಾರಾಣಾಸಿ, ಗಯಾಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ದೀಪಾವಳಿ ಮುಗಿದ ಬಳಿಕ ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ
ಈ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ನವೆಂಬರ್ 18ರಂದು ಆರಂಭವಾಗುತ್ತದೆ. ಪ್ರತಿ ವ್ಯಕ್ತಿಗೆ 22,500 ರೂಪಾಯಿಯ ಪ್ಯಾಕೇಜ್ ಇದಾಗಿದ್ದು, ನೀವು ಕರ್ನಾಟಕ ಸರ್ಕಾರದಿಂದ 7,500 ರೂಪಾಯಿ ಸಬ್ಸಿಡಿಯಾಗಿ ಪಡೆಯಬಹುದಾಗಿದೆ. ನೀವು ಪ್ರವಾಸದಲ್ಲಿ ಬೆಂಗಳೂರು, ವಾರಾಣಾಸಿ, ಗಯಾ, ಅಯೋಧ್ಯೆ, ಪ್ರಯಾಗ್‌ರಾಜ್‌ಗೆ ನೀವು ಹೋಗಬಹುದಾಗಿದೆ.
ದಿನ 1: ಬೆಂಗಳೂರು
* ಬೆಂಗಳೂರಿನಿಂದ ರೈಲು ಹೊರಡುವುದು
* ಬೆಳಗ್ಗಿನ ತಿಂಡಿ, ಊಟ, ಸಂಜೆ ಚಹಾ, ರಾತ್ರಿ ಭೋಜನ ರೈಲಿನಲ್ಲೇ ಇರಲಿದೆ. ರಾತ್ರಿ ರೈಲು ಪ್ರಯಾಣವಿರಲಿದೆ.
ದಿನ 2: ರೈಲಿನ ಪ್ರಯಾಣ
* ಬೆಳಗಿನ ಚಹಾ ಮತ್ತು ಉಪಹಾರ
* ರೈಲಿನಲ್ಲೇ ಊಟ, ಸಂಜೆಯ ಚಹಾ.
* ರೈಲಿನಲ್ಲೇ ಭೋಜನ, ರಾತ್ರಿಯ ಪ್ರಯಾಣ
ದಿನ 3: ಗಯಾ
* ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ
* ಮಧ್ಯಾಹ್ನ ಗಯಾ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವುದು.
* ಹೊಟೇಲ್‌ಗೆ ಹೋಗಿ ಚೆಕ್ ಇನ್ ಆಗುವುದು, ರಾತ್ರಿ ಅಲ್ಲಿಯೇ ತಂಗುವುದು
ದಿನ 4: ಗಯಾ
* ಬೆಳಗಿನ ಚಹಾ, ಉಪಹಾರ
* ನಂತರ ಮಹಾಬೂದಿ ದೇವಾಲಯಕ್ಕೆ, ವಿಷ್ಣುಪಾದ ದೇವಾಲಯಕ್ಕೆ ಭೇಟಿ
* ಗಯಾದಿಂದ ಸಂಜೆ ಪ್ರಯಾಣ, ಪ್ರಯಾಣ ವೇಳೆ ರಾತ್ರಿ ಊಟ.
* ರಾತ್ರಿ ಬನಾರಸ್ ರೈಲ್ವೆ ನಿಲ್ದಾಣಕ್ಕೆ ಭೇಟಿ
* ಹೊಟೇಲ್‌ಗೆ ಚೆಕ್‌ಇನ್ ಆಗುವುದು
ದಿನ 5: ವಾರಣಾಸಿ
* ಉಪಹಾರದ ನಂತರ, ಊಟದ ತನಕ ವಿಶ್ರಾಂತಿ.
* ಊಟದ ನಂತರ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾನದಿಯ ಪವಿತ್ರ ಸ್ನಾನಕ್ಕೆ ಭೇಟಿ
* ವಾರಣಾಸಿಯಲ್ಲಿ ಭೋಜನ ಮತ್ತು ರಾತ್ರಿ ತಂಗುವುದು.
ದಿನ 6: ವಾರಾಣಾಸಿ
* ಮುಂಜಾನೆ ತುಳಸಿ ಮಾನಸ ಮಂದಿರ ಮತ್ತು ಸಂಕಟ ಮೋಚನ ಹನುಮಾನ ಮಂದಿರಕ್ಕೆ ಭೇಟಿ.
* ಉಪಹಾರದ ನಂತರ, ಊಟದ ತನಕ ವಿಶ್ರಾಂತಿ.
* ಊಟದ ನಂತರ, ಶಾಪಿಂಗ್ ಮಾಡಲು ಬಿಡುವಿನ ಸಮಯ.
* ರಾತ್ರಿ ಊಟ ಮತ್ತು ವಾರಣಾಸಿಯಿಂದ ನಿರ್ಗಮನ.
ದಿನ 7: ಅಯೋಧ್ಯೆ
* ಅಯೋಧ್ಯೆಗೆ ಮುಂಜಾನೆ ತಲುಪುವುದು.
* ಹೊಟೇಲ್‌ಗೆ ಚೆಕ್‌ಇನ್ ಆಗುವುದು
* ಉಪಾಹಾರದ ಬಳಿಕ ನಂದಿಗ್ರಾಮಕ್ಕೆ ಭೇಟಿ
* ಊಟದ ನಂತರ ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿಗೆ ಭೇಟಿ
* ಸಂಜೆ ಸರಯೂ ಆರತಿ
* ರಾತ್ರಿ ಭೋಜನ, ಅಯೋಧ್ಯೆಯಲ್ಲಿಯೇ ತಂಗುವುದು.
ದಿನ 8: ಪ್ರಯಾಗ್‌ರಾಜ್
* ಪ್ರಯಾಗ್‌ರಾಜ್‌ಗೆ ಮುಂಜಾನೆ ಭೇಟಿ, ಪ್ರಯಾಣದಲ್ಲೇ ಉಪಾಹಾರ
* ತ್ರಿವೇಣಿ ಸಂಗಮ ಮತ್ತು ಹನುಮಾನ್ ಮಂದಿರಕ್ಕೆ ಭೇಟಿ
* ಮಧ್ಯಾಹ್ನ ಪ್ರಯಾಗ್‌ರಾಜ್‌ನಿಂದ ಹೊರಡುವುದು
* ಊಟ, ಸಂಜೆಯ ಚಹಾ, ರಾತ್ರಿಯ ಊಟ
ದಿನ 9: ರೈಲು ಪ್ರಯಾಣ
* ಬೆಳಗಿನ ಚಹಾ, ಉಪಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ, ರಾತ್ರಿ ಪ್ರಯಾಣದಲ್ಲೇ ಊಟ, ರಾತ್ರಿಯ ರೈಲು ಪ್ರಯಾಣ.
* ಆಯಾ ರೈಲು ನಿಲ್ದಾಣದಲ್ಲಿ ಪ್ರವಾಸಿಗರು ಇಳಿಯುವುದು.
ದಿನ 10: ರೈಲು ಪ್ರಯಾಣ
* ಪ್ರಯಾಣದಲ್ಲೇ ಬೆಳಗಿನ ಚಹಾ, ಉಪಹಾರ ಮತ್ತು ಊಟ
* ಆಯಾ ಸ್ಟೇಷನ್‌ನಲ್ಲಿ ಪ್ರಯಾಣಿಕರು ಇಳಿಯುವುದು
* ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಜೆ ಆಗಮನ


Click it and Unblock the Notifications